ಭ್ರಷ್ಟಾಚಾರವಿಲ್ಲದ ಒಂದು ಲೋಕದ ವಾಗ್ದಾನ
ಭ್ರಷ್ಟಾಚಾರವು ಸಮಾಜದ ಪ್ರತಿಯೊಂದು ಮಟ್ಟವನ್ನು ತೂರಿಕೊಂಡಿದೆ. ಅದು ಸರಕಾರ, ವಿಜ್ಞಾನ, ಕ್ರೀಡೆ, ಧರ್ಮ ಅಥವಾ ವ್ಯಾಪಾರದಲ್ಲಿಯೇ ಆಗಿರಲಿ ಭ್ರಷ್ಟಾಚಾರವು ಹತೋಟಿಯನ್ನು ಮೀರಿದಂತೆ ತೋರುತ್ತದೆ.
ಲೋಕವ್ಯಾಪಕವಾಗಿ, ಭ್ರಷ್ಟಾಚಾರದ ಎದೆಗುಂದಿಸುವ ವಾರ್ತೆಗಳು ವಾರ್ತಾ ಮಾಧ್ಯಮಗಳಲ್ಲಿ ತೋರಿಬರುತ್ತವೆ. ಜನರ ಅಭಿರುಚಿಗಳನ್ನು ಸೇವಿಸಲು ತಮ್ಮನ್ನು ಅರ್ಪಿಸಿಕೊಂಡಿರುವ ಅನೇಕರು, ಲಂಚಗಳನ್ನು ಮತ್ತು ಕಿಕ್ಬ್ಯಾಕ್ ಲಂಚಗಳನ್ನು ಸ್ವೀಕರಿಸುತ್ತಿರುವ ಮೂಲಕ ತಮ್ಮ ಸ್ವಂತ ಅಭಿರುಚಿಗಳನ್ನು ಸೇವಿಸುತ್ತಿರುವವರಾಗಿ ಬಯಲುಗೊಳಿಸಲ್ಪಡುತ್ತಿದ್ದಾರೆ. ಶ್ವೇತ ಕತ್ತುಪಟ್ಟಿಯವರ ಪಾತಕ (ವೈಟ್ ಕಾಲರ್ ಕ್ರೈಮ್) ಎಂದು ಕರೆಯಲ್ಪಟ್ಟಿರುವಂತಹದ್ದು ವ್ಯಾಪಕವಾಗಿ ಹಬ್ಬಿರುತ್ತದೆ. ಉಚ್ಚ ಸಾಮಾಜಿಕ ಅಥವಾ ಆರ್ಥಿಕ ಪ್ರತಿಷ್ಠೆಯ ಹೆಚ್ಚೆಚ್ಚು ಜನರು ತಮ್ಮ ಕ್ರಮವಾದ ಉದ್ಯೋಗಗಳ ಸಂಬಂಧದಲ್ಲಿ ನೀತಿತತ್ತಗ್ವಳ ಮತ್ತು ತಕ್ಸೀರಿನ ಗಂಭೀರ ಉಲ್ಲಂಘನೆಗಳ ಕುರಿತಾಗಿ ದೋಷಿಗಳಾಗಿದ್ದಾರೆ.
ಯುರೋಪಿನ ಒಂದು ವಾರ್ತಾಪತ್ರಿಕೆಯು, ಯಾವುದನ್ನು “‘ಅತ್ಯಂತ ಮೇಲರ್ತಗತಿಯ ಭ್ರಷ್ಟಾಚಾರ’—ಹಿರಿಯ ಅಧಿಕಾರಿಗಳು, ಮಂತ್ರಿಗಳು ಮತ್ತು ತೀರ ಹೆಚ್ಚಾಗಿ ರಾಷ್ಟಾಧ್ರಿಪತಿಗಳು, ದೊಡ್ಡದಾದ ಕೊಳ್ಳುವಿಕೆಗಳು ಮತ್ತು ಬೆಳವಣಿಗೆಗಳನ್ನು ಮಂಜೂರು ಮಾಡುವ ಮುಂಚೆ ಪಾವತಿಗಳನ್ನು ಅವಶ್ಯಪಡಿಸುವಂತಹ ಪದ್ಧತಿಯ” ಕುರಿತಾಗಿ ಹೆಚ್ಚುತ್ತಿರುವ ಚಿಂತೆಯಿದೆ. ಒಂದು ದೇಶದಲ್ಲಿ, “ಎರಡು ವರ್ಷಗಳ ಪೊಲೀಸ್ ತನಿಖೆ ಮತ್ತು ಹೆಚ್ಚುಕಡಿಮೆ ದಿನನಿತ್ಯದ ದಸ್ತಗಿರಿಗಳು ತಿದ್ದಲಾಗದ ಭ್ರಷ್ಟರನ್ನು ಇನ್ನೂ ತಡೆದಿಲ್ಲ” ಎಂದು ಬ್ರಿಟಿಷ್ ಪತ್ರಿಕೆಯಾದ ದ ಈಕಾನಮಿಸ್ಟ್ ತಿಳಿಸುತ್ತದೆ.
