ರಾಜ್ಯ ಘೋಷಕರು ವರದಿ ಮಾಡುತ್ತಾರೆ
ಜೀವದ ಪವಿತ್ರತೆಗಾಗಿ ಗೌರವ
ರಕ್ತವು ದೇವರ ದೃಷ್ಟಿಯಲ್ಲಿ ಅಮೂಲ್ಯ ಮತ್ತು ಅದರ ದುರುಪಯೋಗವನ್ನು ಆತನು ಖಂಡಿಸುತ್ತಾನೆ ಎಂದು ಬೈಬಲ್ ತೋರಿಸುತ್ತದೆ. (ಯಾಜಕಕಾಂಡ 17:14; ಅ. ಕೃತ್ಯಗಳು 15:19, 20, 28, 29) ಬೈಬಲಿನ ಈ ಮಾರ್ಗದರ್ಶಕಗಳಿಂದಾಗಿ, ಯೆಹೋವನ ಸಾಕ್ಷಿಗಳು ರಕ್ತಪೂರಣಗಳನ್ನು ಸ್ವೀಕರಿಸುವುದಿಲ್ಲ.
ಈ ವಿಷಯದಲ್ಲಿ ಯೆಹೋವನ ಸಾಕ್ಷಿಗಳ ಧಾರ್ಮಿಕ ನಿಲುವನ್ನು, ಡಾಕ್ಟರುಗಳು ಮತ್ತು ಆಸ್ಪತ್ರೆ ಸಿಬ್ಬಂದಿಗಳು ತಿಳಿದುಕೊಳ್ಳುವಂತೆ ಮತ್ತು ಸಾಕ್ಷಿಗಳು ಬದಲಿ ಚಿಕಿತ್ಸೆಗಳನ್ನು ಸ್ವೀಕರಿಸುವರೆಂಬದನ್ನು ಗಣ್ಯಮಾಡುವಂತೆ, ವಾಚ್ ಟವರ್ ಸೊಸೈಟಿಯು ಹಾಸ್ಪಿಟಲ್ ಲಿಯೆಸ್‌ನ್ ಕಮಿಟೀಸ್ (HLC) ನ್ನು ಬೇರೆ ಬೇರೆ ದೇಶಗಳಲ್ಲಿ ವ್ಯವಸ್ಥಾಪಿಸಿಯದೆ. ಈ ಕಮಿಟಿಗಳ ಸದಸ್ಯರು ವೈದ್ಯಕೀಯ ಉದ್ಯೋಗಿಗಳೊಂದಿಗೆ ಮಾತಾಡಲು ಆಸ್ಪತ್ರೆಗಳನ್ನು ಸಂದರ್ಶಿಸುತ್ತಾರೆ. ಇತ್ತೀಚೆಗೆ, ಪೋಲೆಂಡ್‌ನ 12 ಶಹರಗಳಲ್ಲಿ, 200 ಕ್ಕಿಂತಲೂ ಹೆಚ್ಚು ಇಂಥ ಕೂಟಗಳು ನಡೆದವು, ಇದರಲ್ಲಿ ಮುಖ್ಯವಾಗಿ ಕಿನ್ಲಿಕ್‌ಗಳ ಮತ್ತು ಆಸ್ಪತ್ರೆ ವಾರ್ಡುಗಳ ಮುಖ್ಯಸ್ಥರನ್ನು ಒಳಗೊಂಡಿರುವ 500 ಕ್ಕಿಂತಲೂ ಹೆಚ್ಚು ವೈದ್ಯಕೀಯ ಡಾಕ್ಟರುಗಳು ಸೇರಿದ್ದರು. ಅಂಥ ಒಂದು ಸಂದರ್ಶನದಲ್ಲಿ ಕೆಳಗಿನ ಸಂಗತಿ ನಡೆಯಿತು:
