ಯೆಹೋವನ ತಪ್ಪದ ಬೆಂಬಲಕ್ಕಾಗಿ ಉಪಕಾರ
ಶ್ಯಾರನ್ ಗ್ಯಾಸ್ಕಿನ್ಸ್ಳಿಂದ ಹೇಳಲ್ಪಟ್ಟ ಪ್ರಕಾರ
ಭೂಮಿಯ ಮೇಲೆ ಪರದೈಸ! ನಾನು, ಹುಲ್ಲುಗಾವಲಿನಲ್ಲಿ ಕುಣಿದಾಡುವುದನ್ನು, ಬಣ್ಣದ ಚಿಟ್ಟೆಗಳನ್ನು ಅಟಿಕ್ಟೊಂಡು ಹೋಗುವುದನ್ನು, ಸಿಂಹದ ಮರಿಗಳೊಂದಿಗೆ ಜಿಗಿದಾಡುವುದನ್ನು ಕಲ್ಪಿಸಿಕೊಂಡೆ. ಅದು ಬಹಳ ಒಳ್ಳೆಯದಾಗಿ ತೋರಿತು! ಆದರೆ ಸಂಶಯಗಳಿದ್ದವು. ಅದೆಷ್ಟು ಸಾರಿ ನನ್ನ ನಿರೀಕ್ಷೆಗಳು ನಿರಾಶೆಯಲ್ಲಿ ಕೊನೆಗೊಂಡಿದ್ದವು!
ನಾನು ನೆನಪಿಸ ಶಕ್ತಳಾಗುವಷ್ಟು ಕಾಲದಿಂದ, ಗಾಲಿಕುರ್ಚಿಯು ನನ್ನ ಎಡೆಬಿಡದ ಸಂಗಾತಿಯಾಗಿತ್ತು. ನನ್ನ ಹುಟ್ಟಿನಿಂದಲೇ, ಮಸ್ತಿಷ್ಕ ಲಕ್ವವು ಬಾಲ್ಯದ ಸಂತೋಷಗಳನ್ನು ನನ್ನಿಂದ ಅಪಹರಿಸಿತ್ತು. ಬೇರೆ ಮಕ್ಕಳು ಜಾರು ಮೆಟ್ಟುಗಳ ಮೇಲೆ ಮತ್ತು ಸೈಕಲ್ಗಳಲ್ಲಿ ನೆಗೆದಾಡುತ್ತಿದ್ದರು, ಆದರೆ ನಾನು ನಡೆಯಲೂ ಕೂಡ ಅಶಕ್ತಳಾಗಿ, ಒಬ್ಬಂಟಿಗಳಾಗಿ ಕೂಡ್ರುತ್ತಿದ್ದೆ. ಹೀಗೆ ನನ್ನ ತಾಯಿಯು ನನ್ನನ್ನು ಒಬ್ಬ ಭಕ್ತಿ ಚಿಕಿತ್ಸಕನಿಂದ ಇನ್ನೊಬ್ಬನ ಬಳಿಗೆ ಒಯ್ದಾಗ, ಒಂದು ಅದ್ಭುತಕ್ಕಾಗಿ ನಾವು ಯಥಾರ್ಥವಾಗಿ ನಿರೀಕ್ಷಿಸಿದೆವ್ದು. ಆದರೂ, ಪದೇ ಪದೇ, ಯಾವ ವಾಸಿಯೂ ನಡಿಯದೆ ನಾವು ಹೊರಟುಹೋಗುತ್ತಿದ್ದೆವು. ನನಗದು ನಿರಾಶಕರವಾಗಿತ್ತು ಆದರೆ ತಾಯಿಗೆ ಅದೆಷ್ಟು ದುಃಖಕರವಾಗಿತ್ತು!
ಒಂದು ನಿಜ ನಿರೀಕ್ಷೆಗಾಗಿ ಹಂಬಲಿಸುತ್ತಾ, ನನ್ನ ತಾಯಿಯು 1964 ರ ಪ್ರಾರಂಭದಲ್ಲಿ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅದ್ಯಯನವನ್ನು ಆರಂಭಿಸಿದರು. ಆಗ ನಾನು ಸುಮಾರು ಆರೂವರೆ ವಯಸ್ಸಿನವಳು.
ಈ ಭೂಮಿಯ ಮೇಲೆ ಒಮ್ಮೆ ಒಂದು ಸುಂದರವಾದ ಪ್ರಮೋದವನವಿತ್ತು ಎಂದು ತಿಳಿಯುವುದು ಆಶ್ಚರ್ಯಕರವಾಗಿತ್ತು. ವಿಷಾದಕರವಾಗಿ, ಮೊದಲನೆಯ ಮನುಷ್ಯ ಆದಾಮನು ಅದೆಲ್ಲವನ್ನು ಬಿಸಾಡಿಬಿಟ್ಟನು, ಆದರೆ ಅವನು ಒಮ್ಮೆ ದೇವರೊಂದಿಗೆ ಆನಂದಿಸಿದ್ದ ಆ ಆಪತ್ತೆಯನ್ನು ನಾನು ಅಪೇಕ್ಷಿಸಿದೆ. ದೇವರೊಂದಿಗೆ ಒಂದು ಸಂಬಂಧದಲ್ಲಿ ಆನಂದಿಸುವುದು ಹೇಗಿದ್ದಿರಬಹುದು? ಅಥವಾ ಅವನ ಸ್ವಂತ ಮಗನು ಭೂಮಿಯಲ್ಲಿ ನಡೆದಾಡಿದಾಗ ಜೀವಿಸುವುದು? ನನ್ನ ಹಗಲು ಕನಸುಗಳು ನನ್ನನ್ನು ಭವಿಷ್ಯದ ಪ್ರಮೋದವನಕ್ಕೂ ಕೊಂಡೊಯ್ಯುತ್ತಿದ್ದವು. ಆ ಬಾಲ್ಯ ಪ್ರಾಯದಿಂದಲೂ, ನಮಗೆ ಸತ್ಯವು ಸಿಕ್ಕಿದೆ ಎಂಬದು ನನಗೆ ಸ್ಪಷ್ಟವಾಗಿಗಿತ್ತು.
ಪ್ರಮೋದವನದ ನಸು ನೋಟಗಳು
ತಾಯಿಯು ಕುಟುಂಬವನ್ನು ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಕ್ಕೆ ಒಯ್ಯಲಾರಂಭಿಸಿದರು. ಅವರ ಕೂಟಗಳು ನಾವು ಚರ್ಚುಗಳಲ್ಲಿ ನೋಡಿದ್ದವುಗಳಿಗಿಂತ ಎಷ್ಟೋ ಬೇರೆಯಾಗಿದ್ದವು! ಜನರು ಮತ್ತು ಪರಿಸರಗಳು ನನ್ನ ಭಾವನೆಗಳನ್ನು ಆಳವಾಗಿ ಪ್ರೇರಿಸಿದವು.