ವ್ಯಾಪಕವಾಗಿ ಹರಡಿರುವ ಇಂತಹ ಭ್ರಷ್ಟಾಚಾರದಿಂದಾಗಿ, ತಾವು ಭರವಸೆ ಇಡಸಾಧ್ಯವಿರುವ ಯಾವ ವ್ಯಕ್ತಿಯೂ ಇಲ್ಲವೆಂದು ಇಂದು ಅನೇಕರಿಗೆ ಅನಿಸುತ್ತದೆ. ಬೈಬಲ್ ಲೇಖಕನಾದ ದಾವೀದನು ಹೀಗಂದಾಗ ವ್ಯಕ್ತಪಡಿಸಿದ ರಸಭಾವಗಳನ್ನು ಅವರು ಪ್ರತಿಧ್ವನಿಸುತ್ತಾರೆ: “ಒಳ್ಳೆಯದನ್ನು ಮಾಡುವವನು ಇಲ್ಲ, ಒಬ್ಬನಾದರೂ ಇಲ್ಲ. ಪ್ರತಿಯೊಬ್ಬನು ದಾರಿತಪ್ಪಿದವನು, (ಭ್ರಷ್ಟನು, NW) ಎಲ್ಲರೂ ಕೆಟ್ಟು ಹೋದವರೇ.”—ಕೀರ್ತನೆ 14:3.
ವ್ಯಾಪಕವಾಗಿ ಹರಡಿರುವ ಭ್ರಷ್ಟಾಚಾರದ ನಿಜತ್ವವನ್ನು ನೀವು ಹೇಗೆ ನಿಭಾಯಿಸುತ್ತೀರಿ? ಇಂದು ಅಧಿಕಾಂಶ ಜನರು ಅದನ್ನು ಸುಮ್ಮನೆ ಅಲಕ್ಷಿಸುತ್ತಾರೆ. ಆದರೆ ನೀವು ಭ್ರಷ್ಟಾಚಾರವನ್ನು ಅಲಕ್ಷಿಸುವುದಾದರೂ, ಅದು ಇನ್ನೂ ನಿಮಗೆ ಕೆಡುಕನ್ನು ಉಂಟುಮಾಡುವುದು. ಹೇಗೆ?
ಭ್ರಷ್ಟಾಚಾರವು ನಿಮ್ಮನ್ನು ಪ್ರಭಾವಿಸುತ್ತದೆ
ಉಚ್ಚ ಮಟ್ಟದ ಹಾಗೂ ಚಿಕ್ಕ ಪ್ರಮಾಣದ ಭ್ರಷ್ಟಾಚಾರ—ಇವೆರಡೂ ಜೀವನವೆಚ್ಚವನ್ನು ಹೆಚ್ಚಿಸುತ್ತವೆ, ಉತ್ಪಾದನೆಗಳ ಗುಣಮಟ್ಟವನ್ನು ಕುಂದಿಸುತ್ತದೆ, ಮತ್ತು ಕಡಿಮೆ ಉದ್ಯೋಗಗಳು ಹಾಗೂ ಕಡಿಮೆ ವೇತನಗಳಲ್ಲಿ ಫಲಿಸುತ್ತದೆ. ಉದಾಹರಣೆಗಾಗಿ, ಮೋಸದಿಂದ ಸ್ವಂತಕ್ಕೆ ಬಳಸಿಕೊಳ್ಳುವಿಕೆ ಮತ್ತು ವಂಚನೆಯಂತಹ ಅಪರಾಧಗಳು ಕನ್ನಗಳ್ಳತನ, ಕದಿಯುವಿಕೆ ಮತ್ತು ಸುಲಿಯುವಿಕೆಯ ಒಟ್ಟು ವೆಚ್ಚಕ್ಕಿಂತ ಕಡಿಮೆ ಪಕ್ಷ ಹತ್ತು ಪಟ್ಟು ಹೆಚ್ಚು ವೆಚ್ಚವನ್ನು ತಗಲಿಸುತ್ತದೆ ಎಂದು ಅಂದಾಜು ಮಾಡಲಾಗಿದೆ. ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟಾನಿಕಾ (1992) ತಿಳಿಸುತ್ತದೇನಂದರೆ “ಅಮೆರಿಕದಲ್ಲಿನ ಪೌರಸಂಸ್ಥೆಗಳ ಪಾತಕದ ವೆಚ್ಚವು ಒಂದು ವರ್ಷಕ್ಕೆ 20,000,00,00,000 ಡಾಲರುಗಳು—ವ್ಯವಸ್ಥಿತ ಪಾತಕದ ವೆಚ್ಚಕ್ಕಿಂತ ಮೂರು ಪಟ್ಟು—ಎಂದು ಅಂದಾಜು ಮಾಡಲಾಗಿದೆ.” ಪರಿಣಾಮಗಳು ಸಿದ್ಧವಾಗಿ ಪತ್ತೆಹಚ್ಚಲ್ಪಡದಿರಬಹುದಾದರೂ, “ಅಂತಹ ಪಾತಕಗಳು ಕಾರ್ಮಿಕರ, ಬಳಕೆದಾರರ ಮತ್ತು ಪರಿಸರದ ಸುರಕ್ಷೆಯ ಮೇಲೆ ಒಂದು ದೊಡ್ಡದಾದ ಹೊಡೆತವನ್ನು ಹಾಕುತ್ತವೆ” ಎಂದು ಈ ಮೂಲವು ವಿವರಿಸುತ್ತದೆ.
ಭ್ರಷ್ಟಾಚಾರದ ಕಹಿ ಫಲಗಳು ನಮಗೆ ಅರಸನಾದ ಸೊಲೊಮೋನನ ಮಾತುಗಳನ್ನು ನೆನಪಿಗೆ ತರುತ್ತವೆ: “ಆ ಮೇಲೆ ತಿರಿಗಿ ದೃಷ್ಟಿಸಿ ಲೋಕದಲ್ಲಿನ ಹಿಂಸೆಗಳನ್ನೆಲ್ಲಾ ನೋಡಿದೆನು; ಆಹಾ, ಹಿಂಸೆಗೊಂಡವರ ಕಣ್ಣೀರು ಏನೆಂದು ಹೇಳಲಿ! ಸಂತಯಿಸುವವರು ಯಾರೂ ಇರಲಿಲ್ಲ; ಹಿಂಸಕರಿಗೆ ಬಹು ಬಲ; ಸಂತಯಿಸುವವರೋ ಒಬ್ಬರೂ ಇರಲಿಲ್ಲ.”—ಪ್ರಸಂಗಿ 4:1.
ಹಾಗಿದ್ದಲ್ಲಿ, ನಾವು ಭ್ರಷ್ಟಾಚಾರದ ವಿಷಯದಲ್ಲಿ ಬಿಟ್ಟುಕೊಡಬೇಕೋ? ಅದು ಅನಿವಾರ್ಯವೋ? ಭ್ರಷ್ಟಾಚಾರವಿಲ್ಲದ ಒಂದು ಲೋಕವು ಒಂದು ಅಸಾಧ್ಯ ಸ್ವಪ್ನವೋ? ಸಂತೋಷಕರವಾಗಿ, ಇಲ್ಲ! ಅನ್ಯಾಯ ಮತ್ತು ನಿಯಮರಾಹಿತ್ಯವು ಬೇಗನೇ ನಿರ್ಮೂಲಗೊಳಿಸಲ್ಪಡುವುದು ಎಂದು ಬೈಬಲು ನಮಗೆ ಕಲಿಸುತ್ತದೆ.
