ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 11/15 ಪು. 8-11
  • ಒಪ್ಪಂದ ಮಾಡುವ ಯೋಚನೆಯೇ ಇಲ್ಲ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒಪ್ಪಂದ ಮಾಡುವ ಯೋಚನೆಯೇ ಇಲ್ಲ!
  • ಕಾವಲಿನಬುರುಜು—1993
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಿಷ್ಕಾರಣವಾಗಿ ದ್ವೇಷಿಸಲ್ಪಟ್ಟರು
  • ರೋಮ್‌ ಹಿಂಸೆಯನ್ನು ತೀಕ್ಷೈಗೊಳಿಸುತ್ತದೆ
  • ಸ್ಪಷ್ಟ ವ್ಯತ್ಯಾಸಗಳು
  • ಸಾಕ್ಷಿಯನ್ನು ನೀಡುವುದರ ಬೆಲೆ
  • ಬೆಳವಣಿಗೆಯು ಹೆಚ್ಚಿನ ಹಿಂಸೆಯನ್ನು ತರುತ್ತದೆ
  • ಪ್ರತಿಫಲ
  • ಆರಂಭದ ಕ್ರೈಸ್ತತ್ವ ಮತ್ತು ರಾಜ್ಯ
    ಕಾವಲಿನಬುರುಜು—1996
  • ಆದಿ ಕ್ರೈಸ್ತರು ಮತ್ತು ಲೋಕ
    ಕಾವಲಿನಬುರುಜು—1993
  • ತಮ್ಮ ನಂಬಿಕೆಗಾಗಿ ದ್ವೇಷಿಸಲ್ಪಟ್ಟವರು
    ಕಾವಲಿನಬುರುಜು—1998
  • ಆದಿ ಕ್ರೈಸ್ತತ್ವ ಮತ್ತು ರೋಮಿನ ದೇವರುಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
ಇನ್ನಷ್ಟು
ಕಾವಲಿನಬುರುಜು—1993
w93 11/15 ಪು. 8-11

ಒಪ್ಪಂದ ಮಾಡುವ ಯೋಚನೆಯೇ ಇಲ್ಲ!

ಯೆಹೋವನ ಹಸ್ತವು ಯೇಸು ಕ್ರಿಸ್ತನ ಆದಿ ಹಿಂಬಾಲಕರೊಂದಿಗೆ ಇತ್ತು. (ಅ. ಕೃತ್ಯಗಳು 11:21) ದೇವರ ಸಹಾಯದಿಂದ, ಅವರು ಒಪ್ಪಂದ ಮಾಡಿಕೊಳ್ಳದೆ ಒಂದು ನೀತಿವಂತ ಮಾರ್ಗವನ್ನು ಬೆನ್ನಟ್ಟಿದರು. ಅವರು ಶತ್ರುತ್ವ ಮತ್ತು ತೀಕ್ಷೈ ಹಿಂಸೆಯನ್ನು ಕೂಡ ಅನುಭವಿಸಿದರು ಎಂಬ ಸಂಗತಿಯು ಪ್ರಸಿದ್ಧ ಐತಿಹಾಸಿಕ ನಿಜತ್ವವಾಗಿದೆ.

ಕ್ರಿಸ್ತನ ಪ್ರಥಮ ನಂಬಿಗಸ್ತ ಹಿಂಬಾಲಕರ ಸಮಗ್ರತೆಯು ಪ್ರಸಿದ್ಧವಾದ ನಿಜತ್ವವಾಗಿದೆ. ತಮ್ಮ ಜೀವಗಳ ಬೆಲೆತೆತ್ತರೂ, ತಮ್ಮ ನಂಬಿಕೆಯನ್ನು ಒಪ್ಪಂದ ಮಾಡಿಕೊಳ್ಳಲು ಅವರು ನಿರಾಕರಿಸಿದರು. ಆದರೆ ಅವರೊಂದಿಗೆ ಅಷ್ಟು ಕ್ರೂರವಾಗಿ ಯಾಕೆ ವರ್ತಿಸಲಾಯಿತು?

ನಿಷ್ಕಾರಣವಾಗಿ ದ್ವೇಷಿಸಲ್ಪಟ್ಟರು

ಯೇಸುವಿನಂತೆ, ನಿಜ ಕ್ರೈಸ್ತರು ಈ ಲೋಕದ ಹೆಬ್ಬಯಕೆಗಳನ್ನು ಮತ್ತು ನಂಬಿಕೆಗಳನ್ನು ಹಂಚಿಕೊಳ್ಳಲಿಲ್ಲ. (1 ಯೋಹಾನ 4:4-6) ಮೇಲಾಗಿ, ಕ್ರೈಸ್ತತ್ವದ ಬೆಳವಣಿಗೆಯು “ಎಷ್ಟು ತೀವ್ರವಾಗಿತ್ತು, ಮತ್ತು ಅದರ ಸಫಲತೆಯು ಎಷ್ಟು ಗಮನಾರ್ಹವಾಗಿತ್ತೆಂದರೆ, [ರೋಮಿನ ಚಕ್ರಾಧಿಪತ್ಯದೊಂದಿಗೆ] ಭಯಂಕರವಾದ ಒಂದು ಸಂಘರ್ಷಣೆಯು ಅನಿವಾರ್ಯವಾಗಿತ್ತು,” ಎಂದು ಇತಿಹಾಸಗಾರ ಎಡ್‌ಮಾನ್‌ ಡ ಪ್ರೆಸಾನ್‌ಸೆ, ಗಮನಿಸುತ್ತಾರೆ.