ನಮ್ಮನ್ನು ರಾಜ್ಯ ಸಭಾಗೃಹಕ್ಕೆ ಒಯ್ಯುವುದು ನಮ್ಮ ತಾಯಿಗೆ ಒಂದು ಉಗ್ರ ಪರೀಕೆಯ್ಷಾಗಿತ್ತು. ನಾನಲ್ಲದೆ, ಇನ್ನು ಮೂವರು ಚಿಕ್ಕಮಕ್ಕಳು ಇದ್ದರು, ಮತ್ತು ನಮಗೆ ಕಾರು ಇರಲಿಲ್ಲ. ಅವರಿಗೆ ಸಾಧ್ಯವಾಗಿದ್ದಾಗ ನಾವು ಟ್ಯಾಕ್ಸಿಯಲ್ಲಿ ಹೋಗುತ್ತಿದ್ದೆವು. ಒಂದು ಆದಿತ್ಯವಾರ ಅವರು ಎಷ್ಟು ಕಷ್ಟದಿಂದ ಒದ್ದಾಡಿದರೆಂದು ನನಗೆ ಈಗಲೂ ನೆನಪಿದೆ. ಟ್ಯಾಕ್ಸಿ ಕಾಣಸಿಗಲಿಲ್ಲ. ಅನಂತರ ಥಟ್ಟನೆ ಮತ್ತು ಅನಿರೀಕ್ಷಿತವಾಗಿ ಒಬ್ಬ ಮನುಷ್ಯನು ತನ್ನ ಟ್ರಕ್ ನಡಿಸಿಕೊಂಡು ಬಂದನು ಮತ್ತು ನಮಗೆ ಸವಾರಿ ಕೊಟ್ಟನು. ಕೂಟಕ್ಕೆ ನಮಗೆ ವಿಳಂಬವಾಯಿತು, ಆದರೆ ನಾವಲ್ಲಿಗೆ ಮುಟ್ಟಿದೆವು. ಯೆಹೋವನಿಗೆಷ್ಟು ಕೃತಜ್ಞರಾಗಿದ್ದೆವು ನಾವು!
ಸ್ವಲ್ಪ ಸಮಯದೊಳಗೆ, ಕಾರುಗಳಿದ್ದ ನಮ್ಮ ಪ್ರಿಯ ಆತ್ಮಿಕ ಸಹೋದರರು ಮತ್ತು ಸಹೋದರಿಯರು ನಮ್ಮನ್ನು ಕೂಟಗಳಿಗೆ ತರಲು ಪ್ರೀತಿಯಿಂದ ಸರದಿ ತಕ್ಕೊಂಡರು. ನಾವು ನಿಜವಾಗಿ ಅಸೌಖ್ಯವಿದ್ದ ಹೊರತು ಕೂಟಗಳನ್ನೆಂದೂ ತಪ್ಪಬಾರದೆಂಬ ತಾಯಿಯ ಉತ್ತೇಜನವು, ‘ಸಭೆಯಾಗಿ ಕೂಡಿಕೊಳ್ಳು’ ವದರ ಮಹತ್ವವನ್ನು ನನ್ನ ಎಳೆಯ ಮನಸ್ಸಿನ ಮೇಲೆ ಅಚೊತ್ಚಿತ್ತು. (ಇಬ್ರಿಯ 10:24, 25) ತಾನೇನನ್ನು ಕಲಿತಳೋ ಅದರಿಂದ ಪ್ರೇರೇಪಿತರಾಗಿ, ನನ್ನ ತಾಯಿಯು ತನ್ನ ಜೀವವನ್ನು ಯೆಹೋವನಿಗೆ ಸಮರ್ಪಿಸಿಕೊಂಡರು ಮತ್ತು 1965 ರಲ್ಲಿ ದೀಕ್ಷಾಸ್ನಾನ ಪಡಕೊಂಡರು.
ಅಷ್ಟರೊಳಗೆ ನಾನು ಕೂಟಗಳನ್ನು ಅಧಿಕ ಪೂರ್ಣವಾಗಿ ಗಣ್ಯಮಾಡಲು ಸಾಕಷ್ಟು ದೊಡ್ಡವಳಾಗಿದ್ದೆನು. ನ್ಯೂ ಯಾರ್ಕ್, ಬ್ರೂಕ್ಲಿನ್ನ ಸೈಪ್ರೆಸ್ ಹಿಲ್ ಸಭೆಯಲ್ಲಿ ಯೂರೋಪಿಯನರು, ಕರಿಯರು, ಸ್ಪೆಯ್ನಿನವರು, ಮತ್ತು ಇತರರು ಒತ್ತಾಗಿ ಆರಾಧನೆ ನಡಿಸುತ್ತಿದ್ದರು. ದೇವಭೀರು ಜನರು ಅಂಥ ನಿಜ ಬಾಂಧವ್ಯದಲ್ಲಿ ಜೀವಿಸುವುದು ಅತಿ ಯುಕ್ತವಾಗಿ ಕಂಡಿತು.—ಕೀರ್ತನೆ 133:1.
ಕೂಟಗಳಿಗಾಗಿ ತಯಾರಿಸುವುದು ಹೇಗೆಂದು ತಾಯಿ ನನಗೆ ಕಲಿಸಿಕೊಟ್ಟರು. ಮಾನಸಿಕವಾಗಿ ಇದೇನೂ ಸಮಸ್ಯೆಯಾಗಿರಲಿಲ್ಲ, ಆದರೆ ಸಮಸ್ಯೆಯು ಶಾರೀರಿಕವಾದದ್ದಾಗಿತ್ತು. ಮಸ್ತಿಷ್ಕ ಲಕ್ವ ಸಾಮಾನ್ಯ ಕೆಲಸಗಳನ್ನು ದೊಡ್ಡ ಯೋಜನೆಗಳನ್ನಾಗಿ ಮಾರ್ಪಡಿಸುತ್ತದೆ. ನಮ್ಮ ಬೈಬಲ್ ಸಾಹಿತ್ಯದಲ್ಲಿ ಉತ್ತರಗಳನ್ನು ಗುರುತಿಸುವುದಕ್ಕಾಗಿ ನೇರವಾದ ಅಡಿಗೆರೆ ಹಾಕುವುದು, ಆಗ ಮತ್ತು ಈಗಲೂ, ನನಗೆ ಅಸಾಧ್ಯ. ಹೇಗೂ ಅಭ್ಯಾಸದಿಂದಾಗಿ ನನ್ನ ಅಡಿಗೆರೆಹಾಕುವಿಕೆ ಪ್ರಗತಿಹೊಂದಿತು.
