ದೇವರ ಆದಿ ಸೇವಕರಲ್ಲಿ ಸ್ತ್ರೀಯರ ಗೌರವವುಳ್ಳ ಪಾತ್ರ
“ಯೆಹೋವದೇವರು—ಮನುಷ್ಯನು ಒಂಟಿಗನಾಗಿರುವುದು ಒಳ್ಳೇದಲ್ಲ. ನಾನು ಅವನಿಗೆ ಸಹಾಯಕಳೊಬ್ಬಳನ್ನು, ಅವನ ಪೂರಕಳಾಗಿ ಮಾಡುತ್ತೇನೆ ಅಂದನು.”—ಆದಿಕಾಂಡ 2:18, NW.
1. ಒಂದು ಬೈಬಲ್ ಶಬ್ದಕೋಶವು ಪುರಾತನ ಕಾಲದ ಸ್ತ್ರೀಯರ ಪಾಡನ್ನು ಹೇಗೆ ವರ್ಣಿಸುತ್ತದೆ?
“ಆಧುನಿಕ ಪಾಶ್ಚಾತ್ಯ ಸಮಾಜದಲ್ಲಿ ಮಹಿಳೆಯರು ಆನಂದಿಸುವಷ್ಟು ಸ್ವಾತಂತ್ರ್ಯವು, ಪುರಾತನ ಒಳನಾಡುಗಳಲ್ಲಿ ಅಥವಾ ಸಮೀಪ ಪೂರ್ವದ ದೇಶಗಳಲ್ಲಿ ಎಲ್ಲಿಯೂ ಕೊಡಲ್ಪಟ್ಟಿರಲಿಲ್ಲ. ಗುಲಾಮರು ಸ್ವತಂತ್ರರ ಅಧೀನತೆಯಲ್ಲಿ, ಎಳೆಯರು ಪ್ರೌಢರ ಅಧೀನತೆಯಲ್ಲಿ ಹೇಗೊ ಹಾಗೆ, ಸ್ತ್ರೀಯರು ಪುರುಷರ ಕೈಕೆಳಗಿನವರಾಗಿ ಅಧೀನತೆಯಲ್ಲಿ ಇರುವುದು ಸರ್ವ ಸಾಮಾನ್ಯ ಪದ್ಧತಿಯಾಗಿತ್ತು. ಮತ್ತು . . . ಗಂಡು ಮಕ್ಕಳು ಹೆಣ್ಣು ಮಕ್ಕಳಿಗಿಂತ ಹೆಚ್ಚು ಅಧಿಕವಾಗಿ ಆದರಿಸಲ್ಪಡುತ್ತಿದ್ದರು, ಮತ್ತು ಹೆಣ್ಣು ಕೂಸುಗಳನ್ನು ಕೆಲವೊಮ್ಮೆ ಹೊರಗೆ ಶೀತಕ್ಕೊಡ್ಡಿ ಸಾಯುವಂತೆ ಬಿಡಲಾಗುತ್ತಿತ್ತು.” ಹೀಗೆಂದು ಒಂದು ಬೈಬಲ್ ಶಬ್ದಕೋಶವು ಪುರಾತನ ಕಾಲದಲ್ಲಿನ ಸ್ತ್ರೀಯರ ಜೀವನ ಪಾಡನ್ನು ವರ್ಣಿಸುತ್ತದೆ.
2, 3. (ಎ) ಒಂದು ವರದಿಗನುಸಾರ, ಇಂದು ಅನೇಕ ಸ್ತ್ರೀಯರ ಪರಿಸ್ಥಿತಿಯು ಏನಾಗಿರುತ್ತದೆ? (ಬಿ) ಯಾವ ಪ್ರಶ್ನೆಗಳು ಎಬ್ಬಿಸಲ್ಪಟ್ಟಿವೆ?
2 ಇಂದು ಜಗತ್ತಿನ ಅನೇಕ ಭಾಗಗಳಲ್ಲಿ ಸನ್ನಿವೇಶವೇನೂ ಹೆಚ್ಚು ಉತ್ತಮವಾಗಿಲ್ಲ. 1994 ರಲ್ಲಿ, ಪ್ರಪ್ರಥಮವಾಗಿ, ಅಮೆರಿಕದ ರಾಜ್ಯ ಇಲಾಖೆಯ ವಾರ್ಷಿಕ ಮಾನವ ಹಕ್ಕುಗಳು, ಮಹಿಳೆಯರ ಉಪಚಾರದ ಮೇಲೆ ಗಮನವನ್ನು ಕೇಂದ್ರೀಕರಿಸಿದವು. “ದಿನದಿನವೂ ತೋರಿಸಲ್ಪಡುವ ವಿಭೇದವು ವಾಸ್ತವಿಕ ಸಂಗತಿಯೆಂದು 193 ದೇಶಗಳ ಸಂಖ್ಯಾ ಮಾಹಿತಿಯು ತೋರಿಸುತ್ತದೆ,” ಎಂದು ನ್ಯೂ ಯಾರ್ಕ್ ಟೈಮ್ಸ್ ಶಿರೋನಾಮೆಯೊಂದು ಆ ವರದಿಯ ಕುರಿತು ಹೇಳಿತು.
3 ಭೂಮಿಯಲ್ಲೆಲ್ಲೂ ಇರುವ ಯೆಹೋವನ ಜನರ ಸಭೆಗಳೊಂದಿಗೆ ಸಹವಾಸಿಸುತ್ತಿರುವ ಬಹು ಸಂಖ್ಯಾತ ಸ್ತ್ರೀಯರು, ವಿವಿಧ ಸಾಂಸ್ಕೃತಿಕ ಹಿನ್ನೆಲೆಗಳಿಂದ ಬಂದವರಾಗಿರುವುದರಿಂದ ಕೆಲವು ಪ್ರಶ್ನೆಗಳು ಏಳುತ್ತವೆ: ಈಗ ತಾನೆ ವಿವರಿಸಲ್ಪಟ್ಟ ಉಪಚಾರದ ರೀತಿಯನ್ನು ದೇವರು ಮೂಲತಃ ಸ್ತ್ರೀಯರಿಗಾಗಿ ಉದ್ದೇಶಿಸಿದನೊ? ಬೈಬಲ್ ಕಾಲದಲ್ಲಿ ಯೆಹೋವನ ಆರಾಧಕರಲ್ಲಿ ಸ್ತ್ರೀಯರು ಹೇಗೆ ಉಪಚರಿಸಲ್ಪಟ್ಟಿದ್ದರು? ಮತ್ತು ಇಂದು ಸ್ತ್ರೀಯರು ಹೇಗೆ ಉಪಚರಿಸಲ್ಪಡಬೇಕು?
“ಒಬ್ಬ ಸಹಾಯಕಳು” ಮತ್ತು “ಪೂರಕಳು”
4. ಮೊದಲನೆಯ ಮನುಷ್ಯನು ಏದೆನ್ ತೋಟದಲ್ಲಿ ಸ್ವಲ್ಪ ಸಮಯ ಒಂಟಿಗನಾಗಿದ್ದ ಬಳಿಕ ಯೆಹೋವನು ಯಾವ ಅಭಿಪ್ರಾಯೋಕ್ತಿಯನ್ನು ನೀಡಿದನು, ಆಮೇಲೆ ದೇವರು ಏನು ಮಾಡಿದನು?
4 ಆದಾಮನು ಏದೆನ್ ತೋಟದಲ್ಲಿ ಸ್ವಲ್ಪ ಕಾಲ ಒಂಟಿಗನಾಗಿ ಇದ್ದ ಬಳಿಕ ಯೆಹೋವನು ಅಭಿಪ್ರಯಿಸಿದ್ದು: “ಮನುಷ್ಯನು ಒಂಟಿಗನಾಗಿರುವುದು ಒಳ್ಳೇದಲ್ಲ. ನಾನು ಅವನಿಗೆ ಸಹಾಯಕಳೊಬ್ಬಳನ್ನು, ಅವನ ಪೂರಕಳಾಗಿ ಮಾಡುತ್ತೇನೆ.” (ಆದಿಕಾಂಡ 2:18) ಆದಾಮನು ಒಬ್ಬ ಪರಿಪೂರ್ಣ ಮನುಷ್ಯನಾಗಿದ್ದರೂ, ನಿರ್ಮಾಣಿಕನ ಉದ್ದೇಶವನ್ನು ನಿರ್ವಹಿಸಲು ಬೇರೊಂದು ವಿಷಯವು ಬೇಕಾಗಿತ್ತು. ಆ ಅಗತ್ಯವನ್ನು ಪೂರೈಸಲು ಯೆಹೋವನು ಸ್ತ್ರೀಯನ್ನು ನಿರ್ಮಿಸಿ, ಮೊತ್ತಮೊದಲಿನ ವಿವಾಹವನ್ನು ನಡಿಸಿದನು.—ಆದಿಕಾಂಡ 2:21-24.