“ನನ್ನನ್ನು ನಿಷ್ಕಾರಣವಾಗಿ ದ್ವೇಷಿಸಿದರು,” ಎಂಬುದಾಗಿ ಹೇಳುತ್ತಾ, ಒಂದು ಪ್ರವಾದನಾ ಕೀರ್ತನೆಯನ್ನು ಯೇಸು ಒಮ್ಮೆ ತನಗೇ ಅನ್ವಯಿಸಿಕೊಂಡನು. (ಯೋಹಾನ 15:25; ಕೀರ್ತನೆ 69:4) ಇದನ್ನು ತನ್ನ ಶಿಷ್ಯರಿಗೆ ಹೇಳುವ ಮೊದಲು, ಅವನು, “ದಣಿಗಿಂತ ಆಳು ದೊಡ್ಡವನಲ್ಲ . . . ಅವರು ನನ್ನನ್ನು ಹಿಂಸೆಪಡಿಸಿದರೆ ನಿಮ್ಮನ್ನು ಸಹ ಹಿಂಸೆಪಡಿಸುವರು,” ಎಂದು ಎಚ್ಚರಿಸಿದ್ದನು. (ಯೋಹಾನ 15:20) ಅವನ ಹೆಜ್ಜೆಯ ಜಾಡಿನಲ್ಲಿ ಹಿಂಬಾಲಿಸುವುದು ಸುಲಭವಾಗಿರಲಿಲ್ಲ. ಒಂದು ವಿಷಯವೇನಂದರೆ, ಯೆಹೂದ್ಯರೊಳಗೆ ಧಾರ್ಮಿಕ ನಾಯಕರು ಯೇಸುವಿನ ಯೆಹೂದಿ ಹಿಂಬಾಲಕರನ್ನು ಯೆಹೂದಿ ಮತದಿಂದ ಧರ್ಮಭ್ರಷ್ಟರಂತೆ ನೊಡುತ್ತಿದ್ದರು. ಅವನ ಕುರಿತು ಇನ್ನು ಮುಂದೆ ಮಾತಾಡಬಾರದೆಂದು ಯೇಸುವಿನ ಹಿಂಬಾಲಕರ ಮೇಲೆ ತಗಾದೆ ಮಾಡಲ್ಪಟ್ಟರೂ, ಅವರು ಸಮ್ಮತಿಸಲು ಮತ್ತು ಹೀಗೆ ಅವರ ನಂಬಿಕೆಯ ಒಪ್ಪಂದ ಮಾಡಲು ನಿರಾಕರಿಸಿದರು.—ಅ. ಕೃತ್ಯಗಳು 4:17-20; 5:27-32.

ಸಾ.ಶ. 33ರ ಪಂಚಾಶತ್ತಮದ ತರುವಾಯ ಯೆಹೂದಿ ಹಿರೀಸಭೆಗೆ ಸಾದರಪಡಿಸಲಾದ ಸಾಕ್ಷ್ಯದಲ್ಲಿ, ಶಿಷ್ಯ ಸೆಫ್ತನನು “ಮೋಶೆಗೆ ವಿರೋಧವಾಗಿಯೂ ದೇವರಿಗೆ ವಿರೋಧವಾಗಿಯೂ ದೂಷಣೆಯ ಮಾತುಗಳನ್ನು” ಆಡಿದ್ದಾಗಿ ಆಪಾದಿಸಲ್ಪಟ್ಟನು. ಆಪಾದನೆಗಳು ಮಿತಿ ಮೀರಿದವುಗಳಾಗಿದ್ದರೂ, ಅವನನ್ನು ಕಲ್ಲೆಸೆದು ಕೊಲಲ್ಲಾಯಿತು. ಆದಕಾರಣ, “ಆ ದಿವಸದಲ್ಲಿ ಯೆರೂಸಲೇಮಿನಲ್ಲಿದ್ದ ಸಭೆಗೆ ದೊಡ್ಡ ಹಿಂಸೆ ಉಂಟಾಯಿತು” ಮತ್ತು “ಅಪೊಸ್ತಲರು ಹೊರತಾಗಿ ಎಲ್ಲರು ಯೂದಾಯ ಸಮಾರ್ಯ ಸೀಮೆಗಳಲ್ಲಿ ಚದರಿಹೋದರು.” (ಅ. ಕೃತ್ಯಗಳು 6:11, 13; 8:1) ಅನೇಕರನ್ನು ಸೆರೆಮನೆಗಳಲ್ಲಿ ಹಾಕಲಾಯಿತು.