ವಿಷಯಗಳನ್ನು ನುಡಿಯಲಿಕ್ಕಾಗಿ ನನ್ನ ಮನಸ್ಸು ತುಂಬಿತುಳುಕುತ್ತಿತ್ತು. ಆದರೆ ಅವು ನನ್ನ ಬಾಯಿಂದ ಹೊರಗೆ ಬರುವಾಗ, ಶಬ್ದಗಳು ಕಲಬೆರಕೆಯಾಗುತ್ತಿದ್ದವು. ನನ್ನ ಸ್ನಾಯುಗಳು ಬಿಗಿದುಕೊಳ್ಳದಂತೆ ಸಡಿಲಿಸುವುದು ಅತ್ಯಾವಶ್ಯಕವಾಗಿತ್ತು. ಪ್ರತಿಯೊಂದು ಶಬ್ದವನ್ನು ಸಾಧ್ಯವಾದಷ್ಟು ಸ್ಪಷ್ಟವಾಗಿಗಿ ಉಚ್ಚಾರಮಾಡುವುದರ ಮೇಲೂ ನನಗೆ ಏಕಾಗ್ರತೆಯನ್ನಿಡಲಿಕ್ಕಿತ್ತು. ನನ್ನ ಉತ್ತರವು ಬರಬೇಕಾದ ರೀತಿಯಲ್ಲಿ ಹೊರಬರದಿದ್ದರೆ ಅಥವಾ ನನ್ನ ಮಾತುಗಳು ಜನರಿಗೆ ಅರ್ಥವಾಗಲಿಲವ್ಲೆಂದು ನನಗೆ ತಿಳಿದರೆ, ಆಶಾಭಂಗವು ನನ್ನೊಡಲನ್ನು ತುಂಬುತ್ತಿತ್ತು. ಆದರೆ ಒಮ್ಮೆ ನನ್ನನ್ನು ತಿಳುಕೊಂಡಾಗ, ಸಭೆಯ ಸಹೋದರ ಮತ್ತು ಸಹೋದರಿಯರು ನನ್ನ ಮಾತನ್ನು ಗ್ರಹಿಸಿಕೊಳ್ಳಲು ಹೆಚ್ಚು ಶಕ್ತರಾದರು. ಹೇಗೂ ಈ ಸಮಸ್ಯೆಯೊಂದಿಗೆ ನನಗಿನ್ನೂ ಸುದಿನಗಳೂ ದುರ್ದಿನಗಳೂ ಇದ್ದೇ ಇವೆ.
ಕಲಕಿಸುವ ಆರು ತಿಂಗಳುಗಳು
ಎಂಟು ವರ್ಷ ಪ್ರಾಯದಲ್ಲಿ, ಈ ದಿನದ ತನಕವೂ ನನ್ನನ್ನು ಬಾಧಿಸಿರುವ ಒಂದು ಆರು-ತಿಂಗಳ ಅನುಭವವು ನನಗಾಯಿತು. ನನಗೆ ಈವಾಗಲೇ ನೀಡಲ್ಪಟ್ಟ ಎಲ್ಲಾ ಶಾರೀರಿಕ, ಉದ್ಯೋಗಕ್ಕೆ ಅನುಗತವಾದ, ಮತ್ತು ವಾಕ್ ಚಿಕಿತ್ಸೆಯ ಮಧ್ಯೆಯೂ, ಡಾಕ್ಟರರು ನನ್ನನ್ನು ನ್ಯೂ ಯಾರ್ಕ್ನ ವೆಸ್ಟ್ ಹೇವರ್ಸ್ಟ್ರಾದಲ್ಲಿನ ಒಂದು ಮರುನಿಯೋಜನೆಯ ಆಸ್ಪತ್ರೆಗೆ ಕಳುಹಿಸಿದರು. ನನ್ನ ತಾಯಿ ಮತ್ತು ನಾನು ತುಂಬಾ ದುಃಖಿತರಾದೆವು. ವರ್ಷಗಳ ಹಿಂದೆ ಡಾಕ್ಟರರು ನನ್ನನ್ನು ಮಾನಸಿಕ ರೋಗಿಯಾಗಿ ತಪ್ಪಾಗಿ ರೋಗ ನಿರ್ಣಯ ಮಾಡಿದಾಗ, ನನ್ನನ್ನೆಂದೂ ಹುಚ್ಚಾಸ್ಪತ್ರೆಗೆ ಸೇರಿಸುವುದಿಲ್ಲವೆಂದು ನನ್ನ ತಾಯಿ ಅವರಿಗೆ ಹೇಳಿದ್ದರು. ಆದುದರಿಂದ ಒಂದು ತಾತ್ಕಾಲಿಕ ಅಗಲಿಕೆಯು ಸಹ ಅವರಿಗೆ ಕಷ್ಟಕರವಾಗಿತ್ತು. ಆದರೂ, ಅವರಿಂದ ಮತ್ತು ನನ್ನ ತಂದೆಯಿಂದ ಸ್ವತಂತ್ರವಾಗಿ ಒಂದು ಫಲದಾಯಕ ಜೀವನ ನಾನು ನಡಿಸಬೇಕಾದರೆ, ಆದಷ್ಟು ಹೆಚ್ಚು ಶಾರೀರಿಕ ಸ್ವಾವಲಂಬನೆಯ ಅಗತ್ಯವನ್ನು ಅವರು ಕಂಡರು.
ಸೌಕರ್ಯವು ಉತ್ತಮವಿತ್ತು, ಆದರೆ ನನಗೆ ತ್ಯಜಿಸಿಬಿಡಲ್ಪಟ್ಟ ಅನಿಸಿಕೆಯಾಯಿತು. ಮರುಕದ ಕೇಳಿಗಳು ಮತ್ತು ಕೋಪೋದ್ರೇಕಗಳು ಆ ಸ್ಥಳದ ಬಗ್ಗೆ ನನ್ನ ಅನಿಸಿಕೆಗಳನ್ನು ಸೃಷ್ಟಗೊಳಿಸಿದವು. ವಿಶೇಷವಾಗಿ ನನ್ನ ತಾಯಿ ತನ್ನ ಐದನೆಯ ಮಗುವಿನ ಗರ್ಭಿಣಿಯಾಗಿದದ್ದರಿಂದ, ನನ್ನನ್ನು ಸಂದರ್ಶಿಸಲು ನನ್ನ ಹೆತ್ತವರು ಮೂರು ತಾಸುಗಳ ಪ್ರಯಾಣ ಮಾಡಿ ಎಲ್ಲೋ ಒಮ್ಮೊಮ್ಮೆ ಬರಶಕ್ತರಾಗಿದ್ದರು. ಅವರು ಬಿಟ್ಟು ಹೊರಡಬೇಕಾದಾಗ, ಅದು ನನ್ನನ್ನೆಷ್ಟು ಕಲಕಿಸುತ್ತಿತ್ತೆಂದರೆ ಸಂದರ್ಶನಗಳು ಕಡಿಮೆಯಾಗಬೇಕೆಂದು ಡಾಕ್ಟರರು ಹೇಳಿದರು. ಕೇವಲ ಎರಡೇ ಸಲ ನನ್ನನ್ನು ಮನೆಗೆ ಹೋಗಲು ಬಿಡಲಾಗಿತ್ತು.
