ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w91 1/1 ಪು. 3
  • ಸುವರ್ಣ ನಿಯಮ ಅದು ಏನು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸುವರ್ಣ ನಿಯಮ ಅದು ಏನು?
  • ಕಾವಲಿನಬುರುಜು—1991
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಒಂದು ಸಕಾರಾತ್ಮಕ ನಿಯಮ
  • ನಾವು ಬೇರೆಯವರ ಜೊತೆ ಹೇಗಿರಬೇಕು ಅಂತ ಬೈಬಲ್‌ ಹೇಳುತ್ತೆ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಸುವರ್ಣ ನಿಯಮ ಒಂದು ಸಾರ್ವತ್ರಿಕ ಬೋಧನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಸುವರ್ಣ ನಿಯಮ ನಿಶ್ಚಯವಾಗಿಯೂ ವ್ಯಾವಹಾರಿಕವಾಗಿದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಸುವರ್ಣ ನಿಯಮ ಈಗಲೂ ಯಾಕೆ ಮೌಲ್ಯತೆಯುಳ್ಳದ್ದು?
    ಕಾವಲಿನಬುರುಜು—1991
ಇನ್ನಷ್ಟು
ಕಾವಲಿನಬುರುಜು—1991
w91 1/1 ಪು. 3

ಸುವರ್ಣ ನಿಯಮ ಅದು ಏನು?

“ನೋಡಿ! ನಾನು ನನ್ನ ನೆರೆಯವರಿಗೆ ಉಪದ್ರವ ಕೊಡುವುದಿಲ್ಲ. ನನ್ನ ವಿಷಯದಲ್ಲಿ ಹೇಳುವುದಾದರೆ, ಅವರಿಗೆ ಏನು ಮಾಡಲು ಬಯಸುತ್ತಾರೆ ಅದನ್ನು ಅವರು ಮಾಡಲಿ. ಆದರೆ, ಅವರು ಕಷ್ಟದಲ್ಲಿರುವುದಾದರೆ, ಖಂಡಿತವಾಗಿ ನಾನು ಅವರಿಗೆ ಏನು ಸಹಾಯ ಮಾಡಸಾಧ್ಯವಿದೆ ಅದನ್ನು ಮಾಡುವೆನು.” ಇದು ನಿಮ್ಮ ದೃಷ್ಟಿಕೋನವೋ? ವಿಪತ್ತು ಸಂಭವಿಸಿದಾಗ, ದಯೆಯ ಮತ್ತು ನಿಸ್ವಾರ್ಥತೆಯ ಕ್ರಿಯೆಗಳು ವಿಫುಲವಾಗಿರಬಹುದು, ಕೆಲವೊಮ್ಮೆ ಅನೇಕರನ್ನು ಚಕಿತರನ್ನಾಗಿ ಮಾಡುವಷ್ಟು ಕೂಡಾ. ಆದರೆ ಇಷ್ಟು ಮಾತ್ರ ಸಾಕೋ?

ನೀವು ಒಬ್ಬ ಹೆತ್ತವರಾಗಿರುವುದಾದರೆ, ಅವರ ಆಟದ ಸಂಗಾತಿಗಳನ್ನು ಕೆಣಕುವುದನ್ನು ಹೋಗಲಾಡಿಸುವಂತೆ ನಿಮ್ಮ ಮಕ್ಕಳಿಗೆ ನಿಸ್ಸಂದೇಹವಾಗಿ ನೀವು ಎಚ್ಚರಿಸಿದ್ದೀರಿ. ಆ ಮಾರ್ಗದರ್ಶಿಕೆಯನ್ನು ಅಲಕ್ಷ್ಯ ಮಾಡುವುದರಿಂದ ಪ್ರತೀಕಾರ ಉತ್ಪನ್ನವಾಗುವ ಕಾರಣ ನಮ್ಮ ಯೌವನದಿಂದ ನಮ್ಮಲ್ಲಿ ಅನೇಕರು ಅದರ ಗಾಯದ ಕಲೆಗಳನ್ನು ಹೊಂದಿರಬಹುದು. ಹೌದು, ಒಬ್ಬ ಪೌರ್ವಾತ್ಯ ತತ್ವಜ್ಞಾನಿ ಕನ್ಫೂಶಿಯಸ್‌ ನಿಂದ ಧ್ರುವೀಕರಿಸಲ್ಪಟ್ಟ ಒಂದು ನಡಾವಳಿ ಸೂತ್ರದ ವಿವೇಕವನ್ನು ನಾವು ಕಲಿತಿದ್ದೇವೆ: “ನಿಮಗೆ ಏನು ಮಾಡಬಾರದೆಂದು ನೀವು ಬಯಸುತ್ತೀರೋ, ಅದನ್ನು ಇತರರಿಗೆ ನೀವು ಮಾಡ ಬೇಡಿರಿ.” ಆದರೂ, ಸುವರ್ಣ ನಿಯಮ ಎಂದು ಪರಿಚಿತವಾಗಿರುವದರ ಒಂದು ನಿಕೃಷ್ಟವಾದ, ನಕಾರಾತ್ಮಕ ಪಾಠಾಂತರ ಇದಾಗಿದೆ ಎಂದು ನೀವು ಗ್ರಹಿಸಬಲ್ಲಿರೋ?