ಯೇಸುವಿನ ಹಿಂಬಾಲಕರನ್ನು ಯೆಹೂದಿಗಳು “ತಣಿಸಲಾಗದ ದ್ವೇಷದೊಂದಿಗೆ” ಬೆನ್ನಟ್ಟಿದರು ಎಂದು ಕ್ರೈಸ್ತತ್ವ ಮತ್ತು ರೋಮನ್‌ ಸಾಮ್ರಾಜ್ಯ (ಕ್ರಿಸ್ಟಿಆ್ಯನಿಟಿ ಆ್ಯಂಡ್‌ ದ ರೋಮನ್‌ ಎಂಪಯ್‌ರ್‌) ಎಂಬ ಪುಸ್ತಕವು ಹೇಳುತ್ತದೆ. ಹೌದು, ಕ್ರೈಸ್ತರ ಸಂರಕ್ಷಣೆ ಮಾಡಲು ರೋಮನ್‌ ಸರಕಾರವು ಅನೇಕ ಬಾರಿ ಕ್ರಮ ಕೈಕೊಳ್ಳಬೇಕಾಗಿತ್ತು! ಉದಾಹರಣೆಗೆ, ಕೊಲ್ಲುವ ಉದ್ದೇಶವಿದ್ದ ಯೆಹೂದ್ಯರಿಂದ ಅಪೊಸ್ತಲ ಪೌಲನನ್ನು ರೋಮನ್‌ ಸೈನಿಕರು ರಕ್ಷಿಸಿದರು. (ಅ. ಕೃತ್ಯಗಳು 21:26-36) ಆದರೂ, ಕ್ರೈಸ್ತರ ಮತ್ತು ರೋಮನರ ನಡುವಿನ ಸಂಬಂಧವು ಅಹಿತದ್ದಾಗಿಯೇ ಉಳಿಯಿತು.

ರೋಮ್‌ ಹಿಂಸೆಯನ್ನು ತೀಕ್ಷೈಗೊಳಿಸುತ್ತದೆ

ಸೆಫ್ತನನ ಮರಣದ ಸುಮಾರು ಒಂಬತ್ತು ವರ್ಷಗಳಾನಂತರ, ಯೆಹೂದ್ಯರೊಂದಿಗೆ ಅನುಗ್ರಹವನ್ನು ಸಂಪಾದಿಸುವ ಸಲುವಾಗಿ, ರೋಮನ್‌ ಅರಸ I ನೆಯ ಹೆರೋದ ಅಗ್ರಿಪ್ಪನು ಅಪೊಸ್ತಲ ಯಾಕೋಬನನ್ನು ಕೊಲ್ಲಿಸಿದನು. (ಅ. ಕೃತ್ಯಗಳು 12:1-3) ಆ ಸಮಯದೊಳಗಾಗಿ, ಕ್ರಿಸ್ತನ ಮೇಲಿನ ನಂಬಿಕೆಯು ರೋಮಿಗೆ ಹರಡಿತ್ತು. (ಅ. ಕೃತ್ಯಗಳು 2:10) ಸಾ. ಶ. 64 ರಲ್ಲಿ, ಆ ಪಟ್ಟಣದ ಹೆಚ್ಚಿನ ಭಾಗವು ಬೆಂಕಿಯಿಂದ ನಾಶ ಹೊಂದಿತು. ಅಗ್ನಿಪ್ರಳಯಕ್ಕೆ ತಾನು ಹೊಣೆಯೆಂಬ ವದಂತಿಗಳನ್ನು ನಿರ್ನಾಮ ಮಾಡುವ ಅವನ ಪ್ರಯತ್ನದಲ್ಲಿ, ವಿಪತ್ತಿಗಾಗಿ ಕ್ರೈಸ್ತರನ್ನು ನೀರೊ ಆರೋಪಿಸಿದ ಬಳಿಕ, ಅವರ ಘೋರವಾದ ಹಿಂಸೆಯು ಹಿಂಬಾಲಿಸಿ ಬಂತು. ಅತೀ ವೈಭವದ ಪರಂಪರೆಗಳಲ್ಲಿ ಪುನಃಕಟ್ಟಿ ನೀರೊಪೊಲಿಸ್‌ ಎಂದು ತನ್ನ ಹೆಸರಿನಿಂದಲೇ ನಾಮಕರಣ ಮಾಡುವ ನೆಪದಲ್ಲಿ ಅವನು ಪಟ್ಟಣಕ್ಕೆ ಬೆಂಕಿಯನ್ನು ಇಟ್ಟನೊ? ಇಲ್ಲವೆ, ಕ್ರೈಸ್ತರ ಕಡೆಗೆ ವೈರತ್ವವುಳ್ಳವಳೆಂದು ಪರಿಚಿತಳಾಗಿದ್ದ ಮತಾಂತರಗೊಂಡಿದ್ದ ಒಬ್ಬಾಕೆ ಯೆಹೂದಿಯಾದ ಅವನ ಚಕ್ರವರ್ತಿನಿ ಪಾಪೆಯು ಅವರನ್ನು ಆಪಾದಿಸುವ ಅವನ ನಿರ್ಣಯದ ಮೇಲೆ ಪ್ರಭಾವಿಸಿದಳೋ? ಒಬ್ಬಾಕೆ ಯೆಹೂದಿಯು, ಅವರನ್ನು ಆಪಾದಿಸುವ ಅವನ ನಿರ್ಣಯದ ಮೇಲೆ ಪ್ರಭಾವವನ್ನು ಬೀರಿದಳೊ? ಸಂಶೋಧಕರಿಗೆ ನಿಶ್ಚಯವಿಲ್ಲವಾದರೂ, ಆದರೆ ಪರಿಣಾಮವು ಭಯಂಕರವಾಗಿತ್ತು.