ಬಿಗಿಪಟ್ಟಿಗಳ ಮತ್ತು ಸೀಸ-ಭಾರದ ಕಂಕುಳುಕೋಲುಗಳ ನೆರವಿನಿಂದ ನಡೆಯಲು ಚಿಕಿತ್ಸಕರು ನನಗೆ ಕಲಿಸಿದರು. ಅವು ಅತಿರೇಕ ಭಾರದ್ದಾಗಿ ತೋರಿಬಂದವು. ಆದರೆ, ಆ ಭಾರವು ನನ್ನ ಸಮತೂಕವನ್ನು ಕಾಪಾಡಲು ಸಹಾಯ ಮಾಡಿತು ಮತ್ತು ಕೆಳಗೆ ಬೀಳುವುದರಿಂದ ನನ್ನನ್ನು ತಡೆಯಿತು. ಬಿಗಿಪಟ್ಟಿಗಳಿಲ್ಲದೆ ಒಂಟಿಯಾಗಿ ನಡೆಯುವೆಡೆಗೆ ಇದು ಮೊದಲ ಹೆಜ್ಜೆಯಾಗಿತ್ತು.
ಆಹಾರವನ್ನು ಹೋಳುಗಳಾಗಿ ಮಾಡುವುದು, ಗುಂಡಿಗಳನ್ನು ಸಿಕ್ಕಿಸುವುದು—ಬೆರಳುಗಳ ಉಪಯೋಗವನ್ನು ಆವಶ್ಯಪಡಿಸುವ ಯಾವುದೇ ಕೆಲಸವು—ನನಗೆ ಅಶಕ್ಯವಾಗಿರದಿದ್ದರೂ ಕಷ್ಟಕರವಾಗಿತ್ತು. ಆದರೂ ಸ್ವಲ್ಪ ಮಟ್ಟಿಗೆ ನನ್ನನ್ನು ಉಣಿಸಿಕೊಳ್ಳುವ ಮತ್ತು ಉಡಿಸಿಕೊಳ್ಳುವ ವಿಧಾನವನ್ನು ನಾನು ಕಲಿತೆ. ಇದು ಅನಂತರ ದೇವರಿಗೆ ನನ್ನ ಸೇವೆಯಲ್ಲಿ ಸಹಾಯಮಾಡಿತು.
ನನ್ನ ತರಬೇತಿ ಮುಗಿದಾಗ, ನಾನು ಪುನಃ ಮನೆ ಸೇರಿದೆ. ನನ್ನ ಹೊಸ ಕೌಶಲ್ಯಗಳನ್ನು ಬಳಸುತ್ತಾ ಕೆಲಸಕ್ಕಿಳಿಯುವಂತೆ ತಾಯಿಯು ಏರ್ಪಡಿಸಿದರು. ಹಾಗೆ ಮಾಡುವುದು ಒಂದು ಭಾವನಾತ್ಮಕ ಹೋರಾಟವಾಗಿತ್ತು, ಯಾಕಂದರೆ ನನಗಾಗಿ ವಿಷಯಗಳನ್ನು ನಾನೇ ಮಾಡಲು ಬಯಸಿದ್ದೆನಾದರೂ, ಅವನ್ನು ಪೂರೈಸುವುದು ಮಾತ್ರ ಎದೆಗುಂದಿಸುವಂಥದ್ದೂ, ಸಮಯ-ವ್ಯಯಿಸುವಂಥದ್ದೂ, ಮತ್ತು ಬಳಲಿಸುವಂಥದ್ದೂ ಆಗಿತ್ತು. ಕೂಟಗಳಿಗಾಗಿ ನನ್ನನ್ನು ಉಡಿಸಿಕೊಳ್ಳುವುದೇ ಎರಡು-ತಾಸಿನ ಒಂದು ಯೋಜನೆಯಾಗಿತ್ತು!
ರಾಜ್ಯ ಸಭಾಗೃಹದಿಂದ ನೇರವಾಗಿ ಬೀದಿಯ ಆಚೆ ಕಡೆಗೆ ನಾವು ಮನೆ ಬದಲಾಯಿಸಿದಾಗ, ಕಾರ್ಯತಃ ನಾನಾಗಿಯೇ ನಡೆದುಹೋದೆನು. ಇದೇನೂ ಚಿಕ್ಕ ವಿಜಯವಾಗಿರಲಿಲ್ಲ!
ನನ್ನ ಜೀವನದ ಅತಿ ಸಂತೋಷದ ದಿನ
ಕುಟುಂಬಕ್ಕೆ ಒಂದು ಸಮತೂಕದ ಆತ್ಮಿಕ ಪಥ್ಯವು ಇರುವಂತೆ ನನ್ನ ತಾಯಿ ನಿಶ್ಚಯ ಮಾಡಿಕೊಂಡಿದ್ದರು. ಅವರು ನನ್ನೊಂದಿಗೆ ಅಭ್ಯಾಸ ಮಾಡಿದರು ಮತ್ತು ನಮ್ಮ ಪತ್ರಿಕೆಗಳಾದ ಕಾವಲಿನಬುರುಜು ಮತ್ತು ಎಚ್ಚರ! ದ ಪ್ರತಿಯೊಂದು ಸಂಚಿಕೆಯನ್ನು ನಾನು ಓದುವಂತೆ ಅಪೇಕ್ಷಿಸಿದರು. ತಯಾರಿಸಲಿಕ್ಕೆ ಮತ್ತು ಹಾಜರಾಗಲಿಕ್ಕಾಗಿ ಕೂಟಗಳಿದ್ದವು. ಈ ಜ್ಞಾನವನ್ನು ನನ್ನ ಮನಸ್ಸು ಮತ್ತು ಹೃದಯವು ಆತುರದಿಂದ ಹೀರಿಕೊಂಡಿತ್ತಾದರೂ, ನನ್ನ ಜೀವವನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುವ ಮತ್ತು ಇದನ್ನು ನೀರಿನ ದೀಕ್ಷಾಸ್ನಾನದಿಂದ ಸೂಚಿಸುವ ಸಂಬಂಧದಲ್ಲಿ ಗಂಭೀರ ಯೋಚನೆಗಳು ಹಿನ್ನೆಲೆಯಲ್ಲಿದ್ದವು. ನನ್ನ ಅಶಕ್ತತೆಯ ಮಧ್ಯೆಯೂ, ದೇವರು ಆತ್ಮಿಕವಾಗಿ ನನಗೆ ನಾನೇ ಜವಾಬ್ದಾರಳಾಗಿರುವಂತೆ ಮಾಡಿದ್ದಾನೆಂದು ಕಾಣುವಂತೆ ತಾಯಿ ನನಗೆ ಸಹಾಯ ಮಾಡಿದರು. ಆಕೆಯ ಅರ್ಹತೆಗಳ ಮೇಲೆ ನಾನು ಹೊಸ ಲೋಕವನ್ನು ಪ್ರವೇಶಿಸಲು, ಪೂರ್ಣವಾಗಿ ಅವಳ ಮೇಲೆ ಆತುಕೊಂಡು ಹೊಸ ಲೋಕದೊಳಗೆ ಪಾರಾಗಲು ಅಪೇಕ್ಷಿಸ ಸಾಧ್ಯವಿರಲಿಲ್ಲ.