ಒಂದು ಸಕಾರಾತ್ಮಕ ನಿಯಮ

ವೆಬ್‌ಸ್ಟರ್ಸ್‌ ನ್ಯೂ ಕೊಲೆಜಿಯೆಟ್‌ ಡಿಕ್ಷನೆರಿ ಗನುಸಾರ “ಸುವರ್ಣ ನಿಯಮ” ವು “[ಮತ್ತಾಯ] 7:12 ಮತ್ತು [ಲೂಕ] 6:31 ರಲ್ಲಿ ಸೂಚಿಸಲ್ಪಟ್ಟದ್ದು, ಒಂದು ನೈತಿಕ ವರ್ತನೆಯ ನಿಯಮ ಮತ್ತು ಇತರರು ತನಗೆ ಏನು ಮಾಡಬೇಕೆಂದು ಬಯಸುತ್ತಾನೋ ಅದನ್ನೇ ಇತರರಿಗೆ ಒಬ್ಬನು ಮಾಡಬೇಕು ಎಂದು ತಿಳಿಸಲಾಗಿದೆ” ಎಂದು ಅರ್ಥ ವಿವರಣೆ ಕೊಡಲಾಗಿದೆ. ಈ ಪುಟದ ಕೆಳಗಿರುವ ಅವರಣವನ್ನು ವೀಕ್ಷಿಸಿರಿ ಮತ್ತು ಮತ್ತಾಯ ಏಳನೆಯ ಅಧ್ಯಾಯ, ವಚನ ಹನ್ನೆರಡರಲ್ಲಿನ ವಿವಿಧ ಬೈಬಲ್‌ ತರ್ಜುಮೆಗಳು ಈ ಮಾರ್ಗದರ್ಶಿ ಸೂತ್ರದ ಹೊಳಪನ್ನು ಹೇಗೆ ಪ್ರಜ್ವಲವಾಗಿ ಬೆಳಗುವಂತೆ ಬಿಟ್ಟಿದ್ದಾರೆಂದು ಗಮನಿಸಿರಿ.

ಭಾಷಾಂತರದಿಂದ ಭಾಷಾಂತರಕ್ಕೆ ಶಬ್ದಗಳು ಭಿನ್ನತೆಯವುಗಳಾಗಿರುವುದಾದರೂ, ನಿಯಮವು ಸಕಾರಾತ್ಮಕ ಎಂಬದನ್ನು ದಯಮಾಡಿ ಲಕ್ಷ್ಯಿಸಿರಿ. ಎಷ್ಟೆಂದರೂ, ಯೇಸುವು ಪರ್ವತ ಪ್ರಸಂಗದಲ್ಲಿ ಇದರ ಮೊದಲು ಇದನ್ನು ತರ್ಕಿಸಿರುತ್ತಾನೆ: “ಬೇಡಿಕೊಳ್ಳುತ್ತಾ ಇರ್ರಿ , ನಿಮಗೆ ದೊರಕುವುದು; ಹುಡುಕುತ್ತಾ ಇರ್ರಿ , ನಿಮಗೆ ಸಿಕ್ಕುವುದು; ತಟ್ಟುತ್ತಾ ಇರ್ರಿ , ನಿಮಗೆ ತೆರೆಯಲ್ಪಡುವುದು. ಬೇಡಿಕೊಳ್ಳುವ ಪ್ರತಿಯೊಬ್ಬನು ಹೊಂದುವನು, ಹುಡುಕುವವನಿಗೆ ಸಿಕ್ಕುವುದು, ತಟ್ಟುವವನಿಗೆ ತೆರೆಯುವುದು.” (ಮತ್ತಾಯ 7:7, 8, NW) ಬೇಡಿಕೊಳ್ಳುತ್ತಿರುವುದು, ಹುಡುಕುತ್ತಿರುವುದು, ತಟ್ಟುತ್ತಿರುವುದು, ಇವೆಲ್ಲಾ ಸಕಾರಾತ್ಮಕ ಕ್ರಿಯೆಗಳು. “ಆದುದರಿಂದ,” ಯೇಸು ಮುಂದುವರಿಸಿದ್ದು, “ಜನರು ನಿಮಗೆ ಮಾಡಬೇಕೆಂದು ಬಯಸುವ ಎಲ್ಲಾ ಸಂಗತಿಗಳನ್ನು, ನೀವು ಕೂಡಾ ಅದನ್ನೇ ಅವರಿಗೆ ಮಾಡತಕ್ಕದ್ದು.”—ಮತ್ತಾಯ 7:12, NW.

