ನಿಷೇಧದ ಕೆಳಗೆ ಯೆಹೋವನು ನಮ್ಮನ್ನು ಪರಾಮರಿಸಿದನು—ಭಾಗ 2
ಲೋಕ ಯುದ್ಧ II ರ ಸಮಯದಲ್ಲಿ, ನನ್ನ ನಾಝೀ ಸೈನಿಕ ಸಮವಸ್ತ್ರದ ಬೆಲಿನ್ಟ ಬಕಲ್ನಲ್ಲಿ, “ದೇವರು ನಮ್ಮೊಂದಿಗಿದ್ದಾನೆ” ಎಂಬ ಮಾತುಗಳು ಕೆತ್ತಲ್ಪಟ್ಟಿದ್ದವು. ನನಗೆ ಅದು ಯುದ್ಧಗಳಲ್ಲಿ ಮತ್ತು ರಕ್ತಪಾತದಲ್ಲಿ ಚರ್ಚುಗಳ ಒಳಗೂಡಿರುವಿಕೆಯ ಕೇವಲ ಇನ್ನೊಂದು ದೃಷ್ಟಾಂತದಂತೆ ಇತ್ತು. ಅದು ನನ್ನನ್ನು ಜುಗುಪ್ಸೆಗೊಳಿಸಿತ್ತು. ಹೀಗೆ, ಇಬ್ಬರು ಯೆಹೋವನ ಸಾಕ್ಷಿಗಳು ಪೂರ್ವ ಜರ್ಮನಿಯ ಲಿಂಬಕ್ ಒಬರ್ಫ್ರೋನ್ನಲ್ಲಿ ನನ್ನನ್ನು ಸಂಭಾಷಣೆಯಲ್ಲಿ ತೊಡಗಿಸುವುದರೊಳಗೆ, ನಾನು ಧರ್ಮವನ್ನು ತೀರಾ ಹೇಸುತ್ತಿದ್ದೆ ಮತ್ತು ಒಬ್ಬ ನಾಸ್ತಿಕ ಹಾಗೂ ವಿಕಾಸವಾದಿಯಾಗಿಯೂ ಪರಿಣಮಿಸಿದ್ದೆನು.
“ನಾನು ಕ್ರೈಸ್ತನಾಗುವೆನೆಂದು ನೆನಸಬೇಡಿರಿ” ಎಂದೆ ನಾನು, ಸಂದರ್ಶಿಸಿದ ಆ ಸಾಕ್ಷಿಗಳಿಗೆ. ಆದರೆ ಅವರ ವಾಗ್ವಾದವು ದೇವರೊಬ್ಬನಿದ್ದಾನೆ ಎಂಬದನ್ನು ನನಗೆ ಮನಗಾಣಿಸಿತು. ತಿಳಿದುಕೊಳ್ಳುವ ಕುತೂಹಲದಿಂದ ನಾನು ಒಂದು ಬೈಬಲ್ ಖರೀದಿಸಿದೆ ಮತ್ತು ಸಮಯಾನಂತರ ಅದನ್ನು ಅವರೊಂದಿಗೆ ಅಭ್ಯಾಸ ಮಾಡತೊಡಗಿದೆ. ಅದು 1953 ರ ವಸಂತ ಋತುವಿನಲ್ಲಿ, ಪೂರ್ವ ಜರ್ಮನಿಯಲ್ಲಿ ಯೆಹೋವನ ಸಾಕ್ಷಿಗಳ ಚಟುವಟಿಕೆಗಳು ಕಾಮ್ಯೂನಿಸ್ಟ್ ನಿಷೇಧದ ಕೆಳಗಿದ್ದು ಆವಾಗಲೇ ಮೂರು ವರ್ಷಗಳು ದಾಟಿಹೋಗಿದ್ದ ಸಮಯದಲ್ಲಿ.
ಆಗಿನ ಯೆಹೋವನ ಸಾಕ್ಷಿಗಳ ಪರಿಸ್ಥಿತಿಯನ್ನು, ಆಗಸ್ಟ್ 15, 1953 ರ ವಾಚ್ಟವರ್ ವರ್ಣಿಸುತ್ತಾ ಅಂದದ್ದು: “ಸದಾ ಬೇಹು ಮತ್ತು ಬೆದರಿಕೆಗೆ ಒಳಗಾಗಿದ್ದಾಗ್ಯೂ, ಯಾರೂ ತಮ್ಮನ್ನು ಹಿಂಬಾಲಿಸುತ್ತಾ ಬರುತ್ತಿಲ್ಲವೆಂದು ಮೊದಲು ಖಾತ್ರಿ ಮಾಡದ ಹೊರತು ಒಬ್ಬರನ್ನೊಬ್ಬರು ಸಂದರ್ಶಿಸಶಕ್ತರಿಲ್ಲದ್ದಿದರೂ, ವಾಚ್ಟವರ್ ಸಾಹಿತ್ಯವು ಒಬ್ಬನಲ್ಲಿ ಕಂಡು ಹಿಡಿಯಲ್ಪಟ್ಟಲ್ಲಿ ‘ಚಿತಾವಣೆಮಾಡುವ ಸಾಹಿತ್ಯ ವಿತರಣೆಗಾಗಿ’ ಎರಡು ಮೂರು ವರ್ಷಗಳ ಸೆರೆಮನೆವಾಸದ ಅರ್ಥದಲ್ಲಿದ್ದರೂ, ಮತ್ತು ಹೆಚ್ಚು ಬಲಿತವರೂ ನಾಯಕತ್ವ ವಹಿಸುತ್ತಿದ್ದವರೂ ಆಗಿದ್ದ ಸಹೋದರರಲ್ಲಿ ನೂರಾರು ಮಂದಿ ಸೆರೆಮನೆಯಲ್ಲಿದ್ದರೂ, ಪೂರ್ವ ಜರ್ಮನಿಯ ಯೆಹೋವನ ಸಾಕ್ಷಿಗಳು ಇನ್ನೂ ಸಾರುತ್ತಾ ಇದ್ದಾರೆ.”