ನಾನು ದೇವರನ್ನು ಪ್ರೀತಿಸಿದೆನು, ಆದರೆ ಈ ಪರಿಸ್ಥಿತಿಯು ನನ್ನನ್ನು ಇತರರಿಂದ ಬೇರೆಯಾಗಿ ಪ್ರತ್ಯೇಕಿಸಿತ್ತು—ಹದಿಹರೆಯದ ಒಬ್ಬಳಿಗೆ ಇದು ವೇದನಾಮಯ ವಾಸ್ತವಿಕತೆಯು. ನನ್ನ ಇತಿಮಿತಿಗಳನ್ನು ಸ್ವೀಕರಿಸುವುದು ಅತಿ ಕಷ್ಟಕರವಾಗಿತ್ತು. ಆಗಿಂದಾಗ್ಯೆ ಕ್ರೋಧವು ನನ್ನನ್ನು ಸುತ್ತುವರಿಯುತ್ತಿತ್ತು. ಮತ್ತು ಇದನ್ನು ದೀಕ್ಷಾಸ್ನಾನಕ್ಕೆ ಮುಂಚೆ ಹತೋಟಿಯಲ್ಲಿಡಬೇಕಾಗಿತ್ತು. (ಗಲಾತ್ಯ 5:19, 20) ಮತ್ತು ಯೆಹೋವನಿಗೆ ನನ್ನ ಸಮರ್ಪಣೆಯನ್ನು ನನಗೆ ಪೂರೈಸಲು ಸಾಧ್ಯವಾಗದೆ ಹೋದಲ್ಲಿ ಆಗೇನು?
ನನ್ನ ತಾಯಿಯ ವಿನಂತಿಯ ಮೇರೆಗೆ, ಒಬ್ಬ ಸಭಾ ಹಿರಿಯರು ನನ್ನೊಂದಿಗೆ ಮಾತನಾಡಿದರು. ಇಸ್ರಾಯೇಲ್ಯರಿಗೆ ಪ್ರವಾದಿ ಎಲೀಯನು ಹಾಕಿದ ಪ್ರಶ್ನೆಯನ್ನು ಅವರು ಉದಾಹರಿಸಿದರು: “ನೀವು ಎಷ್ಟರ ವರೆಗೆ ಎರಡು ಮನಸ್ಸುಳ್ಳವರಾಗಿರುವಿರಿ?” (1 ಅರಸು 18:21) ನನ್ನ ಅನಿರ್ಧಾರವನ್ನು ಯೆಹೋವನು ಮೆಚ್ಚಿರಲಿಲ್ಲವೆಂಬದು ಸ್ಫುಟ.
ಆತ್ಮಿಕವಾಗಿ ನಾನು ಎಚ್ಚರಗೊಂಡೆನು ಮತ್ತು ಯೆಹೋವನ ಸಹಾಯಕ್ಕಾಗಿ ಮತ್ತು ಆತನಿಗೆ ನನ್ನ ಜೀವಿತವನ್ನು ಸಮರ್ಪಿಸುವ ನಿರ್ಧಾರಕ್ಕಾಗಿ ಮನಃಪೂರ್ವಕವಾಗಿ ಪ್ರಾರ್ಥಿಸಿದೆನು. ಸಭೆಯ ಒಬ್ಬ ಸಹೋದರಿಯು ನನ್ನೊಂದಿಗೆ ಅಭ್ಯಾಸ ಮಾಡಿದಳು. ಅವಳು ನನಗಿಂತ ಚಿಕ್ಕವಳಾಗಿದ್ದಳು ಮತ್ತು ಬಾಲ್ಯದಲ್ಲಿಯೇ ತನ್ನ ತಾಯಿಯನ್ನು ಕಳೆದುಕೊಂಡಿದ್ದಳು. ಆದರೂ, ಅವಳು ತೀರ ಚಿಕ್ಕವಳಾಗಿರುವಾಗಲೇ ದೇವರಿಗೆ ಸಮರ್ಪಣೆಯನ್ನು ಮಾಡಿದ್ದಳು.
ಹದಿನೇಳನೆಯ ವಯಸ್ಸಿನಲ್ಲಿ, ನಾನು ನಿರ್ಧಾರವನ್ನು ಮಾಡಿದೆನು. ಯೆಹೋವನನ್ನು ನನ್ನಿಂದಾದಷ್ಟು ಉತ್ತಮವಾಗಿ ಸೇವಿಸಲು ಬಯಸಿದೆನು. ನಾನು ದೀಕ್ಷಾಸ್ನಾನವಾದ—ಆಗಸ್ಟ್ 9, 1974—ನನ್ನ ಜೀವನದಲ್ಲಿ ಅತಿ ಸಂತೋಷದ ದಿನವಾಗಿತ್ತು.
ಶುಶ್ರೂಷೆಯಲ್ಲಿ ಸಂತೋಷ
ಶುಶ್ರೂಷೆಯಲ್ಲಿ ಭಾಗವಹಿಸುವಿಕೆಯು ಕೆಲವು ಬೆಟ್ಟದಂಥ ಅಡಿಗ್ಡಳನ್ನು ತಂದಿತು. ಮಹತ್ತಾದ ಪಂಥಾಹ್ವಾನವು ನನ್ನನ್ನು ಜನರು ಅರ್ಥೈಸುವಂತೆ ಮಾಡುವುದೇ. ನಾನು ಶಕ್ಯವಾದಷ್ಟು ಸ್ಪಷ್ಟವಾಗಿಗಿ ಮಾತಾಡುತ್ತಿದ್ದೆ. ಅನಂತರ, ಎಲ್ಲಿ ಆವಶ್ಯಕವೋ ಅಲ್ಲಿ, ನನ್ನ ಕ್ಷೇತ್ರ ಸೇವೆಯ ಜೊತೆಗಾರ್ತಿಯು ನನ್ನ ಮಾತುಗಳನ್ನು ಮನೆಯವನಿಗೆ ಪುನರುಚ್ಚರಿಸುತ್ತಿದ್ದಳು. ಕೆಲವರು ನನ್ನನ್ನು ಸಾಕ್ಷಿಗಳಿಂದ ಸ್ವಪ್ರಯೇಜನಕ್ಕಾಗಿ ಬಳಸಲ್ಪಡುವ ಬಲಿಯಾಗಿ ವೀಕ್ಷಿಸುತ್ತಾ, ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಆದರೆ ಸಾರುವಿಕೆಯು ನನ್ನ ಹಕ್ಕಾಗಿದೆ, ನನ್ನ ಹೃದಯ ಪ್ರೇರಿತ ಅಪೇಕ್ಷೆಯಾಗಿದೆ.