5. (ಎ) “ಸಹಾಯಕಳು” ಎಂದು ತರ್ಜುಮೆಯಾದ ಹೀಬ್ರು ನಾಮಪದವು ಬೈಬಲ್ ಲೇಖಕರಿಂದ ಅನೇಕ ಸಲ ಹೇಗೆ ಬಳಸಲ್ಪಟ್ಟಿದೆ? (ಬಿ) ಯೆಹೋವನು ಮೊದಲನೆಯ ಸ್ತ್ರೀಯನ್ನು “ಪೂರಕಳು” ಆಗಿ ನಿರ್ದೇಶಿಸಿದ ನಿಜತ್ವದಿಂದ ಏನನ್ನು ಸೂಚಿಸಲಾಗಿದೆ?
5 “ಸಹಾಯಕಳು” ಮತ್ತು “ಪೂರಕಳು” ಎಂಬ ಶಬ್ದಗಳು ಸ್ತ್ರೀಯ ದೈವ-ನಿಯುಕ್ತ ಪಾತ್ರವು ಕೀಳಾದದ್ದೆಂದು ಸೂಚಿಸುತ್ತವೊ? ಅದಕ್ಕೆ ಪ್ರತಿಕೂಲವಾಗಿ ಸೂಚಿಸುತ್ತವೆ. ಬೈಬಲ್ ಲೇಖಕರು “ಸಹಾಯಕ” ಎಂದು ತರ್ಜುಮೆಯಾದ ಹೀಬ್ರು ನಾಮಪದ (ಎಸರ್) ವನ್ನು ಅನೇಕ ಸಲ ದೇವರಿಗೆ ಅನ್ವಯಿಸುತ್ತಾರೆ. ಉದಾಹರಣೆಗೆ, ಯೆಹೋವನು ‘ನಮ್ಮ ಸಹಾಯಕನೂ ಗುರಾಣಿಯೂ’ ಆಗಿ ಪರಿಣಮಿಸುತ್ತಾನೆ. (ಕೀರ್ತನೆ 33:20; ವಿಮೋಚನಕಾಂಡ 18:4; ಧರ್ಮೋಪದೇಶಕಾಂಡ 33:7) ಹೋಶೇಯ 13:9, [NW] ರಲ್ಲಿ ಯೆಹೋವನು ಸ್ವತಃ ತನ್ನನ್ನು ಇಸ್ರಾಯೇಲಿನ “ಸಹಾಯಕನಾಗಿ” ಸಹ ಸೂಚಿಸಿಕೊಂಡಿದ್ದಾನೆ. “ಪೂರಕ” ಎಂದು ತರ್ಜುಮೆಯಾಗಿರುವ ಹೀಬ್ರು ಪದ (ನೆಗೆದ್)ನ ವಿಷಯದಲ್ಲಾದರೊ ಒಬ್ಬ ಬೈಬಲ್ ವಿದ್ವಾಂಸನು ವಿವರಿಸುವುದು: “ಅಪೇಕ್ಷಿತವಾದ ಸಹಾಯವು, ಅವನ ದಿನನಿತ್ಯದ ಕೆಲಸದಲ್ಲಿ ಯಾ ಮಕ್ಕಳನ್ನು ಹಡೆಯುವುದರಲ್ಲಿ ನೀಡುವ ಕೇವಲ ನೆರವಾಗಿರುವುದಿಲ್ಲ . . . ಬದಲಿಗೆ, ಒಡನಾಟವು ಒದಗಿಸುವ ಪರಸ್ಪರ ಬೆಂಬಲವೇ ಆಗಿದೆ.”
6. ಸ್ತ್ರೀಯ ಸೃಷ್ಟಿಯ ಅನಂತರ ಏನನ್ನು ಹೇಳಲಾಯಿತು ಮತ್ತು ಏಕೆ?
6 ಆದುದರಿಂದ ಯೆಹೋವನು ಸ್ತ್ರೀಯನ್ನು “ಒಬ್ಬ ಸಹಾಯಕಳು” ಮತ್ತು “ಪೂರಕಳು” ಆಗಿ ವರ್ಣಿಸಿರುವುದರಲ್ಲಿ ಕೀಳುತನವೇನೂ ಇಲ್ಲ. ಸ್ತ್ರೀಗೆ ಅವಳ ಸ್ವಂತ ವಿಶಿಷ್ಟ ರೀತಿಯ ಮಾನಸಿಕ, ಭಾವನಾತ್ಮಕ, ಮತ್ತು ಶಾರೀರಿಕ ರಚನೆಯಿತ್ತು. ಅವಳು ಪುರುಷನಿಗೆ ಒಬ್ಬ ಸರಿಬೀಳುವ ಸಹಕಾರಿಣಿ, ಒಂದು ತೃಪ್ತಿದಾಯಕ ಪೂರಕವಾಗಿದ್ದಳು. ಪ್ರತಿಯೊಬ್ಬರು ಭಿನ್ನರಾಗಿದ್ದರಾದರೂ, ನಿರ್ಮಾಣಿಕನ ಉದ್ದೇಶಕ್ಕನುಸಾರವಾಗಿ “ಭೂಮಿಯನ್ನು ತುಂಬಿ” ಕೊಳ್ಳಲು ಅವರಿಬ್ಬರೂ ಬೇಕಾಗಿದ್ದರು. “ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿ” ಇದುದ್ದು ಆತನು ಪುರುಷ ಮತ್ತು ಸ್ತ್ರೀ ಇವರಿಬ್ಬರನ್ನೂ ಉಂಟುಮಾಡಿದ ಬಳಿಕವೆ ಎಂಬುದು ಸುವ್ಯಕ್ತ.—ಆದಿಕಾಂಡ 1:28, 31.
7, 8. (ಎ)ಏದೆನಿನಲ್ಲಿ ಪಾಪದ ಪ್ರವೇಶದೊಂದಿಗೆ, ಸ್ತ್ರೀಯ ಪಾತ್ರವು ಹೇಗೆ ಪ್ರಭಾವಿಸಲ್ಪಡುತ್ತದೆ? (ಬಿ) ಯೆಹೋವನ ಆರಾಧಕರಲ್ಲಿ ಆದಿಕಾಂಡ 3:16ರ ನೆರವೇರಿಕೆಯ ಕುರಿತು ಯಾವ ಪ್ರಶ್ನೆಗಳು ಎಬ್ಬಿಸಲ್ಪಡುತ್ತವೆ?
7 ಪಾಪದ ಪ್ರವೇಶದೊಂದಿಗೆ, ಪುರುಷ ಮತ್ತು ಸ್ತ್ರೀಯ ಪರಿಸ್ಥಿತಿಯು ಬದಲಾಯಿತು. ಪಾಪಿಗಳಾದ ಅವರಿಬ್ಬರ ಮೇಲೂ ಯೆಹೋವನು ಶಿಕ್ಷೆಯನ್ನು ವಿಧಿಸಿದನು. ಆತನು ಅನುಮತಿಸುವ ಸಂಭವನೀಯ ಸಂಗತಿಯು ಅವನಿಂದಲೆ ಮಾಡಲಾಯಿತೊ ಎನ್ನುವಂತೆ ಯೆಹೋವನು ಹವ್ವಳಿಗೆ “ನೀನು ಗರ್ಭಿಣಿಯಾಗಿರುವ ಕಾಲದಲ್ಲಿ ಬಹು ಸಂಕಟಪಡಬೇಕೆಂದು ನಾನು ನೇಮಿಸಿದ್ದೇನೆ” ಎಂದು ಹೇಳಿದನು. ಆತನು ಕೂಡಿಸಿದ್ದು: “ಕಷ್ಟದಿಂದಲೇ ಮಕ್ಕಳನ್ನು ಹೆರುವಿ; ಗಂಡನ ಮೇಲೆ ನಿನಗೆ ಆಶೆಯಿರುವದು; ಅವನು ನಿನಗೆ ಒಡೆಯನಾಗುವನು.” (ಆದಿಕಾಂಡ 3:16) ಆ ಸಮಯದಿಂದ ಅನೇಕಾನೇಕ ಹೆಂಡತಿಯರು ತಮ್ಮ ಗಂಡಂದಿರಿಂದ ಒಡೆತನಕ್ಕೆ, ಆಗಿಂದಾಗ್ಗೆ ಕ್ರೂರ ಒಡೆತನಕ್ಕೆ ಒಳಗಾಗಿರುತ್ತಾರೆ. ಸಹಾಯಕರು ಮತ್ತು ಪೂರಕರೋಪಾದಿ ಅಮೂಲ್ಯರಾಗಿರುವ ಬದಲಿಗೆ, ಆಗಿಂದಾಗ್ಗೆ ಅವರು ಹೆಚ್ಚಾಗಿ ದಾಸರಂತೆ ಅಥವಾ ಗುಲಾಮ ಚಾಕರಿಯವರಂತೆ ಉಪಚರಿಸಲ್ಪಟ್ಟಿದ್ದಾರೆ.