1955 ರಲ್ಲಿ ನನ್ನ ಪತ್ನಿ ರೆಜೀನ ಮತ್ತು ನಾನು ಪಶ್ಚಿಮ ಜರ್ಮನಿಯ ನ್ಯೂರೆಂಬರ್ಗಿನಲ್ಲಿ ಯೆಹೋವನ ಸಾಕ್ಷಿಗಳ ಅಂತರ್ರಾಷ್ಟ್ರೀಯ ಅಧಿವೇಶನವನ್ನು ಹಾಜರಾದೆವು ಮತ್ತು ಮುಂದಿನ ವರ್ಷದಲ್ಲಿ ನಾವಿಬ್ಬರೂ ಬರ್ಲಿನ್ನಲ್ಲಿ ದೀಕ್ಷಾಸ್ನಾನ ಪಡೆದೆವು. ಅದು 1961 ರಲ್ಲಿ ಪಶ್ಚಿಮ ಜರ್ಮನಿಯಿಂದ ಪೂರ್ವ ಜರ್ಮನಿಯನ್ನು ಕಡಿದುಬಿಟ್ಟ ಆ ಗೋಡೆಯು ಮೇಲೆ ಬಂದ ಮುಂಚೆಯೇ ಆಗಿತ್ತು. ಆದರೆ ನನ್ನ ದೀಕ್ಷಾಸ್ನಾನಕ್ಕೆ ಮುಂಚೆಯೇ ಯೆಹೋವನಿಗೆ ನನ್ನ ನಿಷ್ಠೆಯು ಪರೀಕೆಗ್ಷೆ ಒಳಪಟ್ಟಿತ್ತು.
ಜವಾಬ್ದಾರಿಕೆಯನ್ನು ತಕ್ಕೊಳ್ಳುವುದು
ಲಿಂಬಕ್-ಓಬರ್ಫ್ರೋನ್ನಲ್ಲಿ ನಾವು ಹೋಗಲಾರಂಭಿಸಿದ್ದ ಯೆಹೋವನ ಸಾಕ್ಷಿಗಳ ಸಭೆಗೆ, ಪಶ್ಚಿಮ ಬರ್ಲಿನ್ಗೆ ಹೋಗಿ ಬೈಬಲ್ ಸಾಹಿತ್ಯವನ್ನು ತರುವವರು ಯಾರಾದರೂ ಬೇಕಿತ್ತು. ನಮಗೆ ಒಂದು ಸಣ್ಣ ವ್ಯಾಪಾರವಿತ್ತು ಮತ್ತು ಇಬ್ಬರು ಚಿಕ್ಕ ಮಕ್ಕಳಿದ್ದರು, ಆದರೆ ಯೆಹೋವನನ್ನು ಸೇವಿಸುವುದು ಈ ಮೊದಲೇ ನಮ್ಮ ಜೀವನದ ಕೇಂದ್ರವಾಗಿತ್ತು. ನಾವು ನಮ್ಮ ಹಳೇ ಕಾರನ್ನು ಅಳವಡಿಸಿದೆವು, ಹೀಗೆ 60 ಪುಸ್ತಕಗಳನ್ನು ಅಡಗಿಸಿಡಲು ಶಕ್ಯವಾಗುವಂತೆ ಸ್ಥಳಮಾಡಿದೆವು. ವಾರ್ತಾ ವಾಹಕರಾಗಿರುವುದು ಅಪಾಯದ ಕೆಲಸವಾಗಿತ್ತು, ಆದರೆ ಯೆಹೋವನಲ್ಲಿ ಆತುಕೊಳ್ಳಲು ಅದು ನನಗೆ ಕಲಿಸಿತು.
ಪೂರ್ವ ಜರ್ಮನಿಯಿಂದ ಪಶ್ಚಿಮ ವಿಭಾಗಕ್ಕೆ ಕಾರಿನಲ್ಲಿ ದಾಟುವುದು ಅದೇನೂ ಸುಲಭವಾಗಿರಲಿಲ್ಲ, ನಾವದನ್ನು ಹೇಗೆ ಮಾಡಶಕ್ತರಾದೆವೆಂದು ನಾನು ಕೆಲವು ಸಾರಿ ಯೋಚಿಸುತ್ತೇನೆ. ಒಮ್ಮೆ ಸ್ವತಂತ್ರ ವಿಭಾಗವನ್ನು ಮುಟ್ಟಿದೆವೆಂದರೆ, ಬೇಕಾದ ಸಾಹಿತ್ಯ ಸಂಗ್ರಹವನ್ನು ಮಾಡಿ, ಪುಸ್ತಕಗಳನ್ನು ಕಾರಿನಲ್ಲಿ ಅವಿತಿಟ್ಟು, ಸೀಮೆಯನ್ನು ದಾಟಿ ಪೂರ್ವ ಜರ್ಮನಿಗೆ ಹಿಂತಿರುಗುತ್ತಿದ್ದೆವು.
ಒಂದು ಸಂದರ್ಭದಲ್ಲಿ ನಾವಾಗಲೇ ಪುಸ್ತಕಗಳನ್ನು ಅಡಗಿಸಿಡುತಿದ್ತಾಗ್ದ ಒಬ್ಬ ಅಪರಿಚಿತನು ತನ್ನ ಕೊಠಡಿಯಿಂದ ಹೊರಗೆ ಬಂದನು. “ಯಾರೋ ಅಲ್ಲಿ,” ಎಂದು ಒದರಿದನು. ನನ್ನ ಹೃದಯ ತುಡಿತ ನಿಂತಂತೆ ಆಯಿತು. ಅವನು ನಮ್ಮನ್ನು ಗಮನಿಸುತ್ತಿದ್ದನೋ? “ಮುಂದಿನ ಬಾರಿ ಬೇರೆಲ್ಲಿಗಾದರೂ ಹೋಗಿರಿ. ಪೂರ್ವ ಜರ್ಮನಿ ಪೊಲೀಸರ ರೇಡಿಯೋ-ಕಾರು ಆ ಮೂಲೆಯಲ್ಲಿ ತಂಗುತ್ತದೆ, ಅವರು ನಿಮ್ಮನ್ನು ಹಿಡಿದಾರು.” ನಾನು ಪರಿಹಾರದ ನಿಟ್ಟುಸಿರು ಬಿಟ್ಟೆ. ಗಡಿ ದಾಟುವಿಕೆ ಸುಗಮವಾಗಿ ಸಾಗಿತು ಮತ್ತು ನಾವು ನಾಲ್ವರೂ ಕಾರಿನಲ್ಲಿ ದಾರಿಯಿಡೀ ಸಂಗೀತ ಹಾಡುತ್ತಲೇ ಮನೆ ಸೇರಿದೆವು.