ಮನೆಯಿಂದ ಮನೆಗೆ ಒಂದು ವಠಾರವನ್ನು ನಡೆಯುವುದು ಕೂಡ ಪೂರಾ ರೀತಿಯಲ್ಲಿ ಬಳಲಿಸುವುದಾಗಿರಬಲ್ಲದು. ನಮ್ಮ ಸಾಕ್ಷಿಕಾರ್ಯದ ಟೆರಿಟೊರಿಯಲ್ಲಿ ಅನೇಕ ಮನೆಗಳಿಗೆ ಮಾಳಿಗೆಗಳಿದ್ದು, ನನ್ನ ನಿಲುಕಿಗೆ ಅವನ್ನು ಎಟಕದ್ದಾಗಿ ಮಾಡಿವೆ. ಚಳಿಗಾಲದಲ್ಲಿ, ಹಿಮಮಯ ಬೀದಿಗಳು ಮನೆ-ಮನೆಯ ಸೇವೆಯನ್ನು ನನಗೆ ಕಾರ್ಯತಃ ಅಶಕ್ಯವನ್ನಾಗಿ ಮಾಡುತ್ತವೆ. (ಅ. ಕೃತ್ಯಗಳು 20:20) ಆದರೂ, ನನ್ನ ಆತ್ಮಿಕ ಸಹೋದರರು ನನಗೆ ಮಹತ್ತರವಾದ ಸಹಾಯವನ್ನು ಮಾಡಿರುತ್ತಾರೆ, ಮತ್ತು ಯೆಹೋವನು ನನ್ನನ್ನೀಗ ಒಂದು ಸ್ವಯಂ-ಚಲಿತ ಗಾಲಿಕುರ್ಚಿಯನ್ನಿತ್ತು ಆಶೀರ್ವದಿಸಿದ್ದಾನೆ, ಇದು ನನ್ನ ಶುಶ್ರೂಷೆಯನ್ನು ಹೆಚ್ಚು ಸುಲಭದ್ದಾಗಿ ಮಾಡಿದೆ.
ಸಮಯಾನಂತರ ಅಂಚೆಯ ಮೂಲಕ ಸಾಕ್ಷಿಕೊಡುವುದನ್ನು ನಾನು ಆರಂಭಿಸಿದೆ. ಪತ್ರಗಳನ್ನು ಕೈಯಿಂದ ಬರೆಯುವುದು ಫಲವಿಲ್ಲದ್ದಾಗಿತ್ತು, ಯಾಕಂದರೆ ನನ್ನ ಕೈಬರಹದ ಶೈಲಿ ಹೆಚ್ಚಿನ ಜನರಿಗೆ ಓದಲಾಗದ್ದಾಗಿದೆ. ಆದುದರಿಂದ ಇಲೆಕ್ಟ್ರಿಕ್ ಟೈಪ್ರೈಟರ್ ನನ್ನ ಲಿಪಿಕಾರನಾಗಿ ಪರಿಣಮಿಸಿತು. ಕೈ-ಸುಸಂಘಟಿತತೆಯ ನ್ಯೂನತೆಯಿಂದಾಗಿ ನನ್ನ ಟೈಪಿಂಗ್ ಅತಿ ನಿಧಾನವಿದೆ. ಸುಮಾರು ಅರ್ಧ ಸಮಯದ ತನಕ ಟೈಪ್ರೈಟರ್ನ ಒಂದಕ್ಷರಕ್ಕೆ ನೋಟವಿಡುತ್ತೇನೆ ಮತ್ತು ಇನ್ನೊಂದು ಬಿಲ್ಲೆಯನ್ನು ಹೊಡೆಯುತ್ತೇನೆ. ಕೇವಲ ಒಂದು ಪುಟವನ್ನು ಟೈಪ್ ಮಾಡಲು ಒಂದು ತಾಸು ಅಥವಾ ಹೆಚ್ಚು ತಗಲಬಹುದು.
ತಾಕತ್ತಿನ ಕೊರತೆಯಿರುವುದಾದರೂ, ಆಗಿಂದಾಗ್ಯೆಯಾದರೂ ನಾನು ಸಹಾಯಕ ಪಯನೀಯರಳಾಗಿ ಸೇವೆಮಾಡುತ್ತಾ, ಪ್ರತಿ ತಿಂಗಳು 60 ಅಥವಾ ಹೆಚ್ಚು ತಾಸುಗಳನ್ನು ಶುಶ್ರೂಷೆಗೆ ಮೀಸಲಾಗಿಡುತ್ತೇನೆ. ಇದು ಒಳ್ಳೇ ಕಾಲತಖ್ತೆ, ಹೆಚ್ಚು ಪರಿಶ್ರಮ, ಮತ್ತು ಜತೆ ವಿಶ್ವಾಸಿಗಳ ಬೆಂಬಲವನ್ನು ಕೇಳಿಕೊಳ್ಳುತ್ತದೆ. ಅವರ ಪಯನೀಯರಾತ್ಮವು ನನ್ನನ್ನು ಉತ್ತೇಜಿಸುತ್ತದೆ. ತಾಯಿಯು ಸಹ ಸಮಸ್ಯೆಗಳನ್ನು, ಅಸೌಖ್ಯವನ್ನು, ಮತ್ತು ಧಾರ್ಮಿಕವಾಗಿ ವಿಭಜಿತವಾದ ಮನೆವಾರ್ತೆಯಲ್ಲಿ ಏಳು ಮಕ್ಕಳನ್ನು ಬೆಳೆಸುವ ಪಂಥಾಹ್ವಾನವನ್ನು ಎದುರಿಸುತ್ತಾ, ಕ್ರಮದ ಮತ್ತು ಸಹಾಯಕ ಪಯನೀಯರ ಸೇವೆ ಮಾಡುತ್ತಾ ಒಂದು ಒಳ್ಳೇ ಮಾದರಿಯನ್ನು ಇಟ್ಟಿರುತ್ತಾರೆ.
ನಾನು ಒಬ್ಬಳಾಗಿಯೇ
ನಾನು 24 ನೆಯ ವಯಸ್ಸಿನಲ್ಲಿ ಸ್ವತಂತ್ರವಾಗಿ ಹೊರಗೆ ಮನೆಮಾಡಲು ನಿರ್ಧರಿಸಿದೆ. ಬ್ರೂಕ್ಲಿನ್ನ ಬೆನಸನ್ಹರ್ಸ್ಟ್ ವಿಭಾಗಕ್ಕೆ ನನ್ನ ಸ್ಥಳ ಬದಲಾಯಿಸುವಿಕೆಯು ಆಶೀರ್ವಾದವಾಗಿ ಪರಿಣಮಿಸಿತು. ಮಾರ್ಲ್ಬರೊ ಸಭೆಯು ಒಂದು ಆಪ್ತ ಸಂಬಂಧದ ಕುಟುಂಬದಂತಿತ್ತು. ಅವರೊಂದಿಗಿರುವುದು ಅದೆಷ್ಟು ನಂಬಿಕೆ-ವರ್ಧಕವಾಗಿತ್ತು! ಸಭೆಯಲ್ಲಿ ಕೇವಲ ಎರಡು ಅಥವಾ ಮೂರು ಕಾರುಗಳು ದೊರೆಯುತ್ತಿದ್ದರೂ ನನ್ನ ಆತ್ಮಿಕ ಸಹೋದರರು ನನ್ನನ್ನು ಎಲ್ಲಾ ಕೂಟಗಳಿಗೆ ಒಯ್ದರು. ಆದರೂ ನಾನಲ್ಲಿ ಹೆಚ್ಚು ಸಮಯ ವಾಸಿಸಲಿಲ್ಲ.
