ಸುವಾರ್ತೆಯನ್ನು ನೀಡುವದು—ಟೆಲಿಫೋನಿನ ಮೂಲಕ
1 ನಾವು ಸುವಾರ್ತೆಯನ್ನು ಜನರಿಗೆ ಮುಖಾಮುಖಿಯಾಗಿ ಸಾರಲು ಬಯಸುತ್ತೇವೆ ಆದರೆ, ಪರಿಸ್ಥಿತಿಯು ಟೆಲಿಫೋನ್ ಮೂಲಕ ಸಾಕ್ಷಿ ಕೊಡುವದನ್ನು ಆವಶ್ಯಕ ಬದಲಿಯಾಗಿ ಮಾಡಬಹುದು. ಅಸ್ವಸ್ಥದಿಂದ ಯಾ ದೈಹಿಕ ವ್ಯಂಗತೆಗಳಿಂದ ತಾತ್ಕಾಲಿಕವಾಗಿ ಯಾ ಖಾಯಂ ಆಗಿ ಮನೆಯಲ್ಲೀ ಇರಬೇಕಾದ ಪ್ರಚಾರಕರು ಸಾಕ್ಷಿಗಾಗಿ ಟೆಲಿಫೋನಿನ ಸದುಪಯೋಗವನ್ನು ಮಾಡಬಹುದು. ಅಲ್ಲದೆ, ಹೆಚ್ಚು ಸುರಕ್ಷೆಯ ಕಟ್ಟಡಗಳಲ್ಲಿ ಅಥವಾ ಪೂರ್ವ ಪರವಾನಗಿ ವಿನಹಾ ಪ್ರವೇಶ ದೊರೆಯದ ಕ್ಷೇತ್ರಗಳಲ್ಲಿ ವಾಸಿಸುವ ಜನರನ್ನು ಸಂಪರ್ಕಿಸಲು ಟೆಲಿಫೋನ್ ಕಾಲ್ಗಳು ಅತ್ಯಂತ ಸಾಫಲ್ಯಕರವು. ಟೆಲಿಫೋನ್ ಸಾಕ್ಷಿಯು ಅಪೂರ್ವ ಪಂಥಾಹ್ವಾನ ನೀಡುತ್ತದೆ ಆದರೆ, ಜಾಗ್ರತೆಯ ಮುಂದಾಲೋಚನೆ ಮತ್ತು ಯೋಜನೆಯಿಂದ ಅದನ್ನು ಪರಿಹರಿಸಬಹುದು.
2 ಕೆಲವು ಸಾರಿ ಕಟ್ಟಡಗಳ ಮೊಗಸಾಲೆಯಲ್ಲಿರುವ ಡಿರೆಕ್ಟರಿಗಳಿಂದ ಅಥವಾ ಟಪಾಲುಪೆಟ್ಟಿಗೆಯಿಂದ ಹೆಸರುಗಳನ್ನು ಪಡೆಯಬಹುದು. ಟೆಲಿಫೋನ್ ನಂಬ್ರಗಳನ್ನು ಪಡೆಯಲು ಟೆಲಿಫೋನ್ ಡಿರೆಕ್ಟರಿಯನ್ನು ಬಳಸಬಹುದು. ಇದನ್ನು ಸೇವಾ ಮೇಲ್ವಿಚಾರಕನ ಮಾರ್ಗದರ್ಶನೆಯ ಕೆಳಗೆ ಮಾಡಬೇಕು ಈ ಮೂಲಕ, ಟೆಲಿಫೋನ್ ಕ್ಷೇತ್ರಗಳು ಸಂಘಟಿಸಲ್ಪಡುತ್ತವೆ ಮತ್ತು ಪೂರ್ಣ ದಾಖಲೆಯು ಇಡಲ್ಪಡುತ್ತದೆ.