ಒಂಟಿತನಕ್ಕಾಗಿ ಸಿದ್ಧತೆ
1950 ರ ವರ್ಷಗಳಲ್ಲಿ ಪೂರ್ವ ಜರ್ಮನಿಯ ಸಹೋದರರು ಸಾಹಿತ್ಯ ಮತ್ತು ಮಾರ್ಗದರ್ಶನೆಗಾಗಿ ಪಶ್ಚಿಮ ಜರ್ಮನಿಯ ಸಹೋದರರ ಮೇಲೆ ಆತುಕೊಂಡಿದ್ದರು. ಆದರೆ 1960 ರಲ್ಲಿ ಪೂರ್ವ ಜರ್ಮನಿಯ ಪ್ರತಿ ಸಾಕ್ಷಿಯು ತಾನು ವಾಸಿಸಿದ್ದ ಕ್ಷೇತ್ರದ ಜತೆ ಸಾಕ್ಷಿಯೊಂದಿಗೆ ಹತ್ತಿರದ ಸಂಪರ್ಕವಿಡುವಂತೆ ಸಹಾಯವಾದ ಕೆಲವು ಬದಲಾವಣೆಗಳನ್ನು ಮಾಡಲಾಯಿತು. ಅನಂತರ ಜೂನ್ 1961 ರಲ್ಲಿ, ಹಿರಿಯರಿಗಾಗಿ ಕಿಂಗ್ಡಂ ಮಿನಿಸ್ಟ್ರಿ ಶಾಲೆಯ ಮೊದಲನೆಯ ವರ್ಗವು ಬರ್ಲಿನ್ನಲ್ಲಿ ನಡೆಯಿತು. ಮೊದಲ ನಾಲ್ಕು ವಾರಗಳ ವರ್ಗವನ್ನು ನಾನು ಹಾಜರಾದೆನು. ಬರೇ ಆರು ವಾರಗಳ ಅನಂತರ, ಬರ್ಲಿನ್ ಗೋಡೆಯು ಕಟ್ಟಲ್ಪಟ್ಟಾಗ, ದಿಢೀರನೇ ನಾವು ಪಶ್ಚಿಮದಿಂದ ಕತ್ತರಿಸಿಹಾಕಲ್ಪಟ್ಟೆವು. ನಮ್ಮ ಕೆಲಸವು ಈಗ ಭೂಗತ ಮಾತ್ರವೇ ಅಲ್ಲ ಒಂಟಿಯಾಗಿಯೂ ಮಾಡಲ್ಪಟ್ಟಿತ್ತು.
ಹೀಗೆ ಪೂರ್ವ ಜರ್ಮನಿಯ ಯೆಹೋವನ ಸಾಕ್ಷಿಗಳ ಚಟುವಟಿಕೆಗಳು ಕ್ರಮೇಣ ಪೂರ್ಣವಾಗಿ ನಿಂತುಹೋಗುವುವು ಎಂದು ಕೆಲವರು ಹೆದರಿದರು. ಆದರೂ ಒಂದು ವರ್ಷಕ್ಕೂ ಕಡಿಮೆ ಅವಧಿಗೆ ಮುಂಚೆ ಜಾರಿಗೆ ತರಲ್ಪಟ್ಟ ಸಂಸ್ಥಾಪನಾ ಬದಲಾವಣೆಗಳು, ನಮಗೆ ಆತ್ಮಿಕ ಐಕ್ಯತೆ ಮತ್ತು ಬಲವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿದವು. ಅದಲ್ಲದೆ, ಕಿಂಗ್ಡಂ ಮಿನಿಸ್ಟ್ರಿ ಶಾಲೆಯ ಮೊದಲ ವರ್ಗವನ್ನು ಹಾಜರಾಗಿದ್ದ ಹಿರಿಯರಿಂದ ಹೊಂದಲ್ಪಟ್ಟ ತರಬೇತಿಯು, ಅವರು ಆ ತರಬೇತನ್ನು ಇತರ ಹಿರಿಯರಿಗೆ ದಾಟಿಸುವಂತೆ ಸನ್ನದ್ಧಗೊಳಿಸಿತು. ಹೀಗೆ, 1950 ರಲ್ಲಿ ನಿಷೇಧಕ್ಕಾಗಿ ನಮ್ಮನ್ನು, 1949 ರ ಜಿಲ್ಲಾ ಅಧಿವೇಶನಗಳಿಂದ ಹೇಗೆ ಯೆಹೋವನು ತಯಾರಿಗೊಳಿಸಿದ್ದನೋ ಹಾಗೆ, ನಮ್ಮ ಒಂಟಿಗತನಕ್ಕಾಗಿಯೂ ಆತನು ನಮ್ಮನ್ನು ಸನ್ನದ್ಧಗೊಳಿಸಿದನು.
ಪಶ್ಚಿಮದಿಂದ ಕತ್ತರಿಸಲ್ಪಟ್ಟಾಗ, ಸಂಘಟನೆಯು ಮುಂದರಿಯುವಂತೆ ಮಾಡಲು ನಾವಾಗಿಯೇ ಹೆಜ್ಜೆಯನ್ನು ತಕ್ಕೊಳ್ಳಬೇಕೆಂದು ಸ್ಪಷ್ಟವಾಗಿಯಿತು. ಪಶ್ಚಿಮದ ಪ್ರಯಾಣಿಕರಿಗೆ ಸುಗಮ್ಯವಾದ ಒಂದು ಪೂರ್ವದ ಹೆದ್ದಾರಿಯಲ್ಲಿ ನಮ್ಮನ್ನು ಭೇಟಿಯಾಗುವಂತೆ ಸೂಚಿಸಿ ಒಂದು ಪತ್ರವನ್ನು ನಾವು ಪಶ್ಚಿಮ ಬರ್ಲಿನ್ನ ನಮ್ಮ ಕ್ರೈಸ್ತ ಸಹೋದರರಿಗೆ ಬರೆದೆವು. ಗೊತ್ತಾದ ಸ್ಥಳದಲ್ಲಿ ನಾವೊಂದು ವಾಹನ ಕುಸಿತದ ತಂತ್ರಹೂಡಿದೆವು. ಕೆಲವೇ ನಿಮಿಷಗಳಲ್ಲಿ ಗಾಡಿನಡಸುತ್ತಾ ಸಹೋದರರು ಬಂದರು, ಬೈಬಲ್ ಸಾಹಿತ್ಯದೊಂದಿಗೆ. ಸುರಕ್ಷೆಯ ಕಾರಣ ನಾನು ಹಿಂದೆ ಬಿಟ್ಟು ಬಂದಿದ್ದ ನನ್ನ ಕಿಂಗ್ಡಂ ಮಿನಿಸ್ಟ್ರಿ ಶಾಲಾ ಪಠ್ಯಪುಸ್ತಕ, ನಾನು ಬರೆದು ತಕ್ಕೊಂಡ ನೋಟ್ಸ್ಗಳು ಮತ್ತು ನನ್ನ ಬೈಬಲನ್ನು ಸಹ ಸಹೋದರರರು ತಂದದ್ದು ಸಂತೋಷಕರ. ಅವನ್ನು ಹಿಂದೆಪಡೆದದ್ದು ಅದೆಷ್ಟು ರೋಮಾಂಚಕರ! ಮುಂದಿನ ಕೆಲವು ವರ್ಷಗಳಲ್ಲಿ ಅವೆಷ್ಟು ಹೆಚ್ಚಾಗಿ ನನಗೆ ಬೇಕಿದ್ದವೆಂದು ನನಗಾಗ ತಿಳಿದಿರಲಿಲ್ಲ.