ಸಂಪೂರ್ಣ ಸೋಲಿನ ಅನಿಸಿಕೆಯಿಂದ, ನಾನು ನನ್ನ ಕುಟುಂಬಕ್ಕೆ ಹಿಂತಿರುಗಿದೆ ಮತ್ತು ಮೂರು-ವರ್ಷ ಕಾಲಾವಧಿಯ ಆಳವಾದ ಖಿನ್ನತೆಯಲ್ಲಿ ಮುಳುಗಿಬಿಟ್ಟೆ. ಕೋಪೋದ್ರೇಕಗಳು ಮರಳಿಬಂದವು. ಅನಂತರ ಆತ್ಮಹತ್ಯೆಯ ಯೋಚನೆಗಳು ಬಂದವು ಮತ್ತು ಅದನ್ನು ಗೈಯಲು ಹಲವಾರು ಪ್ರಯತ್ನಗಳಾದವು. ಮರಣವು ಎಡೆಬಿಡದ ಮತ್ತು ಭಯಪಡಿಸುವ ಪ್ರತೀಕ್ಷೆಯಾಗಿತ್ತು. ಆದರೆ ನಾನು ದೇವರ ಮೇಲೆ ಆತುಕೊಂಡೆ ಮತ್ತು ಆತನ ಜೀವದ ವರದಾನಕ್ಕಾಗಿ ಗಣ್ಯತೆಯನ್ನು ತೋರಿಸಲು ವಚನಕೊಟ್ಟೆ. ಹಿರಿಯರಿಂದ ಆದರಣೆ ಮತ್ತು ಬುದ್ಧಿವಾದವು ಸಿಕ್ಕಿತು. ಇದು, ಮತ್ತು ಜತೆಯಲ್ಲಿ ಪ್ರಾರ್ಥನೆ, ವೈಯಕ್ತಿಕ ಅಭ್ಯಾಸ, ನನ್ನ ಕುಟುಂಬದಿಂದ ತೋರಿಸಲ್ಪಟ್ಟ ತಾಳ್ಮೆ, ಮತ್ತು ಸ್ವಲ್ಪ ಕಸಬುದಾರ ಸಹಾಯವು ನನ್ನ ಯೋಚನೆಯನ್ನು ನೇರಗೊಳಿಸಿತು.
ಕಾವಲಿನಬುರುಜು ಪತ್ರಿಕೆಯ ಮೂಲಕ ತೀವ್ರ ಖಿನ್ನತೆಯ ಕುರಿತಾದ ಒಳನೋಟವನ್ನು ಯೆಹೋವನು ಮಮತೆಯಿಂದ ಒದಗಿಸಿದನು. ಹೌದು, ಆತನು ತನ್ನ ಜನರೆಡೆಗೆ ಲಕ್ಷ್ಯಕೊಡುತ್ತಾನೆ ಮತ್ತು ನಮ್ಮ ಅನಿಸಿಕೆಗಳನ್ನು ತಿಳಿದುಕೊಳ್ಳುತ್ತಾನೆ. (1 ಪೇತ್ರ 5:6, 7) ಸಮಯಾನಂತರ ಆ ಆಳವಾದ ಖಿನ್ನತೆ ಶಮನಗೊಂಡಿತು. ಹತ್ತು ವರ್ಷಗಳ ಅನಂತರ, ಯೆಹೋವನಿನ್ನೂ ಹತಾಶೆ ಮತ್ತು ಖಿನ್ನತೆಯೊಂದಿಗೆ ವ್ಯವಹರಿಸಲು ನನಗೆ ಸಹಾಯ ಮಾಡುತ್ತಾನೆ. ಕೆಲವೊಮ್ಮೆ ನಿಷ್ಪಯ್ರೋಜಕತೆಯ ಭಾವನೆಯು ನನ್ನನ್ನು ಬಹಳ ಮಟ್ಟಿಗೆ ಮುಳುಗಿಸಿಯೇ ಬಿಡುತ್ತದೆ. ಆದರೂ, ಪ್ರಾರ್ಥನೆ, ಬೈಬಲಭ್ಯಾಸ, ನನ್ನ ಆತ್ಮಿಕ ಕುಟುಂಬ ಇವುಗಳು ನನ್ನ ಪಾರಾಗುವ ಆಶ್ಚರ್ಯಕರ ಸಾಧನಗಳಾಗಿ ಇವೆ.
ಇನ್ನೊಂದು ಬಿಡಾರಕ್ಕಾಗಿ ನಿಷ್ಫಲ ಹುಡುಕುವಿಕೆಯ ಅನಂತರ, ನನ್ನ ಉಳಿದ ಜೀವಮಾನವನ್ನು ನನ್ನ ಕುಟುಂಬದೊಂದಿಗೆ ಜೀವಿಸುವ ನಿರ್ಧಾರವನ್ನು ಮನಸ್ಸಿಲ್ಲದೆ ಮಾಡಿದ್ದೆನು. ಆಗ ಯೆಹೋವನು ನನ್ನ ಪ್ರಾರ್ಥನೆಗಳಿಗೆ ಉತ್ತರಕೊಟ್ಟನು. ಬ್ರೂಕ್ಲಿನ್ನ ಬೆಡ್ಫರ್ಡ್-ಸ್ಟೈವಸೆಂಟ್ ವಿಭಾಗದಲ್ಲಿ ಒಂದು ಸ್ಥಳವು ಸಿಕ್ಕುವಂಥಾಯಿತು. ನಾನು 1984 ರ ಬೇಸಗೆಯ ಕೊನೆಯಲ್ಲಿ ಅಲ್ಲಿಗೆ ಸ್ಥಳ ಬದಲಾಯಿಸಿದೆ ಮತ್ತು ಅಂದಿನಿಂದ ಅಲ್ಲೇ ಇದ್ದೇನೆ.
ಅತಿ ಪ್ರಿಯ ಲಾಫೀಎಟ್ ಸಭೆಯ ಸದಸ್ಯರು ದಯೆಯಿಂದ ನನ್ನನ್ನು ಕೂಟಗಳಿಗೆ ಒಯ್ದರು. ಅಲ್ಲಿನ ಮೊದಲನೆಯ ಸಭಾ ಪುಸ್ತಕ ಅಭ್ಯಾಸವು ಇನ್ನೂ ನನ್ನ ಮನಸ್ಸಿನಲ್ಲಿ ಹೊಚ್ಚಹೊಸತಾಗಿ ಇದೆ. ಅದು ನಾಲ್ಕನೆಯ ಮಹಡಿಯಲ್ಲಿ ನಡೆಯುತ್ತಿತ್ತು—ಲಿಫ್ಟ್ ಇರಲಿಲ್ಲ! ಯೆಹೋವನ ಸಹಾಯದಿಂದ ಮಾತ್ರವೇ ನಾನು ಆ ಮೆಟ್ಟಲ ಸಾಲುಗಳನ್ನು ಹತ್ತಲು ಮತ್ತು ಇಳಿಯಲು ಶಕ್ತನಾದೆನು. ಸಮಯಾನಂತರ ಹೆಚ್ಚು ಸುಗಮ್ಯವಾದ ಒಂದು ಸ್ಥಳವನ್ನು ಒದಗಿಸಲಾಯಿತು. ಮತ್ತು ಈಗ ನನ್ನ ಮನೆಯಲ್ಲಿ ಸಭಾ ಪುಸ್ತಕ ಅಭ್ಯಾಸ ನಡಿಯುವ ಸುಯೋಗದಿಂದ ಯೆಹೋವನು ನನ್ನನ್ನು ಆಶೀರ್ವದಿಸಿದ್ದಾನೆ.