ತಯಾರಿಸುವದು ಹೇಗೆ
3 ಪರಿಣಾಮಕಾರಿ ಟೆಲಿಫೋನ್ ಸಾಕ್ಷಿಗೆ ಬೆಚ್ಚಗೆನ, ಇಂಪಾದ ಸರ್ವವು ಬೇಕು. ಬೆಳಿಗ್ಗೆ ಬೇಗ ಅಥವಾ ರಾತ್ರಿ ತಡವಾಗಿ ಯಾ ಊಟದ ಸಮಯದಲ್ಲಿ ಫೋನ್ ಮಾಡುವದನ್ನು ವಿಸರ್ಜಿಸಿರಿ. ಫೋನನ್ನು ತುಂಬಾ ಸಲ ಘಣಘಣಿಸುವಂತೆ ಬಿಡುವ ಅವಶ್ಯವಿಲ್ಲ. ಫೋನಿನ ಉತ್ತರಕೊಡುವ ಯಂತ್ರದ ಸಂಪರ್ಕವಾದಲ್ಲಿ, ಹೀಗನ್ನಬಹುದು: “ನನ್ನ ಹೆಸರು. . . , ಭವಿಷ್ಯಕ್ಕಾಗಿ ಬೈಬಲ್ ಕೊಡುವ ನಿರೀಕ್ಷೆಯನ್ನು ನಿಮ್ಮೊಂದಿಗೆ ಪಾಲಿಗನಾಗಲು ಕರೆದೆನು. ನಿಮ್ಮನ್ನು ಪುನ: ಕರೆಯುವೆನು.” ಇದನ್ನು ಮನೆಯಲ್ಲಿಲ್ಲದ ಸಂದರ್ಶನೆಯಾಗಿ ನೋಡಿರಿ ಮತ್ತು ಇನ್ನೊಂದು ಸಮಯದಲ್ಲಿ ಪುನ: ಫೋನ್ ಮಾಡಿರಿ.
4 ನಿಮ್ಮ ಪ್ರಸಂಗವನ್ನು ಮುಂಚಿತವಾಗಿ ಸರಿಯಾಗಿ ರಿಹರ್ಸ್ ಮಾಡಿಡಿರಿ, ಹೀಗೆ, ನೀವದನ್ನು ಓದುತ್ತಿದ್ದೀರೋ ಎಂಬಂತೆ ಕೇಳಿಬರದು. ಮನೆಯವನನ್ನು ಸಂಭಾಷಣೆಯಲ್ಲಿ ಒಳಗೂಡಿಸ ಪ್ರಯತ್ನಿಸುವ ಮೂಲಕ, ನೀವವನಲ್ಲಿ : ಆಸಕ್ತರಿದೀರ್ದೆಂದು ಅನಿಸಿಕೆಯಾಗಲಿ. ಪೀಠಿಕೆಯಲ್ಲಿ ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ತಿಳಿಸುವ ಮೂಲಕ ನಿಮ್ಮ ಕರೆಗೆ ಆತ್ಮೀಯತೆಯನ್ನು ಕೊಡಿ, ಮತ್ತು ಮನೆಯವನ ಹೆಸರನ್ನು ಸಂಭಾಷಣೆಯಿಡೀ ಉಪಯೋಗಿಸಲು ಪ್ರಯತ್ನಿಸಿರಿ.