ಒಂದು ಭೂಗತ ಶಾಲೆ
ಕೆಲವೇ ದಿನಗಳ ಅನಂತರ, ಪೂರ್ವ ಜರ್ಮನಿಯ ಎಲ್ಲಾ ಭಾಗಗಳಲ್ಲಿ ಕಿಂಗ್ಡಂ ಮಿನಿಸ್ಟ್ರಿ ಶಾಲೆಯ ಕ್ಲಾಸುಗಳಿಗಾಗಿ ಏರ್ಪಾಡು ಮಾಡುವಂತೆ ಸೂಚಿಸಲಾಯಿತು. ನನ್ನನ್ನೂ ಕೂಡಿಸಿ ನಾಲ್ವರು ಉಪದೇಶಕರನ್ನು ನೇಮಿಸಲಾಯಿತು. ಆದರೆ ನಮ್ಮ ಕಾರ್ಯವು ನಿಷೇಧವಾಗಿದ್ದಾಗ ಆ ಎಲ್ಲಾ ಹಿರಿಯರನ್ನು ತರಬೇತು ಮಾಡುವುದು ಒಂದು ಅಸಾಧ್ಯವಾದ ಕೆಲಸವಾಗಿ ನನಗೆ ತೋರಿತು. ನಾವು ಮಾಡುವುದನ್ನು ಮರೆಮಾಚಿಸಲು, ನಾನು ವರ್ಗಗಳನ್ನು ಕ್ಯಾಂಪ್ ರಜಾದಿನವಾಗಿ ನಡಿಸಲು ನಿರ್ಧರಿಸಿದೆ.
ಪ್ರತಿಯೊಂದು ಕ್ಲಾಸು ನಾಲ್ವರು ವಿದ್ಯಾರ್ಥಿಗಳಿಂದ ಕೂಡಿತ್ತು ಮತ್ತು ಉಪದೇಶಕನಾದ ನಾನು ಮತ್ತು ಒಬ್ಬ ಆರನೆಯ ಸಹೋದರನು ಅಡಿಗೆಯವನಾಗಿ ಕೂಡಿದ್ದೆವು. ಹೆಂಡತಿ ಮಕ್ಕಳು ಸಹ ಹಾಜರಿದ್ದರು. ಹೀಗೆ ನಮ್ಮಲ್ಲಿ ಸಾಮಾನ್ಯವಾಗಿ 15-20 ವ್ಯಕ್ತಿಗಳ ಒಂದು ಗುಂಪಿತ್ತು. ಒಂದು ಸಾಧಾರಣ ಕ್ಯಾಂಪಿಂಗ್ ಸ್ಥಳವು ದೊರೆಯಲಶಕ್ಯ. ಆದ್ದರಿಂದ ನನ್ನ ಕುಟುಂಬ ಮತ್ತು ನಾನು ಯುಕ್ತವಾದ ಜಾಗಗಳಿಗಾಗಿ ಹುಡುಕುತ್ತಾ ಹೊರಟೆವು.
ಒಂದು ಸಂದರ್ಭದಲ್ಲಿ ಒಂದು ಹಳ್ಳಿಯನ್ನು ದಾಟಿಹೋಗುತ್ತಿದ್ದಾಗ, ಹೆದ್ದಾರಿಗಳಿಂದ ದೂರದ ಒಂದು ಒಳದಾರಿಯು ಮರಗಳ ತೋಪಿನೆಡೆಗೆ ನಡಿಸುವುದು ಕಂಡುಬಂತು. ಅದು ಯುಕ್ತವಾಗಿ ಕಂಡಿತಾದರ್ದಿಂದ ನಾನು ಪೌರಸಭಾಧ್ಯಕ್ಷನನ್ನು ಗೋಚರಿಸಿದೆ. “ಬೇರೆ ಕೆಲವು ಕುಟುಂಬಗಳೊಂದಿಗೆ ಕೆಲವು ವಾರಗಳ ತನಕ ಕ್ಯಾಂಪ್ ಮಾಡಲು ನಾವು ಜಾಗವನ್ನು ಹುಡುಕುತ್ತಿದ್ದೇವೆ,” ವಿವರಿಸಿದೆ ನಾನು. “ಮಕ್ಕಳು ಸುತ್ತಲೂ ಓಡ್ಯಾಡಿ ಜಿಗಿದಾಡಲಾಗುವಂತೆ ನಾವು ನಾವಾಗಿಯೇ ಅಲ್ಲಿರಲು ಬಯಸುತ್ತೇವೆ. ಅಲ್ಲಿರುವ ಮರಗಳ ತೋಪನ್ನು ನಾವು ಬಳಸಬಹುದೋ?” ಅವನು ಒಪ್ಪಿದನು, ಆದ್ದರಿಂದ ನಾವು ಏರ್ಪಾಡು ಮಾಡಿದೆವು.