ಒಂದು ಭವ್ಯ ಪಯನೀಯರಾತ್ಮವು ಈ ಸಭೆಯನ್ನು ವ್ಯಾಪಿಸಿದೆ. ನಾನು ಬಂದಾಗ, ಸುಮಾರು 30 ಪಯನೀಯರರು ಅಲಿದ್ದರು, ಮತ್ತು ಅವರಲ್ಲಿ ಕೆಲವರು ನನಗೆ ವಿಶೇಷ ಪರಾಮರಿಕೆ ಮತ್ತು ಗಮನವನ್ನು ಕೊಟ್ಟರು. ಆ ಹುರುಪಿನ ಪರಿಸರವು ಹೆಚ್ಚು ಸಲ ಸಹಾಯಕ ಪಯನೀಯರಳಾಗುವಂತೆ ನನ್ನನ್ನು ಪ್ರಚೋದಿಸಿಯದೆ.
ಎಪ್ರಿಲ್ 1989 ರಲ್ಲಿ, ಲಫೀಎಟ್ ಮತ್ತು ಪ್ರ್ಯಾಟ್ ಸಭೆಗಳು, ನನ್ನ ಬಿಡಾರದ ಬೀದಿಯ ಸಮೀಪವೇ ಒಂದು ಹೊಸ ರಾಜ್ಯ ಸಭಾ ಗೃಹವನ್ನು ಕಟ್ಟಿದವು. ಬೇಕಾಗಿದ್ದ ಸಮಯದಲ್ಲೇ ಅದು ಸಂಭವಿಸಿತು, ಯಾಕಂದರೆ ಹೆಚ್ಚಿನ ಶಾರೀರಿಕ ಅವನತಿಯಿಂದಾಗಿ ನಡೆಯುವುದು ಪುನಃ ಒಂದು ಸಮಸ್ಯೆಯಾಗಿತ್ತು. ನನ್ನ ಸ್ವಯಂ-ಚಲಿ ಸ್ಕೂಟರ್, ಮತ್ತು ಸಹಾಯ ಮತ್ತು ಬೆಂಬಲವನ್ನು ಕೊಡುವ ಸಹೋದರ ಮತ್ತು ಸಹೋದರಿಯರೊಂದಿಗೆ, ಹೇಗೂ, ಕೂಟಗಳಿಗೆ ಹೋಗಿ ಬರುವ ಸಂಚಾರಗಳು ಉಲ್ಲಾಸಕರವಾಗಿವೆ. ಅಂಥ ಪ್ರೀತಿಯುಳ್ಳ ಸಹಾಯವನ್ನು ನಾನೆಷ್ಟು ಆಳವಾಗಿ ಗಣ್ಯಮಾಡುತ್ತೇನೆ!
ದೇವರ ಬೆಂಬಲಕ್ಕಾಗಿ ಉಪಕಾರ
ನನ್ನ ಕಾಲುಗಳು ನಿರ್ಬಲವಾಗಿದ್ದರೂ, ನನ್ನ ಹೃದಯವು ನಿಶ್ಚಲವಾಗಿದೆ. ಒಳ್ಳೇ ಶಿಕ್ಷಣವು ಜೀವಿತವನ್ನು ಕೊಂಚ ಸುಲಭವನ್ನಾಗಿ ಮಾಡಿದೆ, ಆದರೂ ನನ್ನನ್ನು ದೇವರೇ ಪೋಷಿಸಿದ್ದಾನೆ. ಕೆಲವೊಮ್ಮೆ, ನನ್ನ ದಿನದೂಟವು ಹೇಗೆ ಒದಗಿಸಲ್ಪಡುವುದೆಂದು ನನಗೆ ಗೊತ್ತಿರಲಿಲ್ಲ, ಆದರೆ ಯೆಹೋವನು ನನಗೆ ಬೆಂಬಲವಾಗಿದ್ದು ಮತ್ತು ನಂಬಿಗಸ್ತ ಒದಗಿಸುವಾತನಾಗಿದ್ದಾನೆ. ನಿಶ್ಚಯವಾಗಿ, ದಾವೀದನ ಆ ಮಾತುಗಳು ನನಗೆ ಎಷ್ಟೋ ಪ್ರಿಯವು: “ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ. ಈ ವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ, ಅವನ ಸಂತತಿಯವರು ಭಿಕ್ಷಬೇಡಿ ತಿನ್ನುವದನ್ನಾಗಲಿ ನೋಡಲಿಲ್ಲ.”—ಕೀರ್ತನೆ 37:23-25.
ಶಸ್ತ್ರಕ್ರಿಯೆಯ ಸಮಯದಲ್ಲಿ ರಕ್ತವನ್ನು ನಿರಾಕರಿಸುವ ಮೂಲಕ ಒಂದು ಶಾಸ್ತ್ರೀಯ ನಿಲುವನ್ನು ಕಾಪಾಡಿಕೊಳ್ಳಲು ಹಲವಾರು ಸಾರಿ ಯೆಹೋವನು ನನ್ನನ್ನು ಶಕ್ತಳನ್ನಾಗಿ ಮಾಡಿದ್ದಾನೆ. (ಅ. ಕೃತ್ಯಗಳು 15:28, 29) ಇತ್ತೀಚೆಗೆ ನನ್ನ ತಂದೆ ತೀರಿಕೊಂಡರು. ಅಷ್ಟು ಆಪ್ತರಾದ ಒಬ್ಬರನ್ನು ಕಳೆದುಕೊಳ್ಳುವುದು ನಿಜವಾಗಿ ಅತಿ ದುಃಖದಾಯಕವಾಗಿತ್ತು! ಯೆಹೋವನಿಂದ ಬಂದ ಶಕ್ತಿ ಮಾತ್ರವೇ ಇದರಿಂದ ಮತ್ತು ಬೇರೆ ಸಂಕಟಗಳಿಂದ ನನ್ನನ್ನು ಪಾರುಮಾಡಿದೆ.
ನನ್ನ ಆರೋಗ್ಯ ಕುಂದುತ್ತಾ ಹೋಗಬಹುದು, ಆದರೆ ದೇವರಲ್ಲಿ ನನ್ನ ಭರವಸೆ ಮತ್ತು ಆತನೊಂದಿಗೆ ನನ್ನ ಸಂಬಂಧ ನನ್ನ ಜೀವರೇಖೆಗಳಾಗಿವೆ. ಯೆಹೋವನ ಜನರೊಂದಿಗಿರಲು ಮತ್ತು ಆತನ ತಪ್ಪದ ಬೆಂಬಲವನ್ನು ಪಡೆಯಲು ನಾನೆಷ್ಟು ಧನ್ಯಳು!