ರೋಮನ್‌ ಇತಿಹಾಸಗಾರ ಟ್ಯಾಸಿಟಸ್‌ ಹೇಳುವುದು: “ಮರಣಕ್ಕೆ ಪರಿಹಾಸ್ಯವನ್ನು ಸೇರಿಸಲಾಯಿತು; ಪಶುಗಳ ಚರ್ಮದಿಂದ ಹೊದಿಸಲ್ಪಟ್ಟು [ಕ್ರೈಸ್ತರು] ನಾಯಿಗಳಿಂದ ಖಂಡ ಖಂಡವಾಗಿ ಛಿದ್ರಮಾಡಲ್ಪಟ್ಟರು; ಶಿಲುಬೆಗಳಿಗೆ ಅವರನ್ನು ಜಡಿಯಲಾಯಿತು; ಅವರನ್ನು ಸುಲಭದಾಹ್ಯರಾಗಿ ಮಾಡಲಾಯಿತು, ರಾತ್ರಿಯಾದಾಗ ಅವರು,” ಸಾಮ್ರಾಜ್ಯದ ಉದ್ಯಾನವನಗಳನ್ನು ಬೆಳಗಿಸುವ ಮಾನವ ದೀವಟಿಗಳೊಪಾದಿ, “ಜ್ಯೋತಿಗಳೋಪಾದಿ ಉಪಯುಕ್ತವಾಗಬಹುದೆಂಬ ಉದ್ದೇಶದಿಂದ.” ಕ್ರೈಸ್ತರ ಮಿತ್ರನೇ ಅಲ್ಲದ ಟ್ಯಾಸಿಟಸ್‌ ಕೂಡಿಸುವುದು: “ಕಳಂಕಿತರಾಗಿದ್ದ ಮತ್ತು ಆದರ್ಶ ದಂಡನೆಗೆ ಯೋಗ್ಯರಾಗಿದ್ದ ಅವರು, ಸಾರ್ವಜನಿಕ ಯೋಗಕ್ಷೇಮಕ್ಕಾಗಿ ಅಲ್ಲ, ಆದರೆ ಒಬ್ಬ ಮನುಷ್ಯನ,” ನೀರೊವಿನ “ಕ್ರೌರ್ಯದಿಂದ ನಾಶವಾಗುವವರೋಪಾದಿ, ಅನುಕಂಪವನ್ನು ಕೆರಳಿಸಿದರು.”

ಸ್ಪಷ್ಟ ವ್ಯತ್ಯಾಸಗಳು

ಕ್ರೈಸ್ತರನ್ನು ರೋಮಿನ ನಾಶನಕ್ಕಾಗಿ ಆಪಾದಿಸುವ ನೀರೊವಿನ ಉದ್ದೇಶಕ್ಕೆ ಅದು ಸರಿಯಾಗಿದ್ದರೂ, ಅವನು ಅವರನ್ನು ಎಂದೂ ನಿಷೇಧಿಸಲಿಲ್ಲ ಯಾ ರಾಜ್ಯದೊಳಗೆ ಒಂದು ಧರ್ಮದೋಪಾದಿಯಲ್ಲಿ ಕ್ರೈಸ್ತತ್ವವನ್ನು ನಿಷೇಧಿಸಲಿಲ್ಲ. ಹಾಗಾದರೆ ರೋಮನರು ಹಿಂಸೆ ಕೊಡುತ್ತಾ ಯಾಕೆ ಮುಂದುವರಿದರು? ಯಾಕಂದರೆ “ಚಿಕ್ಕ ಕ್ರೈಸ್ತ ಸಮುದಾಯಗಳು, ಮೋಜು ಹುಚ್ಚಿನ ವಿಧರ್ಮಿ ಲೋಕವನ್ನು ಅವರ ದೈವಭಕ್ತಿ ಮತ್ತು ಅವರ ಸಭ್ಯತೆಯಿಂದ ತೊಂದರೆಪಡಿಸುತ್ತಿದ್ದವು,” ಎಂದು ಇತಿಹಾಸಗಾರ ವಿಲ್‌ ಡ್ಯುರ್ಯಾಂಟ್‌ ಹೇಳುತ್ತಾರೆ. ಕ್ರೈಸ್ತತ್ವ ಮತ್ತು ರೋಮನ್‌ ಖಡ್ಗಮಲ್ಲ ಸ್ಪರ್ಧೆಗಳ ರಕ್ತ ಸುರಿಸುವಿಕೆಯ ನಡುವಿನ ವ್ಯತ್ಯಾಸವು ಇದಕ್ಕಿಂತ ಹೆಚ್ಚಿನದ್ದಾಗಿರಲು ಸಾಧ್ಯವಿರಲಿಲ್ಲ. ಕ್ರೈಸ್ತರನ್ನು ತೊಲಗಿಸಿ ಬಿಡುವ ಮತ್ತು ಹೀಗೆ ತಮ್ಮ ಸ್ವಂತ ಮನಸ್ಸಾಕ್ಷಿಯನ್ನು ಶಮನಗೊಳಿಸುವ ಅವಕಾಶವು ರೋಮನರಿಗೆ ತಪ್ಪಿಸಲಾಗದ ಸದವಕಾಶವಾಗಿತ್ತು.