ಆ ಸ್ಥಳದಲ್ಲಿ ನಾವು ಡೇರೆಗಳನ್ನು ಮತ್ತು ನನ್ನ ಟ್ರೆಯ್ಲ್ರನ್ನು ಬಳಸಿ ಹೊರಗಿನಿಂದ ಮರೆಯಾಗಿದ್ದ ಒಂದು ಕೇಂದ್ರ ಚೌಕಾಂಗಳವನ್ನು ನಿರ್ಮಿಸಿದೆವು. ಟ್ರೆಯ್ಲ್ರ್ ನಮ್ಮ ಕ್ಲಾಸ್ರೂಂ ಆಗಿ ಪರಿಣಮಿಸಿತು. ದಿನಕ್ಕೆ 8 ತಾಸುಗಳಂತೆ 14 ದಿನದ ಗಾಢಾಭ್ಯಾಸಕ್ಕಾಗಿ ನಾವಲ್ಲಿ ಕೂಡಿಬಂದೆವು. ಒಂದುವೇಳೆ ಅನಿರೀಕ್ಷಿತವಾಗಿ ಯಾರಾದರೂ ಸಂದರ್ಶಕರು ಬಂದರೆ ಕೂತುಕೊಳ್ಳಲಿಕ್ಕಾಗಿ ಸುತ್ತುಗಟ್ಟಿದ್ದ ಇನ್ನೊಂದು ಜಾಗದಲ್ಲಿ ಕೆಲವು ಕುರ್ಚಿಗಳು ಮತ್ತು ಒಂದು ಮೇಜು ಇಡಲ್ಪಟ್ಟಿದ್ದವು. ಮತ್ತು ಸಂದರ್ಶಕರು ಬಂದರು! ಅಂಥ ಸಮಯದಲ್ಲಿ ನಮ್ಮ ಕುಟುಂಬಗಳ ಪ್ರೀತಿಯ ಬೆಂಬಲವನ್ನು ನಾವು ನಿಜವಾಗಿ ಗಣ್ಯಮಾಡಿದೆವು.
ನಾವು ನಮ್ಮ ಕ್ಲಾಸುಗಳನ್ನು ನಡಿಸುತ್ತಿದ್ದಾಗ ನಮ್ಮ ಕುಟುಂಬಗಳು ಕಾವಲಾಗಿ ನಿಂತರು. ಈ ವಿಶಿಷ್ಟ ಸಂದರ್ಭದಲ್ಲಿ, ಸ್ಥಳೀಕ ಕಮ್ಯೂನಿಸ್ಟ್ ಪಕ್ಷದ ಸೆಕ್ರಿಟರಿಯೂ ಆಗಿದ್ದ ಪೌರಸಭಾಧಕ್ಷನು, ಒಳದಾರಿಯಾಗಿ ನಮ್ಮ ತೋಪಿನೆಡೆಗೆ ಬರುತ್ತಿರುವುದಾಗಿ ಕಂಡುಬಂದನು. ಕೂಡಲೇ ಟ್ರೆಯ್ಲ್ರನಲ್ಲಿರುವ ಅಪಾಯ ಸೂಚಕ ಗಂಟೆಗೆ ತಂತಿಯಿಂದ ಜೋಡಿಸಲ್ಪಟ್ಟಿದ್ದ ಒಂದು ಸ್ವಿಚ್ಛನ್ನು ಪಹರೆಯವನು ಒತ್ತಿದನು. ದಿಢೀರನೇ ನಾವು ಟ್ರೆಯ್ಲ್ರ್ನಿಂದ ಜಿಗಿದು, ಮೇಜಿನ ಸುತ್ತಲೂ ಮುನ್ನೇರ್ಪಡಿಸಲ್ಪಟ್ಟ ಸ್ಥಳವನ್ನು ತಕ್ಕೊಂಡು ಇಸ್ಪೀಟು ಎಲೆ ಆಡಲಾರಂಭಿಸಿದೆವು. ದೃಶ್ಯವು ವಾಸ್ತವಿಕವಾಗಿ ಕಾಣುವಂತೆ ಮಾಡಲು ಅಲ್ಲಿ ಒಂದು ಮದ್ಯಸಾರದ ಸೀಸೆಯನ್ನೂ ಇಡಲಾಗಿತ್ತು. ನಿಜವಾಗಿ ಏನು ಸಂಭವಿಸುತ್ತಾ ಇತ್ತೆಂಬದರ ಯಾವ ಸುಳಿವೂ ಇಲ್ಲದೆ ಪೌರಸಭಾಧ್ಯಕ್ಷನು ನಮಗೆ ಸ್ನೇಹದ ಸಂದರ್ಶನ ನೀಡಿ, ಮನೆಗೆ ಹೋದನು.
ದೇಶದಲ್ಲೆಲ್ಲೂ ಕಿಂಗ್ಡಂ ಮಿನಿಸ್ಟ್ರಿ ಶಾಲೆಯ ಕ್ಲಾಸುಗಳು 1962 ರ ವಸಂತ ಋತುವಿನಿಂದ 1965 ರ ಅಂತ್ಯದ ತನಕ ನಡೆದವು. ಪೂರ್ವ ಜರ್ಮನಿಯಲ್ಲಿ ನಮ್ಮ ವಿಶಿಷ್ಟ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆಂಬ ಸಮಾಚಾರವು ಕೂಡಿದ್ದ ಆ ಗಾಢ ತರಬೇತು, ಸಾರುವ ಕಾರ್ಯದಲ್ಲಿ ಮೇಲ್ವಿಚಾರವನ್ನು ನಡಿಸುವುದಕ್ಕಾಗಿ ಹಿರಿಯರನ್ನು ತಯಾರುಗೊಳಿಸಿತು. ಕ್ಲಾಸುಗಳನ್ನು ಹಾಜರಾಗಲಿಕ್ಕಾಗಿ ಹಿರಿಯರು ತಮ್ಮ ರಜೆಯನ್ನು ತ್ಯಾಗಮಾಡಿದ್ದರು ಮಾತ್ರವಲ್ಲ ಸೆರೆವಾಸದ ಅಪಾಯಕ್ಕೂ ತಲೆಗೊಟ್ಟಿದ್ದರು.
