ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w94 1/15 ಪು. 2-4
  • ಯುದ್ಧಗಳು ಅನಿವಾರ್ಯವೊ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯುದ್ಧಗಳು ಅನಿವಾರ್ಯವೊ?
  • ಕಾವಲಿನಬುರುಜು—1994
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಒಂದು ಜೈವಿಕ ಆವಶ್ಯಕತೆಯೊ?
  • ಯುದ್ಧದ ಕಾರಣಗಳು
  • ಯುದ್ಧಗಳನ್ನು ಕೊನೆಗಾಣಿಸುವ ಯುದ್ಧ
    ಕಾವಲಿನಬುರುಜು—1990
  • ಯುದ್ಧದ ಭವಿಷ್ಯವೇನು?
    ಎಚ್ಚರ!—1999
  • ಆಗಿನ ಕಾಲದ ಇಸ್ರಾಯೇಲ್ಯರು ಯುದ್ಧ ಮಾಡ್ತಿದ್ರು ಅಂದಮೇಲೆ ನಾವು ಯಾಕೆ ಮಾಡಬಾರದು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಬಾಳುವ ಶಾಂತಿಯನ್ನು ಯಾರು ತರಬಲ್ಲರು?
    ಎಚ್ಚರ!—1996
ಇನ್ನಷ್ಟು
ಕಾವಲಿನಬುರುಜು—1994
w94 1/15 ಪು. 2-4

ಯುದ್ಧಗಳು ಅನಿವಾರ್ಯವೊ?

ಯುದ್ಧವು ವಾರ್ತೆಗಳ ನಿರುತ್ಸಾಹಗೊಳಿಸುವ ಭಾಗವಾಗಿದೆ. ಪಾಶವೀಯತೆಯ ಆ ಸುದ್ದಿಗಳು ನಿಸ್ಸಂದೇಹವಾಗಿ ನಿಮ್ಮನ್ನು ಕಳವಳಗೊಳಿಸುತ್ತವೆ. ಆದರೆ ಬಹುಶಃ ಅವು, ಇಷ್ಟೊಂದು ಕಲಹಗಳ ತೀರ್ಪುಗಾರರು ಶಸ್ತ್ರಗಳಾಗಿರಬೇಕೇಕೆ ಎಂಬುದನ್ನು ನೀವು ಯೋಚಿಸುವಂತೆ ಕೂಡ ಮಾಡುತ್ತವೆ. ಶಾಂತಿಯಲ್ಲಿ ಜೀವಿಸಲು ಮನುಷ್ಯರು ಎಂದೂ ಕಲಿಯರೊ?

ಯುದ್ಧೋಪದ್ರವಕ್ಕೆ ಬೇಕಾಗುವ ಔಷಧವು ಏಯ್ಡ್ಸ್‌ಗೆ ಬೇಕಾಗುವ ಔಷಧಕ್ಕಿಂತಲೂ ಹೆಚ್ಚು ದೊರೆಯದಿರುವ ವಸ್ತುವಾಗಿ ಕಾಣುತ್ತದೆ. ಇಪ್ಪತ್ತನೆಯ ಶತಮಾನದ ಸಮಯದಲ್ಲಿ, ಇಡೀ ರಾಷ್ಟ್ರಗಳು ಯುದ್ಧಕ್ಕಾಗಿ ಸಜ್ಜುಗೊಳಿಸಲ್ಪಟ್ಟಿವೆ, ಲಕ್ಷಾಂತರ ಪುರುಷರನ್ನು ಯುದ್ಧಕ್ಕೆ ಕಳುಹಿಸಲಾಗಿದೆ, ಮತ್ತು ನೂರಾರು ಪಟ್ಟಣಗಳು ನಾಶಮಾಡಲ್ಪಟ್ಟಿವೆ. ಕಗ್ಗೊಲೆಗೆ ಅಂತ್ಯವು ಇರುವಂತೆ ತೋರುವುದಿಲ್ಲ. ಶಸ್ತ್ರಾಸ್ತ್ರಗಳನ್ನು ಕೊಂಡುಕೊಳ್ಳುವ ಮತ್ತು ಮಾರಾಟ ಮಾಡುವ ಲಾಭಕರ ವ್ಯಾಪಾರವು, ಲೋಕದ ಸೇನೆಗಳು—ಮತ್ತು ಗೆರಿಲ ಯೋಧರು—ಘೋರವಾಗಿ ಪ್ರಭಾವಕಾರಿಯಾಗಿರುತ್ತಾ ಮುಂದುವರಿಯುವರು ಎಂಬುದನ್ನು ದೃಢಪಡಿಸುತ್ತದೆ.

