ನಿಮಗೆ ನೆನಪಿದೆಯೇ?
ಕಾವಲಿನಬುರುಜು ವಿನ ಇತ್ತೀಚೆಗಿನ ಸಂಚಿಕೆಗಳನ್ನು ಓದುವದನ್ನು ನೀವು ಗಣ್ಯಮಾಡಿದ್ದೀರೋ? ಒಳ್ಳೇದು, ಮುಂದಿನ ಪ್ರಶ್ನೆಗಳನ್ನು ನೀವು ಉತ್ತರಿಸಬಲ್ಲಿರೋ ಎಂದು ನೋಡಿರಿ.
▫ ಆದಿ ಕ್ರೈಸ್ತರು ಯೇಸುವಿನ ಜನ್ಮದಿನವನ್ನು ಯಾಕೆ ಆಚರಿಸಲಿಲ್ಲ?
ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಕ್ಕನುಸಾರ, “ಆದಿ ಕ್ರೈಸ್ತರು [ಯೇಸುವಿನ] ಜನನವನ್ನು ಆಚರಿಸಲಿಲ್ಲ ಯಾಕಂದರೆ ಅವರು ಯಾವುದೇ ವ್ಯಕ್ತಿಯ ಜನನದ ಆಚರಣೆಯನ್ನು ಒಂದು ವಿಧರ್ಮಿ ಪದ್ಧತಿಯಾಗಿ ಪರಿಗಣಿಸಿದರು.”—12⁄15, ಪುಟ 4.
▫ ಪ್ರಾರ್ಥನೆಗಳು ಯೇಸುವಿಗೆ ನಿರ್ದೇಶಿಸಲ್ಪಡಬೇಕೋ?
ಇಲ್ಲ, ಯಾಕಂದರೆ ಪ್ರಾರ್ಥನೆಗಳು ಸಂಪೂರ್ಣವಾಗಿ ಸರ್ವಶಕ್ತ ದೇವರಿಗೆ ಸೇರಿರುವ ಆರಾಧನೆಯ ಒಂದು ವಿಧವಾಗಿವೆ. ನಮ್ಮ ಎಲ್ಲಾ ಪ್ರಾರ್ಥನೆಗಳನ್ನು ಯೆಹೋವ ದೇವರಿಗೆ ಸಂಬೋಧಿಸುವ ಮೂಲಕ “ಪರಲೋಕದಲ್ಲಿರುವ ನಮ್ಮ ತಂದೆಯೇ” ಎಂಬುದಾಗಿ ಪ್ರಾರ್ಥಿಬೇಕೆಂಬ ಯೇಸುವಿನ ನಿರ್ದೇಶನವನ್ನು ನಾವು ಮನಸ್ಸಿಗೆ ತೆಗೆದುಕೊಂಡಿದ್ದೇವೆಂಬುದಾಗಿ ಸೂಚಿಸುತ್ತೇವೆ. (ಮತ್ತಾಯ 6:9)—12⁄15, ಪುಟ 25.
▫ ಅನನೀಯ ಮತ್ತು ಸಪ್ಫೈರಳ ಪಾಪಗಳಿಗೆ ಹೋಲಿಸಿದಾಗ, ರಾಜನಾದ ದಾವೀದನ ಗಂಭೀರ ಪಾಪಕ್ಕಾಗಿ ಒಂದು ಭಿನ್ನವಾದ ನ್ಯಾಯತೀರ್ಪನ್ನು ಯಾಕೆ ನೀಡಲಾಯಿತು? (2 ಸಮುವೇಲ 11:2-24; 12:1-14; ಅ. ಕೃತ್ಯಗಳು 5:1-11)
ರಾಜನಾದ ದಾವೀದನ ಪಾಪವು ಶಾರೀರಿಕ ಬಲಹೀನತೆಯ ಕಾರಣದಿಂದಾಗಿತ್ತು. ಅವನು ಏನನ್ನು ಮಾಡಿದ್ದನೋ ಅದು ಅವನ ಎದುರು ಇಡಲ್ಪಟ್ಟಾಗ, ಅವನು ಪಶ್ಚಾತ್ತಾಪಪಟ್ಟನು, ಮತ್ತು ಯೆಹೋವನು ಅವನನ್ನು ಕ್ಷಮಿಸಿದನು, ಆದರೂ ಅವನು ತನ್ನ ಪಾಪದ ಫಲಿತಾಂಶಗಳೊಂದಿಗೆ ಜೀವಿಸಬೇಕಿತ್ತು. ಅನನೀಯ ಮತ್ತು ಸಪ್ಫೈರ ಪಾಪಗೈದರು ಯಾಕಂದರೆ ಅವರು ಕಪಟಾಚಾರದಿಂದ ಸುಳ್ಳು ಹೇಳಿ ಕ್ರೈಸ್ತ ಸಭೆಯನ್ನು ವಂಚಿಸಲು ಪ್ರಯತ್ನಿಸಿದರು ಮತ್ತು ಈ ರೀತಿಯಲ್ಲಿ ‘ಪವಿತ್ರಾತ್ಮವನ್ನು ಮತ್ತು ದೇವರನ್ನು ವಂಚಿಸಿದರು.’ (ಅ. ಕೃತ್ಯಗಳು 5:3, 4) ಅದು ಒಂದು ದುಷ್ಟ ಹೃದಯದ ರುಜುವಾತಾಗಿ ಪರಿಣಮಿಸಿತು, ಆದುದರಿಂದ ಅವರು ಹೆಚ್ಚು ಗಂಭೀರವಾಗಿ ತೀರ್ಪುಗೈಯಲ್ಪಟ್ಟರು.—1⁄1, ಪುಟ 27, 28.