ಶಾಲೆಯ ಪ್ರಯೋಜನಗಳು
ಅಧಿಕಾರಿಗಳು ನಮ್ಮ ಚಟುವಟಿಕೆಗಳನ್ನು ಜಾಗ್ರತೆಯಿಂದ ಅವಲೋಕಿಸುತ್ತಿದ್ದರು, ಮತ್ತು 1965 ರ ಕೊನೆಯಲ್ಲಿ, ಹೆಚ್ಚಿನ ಹಿರಿಯರು ತಮ್ಮ ಶಾಲಾ ವರ್ಗವನ್ನು ಮುಗಿಸಿಯಾದ ಮೇಲೆ, ನಮ್ಮ ಸಂಸ್ಥೆಗೆ ಒಂದು ಮಾರಕ ಹೊಡೆತವನ್ನು ಹಾಕಲು ಅವರು ಪ್ರಯತ್ನಿಸಿದರು. ಕಾರ್ಯದಲ್ಲಿ ನಾಯಕತ್ವವನ್ನು ವಹಿಸುವವರೆಂದು ಪರಿಗಣಿಸಲಾದ 15 ಸಾಕ್ಷಿಗಳನ್ನು ಅವರು ದಸ್ತಗಿರಿ ಮಾಡಿದರು. ಅದೊಂದು ಸುಸಜ್ಜಿತವಾಗಿದ್ದ ಕ್ರಿಯೆಯಾಗಿದ್ದು, ಇಡೀ ದೇಶವನ್ನೇ ಆವರಿಸಿಬಿಟ್ಟಿತ್ತು. ಸಾಕ್ಷಿಗಳು ಕ್ರಿಯಾಶೂನ್ಯರಾಗುವರು ಎಂದು ಪುನಃ ಅನೇಕರು ನೆನಸಿದರು. ಆದರೆ ಯೆಹೋವನ ಸಹಾಯದೊಂದಿಗೆ ನಾವು ಪರಿಸ್ಥಿತಿಗೆ ಅಳವಡಿಸಿಕೊಂಡೆವು ಮತ್ತು ಮುಂಚಿನಂತೆ ನಮ್ಮ ಕೆಲಸವನ್ನು ಮುಂದುವರಿಸಿದೆವು.
ಇದನ್ನು ವಿಶಿಷ್ಟವಾಗಿ ಶಕ್ಯವನ್ನಾಗಿ ಮಾಡಿದ್ದು ಯಾವುದೆಂದರೆ ಕಿಂಗ್ಡಂ ಮಿನಿಸ್ಟ್ರಿ ಶಾಲೆಯಲ್ಲಿ ಹಿರಿಯರು ಪಡೆದ ತರಬೇತು ಮತ್ತು ಆ ವರ್ಗಗಳ ಸಮಯದಲ್ಲಿ ಅವರು ಆನಂದಿಸಿದ ಸಹವಾಸದ ಮೂಲಕ ಪರಸ್ಪರ ಬೆಸುಗೆಗೊಂಡ ಭರವಸದ ಬಂಧಗಳೇ. ಹೀಗೆ ಸಂಸ್ಥೆಯು ತನ್ನ ಸತ್ವವನ್ನು ತೋರಿಸಿಕೊಟ್ಟಿತು. ಸಂಸ್ಥೆಯ ಸೂಚನೆಗಳನ್ನು ನಾವು ವಿಧೇಯತೆಯಿಂದ ನಿಕಟವಾಗಿ ಪಾಲಿಸುವುದು ಅದೆಷ್ಟು ಮಹತ್ವದಾಗಿತ್ತು!—ಯೆಶಾಯ 48:17.
ಸರಕಾರಿ ಅಧಿಕಾರಿಗಳಿಂದ ಹಾಕಲ್ಪಟ್ಟ ಈ ಮಹಾ ಪ್ರತಿಬಂಧವು ನಮ್ಮ ಚಟುವಟಿಕೆಯ ಮೇಲೆ ಕೊಂಚವೇ ಪ್ರತಿಕೂಲ ಪರಿಣಾಮ ಬೀರಿತ್ತು ಎಂಬದನ್ನು ಹಿಂಬಾಲಿಸಿದ ತಿಂಗಳುಗಳು ತೋರಿಸಿಕೊಟ್ಟವು. ತುಸು ಸಮಯದೊಳಗೆ ನಾವು ಕಿಂಗ್ಡಂ ಮಿನಿಸ್ಟ್ರಿ ಶಾಲೆಯನ್ನು ಪುನಃ ಪ್ರಾರಂಭಿಸ ಶಕ್ತರಾದೆವು. ಅಧಿಕಾರಿಗಳು ನಮ್ಮ ಪುಟವೇಳುವ ಶಕ್ತಿಯನ್ನು ಗಮನಿಸಿದಾಗ, ತಮ್ಮ ತಂತ್ರೋಪಾಯಗಳನ್ನು ಬದಲಿಸಲು ನಿರ್ಬಂಧಿಸಲ್ಪಟ್ಟರು. ಯೆಹೋವನಿಗಾಗಿ ಎಂತಹ ವಿಜಯ!
ಶುಶ್ರೂಷೆಯಲ್ಲಿ ಕ್ರಿಯಾಶೀಲತೆ
ಆ ಸಮಯದಲ್ಲಿ ನಮ್ಮ ಸಭಾ ಪುಸ್ತಕ ಅಭ್ಯಾಸ ಗುಂಪುಗಳಲ್ಲಿ ಸುಮಾರು ಐದು ಮಂದಿ ಕೂಡಿರುತ್ತಿದ್ದರು. ಈ ಪುಸ್ತಕ-ಅಭ್ಯಾಸ ಏರ್ಪಾಡಿನ ಮೂಲಕ ನಮ್ಮಲ್ಲಿ ಪ್ರತಿಯೊಬ್ಬರು ನಮ್ಮ ಬೈಬಲ್ ಸಾಹಿತ್ಯವನ್ನು ಪಡೆಯುತ್ತಿದ್ದೆವು ಮತ್ತು ಸಾರುವ ಕಾರ್ಯವು ಈ ಚಿಕ್ಕ ಅಭ್ಯಾಸ ಗುಂಪುಗಳಿಂದ ಸುಸಂಘಟಿತ ಮಾಡಲ್ಪಟ್ಟಿತ್ತು. ಬೈಬಲ್ ಅಧ್ಯಯನ ಮಾಡಲು ಅಪೇಕ್ಷಿಸಿದ ಅನೇಕ ಜನರ ಒದಗಿಸುವಿಕೆಯೊಂದಿಗೆ ಪ್ರಾರಂಭದಿಂದಲೇ ಯೆಹೋವನು ರೆಜೀನ ಮತ್ತು ನನ್ನನ್ನು ಆಶೀರ್ವದಿಸಿದನು.
ನಾವು ಕಂಡುಹಿಡಿಯಲ್ಪಟ್ಟು ಕೈದು ಮಾಡಲ್ಪಡದಂತೆ ಕಾಪಾಡಲು ಮನೆ-ಮನೆಯ ಸೇವೆಯನ್ನು ತುಸು ಅಳವಡಿಸಲಾಗಿತ್ತು. ನಾವು ಒಂದು ವಿಳಾಸವನ್ನು ಸಂದರ್ಶಿಸುತ್ತಿದ್ದೆವು ಮತ್ತು ನಂತರ ಇನ್ನೊಂದು ಬಾಗಲನ್ನು ತಟ್ಟುವ ಮುಂಚೆ ಮಧ್ಯದ ಕೆಲವು ಮನೆಗಳನ್ನು ಬಿಟ್ಟುಬಿಡುತ್ತಿದ್ದೆವು. ಒಂದು ಮನೆಯಲ್ಲಿ ಒಬ್ಬ ಮಹಿಳೆ ರೆಜೀನ ಮತ್ತು ನನ್ನನ್ನು ಒಳಗೆ ಕರೆದಳು. ಶಾಸ್ತ್ರೀಯ ವಿಷಯವೊಂದನ್ನು ಚರ್ಚಿಸುತ್ತಿದ್ದಾಗ ಅವಳ ಮಗನು ಕೋಣೆಯೊಳಗೆ ಬಂದನು. ಅವನು ತೀರಾ ನೇರ ವ್ಯಕ್ತಿಯಾಗಿದ್ದನು.