8 ಆದರೂ, ಆದಿಕಾಂಡ 3:16ರ ನೆರವೇರಿಕೆಯು ಯೆಹೋವನ ಸ್ತ್ರೀ ಆರಾಧಕರಿಗಾಗಿ ಯಾವ ಅರ್ಥದಲ್ಲಿತ್ತು? ಅವರು ಕೀಳುದರ್ಜೆಯ ಸ್ಥಾನಕ್ಕೆ ಮತ್ತು ಗೌರವಹೀನ ಸ್ಥಿತಿಗೆ ಇಳಿಸಲ್ಪಟ್ಟರೊ? ನಿಶ್ಚಯವಾಗಿಯೂ ಇಲ್ಲ! ಆದರೆ ಇಂದು ನಿರ್ದಿಷ್ಟ ಸಮಾಜಗಳಲ್ಲಿ ಅಸ್ವೀಕರಣೀಯವಾಗಿ ಕಾಣಬಹುದಾದ, ಸ್ತ್ರೀಯರನ್ನು ಬಾಧಿಸುವ ಕೆಲವು ವಾಡಿಕೆಗಳನ್ನು ಮತ್ತು ಪದ್ಧತಿಗಳನ್ನು ತಿಳಿಸುವ ಬೈಬಲ್ ವೃತ್ತಾಂತಗಳ ಕುರಿತೇನು?
ಬೈಬಲಿನ ಪದ್ಧತಿಗಳನ್ನು ತಿಳಿದುಕೊಳ್ಳುವುದು
9. ಬೈಬಲ್ ಕಾಲದಲ್ಲಿ ಸ್ತ್ರೀಯರನ್ನು ಒಳಗೊಂಡ ಪದ್ಧತಿಗಳನ್ನು ನಾವುನ ಪರಿಗಣಿಸುವಾಗ, ಯಾವ ಮೂರು ವಿಷಯಗಳನ್ನು ನಾವು ಮನಸ್ಸಿನಲ್ಲಿಡಬೇಕು?
9 ಬೈಬಲ್ ಕಾಲದಲ್ಲಿ ದೇವರ ಸೇವಕರ ನಡುವೆ ಸ್ತ್ರೀಯರನ್ನು ಒಳ್ಳೆಯದಾಗಿ ಉಪಚರಿಸಲಾಗುತ್ತಿತ್ತು. ನಿಶ್ಚಯವಾಗಿ ಆ ದಿನಗಳಲ್ಲಿ ಸ್ತ್ರೀಯರನ್ನು ಒಳಗೊಂಡ ಪದ್ಧತಿಗಳನ್ನು ಪರಿಗಣಿಸುವಲ್ಲಿ, ಹಲವಾರು ವಿಷಯಗಳನ್ನು ಮನಸ್ಸಿನಲ್ಲಿಡುವುದು ಸಹಾಯಕರವು. ಮೊದಲನೆಯದಾಗಿ, ದುಷ್ಟ ಪುರುಷರ ಸ್ವಾರ್ಥಪರ ಒಡೆತನದ ಕಾರಣ ವಿಕಸಿಸಿದ ಅಹಿತಕರ ಸನ್ನಿವೇಶಗಳನ್ನು ಬೈಬಲ್ ಹೇಳುವಾಗ, ಸ್ತ್ರೀಯರನ್ನು ಆ ರೀತಿ ಉಪಚರಿಸಲು ದೇವರು ಸಮ್ಮತಿಸಿದನೆಂದು ಅರ್ಥೈಸುವುದಿಲ್ಲ. ಎರಡನೆಯದಾಗಿ, ಯೆಹೋವನು ತನ್ನ ಸೇವಕರ ನಡುವೆ ನಿರ್ದಿಷ್ಟ ಪದ್ಧತಿಗಳನ್ನು ಸ್ವಲ್ಪ ಕಾಲ ಸಹಿಸಿಕೊಂಡನಾದರೂ, ಸ್ತ್ರೀಯರ ಸಂರಕ್ಷಣೆಗಾಗಿ ಆ ಪದ್ಧತಿಗಳನ್ನು ವಿಧಿಬದ್ಧಗೊಳಿಸಿದನು. ಮೂರನೆಯದಾಗಿ, ಪುರಾತನ ಪದ್ಧತಿಗಳನ್ನು ಆಧುನಿಕ ಮಟ್ಟಗಳ ಮೂಲಕ ತೀರ್ಪು ಮಾಡದಂತೆ ನಾವು ಜಾಗ್ರತೆವಹಿಸಬೇಕು. ಇಂದು ಜೀವಿಸುವ ಜನರಿಗೆ ಅಹಿತಕರವಾಗಿ ಕಂಡುಬರಬಹುದಾದ ಕೆಲವು ಪದ್ಧತಿಗಳು ಹಿಂದಿನ ಕಾಲದ ಸ್ತ್ರೀಯರಿಂದ ಹೀನಾಯವಾದವುಗಳಾಗಿ ವೀಕ್ಷಿಸಲ್ಪಟ್ಟಿದ್ದವೆಂದು ನೆನಸುವ ಅಗತ್ಯವಿಲ್ಲ. ಕೆಲವು ಉದಾಹರಣೆಗಳನ್ನು ನಾವು ಪರಿಗಣಿಸೋಣ.
10. ಬಹು ಪತ್ನೀತ್ವದ ಪದ್ಧತಿಯನ್ನು ಯೆಹೋವನು ಹೇಗೆ ವೀಕ್ಷಿಸಿದನು, ಮತ್ತು ಏಕ ಪತ್ನೀತ್ವದ ತನ್ನ ಮೂಲ ಮಟ್ಟವನ್ನು ಆತನೆಂದೂ ತ್ಯಜಿಸಲಿಲ್ಲವೆಂದು ಯಾವುದು ಸೂಚಿಸುತ್ತದೆ?
10 ಬಹು ಪತ್ನೀತ್ವ:a ಯೆಹೋವನ ಮೂಲ ಉದ್ದೇಶಕ್ಕನುಸಾರವಾಗಿ, ಒಬ್ಬ ಪತ್ನಿಯು ತನ್ನ ಗಂಡನನ್ನು ಇನ್ನೊಬ್ಬ ಸ್ತ್ರೀಯೊಂದಿಗೆ ಹಂಚಿಕೊಳ್ಳುವುದಿಲ್ಲ. ದೇವರು ಆದಾಮನಿಗೆ ಒಬ್ಬಳೇ ಪತ್ನಿಯನ್ನು ಸೃಷ್ಟಿಸಿದನು. (ಆದಿಕಾಂಡ 2:21, 22) ಏದೆನಿನ ದಂಗೆಯ ಬಳಿಕ, ಬಹು ಪತ್ನೀತ್ವದ ಪದ್ಧತಿಯು ಮೊದಲು ಗೋಚರಕ್ಕೆ ಬಂದದ್ದು ಕಾಯಿನನ ವಂಶದಲ್ಲಿ. ಕೊನೆಗೆ ಅದು ಒಂದು ಪದ್ಧತಿಯಾಗಿ ಪರಿಣಮಿಸಿತು ಮತ್ತು ಯೆಹೋವನ ಕೆಲವು ಆರಾಧಕರು ಅದನ್ನು ಅನುಸರಿಸಿದರು. (ಆದಿಕಾಂಡ 4:19; 16:1-3; 29:21-28) ಯೆಹೋವನು ಬಹು ಪತ್ನೀತ್ವವನ್ನು ಅನುಮತಿಸಿದನಾದರೂ, ಅದು ಇಸ್ರಾಯೇಲಿನ ಜನಸಂಖ್ಯೆಯನ್ನು ಹೆಚ್ಚಿಸಲು ಸಾಧನವಾಯಿತಾದರೂ, ಪತ್ನಿಯರು ಮತ್ತು ಅವರ ಮಕ್ಕಳು ಸಂರಕ್ಷಿಸಲ್ಪಡುವಂತೆ ಆ ಪದ್ಧತಿಯನ್ನು ವಿಧಿಬದ್ಧಮಾಡಿ ಸ್ತ್ರೀಯರಿಗೆ ಪರಿಗಣನೆಯನ್ನು ತೋರಿಸಿದನು. (ವಿಮೋಚನಕಾಂಡ 21:10, 11; ಧರ್ಮೋಪದೇಶಕಾಂಡ 21:15-17) ಅದಲ್ಲದೆ, ಮೂಲ ಮಟ್ಟವಾದ ಏಕ ಪತ್ನೀತ್ವವನ್ನು ಯೆಹೋವನು ಎಂದೂ ತ್ಯಜಿಸಿಬಿಡಲಿಲ್ಲ. ಯಾರಿಗೆ ‘ಬಹುಸಂತಾನವುಳ್ಳವರಾಗಿ ಹೆಚ್ಚಿ ಭೂಮಿಯನ್ನು ತುಂಬಿಕೊಳ್ಳುವ’ ಆಜ್ಞೆಯು ಪುನರುಚ್ಚರಿಸಲ್ಪಟ್ಟಿತೊ, ಆ ನೋಹ ಮತ್ತು ಅವನ ಗಂಡು ಮಕ್ಕಳೆಲ್ಲರೂ ಏಕ ಪತ್ನೀತ್ವವನ್ನು ಅನುಸರಿಸಿದ್ದರು. (ಆದಿಕಾಂಡ 7:7; 9:1; 2 ಪೇತ್ರ 2:5) ಇಸ್ರಾಯೇಲ್ಯರೊಂದಿಗೆ ತನ್ನ ಸಂಬಂಧವನ್ನು ಸಂಕೇತಿಸುವಾಗ ದೇವರು ಒಬ್ಬ ಏಕ ಪತ್ನೀತ್ವದ ಪತಿಯಾಗಿ ತನ್ನನ್ನು ಚಿತ್ರಿಸಿಕೊಂಡನು. (ಯೆಶಾಯ 54:1, 5) ಅಷ್ಟಲ್ಲದೆ, ಏಕ ಪತ್ನೀತ್ವದ ದೇವರ ಮೂಲ ಮಟ್ಟವು ಯೇಸು ಕ್ರಿಸ್ತನಿಂದ ಪುನಃಸ್ಥಾಪನೆ ಹೊಂದಿ, ಆದಿ ಕ್ರೈಸ್ತ ಸಭೆಯಲ್ಲಿ ಅನುಸರಿಸಲ್ಪಟ್ಟಿತು.—ಮತ್ತಾಯ 19:4-8; 1 ತಿಮೊಥೆಯ 3:2, 12.