“ಸಾಬ್ರೆಜ್ ಕಾರ್ಡಿಯೊ-ಸರ್ಜಿಕಲ್ ಕಿನ್ಲಿಕ್‌ನಲ್ಲಿ ನಡೆದ ಕೂಟವು ಒಂದು ಸಾಫಲ್ಯಯುಕ್ತ ಸಾಧನೆಯಾಗಿತ್ತು. ಈ ಕಿನ್ಲಿಕ್‌ನ ವೈದ್ಯಕೀಯ ತಂಡವು 1986 ರಿಂದ ನಮ್ಮ ಸಹೋದರರ ಶಸ್ತ್ರಕ್ರಿಯೆಯನ್ನು ರಕ್ತರಹಿತವಾಗಿ ನಡಿಸುತ್ತಿದ್ದಾರೆ. ಈ ತನಕ ಅಂತಹ 40 ಶಸ್ತ್ರಕ್ರಿಯೆಗಳು ನಡಿಸಲ್ಪಟ್ಟಿವೆ. ಪೋಲೆಂಡಿನ ಎಲ್ಲಾ ಕಡೆಗಳಿಂದ ಮತ್ತು ಪರದೇಶಗಳಿಂದಲೂ ರೋಗಿಗಳಿಗೆ ಪ್ರವೇಶ ನೀಡಲು ಕಿನ್ಲಿಕ್ ಸಿದ್ಧವಾಗಿದೆ. ಐವತ್ತು ನಿಮಿಷಗಳ ಒಂದು ಚರ್ಚೆಯಾದ ಬಳಿಕ, ಒಂದು ವಾರ್ಡಿನ ಉಪ ಮುಖ್ಯಸ್ಥರು HLC ಯ ಸದಸ್ಯರನ್ನು ರೋಗಿಗಳ ಒಂದು ಗುಂಪಿಗೆ ಪರಿಚಯಿಸಿ, ಅಂದದ್ದು: ‘ಇವರು ಯೆಹೋವನ ಸಾಕ್ಷಿಗಳು. ಅವರು ನಮ್ಮ ಕಿನ್ಲಿಕ್‌ನೊಂದಿಗೆ ಸಹಕರಿಸಿ, ನಮಗೆ ಸಹಾಯಮಾಡುತ್ತಾರೆ. ಅವರ ಜೊತೆ ವಿಶ್ವಾಸಿಗಳು ಮಾತ್ರವಲ್ಲ ಬೇರೆ ಎಲ್ಲಾ ರೋಗಿಗಳು ಸಹ ಅವರ ಸಹಾಯದಿಂದ ಪ್ರಯೋಜನ ಪಡೆಯುತ್ತಾರೆ. ದೊಡ್ಡ ಹೃದಯ ಶಸ್ತ್ರಕ್ರಿಯೆಗಳು ರಕ್ತರಹಿತವಾಗಿ ನಡಿಸಲ್ಪಡಬಲ್ಲವೆಂದು ನಮಗೆ ಮನವರಿಕೆಯಾಗಿರುವುದಕ್ಕೆ, ಯೆಹೋವನ ಸಾಕ್ಷಿಗಳಿಗೆ ಉಪಕಾರ.
“‘ದೃಷ್ಟಾಂತಕ್ಕೆ, [ತನ್ನ ರೋಗಿಗಳಲ್ಲಿ ಒಬ್ಬರನ್ನು ತೋರಿಸುತ್ತಾ] ನಾವೀ ಮಹಿಳೆಗೆ ರಕ್ತರಹಿತವಾದ ಶಸ್ತ್ರಕ್ರಿಯೆ ಮಾಡಿದೆವು, ಮತ್ತು ಸೋಮವಾರ ಆಕೆ ಮನೆಗೆ ಹೋಗಲಿದ್ದಾಳೆ. ನಾವು ರಕ್ತದ ಉಪಯೋಗವನ್ನು ಮುಂಚಿಗಿಂತ ಕಡಿಮೆ ಮಾಡುತ್ತೇವೆಂದು ತಿಳಿಸಲು ನಾನು ಬಯಸುತ್ತೇನೆ, ಯಾಕಂದರೆ ಅದು ಅಪಾಯಕರವಾಗಿದೆ. ಅದು HIV ಹೆಪಟೈಟಿಸ್‌ನೊಂದಿಗೆ ಜತೆಗೂಡಿದೆ, ಮತ್ತು ಗುಣವಾಗುವ ಕಾಲಾವಧಿಯನ್ನು ಲಂಬಿಸುತ್ತದೆ.”