ಯುದ್ಧದ ಶಸ್ತ್ರಗಳು ಅಧಿಕ ಮಾರಕವಾದಂತೆ, ಅನಾಹುತದ ಸಂಖ್ಯೆಗಳು ಗಗನಕ್ಕೇರಿದವು. ಒಂದನೆಯ ಲೋಕ ಯುದ್ಧದಲ್ಲಿ ಹೋರಾಡಿದ 6 ಕೋಟಿ 50 ಲಕ್ಷ ಸೈನಿಕರಲ್ಲಿ, ಅರ್ಧಕ್ಕಿಂತಲೂ ಹೆಚ್ಚಿನವರು ಕೊಲ್ಲಲ್ಪಟ್ಟರು ಯಾ ಗಾಯಗೊಂಡರು. ಸುಮಾರು 30 ವರ್ಷಗಳಾನಂತರ, ಕೇವಲ ಎರಡು ಪರಮಾಣು ಬಾಂಬುಗಳು 1,50,000 ಕ್ಕಿಂತಲೂ ಅಧಿಕ ಜಪಾನಿ ಅಯೋಧರನ್ನು ಕೊಂದವು. II ನೆಯ ಲೋಕ ಯುದ್ಧದಂದಿನಿಂದ, ಘಷರ್ಣೆಗಳು ಅಧಿಕವಾಗಿ ಸ್ಥಳೀಯವಾಗಿಸಲ್ಪಟ್ಟಿವೆ. ಆದರೂ, ವಿಶೇಷವಾಗಿ ಅನಾಹುತಗಳ 80 ಪ್ರತಿಶತಕ್ಕೆ ಬಲಿಯಾಗುವ ಅಯೋಧರಿಗೆ ಅವು ಮಾರಕವಾಗಿವೆ.

ಹಾಸ್ಯವ್ಯಂಗ್ಯವಾಗಿ, ರಾಷ್ಟ್ರಗಳ ನಡುವೆ ಕಲಹಗಳನ್ನು ಬಗೆಹರಿಸುವ ಒಂದು ವಿಧಾನವಾಗಿ ಯುದ್ಧವನ್ನು ಬಹಿಷ್ಕರಿಸಲು ಮಾಡಲಾದ ಸರಿಸಾಟಿಯಿಲ್ಲದ ಪ್ರಯತ್ನಗಳನ್ನು ಕಂಡಿರುವ ಯುಗದಲ್ಲಿ ಈ ದೊಡ್ಡ ಪ್ರಮಾಣದ ಕಗ್ಗೊಲೆಯು ಸಂಭವಿಸಿದೆ. ಶೀತಯುದ್ಧದ ಇತ್ತೀಚೆಗಿನ ಅಂತ್ಯದೊಂದಿಗೆ, ಒಂದು ಹೊಸ, ಶಾಂತಿಭರಿತ ಲೋಕ ವ್ಯವಸ್ಥೆಯ ಹೊರಬರುವುದೆಂಬ ನಿರೀಕ್ಷೆಗಳು ಉನ್ನತವಾಗಿದ್ದವು. ಹಾಗಿದ್ದರೂ, ಭೌಗೋಲಿಕ ಶಾಂತಿಯು ಹಿಂದೆ ಇದ್ದಂತೆ ಭ್ರಾಂತಿಕಾರಕವಾಗಿಯೆ ಉಳಿದಿದೆ. ಯಾಕೆ?

ಒಂದು ಜೈವಿಕ ಆವಶ್ಯಕತೆಯೊ?