11. ಬೈಬಲ್ ಕಾಲದಲ್ಲಿ ವಧೂ-ಧನ ಏಕೆ ತೆರಲ್ಪಟ್ಟಿತು, ಮತ್ತು ಇದು ಸ್ತ್ರೀಯರ ಕೀಳೈಸುವಿಕೆಯಾಗಿತ್ತೊ?
11 ವಧೂ-ಧನ ತೆರುವುದು: ಪುರಾತನ ಇಸ್ರಾಯೇಲ್—ಅದರ ಜೀವನ ಮತ್ತು ನ್ಯಾಯಪದ್ಧತಿಗಳು (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದು: “ಹುಡುಗಿಯ ಕುಟುಂಬಕ್ಕೆ ಹಣದ ಒಂದು ಮೊತ್ತವನ್ನು ಅಥವಾ ಅದಕ್ಕೆ ಸಮಬೆಲೆಯುಳ್ಳದ್ದನ್ನು ಸಲ್ಲಿಸುವ ಹಂಗು ಇಸ್ರಾಯೇಲ್ಯ ಮದುವೆಗೆ ಕ್ರಯಕೊಟ್ಟು ಖರೀದಿಸುವ ಒಂದು ಹೊರತೋರಿಕೆಯನ್ನು ಕೊಡುತ್ತದೆ. ಆದರೆ [ವಧೂ-ಧನ] ಸ್ತ್ರೀಗಾಗಿ ಕೊಡುವ ಬೆಲೆಗಿಂತ ಕುಟುಂಬಕ್ಕೆ ಕೊಡುವ ಪರಿಹಾರ ಧನವಾಗಿರುವಂತೆ ಹೆಚ್ಚು ತೋರಿಬರುತ್ತದೆ. (ಓರೆ ಅಕ್ಷರ ನಮ್ಮದು.) ಹೀಗೆ ವಧೂ-ಧನದ ತೆರುವಿಕೆಯು, ಆಕೆಯಿಂದ ದೊರೆಯುತ್ತಿದ್ದ ಸೇವೆಗಳ ನಷ್ಟಕ್ಕಾಗಿ ಮತ್ತು ಅವಳ ಪಾಲನೆ ಪೋಷಣೆಗಾಗಿ ಕುಟುಂಬವು ಮಾಡಬೇಕಿದ್ದ ಪ್ರಯಾಸ ಮತ್ತು ಖರ್ಚಿನ ನಷ್ಟಕಟ್ಟಿಕೊಡಲಿಕ್ಕಾಗಿ ಕಾರ್ಯನಡಿಸಿತು. ಹೀಗೆ ಅದು ಸ್ತ್ರೀಯನ್ನು ಕೀಳು ಮಾಡುವ ಬದಲಿಗೆ ಅವಳ ಕುಟುಂಬಕ್ಕೆ ಅವಳ ಮೌಲ್ಯವನ್ನು ಅದು ದೃಢೀಕರಿಸಿತು.—ಆದಿಕಾಂಡ 34:11, 12; ವಿಮೋಚನಕಾಂಡ 22:16; ದ ವಾಚ್ಟವರ್, ಜನವರಿ 15, 1989, ಪುಟಗಳು 21-4ನ್ನು ನೋಡಿರಿ.
12. (ಎ) ವಿವಾಹಿತ ಪುರುಷರು ಮತ್ತು ಸ್ತ್ರೀಯರು ಕೆಲವೊಮ್ಮೆ ಶಾಸ್ತ್ರದಲ್ಲಿ ಹೇಗೆ ನಿರ್ದೇಶಿಸಲ್ಪಟ್ಟಿದ್ದಾರೆ, ಮತ್ತು ಈ ವಾಕ್ಸರಣಿಗಳು ಸ್ತ್ರೀಯರಿಗೆ ಅಪಮಾನಕರವಾಗಿದ್ದವೊ? (ಬಿ) ಯೆಹೋವನು ಏದೆನಿನಲ್ಲಿ ಬಳಸಿದ ವಾಕ್ಸರಣಿಗಳ ವಿಷಯದಲ್ಲಿ ಯಾವುದು ಗಮನಾರ್ಹವಾಗಿದೆ? (ಪಾದಟಿಪ್ಪಣಿ ನೋಡಿ.)
12 ಗಂಡಂದಿರು “ಯಜಮಾನ” ರಾಗಿ: ಸಾ.ಶ.ಪೂ. 1918ರ ಸುಮಾರಿಗೆ ಅಬ್ರಹಾಮ ಮತ್ತು ಸಾರಳ ಜೀವನದಲ್ಲಿನ ಒಂದು ಘಟನೆಯು, ಅವರ ಸಮಯದೊಳಗೆ ವಿವಾಹಿತ ಪುರುಷನನ್ನು “ಯಜಮಾನ” ನಾಗಿ (ಹೀಬ್ರು ಬೇಅಲ್) ಮತ್ತು ವಿವಾಹಿತ ಸ್ತ್ರೀಯನ್ನು ‘ಯಜಮಾನನ ಸೊತ್ತು’ (ಹೀಬ್ರು, ಬ್ಯೂಲ) ಆಗಿ ವೀಕ್ಷಿಸುವುದು ವಾಡಿಕೆಯಾಗಿತ್ತೆಂದು ಸ್ಪಷ್ಟವಾಗಿಗುತ್ತದೆ. (ಆದಿಕಾಂಡ 20:3) ಈ ಅಭಿವ್ಯಕ್ತಿಗಳು ಅನಂತರ ಶಾಸ್ತ್ರದಲ್ಲಿ ಆಗಿಂದಾಗ್ಗೆ ಬಳಸಲ್ಪಟ್ಟವು, ಮತ್ತು ಕ್ರೈಸ್ತ ಪೂರ್ವದ ಸ್ತ್ರೀಯರು ಅದನ್ನು ಅಪಮಾನಕರವಾಗಿ ಕಂಡರೆಂಬ ಯಾವ ಸೂಚನೆಯೂ ಅಲ್ಲಿಲ್ಲ.b (ಧರ್ಮೋಪದೇಶಕಾಂಡ 22:22) ಆದರೂ ಹೆಂಡತಿಯರು ಚರಾಸ್ತಿಯ ಸ್ವತ್ತುಗಳಂತೆ ನೋಡಿಕೊಳ್ಳಲಿಕ್ಕಾಗಿ ಇರಲಿಲ್ಲ. ಆಸ್ತಿಯನ್ನು ಯಾ ಐಶ್ವರ್ಯವನ್ನು ಖರೀದಿಮಾಡಲು, ಮಾರಿಬಿಡಲು, ಮತ್ತು ಸ್ವಾಸ್ಥ್ಯವಾಗಿ ಹೊಂದಲು ಸಹ ಸಾಧ್ಯವಿದೆ, ಆದರೆ ಪತ್ನಿಯ ಸಂಬಂಧದಲ್ಲಿ ಅದು ಹಾಗಿರುವುದಿಲ್ಲ. “ಮನೆಮಾರೂ ಆಸ್ತಿಪಾಸ್ತಿಯೂ ಪಿತೃಗಳಿಂದ ದೊರಕುವವು” ಎಂದು ಹೇಳುತ್ತದೆ ಬೈಬಲಿನ ಒಂದು ಜ್ಞಾನೋಕ್ತಿ, ಆದರೆ “ವಿವೇಕಿನಿಯಾದ ಹೆಂಡತಿಯು ಯೆಹೋವನ ಅನುಗ್ರಹವೇ.”—ಜ್ಞಾನೋಕ್ತಿ 19:14; ಧರ್ಮೋಪದೇಶಕಾಂಡ 21:14.