ಇದೇ ನಿಯಮದ ಮೂಲಕ ಜೀವಿಸಲು ಯೇಸುವಿನ ಶಿಷ್ಯರು ಸಮರ್ಥಿಸಿ ಪ್ರಚಾರ ಮಾಡಿದರು. (ರೋಮಾಪುರ 15:2; 1 ಪೇತ್ರನು 3:11; 3 ಯೋಹಾನ 11) ಆದರೂ ದುಃಖಕರವಾಗಿ, ಜನರು ಇಂದು ನಾಮ ಮಾತ್ರದ ಕ್ರೈಸ್ತರಾಗಿರಲಿ, ಯಾ ಇಲ್ಲದಿರಲಿ, ಅಧಿಕಾಂಶ ಜನರು ಇದನ್ನು ಅನುಸರಿಸುವುದಿಲ್ಲವೆಂದು ಮಾನವ ಸಂಬಂಧಗಳ ಪ್ರಚಲಿತ ಸ್ಥಿತಿಯು ರುಜುಪಡಿಸುತ್ತದೆ. ಅದರ ಅರ್ಥ ನೈತಿಕ ವರ್ತನೆಯ ಈ ನಿಯಮವು ಈಗ ಏನೂ ಮೌಲ್ಯತೆಯುಳ್ಳದ್ದಾಗಿಲ್ಲವೆಂದೋ? ಪ್ರಾಯಶಃ ಅದು ಅರೂಢಿಯಾಗಿದೆಯೋ? (w89 11/1)

[ಪುಟ 3 ರಲ್ಲಿರುವ ಚೌಕ]

“ನಿಮಗೆ ಅವರೇನೆಲ್ಲಾ ಮಾಡುತ್ತಾರೋ ಅದನ್ನೆಲ್ಲಾ ಇತರ ಮನುಷ್ಯರಿಗೆ ಮಾಡಿರಿ.”—ದ ಹೋಲಿ ಬೈಬಲ್‌, ಆರ್‌. ಎ. ನಾಕ್ಷ್‌ ರಿಂದ ತರ್ಜುಮೆಮಾಡಲ್ಪಟ್ಟದ್ದು.

“ಅವರು ನಿಮಗೆ ಹೇಗೆ ಸತ್ಕರಿಸಬೇಕೆಂದು ನೀವು ಬಯಸುತ್ತೀರೋ, ಅದೇ ರೀತಿ ಕರಾರುವಾಕಾಗಿ ಇತರ ಜನರನ್ನು ಸತ್ಕರಿಸಿರಿ.”—ದ ನ್ಯೂ ಟೆಸ್ಟಾಮೆಂಟ್‌ ಇನ್‌ ಮೋಡರ್ನ್‌ ಇಂಗ್ಲೀಷ್‌, ಜೆ. ಬಿ. ಫಿಲಿಪ್ಸ್‌ ರಿಂದ.

“ನಿಮಗೆ ಮತ್ತು ನಿಮಗೋಸ್ಕರ ಇತರರು ಮಾಡಬೇಕೆಂದು ನೀವು ಬಯಸುವುದನ್ನೆಲ್ಲಾ, ನೀವು ಕೂಡಾ ಅವರಿಗೆ ಮತ್ತು ಅವರಿಗೋಸ್ಕರ ಮಾಡಿರಿ.”—ದ ಎಂಪಿಫ್ಲೈಡ್‌ ನ್ಯೂ ಟೆಸ್ಟಾಮೆಂಟ್‌.

ನಿಮಗೆ ಅವರು ಏನು ಮಾಡಬೇಕೆಂದು ನೀವು ಬಯಸುವುದನ್ನೆಲ್ಲಾ ಅವರಿಗೆ ನೀವು ಮಾಡಿರಿ.”—ದ ನ್ಯೂ ಟೆಸ್ಟಾಮೆಂಟ್‌ ಇನ್‌ ದ ಲಾಂಗೇಜ್ವ್‌ ಆಫ್‌ ಟುಡೇ, ಡಬ್ಲ್ಯೂ. ಎಫ್‌. ಬೆಕ್‌ ರಿಂದ.

“ಹಾಗಾದರೆ ಎಲ್ಲಾ ವಿಧಗಳಲ್ಲಿ ನಿಮ್ಮ ಜತೆ ಮನುಷ್ಯರನ್ನು, ಅವರು ನಿಮ್ಮನ್ನು ಹೇಗೆ ಸತ್ಕರಿಸಬೇಕೆಂದು ಬಯಸುತ್ತೀರೋ, ತದ್ರೀತಿ ಸತ್ಕರಿಸಿರಿ.”—ದ ಫೊರ್‌ ಗೊಸ್ಪೆಲ್ಸ್‌, ಇ. ವಿ. ರಿಯು ರಿಂದ ತರ್ಜುಮೆಮಾಡಲ್ಪಟ್ಟದ್ದು.

“ಇತರರು ನಿಮ್ಮೊಂದಿಗೆ ಹೇಗೆ ವ್ಯವಹರಿಸಬೇಕೆಂದು ನೀವು ಬಯಸುತ್ತೀರೋ, ತದ್ರೀತಿ ಅವರೊಂದಿಗೆ ನೀವು ವ್ಯವಹರಿಸ ತಕ್ಕದ್ದು.”—ದ ನ್ಯೂ ಟೆಸ್ಟಾಮೆಂಟ್‌, ಸಿ. ಬಿ. ವಿಲಿಯಂ ರಿಂದ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