ಲೋಕ ಶಕಿಯ್ತೋಪಾದಿ, ರೋಮ್‌ ಅಜೇಯವೆಂದು ತೋರಿತು. ಅವರ ಸೈನಿಕ ಪರಾಕ್ರಮಕ್ಕೆ ಒಂದು ಕಾರಣವು, ಎಲ್ಲಾ ದೇವರುಗಳ ಆರಾಧನೆಯೇ ಎಂದು ರೋಮನರು ನಂಬಿದರು. ಆದುದರಿಂದ ಕ್ರೈಸ್ತ ಏಕದೇವವಾದದ ಪ್ರತ್ಯೇಕತೆ ಮತ್ತು ಸಾಮ್ರಾಟನ ಆರಾಧನೆಯನ್ನು ಸೇರಿಸಿ ಬೇರೆ ಎಲ್ಲಾ ದೇವರುಗಳ ಅದರ ನಿರಾಕರಣೆಯ ಕುರಿತು ಗ್ರಹಿಸುವುದು ಅವರಿಗೆ ಕಷ್ಟಕರವಾಗಿ ಕಂಡಿತು. ಸಾಮ್ರಾಜ್ಯದ ಅಸ್ತಿವಾರಗಳನ್ನೇ ಕೊರೆದು ಹಾಕುವ ಪ್ರಭಾವದಂತೆ ಕ್ರೈಸ್ತತ್ವವನ್ನು ರೋಮ್‌ ವೀಕ್ಷಿಸಿತು ಎಂಬುದು ಸೋಜಿಗದ ವಿಷಯವಲ್ಲ.

ಸಾಕ್ಷಿಯನ್ನು ನೀಡುವುದರ ಬೆಲೆ

ಸಾ.ಶ. ಪ್ರಥಮ ಶತಮಾನದ ಕೊನೆಯ ಅವಧಿಯಲ್ಲಿ, “ದೇವರ ವಾಕ್ಯಕ್ಕೋಸ್ಕರವೂ ಯೇಸುವಿನ ವಿಷಯವಾದ ಸಾಕ್ಷಿಗೋಸ್ಕರವೂ,” ಅಪೊಸ್ತಲ ಯೋಹಾನನು ಪತ್ಮೊಸ್‌ ದ್ವೀಪಕ್ಕೆ ಗಡೀಪಾರು ಮಾಡಲ್ಪಟ್ಟಿದ್ದನು. (ಪ್ರಕಟನೆ 1:9) ಇದಕ್ಕೆ ರೋಮನ್‌ ಸಾಮ್ರಾಟ ಡಾಮಿಷಿಯನ್‌ ಹೊಣೆಯಾಗಿದ್ದನೆಂದು ನಂಬಲಾಗುತ್ತದೆ. ಯೇಸುವಿನ ಹಿಂಬಾಲಕರ ಮೇಲೆ ತರಲ್ಪಟ್ಟ ಒತ್ತಡದ ನಡುವೆಯೂ, ಶತಮಾನದ ತಿರುವಿನೊಳಗೆ, ಕ್ರೈಸ್ತತ್ವವು ರೋಮನ್‌ ಸಾಮ್ರಾಜ್ಯದ ಉದ್ದಕ್ಕೂ ಹರಡಿತ್ತು. ಇದು ಹೇಗೆ ಸಾಧ್ಯವಾಗಿತ್ತು? ಕ್ರೈಸ್ತತ್ವವು “ಅದರ ಶುಶ್ರೂಷೆಯ ಮೂಲಕ ಒಟ್ಟಾಗಿ ಹಿಡಿದಿಡಲ್ಪಟ್ಟಿತ್ತು” ಎಂದು, ಆದಿ ಚರ್ಚಿನ ಒಂದು ಇತಿಹಾಸ (ಅ ಹಿಸ್ಟೊರಿ ಆಫ್‌ ದಿ ಅರ್ಲಿ ಚರ್ಚ್‌) ಹೇಳುತ್ತದೆ. ಯೋಹಾನನಂತೆ, ಹಿಂಸಿಸಲ್ಪಟ್ಟ ಆದಿ ಕ್ರೈಸ್ತರು ತಮ್ಮ ವಿಶ್ವಾಸದ ಒಪ್ಪಂದವನ್ನು ಮಾಡುತ್ತಿರಲಿಲ್ಲ ಆದರೆ ದೇವರ ಕುರಿತು ಮಾತಾಡುವುದನ್ನು ಮತ್ತು ಯೇಸುವಿಗೆ ಸಾಕ್ಷಿಕೊಡುವುದನ್ನು ಹುರುಪಿನಿಂದ ಮುಂದುವರಿಸಿದರು.—ಅ. ಕೃತ್ಯಗಳು 20:20, 21; 2 ತಿಮೊಥೆಯ 4:2.

ಬಿಥಿನಿಯದ (ಈಗ ವಾಯುವ್ಯ ದಿಕ್ಕಿನ ಟರ್ಕಿ) ರಾಜ್ಯಪಾಲನಾಗಿ ಪಿನ್ಲಿಯನ್ನು ಸಾಮ್ರಾಟ ಟ್ರೇಜನ್‌ ನೇಮಿಸಿದ ಎರಡು ವರ್ಷಗಳ ತರುವಾಯ, ಸಾ.ಶ. 112 ರೊಳಗೆ ಕ್ರೈಸ್ತರ ಹಿಂಸೆಯು ಹೊಸದಾದ ಒಂದು ತಿರುವನ್ನು ಪಡೆಯಿತು. ಅಲ್ಲಿನ ಹಿಂದಿನ ಆಡಳಿತವು ಸಡಿಲವಾಗಿದ್ದು ಅವ್ಯವಸ್ಥೆಯನ್ನು ಫಲಿಸಿತ್ತು. ದೇವಾಲಯಗಳು ಬಹುಮಟ್ಟಿಗೆ ಪರಿತ್ಯಜಿಸಲ್ಪಟ್ಟಿದ್ದವು, ಮತ್ತು ಬಲಿ ಪಶುಗಳಿಗಾಗಿ ಮೇವಿನ ವ್ಯಾಪಾರವು ಗಣನೀಯವಾಗಿ ಇಳಿಮುಖಗೊಂಡಿತ್ತು. ಪಶು ಯಜ್ಞ ಮತ್ತು ವಿಗ್ರಹಗಳೆರಡೂ ಕ್ರೈಸ್ತ ಆರಾಧನೆಯಲ್ಲಿಲ್ಲದರಿಂದ ವ್ಯಾಪಾರಿಗಳು ಅದರ ಸರಳತೆಯನ್ನು ದೂರಿದರು.