ಒಂದು ಗೌರವವುಳ್ಳ ಪಾತ್ರ
13. ದೇವ-ಭೀರು ಪುರುಷರು ಯೆಹೋವನ ಮಾದರಿಯನ್ನು ಅನುಸರಿಸಿ ಆತನ ನಿಯಮಕ್ಕೆ ವಿಧೇಯರಾದಾಗ, ಸ್ತ್ರೀಯರಿಗೆ ಏನು ಲಭಿಸಿತು?
13 ಹಾಗಾದರೆ ಕ್ರೈಸ್ತ ಪೂರ್ವ ಕಾಲದ ದೇವರ ಸೇವಕರ ನಡುವೆ ಸ್ತ್ರೀಯರ ಪಾತ್ರವು ಏನಾಗಿತ್ತು? ಅವರು ಹೇಗೆ ವೀಕ್ಷಿಸಲ್ಪಟ್ಟಿದ್ದರು ಮತ್ತು ಉಪಚರಿಸಲ್ಪಟ್ಟಿದ್ದರು? ಸರಳವಾದ ಮಾತಿನಲ್ಲಿ, ದೇವಭೀರು ಪುರುಷರು ಯೆಹೋವನ ಸ್ವಂತ ಮಾದರಿಯನ್ನು ಅನುಸರಿಸಿ ಆತನ ನಿಯಮವನ್ನು ಪಾಲಿಸಿದಾಗ, ಸ್ತ್ರೀಯರು ತಮ್ಮ ಗೌರವವನ್ನು ಕಾಪಾಡಿಕೊಂಡು ಅನೇಕ ಹಕ್ಕುಗಳಲ್ಲಿ ಮತ್ತು ಸುಯೋಗಗಳಲ್ಲಿ ಆನಂದಿಸಿದರು.
14, 15. ಇಸ್ರಾಯೇಲಿನಲ್ಲಿ ಸ್ತ್ರೀಯರು ಗೌರವಿಸಲ್ಪಟ್ಟಿದ್ದರೆಂಬುದಕ್ಕೆ ಯಾವ ಸೂಚನೆಗಳಿವೆ, ಮತ್ತು ತನ್ನ ಪುರುಷ ಆರಾಧಕರು ಅವರನ್ನು ಗೌರವಿಸುವಂತೆ ಯೆಹೋವನು ನ್ಯಾಯವಾಗಿ ಅಪೇಕ್ಷಿಸಬಲ್ಲನೇಕೆ?
14 ಸ್ತ್ರೀಯರು ಗೌರವಿಸಲ್ಪಡಬೇಕಾಗಿತ್ತು. ತಂದೆಯಂದಿರು ಮತ್ತು ತಾಯಂದಿರು ಇವರಿಬ್ಬರನ್ನೂ ಗೌರವಿಸಬೇಕೆಂದು ದೇವರ ನಿಯಮವು ಇಸ್ರಾಯೇಲಿಗೆ ವಿಧಿಸಿತ್ತು. (ವಿಮೋಚನಕಾಂಡ 20:12; 21:15, 17) “ಪ್ರತಿಯೊಬ್ಬನು ತನ್ನ ತಾಯಿತಂದೆಗಳ ವಿಷಯದಲ್ಲಿ ಭಯಭಕ್ತಿಯಿಂದ ನಡೆದುಕೊಳ್ಳಬೇಕು” ಎಂದು ಅರಣ್ಯಕಾಂಡ 19:3 ಹೇಳುತ್ತದೆ. ಒಂದು ಸಂದರ್ಭದಲ್ಲಿ ಬತ್ಷೆಬೆಯು ತನ್ನ ಮಗನಾದ ಸೊಲೊಮೋನನ ಬಳಿಗೆ ಬಂದಾಗ, ಗೌರವದ ಭಾವದಲ್ಲಿ “ಅರಸನು ಎದ್ದುಹೋಗಿ ಆಕೆಯನ್ನು ಎದುರುಗೊಂಡು ನಮಸ್ಕರಿಸಿದನು.” (1 ಅರಸುಗಳು 2:19) ಎನ್ಸೈಕ್ಲೊಪೀಡಿಯ ಜುಡೈಕ ಗಮನಿಸುವುದು: “ಇಸ್ರಾಯೇಲಿಗಾಗಿ ದೇವರ ಪ್ರೀತಿಯ ಪ್ರವಾದನಾ ತುಲನೆಗಳನ್ನು—ಗಂಡನಿಗೆ ತನ್ನ ಹೆಂಡತಿಯಲ್ಲಿರುವ ಪ್ರೀತಿಗೆ—ಯಾವ ಸಮಾಜದಲ್ಲಿ ಸ್ತ್ರೀಯರು ಗೌರವಿಸಲ್ಪಟ್ಟರೊ ಅದರಲ್ಲಿ ಮಾತ್ರ ಮಾಡಸಾಧ್ಯವಿತ್ತು.”
15 ತನ್ನ ಪುರುಷ ಆರಾಧಕರು, ಸ್ತ್ರೀಯರನ್ನು ಗೌರವಿಸುವಂತೆ ಯೆಹೋವನು ಅಪೇಕ್ಷಿಸುತ್ತಾನೆ ಯಾಕಂದರೆ ಆತನು ಸ್ತ್ರೀಯರನ್ನು ಗೌರವಿಸುತ್ತಾನೆ. ಇದರ ಸೂಚನೆಗಳು ಶಾಸ್ತ್ರದಲ್ಲಿ, ಎಲ್ಲಿ ಯೆಹೋವನು ಸ್ತ್ರೀಯರ ಅನುಭವಗಳನ್ನು ದೃಷ್ಟಾಂತವಾಗಿ ಉಪಯೋಗಿಸುತ್ತಾ, ಆ ಸ್ತ್ರೀಯರಿಗೆ ತನ್ನ ಸ್ವಂತ ಭಾವನೆಗಳನ್ನು ಹೋಲಿಸುತ್ತಾನೊ ಅಲ್ಲಿ ಕಂಡುಬರುತ್ತವೆ. (ಯೆಶಾಯ 42:14; 49:15; 66:13) ಯೆಹೋವನ ಅನಿಸಿಕೆಗಳು ಹೇಗಿವೆ ಎಂಬುದನ್ನು ತಿಳಿಯಲು ಇದು ವಾಚಕರಿಗೆ ನೆರವಾಗುತ್ತದೆ. ರಸಕರವಾಗಿ, ಯೆಹೋವನು ತನಗಾಗಿ ಅನ್ವಯಿಸಿಕೊಳ್ಳುವ “ದಯೆ” ಅಥವಾ “ಕನಿಕರ”ದ ಹೀಬ್ರು ಪದವು “ಗರ್ಭ”ಕ್ಕೆ ನಿಕಟವಾಗಿ ಸಂಬಂಧಿಸಿದ್ದು, ಅದನ್ನು “ಮಾತೃ ಸ್ವಭಾವದ ಭಾವನೆ” ಯಾಗಿ ವಿವರಿಸಸಾಧ್ಯವಿದೆ.—ವಿಮೋಚನಕಾಂಡ 33:19; ಯೆಶಾಯ 54:7.
16. ದೇವಭಕ್ತೆಯರಾದ ಸ್ತ್ರೀಯರ ಸಲಹೆಗೆ ಬೆಲೆಕೊಡಲಾಗಿತ್ತೆಂದು ಯಾವ ಉದಾಹರಣೆಗಳು ತೋರಿಸುತ್ತವೆ?