“ನಿಮ್ಮ ದೇವರನ್ನು ನೀವೆಂದಾದರೂ ನೋಡಿದ್ದೀರೋ?” ಕೇಳಿದನವನು. “ಕೇವಲ ನಿಮ್ಮ ಮಾಹಿತಿಗಾಗಿ, ಯಾಕಂದರೆ ನಾನು ನೋಡಿದ್ದನ್ನು ಮಾತ್ರವೇ ನಂಬುತ್ತೇನೆ. ಬೇರೆ ಎಲ್ಲಾ ಶುದ್ಧ ಅವಿವೇಕ.”
“ನಾನದನ್ನು ನಂಬಲಾರೆನು,” ಉತ್ತರಿಸಿದೆ ನಾನು. “ನೀನೆಂದಾದರೂ ನಿನ್ನ ಮಿದುಳನ್ನು ನೋಡಿದಿಯ್ದಾ? ನೀನು ಮಾಡುವ ಪ್ರತಿಯೊಂದು ವಿಷಯವು ಅದು ನಿನ್ನಲ್ಲಿದೆ ಎಂದು ಸೂಚಿಸುತ್ತದೆ.”
ಕಣ್ಣಿಗೆ ಕಾಣದಿದ್ದರೂ ನಾವು ನಂಬುವ ವಿದ್ಯುತ್ಶಕ್ತಿಯೇ ಮುಂತಾದ ಕೆಲವು ದೃಷ್ಟಾಂತಗಳನ್ನು ರೆಜೀನ ಮತ್ತು ನಾನು ನೀಡಿದೆವು. ಆ ಯುವಕನು ಲಕ್ಷ್ಯಕೊಟ್ಟು ಕೇಳಿದನು, ಮತ್ತು ಅವನೊಂದಿಗೆ ಮತ್ತು ಅವನ ತಾಯಿಯೊಂದಿಗೆ ಒಂದು ಬೈಬಲ್ ಅಧ್ಯಯನ ಆರಂಭಿಸಿತು. ಅವರಿಬ್ಬರೂ ಸಾಕ್ಷಿಗಳಾದರು. ವಾಸ್ತವದಲ್ಲಿ ನನ್ನ ಪತ್ನಿ ಮತ್ತು ನಾನು ಅಭ್ಯಸಿಸಿದ 14 ವ್ಯಕ್ತಿಗಳು ಸಾಕ್ಷಿಗಳಾದರು. ಅವರಲ್ಲಿ ಅರ್ಧದಷ್ಟು ಮನೆ-ಮನೆಯ ಸಂದರ್ಶನಗಳಲ್ಲಿ ನಾವು ಸಂಪರ್ಕಿಸಿದವರು, ಮತ್ತು ಬೇರೆ ಅರ್ಧ ನಾವು ಅವಿಧಿ ಸಾಕ್ಷಿಯಲ್ಲಿ ಮೊದಲಾಗಿ ಭೇಟಿಯಾದ ಜನರಾಗಿದ್ದರು.
ಒಂದು ಮನೆ ಬೈಬಲಭ್ಯಾಸವು ಕ್ರಮವಾಗಿ ನಡಿಸಲ್ಪಟ್ಟಾಗ ಮತ್ತು ವ್ಯಕ್ತಿಯು ಭರವಸಯೋಗ್ಯನೆಂದು ನಾವು ತಿಳಿದಾಗ, ನಮ್ಮ ಕೂಟಗಳಿಗೆ ಅವನನ್ನು ಆಮಂತ್ರಿಸುತ್ತಿದ್ದೆವು. ಮುಖ್ಯ ಗಮನವಾದರೋ ಆ ವಿದ್ಯಾರ್ಥಿಯು ದೇವರ ಜನರ ಸುರಕ್ಷೆಯನ್ನು ಅಪಾಯಕ್ಕೊಡ್ಡುವನೋ ಎಂಬ ಸಂಗತಿಯಾಗಿತ್ತು. ಹೀಗೆ ಕೆಲವೊಮ್ಮೆ ಒಬ್ಬ ಬೈಬಲ್ ವಿದ್ಯಾರ್ಥಿಯನ್ನು ಒಂದು ಕೂಟಕ್ಕೆ ನಾವು ಆಮಂತ್ರಿಸುವ ಮುಂಚೆ ಒಂದು ವರ್ಷ ಅಥವಾ ಹೆಚ್ಚು ದಾಟುತ್ತಿತ್ತು, ಮತ್ತು ಕೆಲವು ಸಂದರ್ಭದಲ್ಲಿ ಅದಕ್ಕಿಂತಲೂ ಹೆಚ್ಚು. ಸ್ವಲ್ಪ ಮಟ್ಟಿನ ಪ್ರಾಧಾನ್ಯತೆಯಿದ್ದ ವ್ಯಕ್ತಿಯೊಬ್ಬನು ನನ್ನ ನೆನಪಿಗೆ ಬರುತ್ತಾನೆ. ಅವನು ಕಮ್ಯೂನಿಸ್ಟ್ ಮುಖ್ಯಾಧಿಕಾರಿಗಳನ್ನು ಮೊದಲ ಹೆಸರಿನಿಂದ ಕರೆಯುವಷ್ಟು ಸಲಿಗೆ ಸಂಬಂಧವಿದ್ದವನು. ಕೂಟಗಳಿಗೆ ಅವನನ್ನು ಹಾಜರಾಗಲು ಅನುಮತಿಸುವ ಮುಂಚೆ 9 ವರ್ಷಗಳ ಬೈಬಲಭ್ಯಾಸವನ್ನು ಅವನು ಮಾಡಬೇಕಾಯಿತು! ಇಂದು ಈ ಪುರುಷನು ನಮ್ಮ ಕ್ರೈಸ್ತ ಸಹೋದರನು.