ಸಾಮ್ರಾಟನ ಪ್ರತಿಮೆಗಳ ಎದುರು ದ್ರಾಕ್ಷಾಮದ್ಯ ಮತ್ತು ಧೂಪವನ್ನರ್ಪಿಸಲು ನಿರಾಕರಿಸುವುದಕ್ಕಾಗಿ ಕ್ರೈಸ್ತರು ಅವರ ಜೀವಗಳನ್ನು ತೆರುತ್ತಿದ್ದಾಗ, ಪಿನ್ಲಿಯು ಅನ್ಯ ಆರಾಧನೆಯನ್ನು ಪುನಃಸ್ಥಾಪಿಸಲು ಕಷ್ಟಪಟ್ಟು ದುಡಿದನು. ಕಟ್ಟಕಡೆಗೆ, ಕ್ರೈಸ್ತರು “ಸದ್ಗುಣವಂತ ಜನರು, ಆದರೆ ಹಳೆಯ ಧಾರ್ಮಿಕ ಸಂಪ್ರದಾಯಗಳಿಗೆ ವಿವರಿಸಲಾಗದ ರೀತಿಯಲ್ಲಿ ವಿರುದ್ಧವಾಗಿದ್ದರು” ಎಂಬುದಾಗಿ ರೋಮನ್‌ ಅಧಿಕಾರಿಗಳು ಒಪ್ಪಿಕೊಂಡರು, ಎಂದು ಪ್ರೊಫೆಸರ್‌ ಹೆನ್ರಿ ಚ್ಯಾಡ್‌ವಿಕ್‌ ಹೇಳುತ್ತಾರೆ. ಒಬ್ಬ ಕ್ರೈಸ್ತನಾಗಿರುವುದು ವಧಾರ್ಹವಾದ ತಪ್ಪಾಗಿ ಉಳಿದರೂ, ಯೇಸುವಿನ ನಿಜ ಹಿಂಬಾಲಕರಿಗೆ ಒಪ್ಪಂದ ಮಾಡಿಕೊಳ್ಳುವ ಯೋಚನೆಯೇ ಇರಲಿಲ್ಲ.

“ವೈಯಕ್ತಿಕ ಸದಸ್ಯರ ಮತಾಂತರದಿಂದ ವಿಧರ್ಮಿ ಕುಟುಂಬಗಳಲ್ಲಿ ಉಂಟಾದ ತೊಂದರೆ” ಯಿಂದ ಕೂಡ ದ್ವೇಷವು ಫಲಿಸಿತು ಎಂದು ಪ್ರೊಫೆಸರ್‌ ಡಬ್ಲ್ಯೂ. ಎಮ್‌. ರ್ಯಾಮ್‌ಸೇ ಹೇಳುತ್ತಾರೆ. “ವಿಧರ್ಮಿ ದೇವರುಗಳ ಗುರುತಿಸುವಿಕೆಯ ಅರ್ಥದಲ್ಲಿ ಅದು ಇತ್ತು ಎಂಬ ಆಧಾರದ ಮೇಲೆ, ಅತ್ಯಂತ ಸಾಧಾರಣವಾದ ಸಾಮಾಜಿಕ ರೂಢಿಗಳೊಂದಿಗೆ ಒಬ್ಬನ ನೆರೆಯವನು ಹೊಂದಿಕೊಳ್ಳದಿದ್ದಾಗ, ಸಾಮಾಜಿಕ ಜೀವನವು ಬಹಳ ಕಷ್ಟಕರವಾಗುತ್ತಿತ್ತು,” ಎಂದು ಡಾ. ಜೆ. ಡಬ್ಲ್ಯೂ. ಸಿ. ವ್ಯಾಂಡ್‌ ಹೇಳುತ್ತಾರೆ. ಆದಿ ಕ್ರೈಸ್ತರನ್ನು ಅನೇಕರು ಮಾನವವರ್ಗದ ದ್ವೇಷಕರಂತೆ ವೀಕ್ಷಿಸಿದ್ದು ಯಾ ಅವರನ್ನು ನಾಸ್ತಿಕರಂತೆ ಪರಿಗಣಿಸಿದ್ದು ಆಶ್ಚರ್ಯದ ಸಂಗತಿಯಲ್ಲ.