16 ದೇವಭಕ್ತೆಯರಾದ ಸ್ತ್ರೀಯರ ಸಲಹೆಗೆ ಬೆಲೆಕೊಡಲಾಯಿತು. ದೇವ-ಭೀರುವಾದ ಅಬ್ರಹಾಮನು ತನ್ನ ದೇವಭಕ್ತೆ ಪತ್ನಿಯಾದ ಸಾರಳ ಸಲಹೆಯನ್ನು ಪಾಲಿಸಲು ಒಂದು ಸಂದರ್ಭದಲ್ಲಿ ಅನುಮಾನಿಸಿದಾಗ, ಯೆಹೋವನು ಅವನಿಗೆ ಹೇಳಿದ್ದು: “ಸಾರಳು ಹೇಳಿದಂತೆಯೇ ಮಾಡು.” (ಆದಿಕಾಂಡ 21:10-12) ಏಸಾವನ ಹಿತ್ತೀಯ ಹೆಂಡತಿಯರ “ದೆಸೆಯಿಂದ ಇಸಾಕನಿಗೂ ರೆಬೆಕ್ಕಳಿಗೂ ಮನೋವ್ಯಥೆಯುಂಟಾಯಿತು.” ತಮ್ಮ ಮಗ ಯಾಕೋಬನೂ ಹಿತ್ತೀಯಳೊಬ್ಬಳನ್ನು ಮದುವೆಮಾಡಿಕೊಂಡಲ್ಲಿ ತನಗಾಗುವ ದುಃಖವನ್ನು ರೆಬೆಕ್ಕಳು ಕೊನೆಗೆ ವ್ಯಕ್ತಪಡಿಸಿದಳು. ಇಸಾಕನ ಪ್ರತಿಕ್ರಿಯೆ ಏನಾಗಿತ್ತು? “ಆಗ ಇಸಾಕನು ಯಾಕೋಬನನ್ನು ಕರೆದು ಅವನಿಗೆ—ನೀನು ಕಾನಾನ್ಯರ ಹೆಣ್ಣನ್ನು ಮದುವೆಮಾಡಿಕೊಳ್ಳ ಬೇಡ” ಎಂದು ಆಜ್ಞಾಪಿಸಿದನೆಂದು ವೃತ್ತಾಂತ ತಿಳಿಸುತ್ತದೆ. ಹೌದು, ರೆಬೆಕ್ಕಳು ನೇರವಾದ ಸಲಹೆಯನ್ನು ನೀಡಿರದಿದ್ದರೂ, ಅವಳ ಭಾವನೆಗಳನ್ನು ಎಣಿಕೆಗೆ ತೆಗೆದುಕೊಂಡು ಒಂದು ನಿರ್ಣಯವನ್ನು ಅವಳ ಗಂಡನು ಮಾಡಿದನು. (ಆದಿಕಾಂಡ 26:34, 35; 27:46; 28:1) ಅಬೀಗೈಲಳ ಬೇಡಿಕೆಗೆ ಕಿವಿಗೊಟ್ಟ ಅರಸ ದಾವೀದನೂ ತದನಂತರ ರಕ್ತಾಪರಾಧದೋಷವನ್ನು ವರ್ಜಿಸಿದನು.—1 ಸಮುವೇಲ 25:32-35.
17. ಕುಟುಂಬದಲ್ಲಿ ಸ್ತ್ರೀಯರಿಗೆ ಒಂದು ಪರಿಮಿತಿಯ ಅಧಿಕಾರವಿತ್ತೆಂದು ಯಾವುದು ತೋರಿಸುತ್ತದೆ?
17 ಸ್ತ್ರೀಯರಿಗೆ ಕುಟುಂಬದಲ್ಲಿ ಒಂದು ಪರಿಮಿತಿಯ ಅಧಿಕಾರವಿತ್ತು. ಮಕ್ಕಳಿಗೆ ಪ್ರೋತ್ಸಾಹನೆ ಕೊಡಲ್ಪಟ್ಟದ್ದು: “ಮಗನೇ, ನಿನ್ನ ತಂದೆಯ ಉಪದೇಶವನ್ನು ಕೇಳು, ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ.” (ಜ್ಞಾನೋಕ್ತಿ 1:8) ಜ್ಞಾನೋಕ್ತಿ 31 ನೆಯ ಅಧ್ಯಾಯದಲ್ಲಿ “ಗುಣವತಿಯಾದ ಸತಿ”ಯ ವರ್ಣನೆಯು ಪ್ರಕಟಿಸುತ್ತದೇನಂದರೆ, ಉದ್ಯೋಗಶೀಲ ವಿವಾಹಿತ ಹೆಂಗಸು ಮನೆವಾರ್ತೆಯನ್ನು ನಿರ್ವಹಿಸುತ್ತಾಳೆ ಮಾತ್ರವಲ್ಲ ಸ್ಥಿರಾಸ್ತಿಯ ವ್ಯಾಪಾರಗಳನ್ನೂ ನಿಭಾಯಿಸಬಹುದು, ಫಲದಾಯಕ ಹೊಲವನ್ನು ರಚಿಸಬಹುದು, ಸಣ್ಣ ವ್ಯಾಪಾರವನ್ನು ನಡಿಸಬಹುದು, ಮತ್ತು ತನ್ನ ಬುದಿಮ್ಧಾತುಗಳಿಗೆ ಅವಳು ಪ್ರಸಿದ್ಧಳಾಗಿರುವಳು. ಎಲ್ಲದಕ್ಕಿಂತ ಅತಿ ಪ್ರಾಮುಖ್ಯವಾದದ್ದು ಸುತ್ತಿಪಾತ್ರ ಸ್ತ್ರೀಗೆ ಯೆಹೋವನಲ್ಲಿರುವ ಪೂಜ್ಯ ಭಯಭಕ್ತಿಯೇ. ಅಂತಹ ಒಬ್ಬ ಪತ್ನಿಯ ಮೌಲ್ಯವು “ಹವಳಕ್ಕಿಂತಲೂ ಬಹು ಅಮೂಲ್ಯ” ಎಂಬುದೇನೂ ಆಶ್ಚರ್ಯವಲ್ಲ! ಅಮೂಲ್ಯವಾದ ಕೆಂಪು ಹವಳವು ಆಭರಣಗಳಿಗಾಗಿ ಮತ್ತು ಶೃಂಗಾರ ಸಾಧನಗಳಿಗಾಗಿ ಬಹಮೂಲ್ಯವೆಂದು ಪರಿಗಣಿಸಲಾಗಿತ್ತು.—ಜ್ಞಾನೋಕ್ತಿ 31:10-31.
ದೇವರ ವಿಶೇಷ ಅನುಗ್ರಹವನ್ನು ಪಡೆದ ಸ್ತ್ರೀಯರು
18. ಬೈಬಲ್ ಕಾಲದಲ್ಲಿ ನಿರ್ದಿಷ್ಟ ಸ್ತ್ರೀಯರಿಗೆ ವಿಶೇಷಾನುಗ್ರಹವು ಯಾವ ವಿಧಗಳಲ್ಲಿ ದಯಪಾಲಿಸಲ್ಪಟ್ಟಿತು?
18 ಬೈಬಲಿನ ಕಾಲಗಳಲ್ಲಿ ಅವರಲ್ಲಿ ಕೆಲವರಿಗೆ ಯೆಹೋವನು ದಯಪಾಲಿಸಿದ ವಿಶೇಷ ಅನುಗ್ರಹದಲ್ಲಿ, ಸ್ತ್ರೀಯರಿಗಾಗಿರುವ ಯೆಹೋವನ ಗೌರವವು ಪ್ರತಿಬಿಂಬಿತವಾಯಿತು. ಹಾಗರ, ಸಾರ, ಮತ್ತು ಮನೋಹನ ಪತ್ನಿಯು ದಿವ್ಯ ಮಾರ್ಗದರ್ಶನವನ್ನು ಅವರಿಗೆ ಕೊಟ್ಟ ದೇವದೂತರಿಂದ ಸಂದರ್ಶಿಸಲ್ಪಟ್ಟರು. (ಆದಿಕಾಂಡ 16:7-12; 18:9-15; ನ್ಯಾಯಸ್ಥಾಪಕರು 13:2-5) ಗುಡಾರದ ಬಾಗಿಲಲ್ಲಿ ಸೇವೆಮಾಡುತ್ತಿದ್ದ “ಸ್ತ್ರೀಯರು” ಹಾಗೂ ಸೊಲೊಮೋನನ ಆಸ್ಥಾನದಲ್ಲಿ ಸ್ತ್ರೀ ಗಾಯಕಿಯರೂ ಇವರಾಗಿದ್ದರು.—ವಿಮೋಚನಕಾಂಡ 38:8; 1 ಸಮುವೇಲ 2:22; ಪ್ರಸಂಗಿ 2:8.
19. ಕೆಲವೊಮ್ಮೆ, ಯೆಹೋವನು ತನ್ನನ್ನು ಪ್ರತಿನಿಧಿಸಲು ಸ್ತ್ರೀಯರನ್ನು ಯಾವ ವಿಧದಲ್ಲಿ ಉಪಯೋಗಿಸಿದನು?