5 ಮೆಲ್ಲನೆ ಮತ್ತು ನಿಧಾನವಾಗಿ ಮಾತಾಡಿರಿ, ನಿಲ್ಲಿಸಬೇಡಿರಿ, ಕಾರ್ಯಥ ಪ್ರಶ್ನೆ ಕೇಳಿದಾಗ ಮಾತ್ರ ನಿಲ್ಲಿಸಬಹುದೇ ಹೊರತು ಬೇರೆ ಸಮಯದಲ್ಲಿ ನಿಂತು ನಿಂತು ಮಾತಾಡಿದರೆ ಅದು ಪ್ರಶ್ನೆಯಾಗಿ ಅರ್ಥೈಸಬಹುದು. ಹೀಗನ್ನಿರಿ: “ನನ್ನ ಹೆಸರು . . . , ವೈಯಕ್ತಿಕವಾಗಿ ಬಂದು ನಿಮ್ಮನ್ನು ನೋಡಶಕ್ತನಾಗದರ್ದಿಂದ ನಾನು ಘೋನ್ ಮಾಡುತ್ತಿದ್ದೇನೆ.” ಅನಂತರ, ನಿಲ್ಲಿಸದೆ, ಹೀಗೆ ಮುಂದರಿಸಿರಿ: “ಒಂದು ಆಸಕ್ತಿಯುಳ್ಳ ಪ್ರಶ್ನೆಯ ಮೇಲೆ ನಿಮ್ಮ ಅಭಿಪ್ರಾಯವನ್ನು ಕೇಳುವುದೇ ನನ್ನ ಕರೆಯ ಉದ್ದೇಶವಾಗಿದೆ. ನೀವೆಂದಾದರೂ ಯೋಚಿಸಿರುವಿರೋ . . . ? ಪ್ರಶ್ನೆಯನ್ನು ಬದಲಿಸಿ, ಹೀಗನ್ನಬಹುದು: “ಇದೆಂದಾದರೂ ನಿಮ್ಮ ಮನಸ್ಸಿಗೆ ಹೊಳೆದಿದೆಯೋ . . . ?” ಅಥವಾ “ಇದೆಂದಾದರೂ ನಿಮ್ಮ ಮನಸ್ಸಿಗೆ ಬಂದಿದೆಯೋ . . . ?” ಈ ಪ್ರಶ್ನೆಗಳಿಗೆ ತಪ್ಪುತ್ತರ ಇರಲಾರದು, ಮತ್ತು ಅವು ಮನೆಯವರನ್ನು ಸಂಭಾಷಣೆಗೆಳೆಯಲು ಸುಲಭ ಮಾರ್ಗವನ್ನು ಒದಗಿಸುತ್ತವೆ. “ನಾನು ನಿಮಗೆ ಅಡ್ಡಿ ಮಾಡುವದಿಲ್ಲವಲ್ಲಾ” ಅಥವಾ “ನೀವು ತುಂಬಾ ಕಾರ್ಯಮಗ್ನರಿಲ್ಲವಲ್ಲಾ” ಎಂದು ಹೇಳುವ ಮೂಲಕ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ಆಮಂತ್ರಿಸ ಬೇಡಿರಿ. ಮನೆಯವನು ಹಾಗೆ ಹೇಳದ ಹೊರತು, ಅದೇ ಸುಸಮಯವೆಂದು ಎಣಿಸಿರಿ.
6 “ನೀವು ಯಾರನ್ನು ಪ್ರತಿನಿಧಿಸುತ್ತೀರಿ?” ಎಂದು ವ್ಯಕ್ತಿಯು ಕೇಳಿದರೆ, ವಿಳಂಬಿಸದೆ, ಸೀದಾ ಹೇಳಿರಿ, “ನಾನೊಬ್ಬ ಯೆಹೋವನ ಸಾಕ್ಷಿ. ಒಂದು ಆಸಕ್ತಿಯ ಪ್ರಶ್ನೆಯ ಕುರಿತು ನಿಮ್ಮ ಅಭಿಪ್ರಾಯವನ್ನು ಕೇಳಲು ಕರೆಯುತ್ತಿದ್ದೇನೆ. ನೀವೆಂದಾದರೂ ಯೋಚಿಸಿರುವಿರೋ . . . ?” “ನಿನಗೆ ನನ್ನ ಫೋನ್ ಎಲ್ಲಿಂದ ಸಿಕ್ಕಿತು?” ಎಂದು ಮನೆಯವನು ಕೇಳಿದರೆ, “ಟೆಲಿಫೋನ್ ಡಿರೆಕ್ಟರಿಯಿಂದ, ಮತ್ತು ಒಂದು ಆಸಕ್ತಿಯ ಪ್ರಶ್ನೆಯ ಮೇಲೆ ನಿಮ್ಮ ಅಭಿಪ್ರಾಯವನ್ನು ನಾನು ತಿಳಿಯ ಬಯಸುತ್ತೇನೆ. ನೀವೆಂದಾದರೂ ಯೋಚಿಸಿರುವಿರೋ . . . ?” ಎಂದು ಉತ್ತರಕೊಡಿರಿ.