▫ ಯೆಹೋವನನ್ನು ಒಂದು ಆನಂದಭರಿತ ಹೃದಯದಿಂದ ಸೇವಿಸಲು ನಮಗೆ ಏನು ಸಹಾಯ ಮಾಡಬಲ್ಲದು?
ನಮ್ಮ ಆಶೀರ್ವಾದಗಳ ಮತ್ತು ಸೇವೆಯ ಕುರಿತಾದ ದೇವದತ್ತ ಸುಯೋಗಗಳ ಕಡೆಗೆ ಒಂದು ಸಕಾರಾತ್ಮಕ ಹಾಗೂ ಗುಣಗ್ರಾಹಿ ದೃಷ್ಟಿಕೋನವನ್ನು ನಾವು ಬೆಳೆಸಿಕೊಳ್ಳಬೇಕು, ಮತ್ತು ದೇವರ ವಾಕ್ಯವನ್ನು ಅನುಸರಿಸುವ ಮೂಲಕ ನಾವು ಆತನನ್ನು ಮೆಚ್ಚಿಸುತ್ತಿದ್ದೇವೆ ಎಂಬದನ್ನು ನಾವು ಎಂದಿಗೂ ಮರೆಯಬಾರದು.—1⁄15, ಪುಟಗಳು 16, 17.
▫ ಪರಿಣಾಮಕಾರಿಯಾದ ಉತ್ತೇಜನವನ್ನು ನಾವು ಕೊಡಬೇಕಾದರೆ ಯಾವ ಎರಡು ವಿಷಯಗಳನ್ನು ನಾವು ಮನಸ್ಸಿನಲ್ಲಿಡಬೇಕು?
ಮೊದಲನೆಯದಾಗಿ, ನಿಮ್ಮ ಉತ್ತೇಜನವು ನಿರ್ದಿಷ್ಟವಾಗಿರುವಂತೆ, ಹೇಳಲಿಕ್ಕಿರುವ ವಿಷಯದ ಕುರಿತು ಯೋಚಿಸಿರಿ. ಎರಡನೆಯದಾಗಿ, ಪ್ರಶಂಸೆಗೆ ಅರ್ಹನಾಗಿರುವ ಅಥವಾ ಆತ್ಮೋನ್ನತಿಯ ಅಗತ್ಯವಿರುವ ವ್ಯಕ್ತಿಯನ್ನು ಸಮೀಪಿಸಲು, ಅವಕಾಶಕ್ಕಾಗಿ ಎದುರುನೋಡಿರಿ.—1⁄15, ಪುಟ 23.
▫ “ಮಹಾ ಸಮೂಹ”ವು “ತಮ್ಮ ಕೈಗಳಲ್ಲಿ ಖರ್ಜೂರದ ಗರಿಗಳನ್ನು” ಹಿಡಿದಿರುವದೇಕೆ? (ಪ್ರಕಟನೆ 7:9)
“ಮಹಾ ಸಮೂಹ”ವು ಆನಂದಕರವಾಗಿ ಯೆಹೋವನ ರಾಜ್ಯವನ್ನು ಮತ್ತು ಆತನ ಅಭಿಷಿಕ್ತ ರಾಜನಾದ ಯೇಸು ಕ್ರಿಸ್ತನನ್ನು ವಂದಿಸುತ್ತದೆ ಎಂದು ಖರ್ಜೂರದ ಗರಿಗಳ ಬೀಸುವಿಕೆಯು ಸೂಚಿಸುತ್ತದೆ. (ಯಾಜಕಕಾಂಡ 23:39, 40 ನೋಡಿ.)—2⁄1, ಪುಟ 17.