19 ಇಸ್ರಾಯೇಲಿನ ಇತಿಹಾಸದಲ್ಲಿ ಹಲವಾರು ಸಲ, ಯೆಹೋವನು ಒಬ್ಬ ಸ್ತ್ರೀಯನ್ನು ತನ್ನ ಪ್ರತಿನಿಧಿಯಾಗಿ ಅಥವಾ ತನ್ನ ಪರವಾಗಿ ಮಾತಾಡಲು ಉಪಯೋಗಿಸಿದನು. ಪ್ರವಾದಿನಿ ದೆಬೋರಳ ಕುರಿತು ನಾವು ಓದುವುದು: “ಇಸ್ರಾಯೇಲ್ಯರು ನ್ಯಾಯನಿರ್ಣಯಕ್ಕೋಸ್ಕರ ಆಕೆಯ ಬಳಿಗೆ ಬರುತ್ತಿದ್ದರು.” (ನ್ಯಾಯಸ್ಥಾಪಕರು 4:5) ಕಾನಾನ್ಯ ಅರಸ ಯಾಬೀನನನ್ನು ಇಸ್ರಾಯೇಲ್ಯರು ಸೋಲಿಸಿದಾಗ, ದೆಬೋರಳಿಗೆ ನಿಜವಾಗಿಯೂ ಒಂದು ವಿಶೇಷ ಸುಯೋಗವು ಸಿಕ್ಕಿತ್ತು. ಅವಳು ಕಡಿಮೆಪಕ್ಷ ಆಂಶಿಕವಾಗಿ, ಕೊನೆಗೆ ಯೆಹೋವನ ಪ್ರೇರಿತ ದಾಖಲೆಯ ಭಾಗವಾದ ಜಯಗೀತವನ್ನು ರಚಿಸಿದಳೆಂಬುದು ವ್ಯಕ್ತ.c (ನ್ಯಾಯಸ್ಥಾಪಕರು, ಅಧ್ಯಾಯ 5) ಶತಮಾನಗಳ ಬಳಿಕ, ಯೆಹೋವನನ್ನು ವಿಚಾರಿಸಲಿಕ್ಕಾಗಿ ಅರಸ ಯೋಷೀಯನು ಮಹಾ ಯಾಜಕನನ್ನೊಳಗೊಂಡ ಒಂದು ನಿಯೋಗ ಮಂಡಲಿಯನ್ನು ಪ್ರವಾದಿನಿ ಹುಲ್ದಳ ಬಳಿಗೆ ಕಳುಹಿಸಿದನು. ಹುಲ್ದ ಅಧಿಕಾರಯುಕ್ತಳಾಗಿ ಹೀಗನ್ನ ಶಕ್ತಳಾದಳು: “ಇಸ್ರಾಯೇಲ್ದೇವರಾದ ಯೆಹೋವನ [ಈ] ಮಾತುಗಳನ್ನು ತಿಳಿಸಿರಿ.” (2 ಅರಸುಗಳು 22:11-15) ಆ ಸಂದರ್ಭದಲ್ಲಿ ಅರಸನು ನಿಯೋಗ ಮಂಡಳಿಯನ್ನು, ಒಬ್ಬ ಪ್ರವಾದಿನಿಯ ಬಳಿಗೆ ಹೋಗುವಂತೆ ಆಜ್ಞಾಪಿಸಿದನು; ಏಕೆಂದರೆ ಯೆಹೋವನಿಂದ ಮಾರ್ಗದರ್ಶನವನ್ನು ಪಡೆಯಲಿಕ್ಕಾಗಿ ಇದನ್ನು ಮಾಡಲಾಗಿತ್ತು.—ಮಲಾಕಿಯ 2:7ನ್ನು ಹೋಲಿಸಿ.
20. ಸ್ತ್ರೀಯರ ಭಾವನೆಗಳು ಮತ್ತು ಕಲ್ಯಾಣಕ್ಕಾಗಿ ಯೆಹೋವನ ಚಿಂತೆಯನ್ನು ಯಾವ ಉದಾಹರಣೆಗಳು ಸೂಚಿಸುತ್ತವೆ?
20 ಸ್ತ್ರೀಯರ ಕಲ್ಯಾಣಕ್ಕಾಗಿ ಯೆಹೋವನ ಚಿಂತೆಯು, ಆತನ ಸ್ತ್ರೀ ಆರಾಧಕರಲ್ಲಿ ಕೆಲವರ ಸಲುವಾಗಿ ಆತನು ಕ್ರಿಯೆನಡಿಸಿದ ಉದಾಹರಣೆಗಳಿಂದ ಸ್ಪಷ್ಟವಾಗಿಗುತ್ತದೆ. ಅಬ್ರಹಾಮನ ಸುಂದರ ಪತ್ನಿಯಾದ ಸಾರಳ ಸತೀತ್ವ ಭಂಗವಾಗದಂತೆ ಕಾಪಾಡಲು ಎರಡು ಸಲ ಆತನು ಅಡ್ಡಬಂದನು. (ಆದಿಕಾಂಡ 12:14-20; 20:1-7) ಕಡಿಮೆ-ಪ್ರೀತಿಸಲ್ಪಟ್ಟ ಯಾಕೋಬನ ಪತ್ನಿಯಾದ ಲೇಯಳ ‘ಗರ್ಭವನ್ನು ತೆರೆಯುವ’ ಮೂಲಕ ಅವಳು ಒಬ್ಬ ಪುತ್ರನನ್ನು ಹೆರುವ ಅನುಗ್ರಹವನ್ನು ದೇವರು ಆಕೆಗೆ ತೋರಿಸಿದನು. (ಆದಿಕಾಂಡ 29:31, 32) ಇಬ್ಬರು ದೇವ-ಭೀರು ಇಸ್ರಾಯೇಲ್ಯ ಸೂಲಗಿತ್ತಿಯರು ಹೀಬ್ರು ಗಂಡು ಮಕ್ಕಳನ್ನು ಕಾಪಾಡಲಿಕ್ಕಾಗಿ ತಮ್ಮ ಜೀವವನ್ನು ಕೇಡಿಗೆ ಒಡ್ಡಿದಾಗ, ಯೆಹೋವನು ಗಣ್ಯತಾಪೂರ್ವಕವಾಗಿ “ಅವರಿಗೆ ವಂಶಾಭಿವೃದ್ಧಿಯನ್ನು ಮಾಡಿದನು.” (ವಿಮೋಚನಕಾಂಡ 1:17, 20, 21) ಹನ್ನಳ ಉದ್ರಿಕ್ತ ಪ್ರಾರ್ಥನೆಗೆ ಸಹ ಆತನು ಉತ್ತರಿಸಿದನು. (1 ಸಮುವೇಲ 1:10, 20) ಮತ್ತು ಸಾಲ ವಸೂಲಿಗಾಗಿ ಅವಳ ಇಬ್ಬರು ಮಕ್ಕಳನ್ನು ತೆಗೆದುಕೊಂಡು ಹೋಗಲು ಸಿದ್ಧನಾದ ಸಾಲಗಾರನನ್ನು ಪ್ರವಾದಿಯೊಬ್ಬನ ವಿಧವೆಯು ಎದುರಾದಾಗ, ಯೆಹೋವನು ಅವಳನ್ನು ತ್ಯಜಿಸಲಿಲ್ಲ. ಪ್ರೀತಿಯಿಂದ ದೇವರು, ಅವಳ ಎಣ್ಣೆ ಸಂಗ್ರಹವು ಉಕ್ಕುವಂತೆ ಮಾಡಲು ಎಲೀಯನನ್ನು ಶಕ್ತನನ್ನಾಗಿ ಮಾಡಿ, ಅವಳು ತನ್ನ ಸಾಲವನ್ನು ತೀರಿಸುವಂತೆ ಮಾಡಿದನು. ಹೀಗೆ ಆಕೆ ತನ್ನ ಕುಟುಂಬವನ್ನು ಮತ್ತು ಗೌರವವನ್ನು ಕಾಪಾಡಿಕೊಂಡಳು.—ವಿಮೋಚನಕಾಂಡ 22:22, 23; 2 ಅರಸುಗಳು 4:1-7.
21. ಸ್ತ್ರೀಯರ ಪಾಡಿನ ವಿಷಯದಲ್ಲಿ ಹೀಬ್ರು ಶಾಸ್ತ್ರವು ಯಾವ ಸಮತೆಯ ಚಿತ್ರವನ್ನು ನೀಡುತ್ತದೆ?