ಬೈಬಲು ನಮಗೆ ಹೇಳುವ ವಿಷಯ
ಒಬ್ಬ ಶಕ್ತಿಶಾಲಿ ದೇವದೂತನು ದೇವರ ವಿರುದ್ಧ ದಂಗೆಯೆದ್ದು ಪ್ರಥಮ ಮಾನವ ದಂಪತಿಗಳು ತನ್ನೊಂದಿಗೆ ಸೇರುವಂತೆ ಅವರನ್ನು ಒಪ್ಪಿಸಿದಾಗ ಭ್ರಷ್ಟಾಚಾರವು ಆರಂಭವಾಯಿತೆಂದು ಬೈಬಲು ನಮಗೆ ಹೇಳುತ್ತದೆ. (ಆದಿಕಾಂಡ 3:1-6) ಅವರ ಪಾಪಪೂರ್ಣ ಮಾರ್ಗದಿಂದ ಯಾವ ಒಳಿತೂ ಪರಿಣಮಿಸಲಿಲ್ಲ. ಬದಲಾಗಿ, ಆದಾಮ ಹವ್ವರು ಯೆಹೋವ ದೇವರ ವಿರುದ್ಧ ಪಾಪ ಮಾಡಿದ ದಿನದಂದಿನಿಂದ, ಅವರು ಭ್ರಷ್ಟಾಚಾರದ ಕೆಟ್ಟ ಪರಿಣಾಮಗಳನ್ನು ಅನುಭವಿಸಲಾರಂಭಿಸಿದರು. ಅವರ ದೇಹಗಳು, ಅನಿವಾರ್ಯ ಮರಣಕ್ಕೆ ನಡಿಸುವ, ಕೆಡುವಿಕೆಯ ನಿಧಾನ ಕಾರ್ಯಗತಿಯನ್ನು ಆರಂಭಿಸಿದವು. (ಆದಿಕಾಂಡ 3:16-19) ಅಂದಿನಿಂದ, ಇತಿಹಾಸವು ಲಂಚಗಾರಿಕೆ, ಮೋಸ ಮತ್ತು ವಂಚನೆಯ ಉದಾಹರಣೆಗಳಿಂದ ತುಂಬಿಹೋಗಿದೆ. ಆದರೂ, ಅಪರಾಧ ನಡಿಸುವವರಲ್ಲಿ ಹೆಚ್ಚಿನವರು ಸಲ್ಲತಕ್ಕ ನ್ಯಾಯಸ್ಥಾನದ ಶಿಕ್ಷೆಯನ್ನು ತಪ್ಪಿಸಿಕೊಳ್ಳುತ್ತಾರೆ.
ಸಾಧಾರಣ ಪಾತಕಿಗಳಂತಿರದೆ, ಭ್ರಷ್ಟ ಕಾರ್ಯ ನಿರ್ವಾಹಕರು ಮತ್ತು ರಾಜಕಾರಣಿಗಳು ವಿರಳವಾಗಿ ಜೈಲಿಗೆ ಹೋಗುತ್ತಾರೆ ಅಥವಾ ತಮ್ಮ ಅನ್ಯಾಯಾರ್ಜಿತ ಲಾಭಕ್ಕಾಗಿ ನಷ್ಟಭರ್ತಿಮಾಡುತ್ತಾರೆ. ಲಂಚಗಳ, ಕಿಕ್ಬ್ಯಾಕ್ ಲಂಚಗಳ ಮತ್ತು ಪಾವತಿಗಳ ಗುಪ್ತ ಸ್ವಭಾವದ ಕಾರಣದಿಂದಾಗಿ, ಉಚ್ಚ ಮಟ್ಟದ ಭ್ರಷ್ಟಾಚಾರವನ್ನು ಬಯಲುಪಡಿಸುವುದು ಅನೇಕ ಸಲ ಕಷ್ಟಕರವಾಗಿರುತ್ತದೆ. ಆದರೆ ಭ್ರಷ್ಟಾಚಾರವಿಲ್ಲದ ಒಂದು ಲೋಕವು ಒಂದು ಅಸಾಧ್ಯ ಸ್ವಪ್ನವೆಂದು ಇದರ ಅರ್ಥವಲ್ಲ.