▫ ಯೋಬನ ಪುಸ್ತಕದಲ್ಲಿ ಯಾವ ಅಮೂಲ್ಯ ಪಾಠಗಳನ್ನು ಕಂಡುಕೊಳ್ಳಬಹುದು?
ಯೋಬನ ಪುಸ್ತಕವು ನಾವು ಸಮಸ್ಯೆಗಳನ್ನು ಹೇಗೆ ನಿರ್ವಹಿಸಬೇಕೆಂಬದನ್ನು ತೋರಿಸುತ್ತದೆ. ಸಂಕಷ್ಟಗಳನ್ನು ಎದುರಿಸುತ್ತಿರುವ ಒಬ್ಬನಿಗೆ ಹೇಗೆ ಬುದ್ಧಿವಾದ ನೀಡಲ್ಪಡಬೇಕು—ಮತ್ತು ಹೇಗೆ ನೀಡಲ್ಪಡಬಾರದು—ಎಂಬ ಗಮನಾರ್ಹ ಮಾದರಿಗಳನ್ನು ಅದು ಒದಗಿಸುತ್ತದೆ. ಅದಲ್ಲದೆ, ನಾವು ಪ್ರತಿಕೂಲ ಪರಿಸ್ಥಿತಿಗಳಿಂದ ಪೀಡಿತರಾಗುವುದನ್ನು ಕಾಣುವಾಗ, ಸಮತೆಯಿಂದ ಪ್ರತಿಕ್ರಿಯೆದೋರುವಂತೆ ಯೋಬನ ಸ್ವಂತ ಅನುಭವವು ನಮಗೆ ಸಹಾಯಮಾಡಬಲ್ಲದು.—2⁄15, ಪುಟ 27.
▫ ಯೇಸುವಿನ ಅದ್ಭುತಗಳು ನಮಗೆ ಏನನ್ನು ಕಲಿಸುತ್ತವೆ?
ಯೇಸುವಿನ ಅದ್ಭುತಗಳು, ಕ್ರೈಸ್ತರು ದೇವರನ್ನು ಮಹಿಮೆಪಡಿಸಲು ಒಂದು ನಮೂನೆಯನ್ನು ಇಡುತ್ತಾ, ದೇವರನ್ನು ಮಹಿಮೆಪಡಿಸುತ್ತವೆ. (ರೋಮಾಪುರ 15:6) ಅವು ಒಳ್ಳೆಯದನ್ನು ಮಾಡುವುದನ್ನು, ಔದಾರ್ಯ ತೋರಿಸುವುದನ್ನು, ಮತ್ತು ಕನಿಕರವನ್ನು ಪ್ರದರ್ಶಿಸುವದನ್ನು ಉತ್ತೇಜಿಸುತ್ತವೆ.—3⁄1, ಪುಟ 8.
▫ ಹೊಸತಾಗಿ ಸಮರ್ಪಿತರಾದವರೊಂದಿಗೆ ಹಿರಿಯರು ತಯಾರಿಸಲ್ಪಟ್ಟ ಪ್ರಶ್ನೆಗಳನ್ನು ಪುನರ್ವಿಮರ್ಶಿಸುವುದರಿಂದ ಯಾವ ಉದ್ದೇಶವು ನೆರವೇರಿಸಲ್ಪಡುತ್ತದೆ?
ಪ್ರತಿ ಅಭ್ಯರ್ಥಿಯು ಬೈಬಲಿನ ಮೂಲಭೂತ ಬೋಧನೆಗಳನ್ನು ಪೂರ್ಣವಾಗಿ ತಿಳಿದುಕೊಂಡಿದ್ದಾನೆಂದು ಮತ್ತು ಒಬ್ಬ ಯೆಹೋವನ ಸಾಕ್ಷಿಯಾಗಿರುವದರಲ್ಲಿ ಏನು ಒಳಗೊಂಡಿದೆ ಎಂಬ ಅರಿವು ಅವನಿಗಿದೆಯೆಂದು ಇದು ದೃಢಪಡಿಸುತ್ತದೆ.—3⁄1, ಪುಟ 13.
▫ ಬೈಬಲಿನಲ್ಲಿರುವ ಪ್ರಾರ್ಥನೆಗಳು ನಮಗೆ ಹೇಗೆ ಪ್ರಯೋಜನಕರವಾಗಬಲ್ಲವು?
