ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w91 12/1 ಪು. 25
  • “ಬೇಕಾದದ್ದು” ಯಾವುದು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಬೇಕಾದದ್ದು” ಯಾವುದು?
  • ಕಾವಲಿನಬುರುಜು—1991
  • ಅನುರೂಪ ಮಾಹಿತಿ
  • ಕೋಡೆಕ್ಷ್‌ ಬೆಝಾಯೀ ಒಂದು ಅಸದೃಶ ಹಸ್ತ ಪ್ರತಿ
    ಕಾವಲಿನಬುರುಜು—1991
  • “ನಾನು ವಿಶ್ವಾಸವಿಟ್ಟಿದ್ದೇನೆ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಮರಿಯಳು “ಉತ್ತಮ ಭಾಗವನ್ನು” ಆರಿಸಿಕೊಳ್ಳುತ್ತಾಳೆ
    ಕಾವಲಿನಬುರುಜು—1999
  • “ನಾನು ವಿಶ್ವಾಸವಿಟ್ಟಿದ್ದೇನೆ”
    ಅವರ ನಂಬಿಕೆಯನ್ನು ಅನುಕರಿಸಿ
ಕಾವಲಿನಬುರುಜು—1991
w91 12/1 ಪು. 25

“ಬೇಕಾದದ್ದು” ಯಾವುದು?

ಸುವಾರ್ತೆಗಳ ಈ ಡಬ್ಲ್ಯು ಕೋಡೆಕ್ಸ್‌, ಯೇಸು ತನ್ನ ಆಪ್ತ ಮಿತ್ರ ಲಾಜರನ ಸೋದರಿ ಮಾರ್ಥಳಿಗೆ ಹೇಳಿದುದರ ಭಾಷಾಂತರದಲ್ಲಿ ಪಾತ್ರ ವಹಿಸಿದೆ. ಯೇಸು ಆ ಕುಟುಂಬಕ್ಕೆ ಭೇಟಿಕೊಟ್ಟಾಗ, ಯೇಸುವಿಗೆ ಉತ್ತಮ ಊಟವನ್ನು ತಯಾರಿಸುವುದೇ ಪ್ರಾಮುಖ್ಯವೆಂದು ಮಾರ್ಥಳು ಎಣಿಸಿದಳು. ಆದರೆ, ಯೇಸುವನ್ನಾಲಿಸಲು ಅವನ ಪಾದಗಳ ಬಳಿ ಕೂತಿದ್ದ ಅವಳ ಸೋದರಿ ಮರಿಯಳ ಮಾದರಿಯನ್ನು ಅನುಸರಿಸುವಂತೆ ಯೇಸು ದಯಾಪೂರ್ವಕವಾಗಿ ಹೇಳಿದನು. ಅವನಂದದ್ದು: “ಕೆಲವು ಮಾತ್ರ ಬೇಕಾದದ್ದು, ಅಥವಾ ಒಂದೇ, ಮರಿಯಳು ಆ ಉತ್ತಮ ಭಾಗವನ್ನು ಆರಿಸಿಕೊಂಡಿದ್ದಾಳೆ; ಅದು ಆಕೆಯಿಂದ ತೆಗೆಯಲ್ಪಡುವದಿಲ್ಲ.”—ಲೂಕ 10:42.

ಈ ಮಾತುಗಳನ್ನು, ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಷನ್‌ಗೆ ಆಧಾರವಾಗಿರುವ, ವೆಸ್ಟ್‌ಕಾಟ್‌ ಮತ್ತು ಹಾರ್ಟ್‌ ತಯಾರಿಸಿದ 1881ರ ಗ್ರೀಕ್‌ ಮೂಲಪಾಠದಿಂದ ಭಾಷಾಂತರಿಸಲಾಗಿದೆ. ಈ ಬೈಬಲಿನ 1984ರ ರೆಫೆರೆನ್ಸ್‌ ಎಡಿಷನ್‌ನ ಪಾದಟಿಪ್ಪಣಿಯು, ಈ ವಾಚನವು ಒಂದೇ ಮೂಲಪಾಠ ವಿಧವನ್ನು ಪ್ರತಿನಿಧೀಕರಿಸುವ ಸೈನೈಟಿಕ್‌ (א) ಮತ್ತು ವ್ಯಾಟಿಕನ್‌ (B) ಹಸ್ತಪ್ರತಿಗಳಿಂದ ಬಂದಿದೆಯೆಂದು ತೋರಿಸುತ್ತದೆ. ಆದರೆ ಅಲೆಕ್ಸಾಂಡ್ರಿನ್‌ (A) ಹಸ್ತಪ್ರತಿ, “ಆದರೆ ಒಂದು ಸಂಗತಿ ಬೇಕಾಗಿದೆ. ಅವಳ ಪಾಲಿಗಾದರೋ. . . ” ಎಂದು ಹೇಳುತ್ತದೆ. ಪಾದಟಿಪ್ಪಣಿ ತಿಳಿಸುವಂತೆ, ಕೋಡೆಕ್ಸ್‌ ಡಬ್ಲ್ಯು ಮತ್ತು ಸಾ.ಶ. ಮೂರನೆಯ ಶತಕದ ಚೆಸ್ಟರ್‌ ಬೀಟಿ ಪೆಪಾಯಿರಸ್‌ (P45) ಮತ್ತು ಬಾಡ್ಮರ್‌ ಪೆಪಾಯಿರಸ್‌ (P75) ಈ ಮೇಲೆ ಕೊನೆಗೆ ಮಾಡಲ್ಪಟ್ಟಿರುವ ಭಾಷಾಂತರವನ್ನು ಒಪ್ಪುತ್ತವೆ. ಆದರೆ ಈ ಎಲ್ಲ ಹಸ್ತಪ್ರತಿಗಳು, ವೆಸ್ಟ್‌ಕಾಟ್‌ ಮತ್ತು ಹಾರ್ಟ್‌ 1881ರಲ್ಲಿ ಮೂಲಪಾಠವನ್ನು ಪ್ರಕಟಿಸಿ ದೀರ್ಘಕಾಲಾನಂತರ ಬೆಳಕಿಗೆ ಬಂದವು. ಅವರಿಗೆ ಈ ಭಾಷಾಂತರವನ್ನು ಪರಿಗಣಿಸುವ ಸಂದರ್ಭವಿರಲಿಲ್ಲ. ಆದರೆ, ನಾವು ಇಂದು ಮೂಲಪಾಠದ ಯಾವ ಭಾಷಾಂತರವನ್ನೆ ಒಪ್ಪಲಿ, ನಾವು ನಮ್ಮ ಜೀವನಗಳಲ್ಲಿ ಆತ್ಮಿಕ ಸಂಗತಿಗಳನ್ನು ಪ್ರಥಮವಾಗಿಡಬೇಕೆಂದು ಯೇಸು ಸ್ಪಷ್ಟವಾಗಿಗಿ ಹೇಳುತ್ತಾನೆ. ನಾವು ಈ ಸಲಹೆಯನ್ನು ಅನುಸರಿಸುವುದು ಎಷ್ಟೋ ಹಿತಕರ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