ಬೆಳವಣಿಗೆಯು ಹೆಚ್ಚಿನ ಹಿಂಸೆಯನ್ನು ತರುತ್ತದೆ

ವರದಿಗಳನುಸಾರ ಅಪೊಸ್ತಲ ಯೋಹಾನನಿಂದ ಕಲಿಸಲ್ಪಟ್ಟ ಪಾಲಿಕಾರ್ಪ್‌, ಸ್ಮುರ್ನ ಪಟ್ಟಣದಲ್ಲಿ (ಈಗಿನ ಇಜ್‌ಮೀರ್‌) ಗೌರವಸ್ಥ ಹಿರಿಯನಾದನು. ಅವನ ವಿಶ್ವಾಸಕ್ಕಾಗಿ ಅವನನ್ನು ಸಾ.ಶ. 155 ರಲ್ಲಿ ಕಂಭದ ಮೇಲೆ ಸುಡಲಾಯಿತು. ರೋಮಿನ ಪ್ರಾಂತೀಯ ರಾಜ್ಯಪಾಲ, ಸ್ಟಾಟಿಯಸ್‌ ಕ್ವಾಡ್ರಾಟಸ್‌ ಜನಸ್ತೋಮವನ್ನು ಒಟ್ಟುಗೂಡಿಸಿದನು. ತಮ್ಮ ದೇವರುಗಳ ಆರಾಧನೆಯನ್ನು ತಡೆದ ಕಾರಣದಿಂದಾಗಿ, 86 ವರ್ಷ ಪ್ರಾಯದ ಪಾಲಿಕಾರ್ಪ್‌ನನ್ನು ಹಗೆಮಾಡಿದ ವೈರಿ ವಿಧರ್ಮಿಗಳಿಂದ ರಂಗವು ತುಂಬಿತ್ತು, ಮತ್ತು ಅದನ್ನು ಒಂದು ಮಹಾ ಸಬ್ಬತ್‌ ದಿನದಂದು ಮಾಡಬೇಕಾಗಿದ್ದರೂ ಕೂಡ, ಮತಭ್ರಾಂತ ಯೆಹೂದ್ಯರು ಪಾಲಿಕಾರ್ಪ್‌ನನ್ನು ಸುಡಲು ಸ್ವೇಚ್ಛೆಯಿಂದ ಸೌದೆಯನ್ನು ಕೂಡಿಸಿದರು.

ರೋಮನ್‌ ಲೋಕದ ಉದ್ದಕ್ಕೂ ಕ್ರೈಸ್ತರ ಮೇಲೆ ಹಿಂಸೆಯ ಒಂದು ಪ್ರವಾಹವೇ ಮುಂದೆ ಇಳಿದುಬಂದಿತು. ಸಾಮ್ರಾಟ ಮಾರ್ಕಸ್‌ ಆರೀಲಿಯಸ್‌ನ ಕೆಳಗೆ, ಇನ್ನೂ ಹೆಚ್ಚಿನ ಕ್ರೈಸ್ತರು ಕೊಲ್ಲಲ್ಪಟ್ಟರು. ಅವರು ರೋಮನ್‌ ಪ್ರಜೆಗಳಾಗಿದ್ದರೆ, ಖಡ್ಗದಿಂದ ಅವರು ಮಡಿದರು; ಇಲ್ಲದಿದ್ದರೆ ವರ್ತುಲ ಕ್ರೀಡಾರಂಗಗಳಲ್ಲಿ ಕ್ರೂರ ಪ್ರಾಣಿಗಳ ಮೂಲಕ ಅವರು ಕೊಲ್ಲಲ್ಪಟ್ಟರು. ಅವರ ಅಪರಾಧ? ತಮ್ಮ ವಿಶ್ವಾಸದ ಒಪ್ಪಂದವನ್ನು ಮಾಡಿಕೊಳ್ಳಲು ಯಾ ತ್ಯಜಿಸಲು ನಿರಾಕರಿಸಿದ ಕ್ರೈಸ್ತರಾಗಿದ್ದುದ್ದೇ ಆಗಿತ್ತು.

ಆಧುನಿಕ ಫ್ರೆಂಚ್‌ ಪಟ್ಟಣವಾದ ಲೈಆನ್ಸ್‌, ಒಂದು ಮುಖ್ಯ ಆಡಳಿತ ಕೇಂದ್ರ ಮತ್ತು ರೋಮ್‌ ಹಾಗೂ ರೈನ್‌ ನದಿಯ ನಡುವೆ ಇದ್ದ ಏಕಮಾತ್ರ ಕಾವಲು ದಂಡಾಗಿದ್ದ ರೋಮನ್‌ ಸ್ಥಳ, ಲುಗ್‌ಡೂನುಮ್‌ ನಿಂದ ಬೆಳೆಯಿತು. ಸಾ.ಶ. 177 ರೊಳಗಾಗಿ, ಯಾವುದರ ವಿರುದ್ಧ ವಿಧರ್ಮಿ ಜನರು ಕೋಪದಿಂದ ಎದ್ದರೋ ಅಂತಹ ಒಂದು ಬಲವಾದ ಕ್ರೈಸ್ತ ಸಮುದಾಯ ಅಲ್ಲಿತ್ತು. ಕ್ರೈಸ್ತರನ್ನು ಸಾರ್ವಜನಿಕ ಸ್ಥಳಗಳಿಂದ ಬಹಿಷ್ಕರಿಸಿದಾಗ ಇದು ಪ್ರಾರಂಭಿಸಿತು. ಜನಸಂದಣಿಯು ಒಂದು ಗಲಭೆಯನ್ನು ಎಬ್ಬಿಸಿತು, ಮತ್ತು ಅನಂತರದ ಹಿಂಸೆಯು ಎಷ್ಟು ಮಹತ್ತರವಾಗಿತ್ತೆಂದರೆ, ಯಾವನೇ ಕ್ರೈಸ್ತನು ಅವನ ಮನೆಯನ್ನು ಬಿಟ್ಟು ಹೊರಗೆ ಬರುವ ಸಾಹಸವನ್ನು ಮಾಡಲಿಲ್ಲ. ಕ್ರೈಸ್ತರನ್ನು ಹುಡುಕಿ ಅವರನ್ನು ಮರಣಕ್ಕೆ ಒಪ್ಪಿಸಬೇಕೆಂದು ರೋಮನ್‌ ರಾಜ್ಯಪಾಲನು ಆಜ್ಞೆಯನ್ನಿತ್ತನು.