ಬದುಕಿ ಉಳಿಯುವುದಕ್ಕಾಗಿ, ಕ್ರಮ ಸರಣಿಯ ಹೋರಾಟದ ಒಂದು ಭಾಗವಾಗಿರುವುದರಿಂದ, ಯುದ್ಧಗಳು ಅನಿವಾರ್ಯ—ಆವಶ್ಯಕವೂ ಕೂಡ—ಎಂದು ಕೆಲವು ಇತಿಹಾಸಗಾರರು ಮತ್ತು ಮಾನವ ಶಾಸ್ತ್ರಜ್ಞರು ವಾದಿಸುತ್ತಾರೆ. ಇಂಥ ಯೋಚನೆಯಿಂದ ಪ್ರಭಾವಿತರಾದ, ಮಿಲಿಟರಿ ವಿಶೇಷ್ಲಕ ಫ್ರೀಡ್ರಿಕ್‌ ವಾನ್‌ ಬರ್ನ್‌ಹಾರ್ಡಿ, ಯುದ್ಧವು “ಜೈವಿಕ, ಸಾಮಾಜಿಕ ಹಾಗೂ ನೈತಿಕ ಏಳಿಗೆಯ ಅಭಿರುಚಿಯಲ್ಲಿ” ಮಾಡಲ್ಪಡುತ್ತದೆ ಎಂದು 1914 ರಲ್ಲಿ ವಾದಿಸಿದರು. ಅತಿ ಯೋಗ್ಯತೆಯುಳ್ಳದ್ದನ್ನು ಬಿಡುತ್ತಾ, ಬಲಹೀನ ವ್ಯಕ್ತಿಗಳನ್ನು ಯಾ ರಾಷ್ಟ್ರಗಳನ್ನು ತೆಗೆದುಹಾಕುವ ಒಂದು ಮಾರ್ಗವು ಯುದ್ಧವಾಗಿದೆ ಎಂಬುದು ಆ ಸಿದ್ಧಾಂತವಾಗಿತ್ತು.

ಇಂಥ ಒಂದು ವಾದವು ಯುದ್ಧದ ಲಕ್ಷಾಂತರ ವಿಧವೆಯರನ್ನೂ ಅನಾಥರನ್ನೂ ಸಂತೈಸಲಾರದು. ನೈತಿಕವಾಗಿ ಅಸಂಗತವಾಗಿರುವುದರ ಜೊತೆಗೆ ಈ ಯೋಚನೆಯು ಆಧುನಿಕ ಯುದ್ಧದ ಕಟು ಸತ್ಯಗಳನ್ನು ಕಡೆಗಣಿಸುತ್ತದೆ. ಯೋಗ್ಯತೆಯುಳ್ಳವರಿಗೆ ವಿಶೇಷವಾದ ಪರಿಗಣನೆಯನ್ನು ಹಾಗೂ ಸಂರಕ್ಷಣೆಯನ್ನು ಯಂತ್ರಫಿರಂಗಿ (ಮಷೀನ್‌ ಗನ್‌) ಕೊಡುವುದಿಲ್ಲ, ಮತ್ತು ಬಾಂಬು ಬಲಿಷ್ಠರನ್ನು ಬಲಹೀನರೊಂದಿಗೆ ನಿರ್ಮೂಲ ಮಾಡುತ್ತದೆ.