ಭ್ರಷ್ಟಾಚಾರದಿಂದ ಬಿಡುಗಡೆಯು ಮನುಷ್ಯನ ಸೃಷ್ಟಿಕರ್ತನಾದ ಯೆಹೋವ ದೇವರಿಂದ ಬರುವುದು. ದೈವಿಕ ಹಸ್ತಕ್ಷೇಪವು ಏಕಮಾತ್ರ ಪರಿಹಾರವಾಗಿದೆ. ಯಾಕೆ? ಯಾಕಂದರೆ ಮಾನವ ಕುಲದ ಅದೃಶ್ಯ ಶತ್ರುವಾದ, ಪಿಶಾಚನಾದ ಸೈತಾನನು ಮಾನವ ಕುಲವನ್ನು ತಪ್ಪುದಾರಿಗೆಳೆಯುವುದನ್ನು ಮುಂದುವರಿಸುತ್ತಾನೆ. 1 ಯೋಹಾನ 5:19 ರಲ್ಲಿ ನಾವು ಓದುವಂತೆ, “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದಿದ್ದೆ.” ಯಾವುದರಲ್ಲಿ ಹೆಚ್ಚಿನದ್ದು ಶಿಕ್ಷೆಯ ಭಯವಿಲ್ಲದೆ ನಡಿಸಲ್ಪಡುತ್ತದೋ, ಆ ಭ್ರಷ್ಟಾಚಾರದ ವೃದ್ಧಿಯನ್ನು ಇನ್ಯಾವುದು ವಿವರಿಸಬಲ್ಲದು?
ಯಾವುದೇ ಪ್ರಮಾಣದ ಮಾನವ ಪ್ರಯತ್ನವು ಸೈತಾನನನ್ನು ಮತ್ತು ಅವನ ದೆವ್ವಗಳನ್ನು ಜಯಿಸಲಾರದು. ಕೇವಲ ದೈವಿಕ ಹಸ್ತಕ್ಷೇಪವು ವಿಧೇಯ ಮಾನವಕುಲಕ್ಕೆ “ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆ”ಯ ಖಾತ್ರಿಯನ್ನು ಕೊಡಬಲ್ಲದು. (ರೋಮಾಪುರ 8:21) ಸೈತಾನನು ಮಾನವಕುಲವನ್ನು ಇನ್ನುಮುಂದೆ ವಂಚಿಸಲಾರದಂತೆ ಅವನು ಬೇಗನೇ ನಿರ್ಬಂಧಿಸಲ್ಪಡುವನೆಂದು ಯೆಹೋವನು ವಾಗ್ದಾನಿಸುತ್ತಾನೆ. (ಪ್ರಕಟನೆ 20:3) ಈ ನಡುವೆ, ನಾವು ದೇವರ ಭ್ರಷ್ಟಾಚಾರ-ಮುಕ್ತ ಹೊಸ ಲೋಕದಲ್ಲಿ ಜೀವಿಸಲು ಆಶಿಸುವುದಾದರೆ, ಈ ಲೋಕದ ಭ್ರಷ್ಟ ಮಾರ್ಗಗಳನ್ನು ನಾವು ತ್ಯಜಿಸಬೇಕು.
ಜನರು ಬದಲಾಗಬಲ್ಲರು
ಯೇಸು ಕ್ರಿಸ್ತನ ದಿನಗಳಲ್ಲಿ, ತಮ್ಮ ಅಧಿಕಾರವನ್ನು ದುರುಪಯೋಗಿಸಿದವರು ಮತ್ತು ತಮ್ಮ ಜೊತೆಮಾನವರ ಮೇಲೆ ದಬ್ಬಾಳಿಕೆ ನಡಿಸಿದವರು ಇದ್ದರು. ಉದಾಹರಣೆಗೆ, ತೆರಿಗೆ ವಸೂಲಿಗಾರರು ತಮ್ಮ ಭ್ರಷ್ಟ ಆಚರಣೆಗಳಿಗಾಗಿ ಕುಖ್ಯಾತರಾಗಿದ್ದರು. ಇದು ದೇವರ ಸ್ಪಷ್ಟವಾಗಿದ ನಿಯಮದ ಹೊರತೂ ಇತ್ತು: “ಲಂಚವನ್ನು ತೆಗೆದುಕೊಳ್ಳಬಾರದು; ಲಂಚವು ಕಣ್ಣುಳ್ಳವರನ್ನು ಕುರುಡರಂತೆ ಮಾಡುತ್ತದೆ, ನಿರಪರಾಧಿಯಾದವನ ನ್ಯಾಯವನ್ನು ಕೆಡಿಸುತ್ತದೆ.” (ವಿಮೋಚನಕಾಂಡ 23:8) ಜಕ್ಕಾಯನೆಂಬ ಒಬ್ಬ ಪ್ರಮುಖ ತೆರಿಗೆ ವಸೂಲಿಗಾರನು, ತಾನು ಸುಳ್ಳು