ಪ್ರತಿಫಲ

ಯೇಸುವಿನ ಅಪೊಸ್ತಲರ ಮರಣ ಮತ್ತು ಅವರ ಹತೋಟಿಯಲ್ಲಿಡುವ ಪ್ರಭಾವದ ಗತಿಸುವಿಕೆಯೊಂದಿಗೆ, ಕ್ರೈಸ್ತರೆನಿಸಿಕೊಳ್ಳುವವರೊಳಗೆ ಧರ್ಮಭ್ರಷ್ಟತೆಯು ವಿಕಾಸಹೊಂದಲು ಆರಂಭವಾಯಿತು. (2 ಥೆಸಲೊನೀಕ 2:7) ಸಾ.ಶ. ನಾಲ್ಕನೇ ಶತಮಾನದ ಕೊನೆಯಲ್ಲಿ ಧರ್ಮಭ್ರಷ್ಟ ಕ್ರೈಸ್ತತ್ವವು ರಾಜ್ಯ ಧರ್ಮವಾಯಿತು. ಆ ಸಮಯದೊಳಗೆ, ಅದು ಭ್ರಷ್ಟವಾಗಿತ್ತು ಮತ್ತು ಲೋಕದೊಂದಿಗೆ ತಾನು ಒಪ್ಪಂದ ಮಾಡಿಕೊಳ್ಳಲು ಮತ್ತು ಗುರುತಿಸಿಕೊಳ್ಳಲು—ಯೇಸು ಮತ್ತು ಅವನ ಆದಿ ಶಿಷ್ಯರು ಎಂದಿಗೂ ಮಾಡದೆ ಇದ್ದ ವಿಷಯ— ಅದು ಸಿದ್ಧವಾಗಿತ್ತು. (ಯೋಹಾನ 17:16) ಆದಾಗ್ಯೂ, ಬಹಳ ಪೂರ್ವದಲ್ಲಿಯೇ, ಕ್ರೈಸ್ತ ವಿಶ್ವಾಸದ ಅದರ ದಾಖಲೆಯೊಂದಿಗೆ ಬೈಬಲ್‌ ಪುಸ್ತಕಗಳ ಪಟ್ಟಿಯು ಸಂಪೂರ್ಣಗೊಂಡಿತ್ತು.

ಆದಿ ಕ್ರೈಸ್ತರಲ್ಲಿ ಸಾವಿರಾರು ಜನರ ಕಷ್ಟಾನುಭವ ಮತ್ತು ಮರಣವು ವ್ಯರ್ಥವಾಗಿತ್ತೊ? ಖಂಡಿತವಾಗಿಯೂ ಇಲ್ಲ! ಅವರ ವಿಶ್ವಾಸದ ಒಪ್ಪಂದವನ್ನು ಮಾಡುವ ಯಾವ ಯೋಚನೆಯೂ ಇಲ್ಲದೆ, ‘ಸಾಯಬೇಕಾದರೂ ಅವರು ನಂಬಿಗಸ್ತರಾಗಿದ್ದರು ಮತ್ತು ಜೀವವೆಂಬ ಜಯಮಾಲೆಯನ್ನು ಅವರಿಗೆ ಕೊಡಲಾಯಿತು.’ (ಪ್ರಕಟನೆ 2:10) ಯೆಹೋವನ ಸೇವಕರು ಹಿಂಸೆಯ ತೀಕ್ಷೈತೆಯನ್ನು ಇನ್ನೂ ಅನುಭವಿಸುತ್ತಾರೆ, ಆದರೆ ಪೂರ್ವದ ಜೊತೆ ವಿಶ್ವಾಸಿಗಳ ನಂಬಿಕೆ ಮತ್ತು ಸಮಗ್ರತೆಯು ಅವರಿಗೆ ಮಹಾ ಉತ್ತೇಜನದ ಮೂಲವಾಗಿ ಉಳಿದಿದೆ. ಆದಕಾರಣ, ಆಧುನಿಕ ದಿನದ ಕ್ರೈಸ್ತರೂ ಕೂಡ ಒಪ್ಪಂದ ಮಾಡಿಕೊಳ್ಳುವ ಯಾವ ಯೋಚನೆಯನ್ನು ಮನಸ್ಸಿಗೆ ತೆಗೆದುಕೊಳ್ಳುವುದಿಲ್ಲ.

[ಪುಟ 8,9 ರಲ್ಲಿರುವ ಚಿತ್ರ]

ನೀರೊ

ರೋಮ್‌ ಸಾಮ್ರಾಜ್ಯದ ನಮೂನೆ

ಆರಾಧನೆಗೆ ಸಮರ್ಪಿಸಲ್ಪಟ್ಟ ಕೈಸರನ ಒಂದು ಪೀಠ

[ಕೃಪೆ]

Nero: Courtesy of The British Museum

Museo della Civiltà Romana, Roma

[ಪುಟ 10 ರಲ್ಲಿರುವ ಚಿತ್ರ]

ಮಾರ್ಕಸ್‌ ಆರೀಲಿಯಸ್‌

[ಕೃಪೆ]

The Bettmann Archive

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