ಒಂದನೆಯ ಲೋಕ ಯುದ್ಧದ ಗಂಭೀರ ಪಾಠಗಳನ್ನು ಅಲಕ್ಷಿಸುತ್ತಾ, ಸೈನಿಕ ವಿಜಯದ ಮುಖಾಂತರ ಒಂದು ಸರ್ವೋತ್ಕೃಷ್ಟ ಕುಲವನ್ನು ತಯಾರಿಸುವುದರ ಕುರಿತು ಆ್ಯಡಾಲ್ಫ್‌ ಹಿಟ್ಲರ್‌ ಕನಸುಕಂಡನು. ಮೈನ್‌ ಕಾಂಫ್‌ (ನನ್ನ ಹೋರಾಟ) ಎಂಬ ತನ್ನ ಪುಸ್ತಕದಲ್ಲಿ, ಅವನು ಬರೆದದ್ದು: “ಅನಂತ ಹೋರಾಟದಲ್ಲಿ ಮಾನವಕುಲವು ಮಹತ್ತರವಾಗಿ ಬೆಳೆದಿದೆ, ಮತ್ತು ಅನಂತ ಶಾಂತಿಯಲ್ಲಿ ಮಾತ್ರ ಅದು ಹಾಳಾಗುತ್ತದೆ. . . . ಬಲಿಷ್ಠರು ಅಧಿಕಾರ ನಡೆಸಬೇಕು ಮತ್ತು ಬಲಹೀನರೊಂದಿಗೆ ಸಮ್ಮಿಳಿತವಾಗಬಾರದು.” ಮಾನವಕುಲವನ್ನು ಉದ್ಧಾರಮಾಡುವ ಬದಲು, ಹಿಟ್ಲರನು ಲಕ್ಷಂತರ ಜೀವಗಳ ಆಹುತಿ ಕೊಟ್ಟನು ಮತ್ತು ಒಂದು ಇಡೀ ಭೂಖಂಡವನ್ನು ಧ್ವಂಸಗೊಳಿಸಿದನು.

ಯುದ್ಧವು ಒಂದು ಜೈವಿಕ ಆವಶ್ಯಕತೆಯಾಗಿರದಿದ್ದರೆ, ಮಾನವಕುಲವನ್ನು ಸ್ವನಾಶನದ ಕಡೆಗೆ ಯಾವುದು ಪ್ರಚೋದಿಸುತ್ತದೆ? ಈ “ಅನಾಗರಿಕರ ವ್ಯಾಪಾರ” ದೊಳಗೆ ನುಗ್ಗುವಂತೆ ಯಾವ ಬಲಗಳು ರಾಷ್ಟ್ರಗಳನ್ನು ಬಲಾತ್ಕರಿಸುತ್ತವೆ?a ಶಾಂತಿ ಕರ್ತರ ಅತ್ಯುತ್ತಮ ಪ್ರಯತ್ನಗಳಿಗೆ ತಡೆಯೊಡ್ಡುವ ಕೆಲವು ಆಧಾರ ಅಂಶಗಳ ಒಂದು ಪಟ್ಟಿ ಕೆಳಗಿನಂತಿದೆ.

ಯುದ್ಧದ ಕಾರಣಗಳು

ರಾಷ್ಟ್ರೀಯತೆ. ರಾಜ್ಯನೀತಿಜ್ಞರ ಮತ್ತು ಸೇನಾಪತಿಗಳ ಮೂಲಕ ಅನೇಕ ವೇಳೆ ಆಹ್ವಾನಿಸ್ಪಟ್ಟ ರಾಷ್ಟ್ರೀಯತೆಯು, ಯುದ್ಧವನ್ನು ಪ್ರವರ್ತಿಸುವಲ್ಲಿ ಇರುವ ಅತ್ಯಂತ ಶಕ್ತಿಶಾಲಿ ಬಲಗಳಲ್ಲಿ ಒಂದಾಗಿದೆ. ಅನೇಕ ಯುದ್ಧಗಳು “ರಾಷ್ಟ್ರೀಯ ಆಸಕ್ತಿಗಳನ್ನು” ಸಂರಕ್ಷಿಸಲು ಯಾ “ರಾಷ್ಟ್ರೀಯ ಗೌರವವನ್ನು” ಕಾಪಾಡಲು ಹೂಡಲ್ಪಟ್ಟಿವೆ. ರಾಷ್ಟ್ರೀಯ ಮನೋಭಾವವು ಹೀಗಿರುವಾಗ, ಎದ್ದು ಕಾಣುವ ಆಕ್ರಮಣವನ್ನು ಕೂಡ, ನಿಮ್ಮ ವಿರುದ್ಧ ಶಸ್ತ್ರಗಳನ್ನು ಉಪಯೋಗಿಸುವ ಮುಂಚೆ ನಿಮ್ಮ ವೈರಿಗಳ ಶಸ್ತ್ರಗಳನ್ನು ಅಶಕ್ತಗೊಳಿಸುವ ಒಂದು ಕ್ರಿಯೆ ಎಂಬುದಾಗಿ ವಿವರಿಸಸಾಧ್ಯವಿದೆ.