21 ಹೀಗೆ ಹೀಬ್ರು ಶಾಸ್ತ್ರವು ಸ್ತ್ರೀಯರೆಡೆಗೆ ಕಳಂಕ ತರುವ ನೋಟವನ್ನು ಪ್ರೋತ್ಸಾಹಿಸುವುದಿಲ್ಲ, ಪ್ರತಿಯಾಗಿ, ದೇವರ ಸೇವಕರ ನಡುವೆ ಇರುವ ಅವರ ವಿಷಯದಲ್ಲಿ ಸಮತೆಯ ವರ್ಣನೆಯನ್ನು ನೀಡುತ್ತದೆ. ಆದಿಕಾಂಡ 3:16ರ ನೆರವೇರಿಕೆಯಿಂದ ತನ್ನ ಸ್ತ್ರೀ ಆರಾಧಕರನ್ನು ಯೆಹೋವನು ಕಾಪಾಡಲಿಲ್ಲವಾದರೂ, ಯೆಹೋವನ ಮಾದರಿಯನ್ನು ಪಾಲಿಸಿದ ಮತ್ತು ಆತನ ನಿಯಮಕ್ಕೆ ಕಿವಿಗೊಟ್ಟ ದೇವಭಕ್ತ ಪುರುಷರಿಂದ ಸ್ತ್ರೀಯರು ಗೌರವ ಮತ್ತು ಮರ್ಯಾದೆಯಿಂದ ಉಪಚರಿಸಲ್ಪಟ್ಟಿದ್ದಾರೆ.
22. ಯೇಸು ಭೂಮಿಯ ಮೇಲೆ ಇದ್ದ ಸಮಯದಷ್ಟಕ್ಕೆ, ಸ್ತ್ರೀಯರ ಪಾತ್ರವು ಹೇಗೆ ಬದಲಾಗಿತ್ತು, ಮತ್ತು ಯಾವ ಪ್ರಶ್ನೆಗಳು ಕೇಳಲ್ಪಟ್ಟಿವೆ?
22 ಹೀಬ್ರು ಶಾಸ್ತ್ರದ ಮುಕ್ತಾಯವನ್ನು ಹಿಂಬಾಲಿಸಿದ ಶತಮಾನಗಳಲ್ಲಿ, ಯೆಹೂದ್ಯರಲ್ಲಿ ಸ್ತ್ರೀಯರ ಪಾತ್ರವು ಬದಲಾಯಿತು. ಯೇಸು ಭೂಮಿಯಲ್ಲಿ ಆಗಮಿಸಿದ ಸಮಯದೊಳಗೆ, ರಬ್ಬಿಗಳ ಸಂಪ್ರದಾಯಗಳು ಸ್ತ್ರೀಯರನ್ನು ಅವರ ಧಾರ್ಮಿಕ ಸುಯೋಗಗಳಲ್ಲಿ ಮತ್ತು ಸಾಮಾಜಿಕ ಜೀವನದಲ್ಲಿ ಬಹಳವಾಗಿ ನಿರ್ಬಂಧಿಸಿದ್ದವು. ಅಂತಹ ಸಂಪ್ರದಾಯಗಳು ಯೇಸು ಸ್ತ್ರೀಯರೊಂದಿಗೆ ವ್ಯವಹರಿಸಿದ ರೀತಿಯನ್ನು ಪ್ರಭಾವಿಸಿದವೊ? ಇಂದು ಕ್ರೈಸ್ತ ಸ್ತ್ರೀಯರು ಹೇಗೆ ಉಪಚರಿಸಲ್ಪಡಬೇಕು? ಈ ಪ್ರಶ್ನೆಗಳು ಮುಂದಿನ ಲೇಖನದಲ್ಲಿ ಚರ್ಚಿಸಲ್ಪಡುವುವು.
[ಅಧ್ಯಯನ ಪ್ರಶ್ನೆಗಳು]
a ವೆಬ್ಸ್ಟರ್ಸ್ ನೈನ್ತ್ ನ್ಯೂ ಕಲೀಜಿಯೆಟ್ ಡಿಕ್ಷನರಿಗೆ ಅನುಸಾರವಾಗಿ, “ಬಹು ಪತ್ನೀತ್ವವು, ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಜೊತೆಯಿರಬಹುದಾದ ಎರಡೂ ಲಿಂಗದ ಸತಿ ಯಾ ಪತಿಯ ಮದುವೆಗೆ” ನಿರ್ದೇಶಿಸುತ್ತದೆ. “ಪಲಿಜಿನಿ” ಎಂಬ ಹೆಚ್ಚು ವಿಶಿಷ್ಟ ಶಬ್ದವನ್ನು “ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಪತ್ನಿಯಿರುವ ಅಥವಾ ಹೆಣ್ಣು ಜೊತೆಯಿರುವ ಸ್ಥಿತಿ ಯಾ ಪದ್ಧತಿಯಾಗಿ” ಅರ್ಥೈಸಲಾಗುತ್ತದೆ.
b ಹೀಬ್ರು ಶಾಸ್ತ್ರದಾದ್ಯಂತ ವಿವಾಹಿತ ಪುರುಷರನ್ನು ಮತ್ತು ಸ್ತ್ರೀಯರನ್ನು ಎಷ್ಟೊ ಹೆಚ್ಚು ಬಾರಿ “ಗಂಡ” (ಹೀಬ್ರು, ಇಷ್) ಎಂದು ಮತ್ತು “ಹೆಂಡತಿ” (ಹೀಬ್ರು, ಇಶ್ಷ) ಎಂದು ನಿರ್ದೇಶಿಸಲಾಗಿದೆ. ದೃಷ್ಟಾಂತಕ್ಕಾಗಿ, ಏದೆನ್ ತೋಟದಲ್ಲಿ ಯೆಹೋವನು ಉಪಯೋಗಿಸಿದ ಪದಗಳು “ಯಜಮಾನ” ಮತ್ತು “ಯಜಮಾನಿಕೆಯ ಸ್ವತ್ತು” ಅಲ್ಲ, ಬದಲಿಗೆ “ಗಂಡ, ಮತ್ತು “ಹೆಂಡತಿ.” (ಆದಿಕಾಂಡ 2:24; 3:16, 17) ದೇಶಭ್ರಷ್ಟತೆಯಿಂದ ಹಿಂದೆ ಬಂದ ಮೇಲೆ ಇಸ್ರಾಯೇಲ್ ಪಶ್ಚಾತ್ತಾಪದಿಂದ ಯೆಹೋವನನ್ನು ಇನ್ನುಮುಂದೆ “ನನ್ನ ಯಜಮಾನನೇ” ಎಂದು ಕರೆಯದೆ “ಎನ್ನಿನಿಯನೇ” [ನನ್ನ ಗಂಡನೇ] ಎಂದು ಕರೆಯುವುದೆಂದು ಹೋಶೇಯನ ಪ್ರವಾದನೆಯು ಮುಂತಿಳಿಸಿದೆ. “ಯಜಮಾನ” ಎಂಬ ಶಬ್ದಕ್ಕಿಂತ “ಗಂಡ” ಎಂಬ ವಾಕ್ಸರಣಿಗೆ ಒಂದು ಹೆಚ್ಚು ಕೋಮಲವಾದ ಒಳಾರ್ಥ ಇತ್ತೆಂದು ಇದು ಸೂಚಿಸಬಹುದು.—ಹೋಶೇಯ 2:16.
c ನ್ಯಾಯಸ್ಥಾಪಕರು 5:7 ರಲ್ಲಿ ದೆಬೋರಳ ಸಂಬಂಧದಲ್ಲಿ ಪ್ರಥಮ ಪುರುಷದ ಉಪಯೋಗವು ಗಮನಾರ್ಹ.
ನೀವು ಹೇಗೆ ಉತ್ತರಿಸುವಿರಿ?
◻ ಸ್ತ್ರೀಯ ದೈವ-ನಿಯುಕ್ತ ಪಾತ್ರದ ವಿಷಯದಲ್ಲಿ “ಸಹಾಯಕಳು” ಮತ್ತು “ಪೂರಕಳು” ಎಂಬ ಶಬ್ದಗಳೇನನ್ನು ಸೂಚಿಸುತ್ತವೆ?
◻ ಬೈಬಲ್ ಕಾಲದಲ್ಲಿ ಸ್ತ್ರೀಯರನ್ನು ಬಾಧಿಸಿದ ಪದ್ಧತಿಗಳನ್ನು ಪರಿಗಣಿಸುವಾಗ ನಾವೇನನ್ನು ಮನಸ್ಸಿನಲ್ಲಿಡಬೇಕು?
◻ ಆದಿಕಾಲದ ದೇವರ ಸೇವಕರಲ್ಲಿ ಸ್ತ್ರೀಯರಿಗೆ ಗೌರವದ ಪಾತ್ರವಿತ್ತೆಂದು ಯಾವುದು ತೋರಿಸುತ್ತದೆ?
◻ ಕ್ರೈಸ್ತ-ಪೂರ್ವ ಕಾಲದಲ್ಲಿ ಯೆಹೋವನು ಸ್ತ್ರೀಯರಿಗೆ ಯಾವ ರೀತಿಯಲ್ಲಿ ವಿಶೇಷಾನುಗ್ರಹವನ್ನು ದಯಪಾಲಿಸಿದನು?