ಶಾಸ್ತ್ರವಚನದ ಪ್ರಾರ್ಥನೆಗಳನ್ನು ನಿಕಟವಾಗಿ ಗಮನಿಸುವದರಿಂದ, ನಮ್ಮ ಸ್ವಂತ ಪರಿಸ್ಥಿತಿಗಳಿಗೆ ತದ್ರೀತಿಯದ್ದಾಗಿರುವ ಪರಿಸ್ಥಿತಿಗಳ ಕೆಳಗೆ ನುಡಿಯಲ್ಪಟ್ಟಂತಹವುಗಳನ್ನು ನಾವು ಗುರುತಿಸಬಹುದು. ಅಂತಹ ಪ್ರಾರ್ಥನೆಗಳನ್ನು ಕಂಡುಹಿಡಿಯುವುದು, ಓದುವುದು ಮತ್ತು ಮನನ ಮಾಡುವುದು ದೇವರೊಂದಿಗಿನ ನಮ್ಮ ಸ್ವಂತ ಸಂಸರ್ಗವನ್ನು ಪುಷ್ಟೀಕರಿಸಲು ಸಹಾಯ ಮಾಡಬಲ್ಲದು.—3⁄15, ಪುಟಗಳು 3, 4.
▫ ದಿವ್ಯ ಭಯವೆಂದರೆ ಏನು?
ಯೆಹೋವನನ್ನು ಅಪ್ರಸನ್ನಗೊಳಿಸುವ ಹಿತಕರವಾದ ಭೀತಿಯಿಂದ ಕೂಡಿದ ಪೂಜ್ಯಭಾವನೆ, ಭಯಭಕ್ತಿಯ ಭಾವವು ದಿವ್ಯ ಭಯವಾಗಿದೆ.—3⁄15, ಪುಟ 10.
▫ ದೇವರ ದೃಷ್ಟಿಯಲ್ಲಿ ನಾವು ಅಮೂಲ್ಯರಾಗಿದ್ದೇವೆಂದು ಬೈಬಲು ತೋರಿಸುವ ಮೂರು ವಿಧಾನಗಳು ಯಾವುವು?
ದೇವರ ದೃಷ್ಟಿಯಲ್ಲಿ, ನಮ್ಮಲ್ಲಿ ಪ್ರತಿಯೊಬ್ಬರಿಗೆ ಮೌಲ್ಯವಿದೆ ಎಂದು ಬೈಬಲು ಕಲಿಸುತ್ತದೆ (ಲೂಕ 12:6, 7); ನಮಲ್ಲಿ ಯಾವುದನ್ನು ಯೆಹೋವನು ಅಮೂಲ್ಯವೆಂದೆಣಿಸುತ್ತಾನೆಂದು ಅದು ಸ್ಪಷ್ಟೀಕರಿಸುತ್ತದೆ (ಮಲಾಕಿಯ 3:16); ಮತ್ತು ನಮಗಾಗಿ ತನ್ನ ಪ್ರೀತಿಯನ್ನು ಪ್ರದರ್ಶಿಸಲಿಕ್ಕಾಗಿ ಯೆಹೋವನು ಮಾಡಿರುವ ಕಾರ್ಯವನ್ನು ಅದು ತಿಳಿಸುತ್ತದೆ. (ಯೋಹಾನ 3:16)—4⁄1, ಪುಟಗಳು 11, 12, 14.
▫ ಇಬ್ರಿಯ 10:24, 25 ಕೇವಲ ಕ್ರೈಸ್ತರು ಒಟ್ಟುಗೂಡಿ ಬರಬೇಕಾದ ಒಂದು ಆಜೆಗ್ಞಿಂತ ಹೆಚ್ಚಿನದ್ದಾಗಿದೆ ಯಾಕೆ?
ಪೌಲನ ಈ ಮಾತುಗಳು ಎಲ್ಲಾ ಕ್ರೈಸ್ತ ಕೂಟಗಳಿಗಾಗಿ—ವಾಸ್ತವವಾಗಿ ಕ್ರೈಸ್ತರು ಒಟ್ಟಿಗೆ ಜತೆಗೂಡುವ ಯಾವುದೇ ಸಂದರ್ಭಕ್ಕಾಗಿ ದೈವಿಕವಾಗಿ ಪ್ರೇರಿತವಾದ ಒಂದು ಮಟ್ಟವನ್ನು ಕೊಡುತ್ತವೆ.—4⁄1, ಪುಟ 16.