ಕುಲಸಂಬಂಧವಾದ ಹಗೆತನ. ಅನೇಕ ಪ್ರಾಂತೀಯ ಯುದ್ಧಗಳು, ಕುಲಗಳ, ಜಾತಿಗಳ, ಮತ್ತು ಕುಲಸಂಬಂಧಿತ ಗುಂಪುಗಳ ನಡುವೆ ಬಹು ಕಾಲದಿಂದಿರುವ ದ್ವೇಷದಿಂದ ಆರಂಭಗೊಂಡು ಆಮೇಲೆ ಉದ್ರೇಕಗೊಳಿಸಲ್ಪಡುತ್ತವೆ. ಹಿಂದಿನ ಯೂಗೊಸ್ಲಾವಿಯ, ಲೈಬಿರಿಯಾ, ಮತ್ತು ಸೊಮಾಲಿಯದಲ್ಲಿ ನಡೆದ ದುಃಖಕರ ಯುದ್ಧಗಳು ಇತ್ತೀಚೆಗಿನ ಉದಾಹರಣೆಗಳಾಗಿವೆ.

ಆರ್ಥಿಕ ಮತ್ತು ಸೈನಿಕ ಪ್ರತಿಸ್ಪರ್ಧೆ. ಒಂದನೆಯ ಲೋಕ ಯುದ್ಧದ ಮುಂಚೆ, ಶಾಂತಿಯ ತೋರಿಕೆಯನ್ನು ಕೊಟ್ಟ ಸಮಯಾವಧಿಯಲ್ಲಿ, ಯೂರೋಪಿಯನ್‌ ಶಕ್ತಿಗಳು ನಿಜವಾಗಿಯೂ ಬಹು ದೊಡ್ಡ ಸೇನೆಗಳನ್ನು ಕಟ್ಟಿಕೊಂಡವು. ಜರ್ಮನಿ ಮತ್ತು ಗ್ರೇಟ್‌ ಬ್ರಿಟನ್‌ ಯುದ್ಧ ನೌಕೆ ನಿರ್ಮಾಣದ ಸ್ಪರ್ಧೆಯಲ್ಲಿ ತೊಡಗಿದ್ದವು. ಕಗ್ಗೊಲೆಯಲ್ಲಿ ಕಟ್ಟಕಡೆಗೆ ಒಳಗೊಂಡ ಪ್ರತಿ ಪ್ರಮುಖ ರಾಷ್ಟ್ರವು, ಯುದ್ಧ ಅದರ ಶಕ್ತಿಯನ್ನು ಹೆಚ್ಚಿಸಿ ಆರ್ಥಿಕ ಪ್ರಯೋಜನಗಳ ಆಕಸ್ಮಿಕ ಲಾಭ ಪ್ರಾಪ್ತಿಯನ್ನು ತರುವುದೆಂದು ನಂಬಿದುದರಿಂದ, ಘರ್ಷಣೆಗೆ ಪರಿಸ್ಥಿತಿಗಳು ಸಿದ್ಧವಾಗಿದ್ದವು.

ಧಾರ್ಮಿಕ ವೈಷಮ್ಯಗಳು. ವಿಶೇಷವಾಗಿ ಕುಲದ ಭಿನ್ನಾಭಿಪ್ರಾಯಗಳಿಂದ ಪುಷ್ಟಿಗೊಳಿಸಲ್ಪಟ್ಟಾಗ, ಧಾರ್ಮಿಕ ಭಿನ್ನತೆಗಳು ಒಂದು ಸ್ಫೋಟಕ ಮಿಶ್ರಣವನ್ನು ಉತ್ಪಾದಿಸಬಲ್ಲವು. ಲೆಬನಾನ್‌ ಮತ್ತು ಉತ್ತರ ಐರ್ಲಂಡ್‌ನಲ್ಲಿನ ಘರ್ಷಣೆಗಳು, ಅಷ್ಟೇ ಅಲ್ಲದೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧಗಳು, ಧಾರ್ಮಿಕ ಹಗೆತನದಲ್ಲಿ ಬೇರೂರಿವೆ.