“‘ನಾನೊಬ್ಬ ಕ್ಯಾತೊಲಿಕನು, ಆದರೆ ನಮ್ಮ ಮನೆಯಲ್ಲಿ ನಾವು ಯಾವಾಗಲೂ ಬೇರೆಯವರ ವೀಕ್ಷಣೆಗಳನ್ನು ಸೈರಿಸುತ್ತೇವೆ. ಒಂದು ದಿನ ನಾನು ನನ್ನ ಮಕ್ಕಳೊಂದಿಗೆ ಸ್ಲಾನ್‌ಸ್ಕ್ ಸ್ಟೇಡಿಯಂ ಬಳಿ ನಡೆಯುತ್ತಿದ್ದೆ. ಹಿಂದೆ ಈ ಸ್ಟೇಡಿಯಂ ದುರ್ಲಕ್ಷಿಸಲ್ಪಟ್ಟಿತ್ತು, ಆದರೆ ಈಗ ಅದು ಗುರುತು ಸಿಕ್ಕದಷ್ಟು ಮಾರ್ಪಟ್ಟಿರುವುದನ್ನು ನಾವು ಗಮನಿಸಿದೆವು. ಈ ಮಾರ್ಪಾಟು ಆದದ್ದು ಹೇಗೆ ಎಂದು ಕೆಲಸಗಾರರಲ್ಲೊಬ್ಬನನ್ನು ನಾನು ಕೇಳಿದೆ. ವ್ಯವಸ್ಥಾಪಕರು ಸ್ಟೇಡಿಯಂ ದುರಸ್ತಿಯ ಎಲ್ಲಾ ನಿರೀಕ್ಷೆಗಳನ್ನು ಬಹಳಮಟ್ಟಿಗೆ ಕಳೆದೇ ಕೊಂಡಿದ್ದರು, ಆದರೆ ಯೆಹೋವನ ಸಾಕ್ಷಿಗಳಿಗೆ ಅದನ್ನು ಬಾಡಿಗೆಗೆ ಕೊಡಲಾಯಿತು, ಅವರದನ್ನು ನವೀಕರಿಸಿದರು ಎಂದು ಅವನು ಹೇಳಿದನು.
“‘ಹೀಗೆ ಯಾರಿಂದ ನಾವು ಬಹಳಷ್ಟು ಕಲಿಯಬಲ್ಲೆವೋ ಆ ಜನರು ಇವರಾಗಿದ್ದಾರೆ. ಈ ವಾರ್ಡಿನಲ್ಲಿ ನಾವು ಇತರರ ವೀಕ್ಷಣೆಗಳಿಗೆ ಸೈರಣೆಯುಳ್ಳವರಾಗಿರಬೇಕೆಂದು ನಾನು ನೆನಸುತ್ತೇನೆ.’ ಅನಂತರ, ಕೆಲವೇ ದಿನಗಳಲ್ಲಿ ಶಸ್ತ್ರಕ್ರಿಯೆಯಾಗಲಿದ್ದ ಒಬ್ಬ ಸಾಕ್ಷಿಗೆ ತೋರಿಸುತ್ತಾ, ಅವರಂದದ್ದು: ‘ಈ ಮಹಿಳೆಯು ಯೆಹೋವನ ಸಾಕ್ಷಿಗಳಲ್ಲೊಬ್ಬಳು, ಅವಳಿಗೆ ರಕ್ತರಹಿತ ಶಸ್ತ್ರಕ್ರಿಯೆಯು ಆಗಲಿದೆ’.”
ಯೆಹೋವನ ಸಾಕ್ಷಿಗಳು ಅವರ ನಂಬಿಕೆಗಳನ್ನು ಇತರರ ಮೇಲೆ ಬಲಾತ್ಕರಿಸಲು ಪ್ರಯತ್ನಿಸುವುದಿಲ್ಲವಾದರೂ, ಅವರು ಸ್ವತಃ ಅಪೊಸ್ತಲರ ಮಾದರಿಯನ್ನು ಅನುಸರಿಸುತ್ತಾ, “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯ” ರಾಗುತ್ತಾರೆ. (ಅ. ಕೃತ್ಯಗಳು 5:29) ರಕ್ತಕ್ಕಾಗಿ ಗೌರವವೂ ಇದರಲ್ಲಿ ಸೇರಿದೆ. ಈ ವಿಷಯದಲ್ಲಿ ಅವರ ಧಾರ್ಮಿಕ ಮನವರಿಕೆಗಳನ್ನು ಇತರರು ಗೌರವಿಸುವಾಗ ಅವರದನ್ನುಗಣ್ಯಮಾಡುತ್ತಾರೆ.