7 ಬೈಬಲ್ ಪ್ರಶ್ನೆಗಳನ್ನುತ್ತರಿಸುವ ಒಂದು ಉಚಿತ ಕಾರ್ಯಕ್ರಮ ನಮ್ಮದು ಎಂದು ಹೇಳಿ ಅನಂತರ, ಲಿವ್ವ್ ಫಾರೆವರ್ ಪುಸ್ತಕದ ಕೆಲವು ಅಧ್ಯಾಯ ಶೀರ್ಷಿಕೆಗಳನ್ನು ಬರೇ ತಿಳಿಸುವ ಮೂಲಕ ಕೆಲವರಿಗೆ ಸಾಫಲ್ಯ ದೊರೆತದೆ. ಅಥವಾ ಹೀಗನ್ನಬಹುದು: “ಪಾತಕದ ವೃದ್ಧಿಯ ಕಾರಣ ನಿಮ್ಮ ಕಟ್ಟಡಕ್ಕೆ ಸುರಕ್ಷೆಯ ಕಾವಲಿರುವದರಿಂದ, ನಾನು ನಿಮ್ಮ ಅಭಿಪ್ರಾಯಕ್ಕಾಗಿ ಫೋನ್ ಮಾಡುತ್ತಿದ್ದೇನೆ. ಪಾತಕವು ಇಷ್ಟು ಹೆಚ್ಚು ವೃದ್ಧಿಸಿರುವುದೇಕೆಂದು ನೀವು ನೆನಸುತ್ತೀರಿ?”
8 ಒಂದು ಅತಿ ಸುರಕ್ಷೆಯ ಕಟ್ಟಡದಲ್ಲಿ ಟೆಲಿಫೋನ್ ಸಾಕ್ಷಿಯನ್ನು ಪ್ರಯತ್ನಿಸುವ ತನಕ, ಹೆಚ್ಚು ಯಶಸ್ಸು ದೊರೆತಿರಲಿಲ್ಲ. ಫಲಿತಾಂಶವಾಗಿ, 14 ಹೊಸ ಬೈಬಲಭ್ಯಾಸಗಳು ಪ್ರಾರಂಭವಾದವು. ಹೀಗೆ, ಸೀಮಿತ-ಪ್ರವೇಶದ ಕಟ್ಟಡಗಳು ಕಾರ್ಯಥ ಏನೂ ಸೇವೆಯಾಗದ ಕ್ಷೇತ್ರವಾಗಿದ್ದು ಪ್ರಚಂಡವಾದ ಸಾಧ್ಯತೆಗಳುಳ್ಳವುಗಳು. ಸಕಾರಾತ್ಮಕ ಭಾವದಿಂದ, ಯೆಹೋವನ ಸಹಾಯ ನಮಗಿದೆಂದು ತಿಳಿದವರಾಗಿ ಮುಂದರಿದಲ್ಲಿ, ಟೆಲಿಫೋನ್ ಸಾಕ್ಷಿಯು ಸುವಾರ್ತೆ ನೀಡುವುದಕ್ಕೆ ನಮಗಿರುವ ಇನ್ನೊಂದು ಪರಿಣಾಮಕಾರಿ ಮಾರ್ಗವೆಂದು ಕಂಡುಕೊಂಡೇವು.—2 ತಿಮೋ. 4:5.