ಒಬ್ಬ ಅದೃಶ್ಯ ಯುದ್ಧಹರಡುವವನು. “ಈ ಪ್ರಪಂಚದ ದೇವ” ನಾಗಿರುವ ಪಿಶಾಚನಾದ ಸೈತಾನನು, ಹಿಂದೆಂದಿಗಿಂತಲೂ ಹೆಚ್ಚು ಸಕ್ರಿಯನಾಗಿದ್ದಾನೆಂದು ಬೈಬಲ್‌ ಪ್ರಕಟಿಸುತ್ತದೆ. (2 ಕೊರಿಂಥ 4:4) ಮಹಾ ಕೋಪದಿಂದ ತುಂಬಿದವನಾಗಿ ಮತ್ತು “ತನಗಿರುವ ಕಾಲವು ಸ್ವಲ್ಪವೆಂದು ತಿಳಿದು,” ಯುದ್ಧಗಳನ್ನು ಸೇರಿಸಿ, ಭೂಮಿಯ ಶೋಚನೀಯ ಸ್ಥಿತಿಯನ್ನು ಇನ್ನೂ ಕೆಡಿಸುವ ಪರಿಸ್ಥಿತಿಗಳನ್ನು ಅವನು ಕೆದಕುತ್ತಿದ್ದಾನೆ.—ಪ್ರಕಟನೆ 12:12.

ಯುದ್ಧದ ಈ ಆಧಾರಭೂತ ಕಾರಣಗಳನ್ನು ನಿರ್ಮೂಲ ಮಾಡುವುದು ಸುಲಭವಲ್ಲ. ಎರಡು ಸಾವಿರ ವರ್ಷಗಳ ಹಿಂದೆ, “ಮೃತರು ಮಾತ್ರ ಯುದ್ಧದ ಅಂತ್ಯವನ್ನು ಕಂಡಿದ್ದಾರೆ” ಎಂದು ಪ್ಲೇಟೊ ಹೇಳಿದನು. ಅವನ ಉತ್ಸಾಹಶೂನ್ಯ ಅಂದಾಜು ನಾವು ಕಲಿಯಬೇಕಾದ ಯಾ ಸ್ವೀಕರಿಸಬೇಕಾದ ಕಹಿ ಸತ್ಯವಾಗಿದೆಯೊ? ಅಥವಾ ಒಂದು ದಿನ ಯುದ್ಧರಹಿತವಾದ ಲೋಕವೊಂದು ಇರುವುದೆಂದು ನಿರೀಕ್ಷಿಸಲು ನಮಗೆ ಕಾರಣವಿದೆಯೊ?

[ಅಧ್ಯಯನ ಪ್ರಶ್ನೆಗಳು]

a  ಯುದ್ಧವನ್ನು “ಅನಾಗರಿಕರ ವ್ಯಾಪಾರ” ದಂತೆ ವರ್ಣಿಸಿದ ವ್ಯಕ್ತಿ ನೆಪೋಲಿಯನ್‌ ಆಗಿದ್ದನು. ತನ್ನ ವಯಸ್ಕ ಜೀವನದಲ್ಲಿನ ಹೆಚ್ಚಿನ ಭಾಗವನ್ನು ಸೈನ್ಯದಲ್ಲಿ ಮತ್ತು ಪ್ರಾಯಶಃ 20 ವರ್ಷಗಳನ್ನು ಪರಮ ಸೇನಾಪತಿಯಂತೆ ವ್ಯಯಿಸಿದ ಅವನು, ಯುದ್ಧದ ಅಮಾನುಷ ಕ್ರೌರ್ಯವನ್ನು ಸಾಕ್ಷಾತ್ತಾಗಿ ಅನುಭವಿಸಿದನು.

[ಪುಟ 2 ರಲ್ಲಿರುವ ಚಿತ್ರ ಕೃಪೆ]

Cover: John Singer Sargent’s painting Gassed (detail), Imperial War Museum, London

[ಪುಟ 3 ರಲ್ಲಿರುವ ಚಿತ್ರ ಕೃಪೆ]

Instituto Municipal de Historia, Barcelona

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