ಅಧಿಕಾರಿಗಳು ಇನ್ನೂ ನಮ್ಮ ಬೆನ್ನಹಿಂದೆ
1965 ರ ನಂತರ ಅಧಿಕ ಸಾಮೂಹಿಕ ದಸ್ತಗಿರಿಗಳು ಆಗಲಿಲ್ಲ, ಆದರೆ ನಮ್ಮನ್ನು ಶಾಂತಿಯಿಂದಿರುವಂತೆ ಬಿಡಲೂ ಇಲ್ಲ. ಅಧಿಕಾರಿಗಳು ಇನ್ನೂ ನಮ್ಮ ಮೇಲೆ ನಿಕಟವಾಗಿ ಕಣ್ಣಿಟ್ಟಿರುತ್ತಿದ್ದರು. ಇದೇ ಸಮಯಕ್ಕೆ ಸುಮಾರಾಗಿ ನಮ್ಮ ಸಂಸ್ಥೆಯ ಕಾರ್ಯಗತಿಯೊಂದಿಗೆ ನಾನು ನಿಕಟವಾಗಿ ಒಳಗೂಡಿದವನಾದೆನು, ಆದ್ದರಿಂದ ಅಧಿಕಾರಿಗಳಿಂದ ನನಗೆ ವಿಶೇಷ ಗಮನ ಸಿಕ್ಕಿತು. ಹಲವಾರು ಸಾರಿ ಅವರು ನನ್ನನ್ನು ವಿಚಾರಣೆಗಾಗಿ ಹಿಡಿದರು, ಪೊಲೀಸ್ ಠಾಣೆಗೊಯ್ದು ವಿಧಿವತ್ತಾದ ಪ್ರಶ್ನಾವಳಿ ಹಾಕಿದರು. “ನಿನ್ನ ಸ್ವಾತಂತ್ರ್ಯವನ್ನೀಗ ನೀನು ಬೀಳ್ಕೊಡಬಹುದು,” ಅವರನ್ನುತ್ತಿದ್ದರು. “ಈಗ ಹೋಗು ಸೆರೆಮನೆಗೆ.” ಆದರೆ ಕಟ್ಟಕಡೆಗೆ ನನ್ನನ್ನು ಯಾವಾಗಲೂ ಅವರು ಬಿಟ್ಟುಬಿಡುತ್ತಿದ್ದರು.
1972 ರಲ್ಲಿ ಇಬ್ಬರು ಅಧಿಕಾರಿಗಳು ನನ್ನನ್ನು ಸಂದರ್ಶಿಸಿದರು ಮತ್ತು ಉಪೇಕ್ಷೆಯಿಂದ ನಮ್ಮ ಸಂಸ್ಥೆಗೆ ಒಳ್ಳೇ ಮೆಚ್ಚಿಕೆಯನ್ನು ವ್ಯಕ್ತಪಡಿಸಿದರು. ನಮ್ಮ ಸಭಾ ಕಾವಲಿನಬುರುಜು ಅಭ್ಯಾಸವನ್ನು ಅವರು ಆಲಿಸುತ್ತಿದ್ದರಂತೆ. “ಆ ಲೇಖನಗಳು ತೀರಾ ಉದ್ರೇಕಕಾರಿ ಎಂದು ನಾವು ಗಮನಿಸಿದೆವು,” ಆಕ್ಷೇಪಿಸಿದರವರು. ಚರ್ಚಿಸಲ್ಪಡುತ್ತಿದ್ದ ಆ ಲೇಖನಗಳನ್ನು ಒಂದುವೇಳೆ ಇತರರು ಓದಿದ್ದಲ್ಲಿ, ಕಮ್ಯೂನಿಸ್ಟ್ ತತ್ವಗಳ ಬಗ್ಗೆ ಅವರೇನು ಎಣಿಸ್ಯಾರೋ ಎಂದವರು ಚಿಂತಿತರಾಗಿದ್ದರೆಂಬದು ವ್ಯಕ್ತ. “ಎಷ್ಟೆಂದರೂ,” ಅವರಂದದ್ದು, “ವಾಚ್ಟವರ್ ಗೆ ಐವತ್ತು ಅಥವಾ ಅರುವತ್ತು ಲಕ್ಷ ಪ್ರಸರಣವಿದೆ, ಮತ್ತು ವಿಕಸಿಸುತ್ತಿರುವ ದೇಶಗಳಲ್ಲಿ ಅದು ಓದಲ್ಪಡುತ್ತದೆ. ಅದು ಒಂದು ಅಗದ್ಗ ವೃತ್ತಪತ್ರಕೆಯಲ್ಲ.” ‘ನೀವೆಷ್ಟು ಸರಿ!’ ಎಂದುಕೊಂಡೆ ನಾನು ನನ್ನಲ್ಲೇ.
1972 ರೊಳಗೆ ನಾವು ನಿಷೇಧದೊಳಗಿದ್ದು 22 ವರ್ಷಗಳು ಗತಿಸಿದ್ದವು, ಮತ್ತು ಯೆಹೋವನು ನಮ್ಮನ್ನು ಪ್ರೀತಿಯಿಂದ ಮತ್ತು ವಿವೇಕದಿಂದ ನಡಿಸಿಕೊಂಡು ಬಂದಿದ್ದನು. ನಾವಾತನ ಸೂಚನೆಗಳನ್ನು ಜಾಗರೂಕತೆಯಿಂದ ಪಾಲಿಸಿದ್ದೆವು, ಆದರೆ ಪೂರ್ವ ಜರ್ಮನಿಯ ಸಾಕ್ಷಿಗಳಿಗೆ ನ್ಯಾಯಬದ್ಧ ಅಂಗೀಕಾರವು ದೊರೆಯಲು ಇನ್ನು 18 ವರ್ಷ ದಾಟಲಿಕ್ಕಿತ್ತು. ನಮ್ಮ ದೇವರಾದ ಯೆಹೋವನನ್ನು ಆರಾಧಿಸಲು ನಾವೀಗ ಅನುಭವಿಸುತ್ತಿರುವ ಆಶ್ಚರ್ಯಕರ ಸ್ವಾತಂತ್ರ್ಯಗಳಿಗಾಗಿ ನಾವೆಷ್ಟು ಕೃತಜ್ಞರು!—ಹೆಲ್ಮುಟ್ ಮಾರ್ಟಿನ್ರಿಂದ ಹೇಳಲ್ಪಟ್ಟದ್ದು. (w92 5⁄1)