ಆರೋಪಣೆಯ ಮೂಲಕ ಸುಲಿಗೆಯನ್ನು ಮಾಡುತ್ತಿದ್ದೆನೆಂಬದನ್ನು ಒಪ್ಪಿಕೊಂಡನು. ಆದರೆ ಒಂದು ವಿಸ್ತಾರವಾದ ಪ್ರಮಾಣದಲ್ಲಿ ಸಾಮಾಜಿಕ ಸುಧಾರಣೆಯನ್ನು ಪ್ರವರ್ಧಿಸುವ ಬದಲಿಗೆ, ತಮ್ಮ ಭ್ರಷ್ಟ ಮಾರ್ಗಗಳನ್ನು ತೊರೆದು ಪಶ್ಚಾತ್ತಾಪ ಪಡುವಂತೆ ಯೇಸು ವ್ಯಕ್ತಿಗಳನ್ನು ಬೇಡಿಕೊಂಡನು. ಫಲಸ್ವರೂಪವಾಗಿ, ಮತ್ತಾಯ ಮತ್ತು ಜಕ್ಕಾಯನಂತೆ ಭ್ರಷ್ಟ ತೆರಿಗೆ ವಸೂಲಿಗಾರರೆಂದು ಕುಖ್ಯಾತರಾಗಿದವ್ದರು ತಮ್ಮ ಹಿಂದಿನ ಜೀವನ ಶೈಲಿಯನ್ನು ತೊರೆದರು.—ಮತ್ತಾಯ 4:17; 9:9-13; ಲೂಕ 19:1-10.
ಇಂದು ಅಪ್ರಾಮಾಣಿಕ ಆಚರಣೆಗಳಲ್ಲಿ ಒಳಗೂಡಿರುವವರು ತದ್ರೀತಿಯಲ್ಲಿ, ‘ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿರುವ (ನೂತನ) ಸ್ವಭಾವವನ್ನು’ ಧರಿಸಿಕೊಳ್ಳುವ ಮೂಲಕ ಭ್ರಷ್ಟಾಚಾರವನ್ನು ತ್ಯಜಿಸಬಲ್ಲರು. (ಎಫೆಸ 4:24) ತೆರಿಗೆಗಳನ್ನು ಪ್ರಾಮಾಣಿಕವಾಗಿ ಸಲ್ಲಿಸುವುದು ಅಥವಾ ಸಂದೇಹಾಸ್ಪದ ಯೋಜನೆಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸುವುದು ಸುಲಭವಾಗಿರಲಿಕ್ಕಿಲ್ಲ. ಹಾಗಿದ್ದರೂ, ಪ್ರಯೋಜನಗಳು ಯಾವುದೇ ಪ್ರಯತ್ನಕ್ಕೆ ಅರ್ಹವಾಗಿವೆ.
ಈ ಭ್ರಷ್ಟ ಲೋಕದಿಂದ ಇನ್ನು ಮುಂದೆ ಒಗ್ಗಿಸಲ್ಪಟ್ಟಿರದೆ, ಇತರರ ಹಿತಾಸಕ್ತಿಯ ಕುರಿತಾಗಿ ಚಿಂತಿತರಾಗಿರುವವರು ಆಂತರಿಕ ಸಮಾಧಾನವನ್ನು ಆನಂದಿಸುತ್ತಾರೆ. ತಪ್ಪುಗೈಯುವಿಕೆಯಲ್ಲಿ ಸಿಕ್ಕಿಬೀಳುವ ಯಾವ ಭಯವೂ ಇಲ್ಲ. ಬದಲಾಗಿ ಒಂದು ಒಳ್ಳೆಯ ಮನಸ್ಸಾಕ್ಷಿಯನ್ನು ಅವರು ಅನುಭವಿಸುತ್ತಾರೆ. ಪ್ರವಾದಿಯಾದ ದಾನಿಯೇಲನ ಬೈಬಲ್ ಮಾದರಿಯನ್ನು ಅವರು ಅನುಕರಿಸುತ್ತಾರೆ. ಉಚ್ಚ ಅಧಿಕಾರಿಗಳು ಸತತವಾಗಿ ದಾನಿಯೇಲನ ವಿರುದ್ಧ ಯಾವುದಾದರೂ ಸಬೂಬನ್ನು ಹುಡುಕುತ್ತಿದ್ದರೆಂದು ಬೈಬಲ್ ವೃತ್ತಾಂತವು ಹೇಳುತ್ತದೆ. “ಆದರೆ ತಪ್ಪುಹೊರಿಸುವ ಯಾವ ಸಂದರ್ಭವನ್ನೂ ಯಾವ ತಪ್ಪನ್ನೂ ಕಾಣಲಾರದೆ ಹೋದರು; ಅವನು ನಂಬಿಗಸ್ತನೇ ಆಗಿದ್ದನು, ಅವನಲ್ಲಿ ಆಲಸ್ಯವಾಗಲಿ ಅಕ್ರಮವಾಗಲಿ ಸಿಕ್ಕಲಿಲ್ಲ.”—ದಾನಿಯೇಲ 6:4.
ಯೆಹೋವನ ವಾಗ್ದಾನ
“ಪಾಪಿಯು ನೂರು ಸಲ ಅಧರ್ಮಮಾಡಿ ಬಹುಕಾಲ ಬದುಕಿದರೂ ದೇವರ ಮುಂದೆ ಹೆದರಿ ಆತನಲ್ಲಿ ಭಯಭಕ್ತಿಯುಳ್ಳವರಿಗೆ ಮೇಲೇ ಆಗುವದೆಂದು ಬಲ್ಲೆನು. ಆದರೆ ದುಷ್ಟರಿಗೆ ಮೇಲಾಗದು, ನೆರಳಿನಂತಿರುವ ಅವನ ದಿನಗಳು ಹೆಚ್ಚುವದಿಲ್ಲ; ಅವನು ದೇವರಿಗೆ ಹೆದರುವವನಲ್ಲವಷ್ಟೆ” ಎಂದು ಯೆಹೋವನು ವಾಗ್ದಾನಿಸುತ್ತಾನೆ.—ಪ್ರಸಂಗಿ 8:12, 13.
ಭ್ರಷ್ಟಾಚಾರವು ಇನ್ನು ಮುಂದೆ ಅಸಂತೋಷವನ್ನು ಉಂಟುಮಾಡದಿರುವಾಗ ಎಂಥ ಉಪಶಮನ! ಭ್ರಷ್ಟಾಚಾರವಿಲ್ಲದ ಒಂದು ಲೋಕದಲ್ಲಿ ಜೀವಿಸುವುದು ಎಂತಹ ಒಂದು ಆಶೀರ್ವಾದ! ಇದು ಅಸಾಧ್ಯವಲ್ಲ. ‘ಸುಳ್ಳಾಡದ ದೇವರು ಅನಾದಿಕಾಲದಲ್ಲಿ ಕೊಡುತ್ತೇನೆಂದು ವಾಗ್ದಾನಮಾಡಿದ ನಿತ್ಯಜೀವದ ನಿರೀಕ್ಷೆಯ’ ಕುರಿತಾಗಿ ಬೈಬಲು ಮಾತಾಡುತ್ತದೆ. (ತೀತ 1:2) ನೀವು ಭ್ರಷ್ಟಾಚಾರವನ್ನು ದ್ವೇಷಿಸಿ, ನೀತಿಯನ್ನು ಪ್ರೀತಿಸುವಲ್ಲಿ, ಭ್ರಷ್ಟಾಚಾರವಿಲ್ಲದ ಒಂದು ಲೋಕದ ದೇವರ ವಾಗ್ದಾನದ ನೆರವೇರಿಕೆಯನ್ನು ನೀವು ನೋಡುವ ಹೆಚ್ಚಿನ ಸಾಧ್ಯತೆಯಿದೆ.
[ಪುಟ 4 ರಲ್ಲಿರುವ ಚಿತ್ರ]
ಭ್ರಷ್ಟಾಚಾರವು ಸರಕಾರ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ವ್ಯಾಪಕವಾಗಿದೆ
[ಪುಟ 5 ರಲ್ಲಿರುವ ಚಿತ್ರ]
ಭ್ರಷ್ಟಾಚಾರವು ಅನೇಕವೇಳೆ ಸಾರ್ವಜನಿಕ ಅಧಿಕಾರಿಗಳೊಂದಿಗಿನ ವ್ಯವಹಾರಗಳನ್ನು ಪ್ರಭಾವಿಸುತ್ತದೆ