ಬರಲಿರುವ ಸಹಸ್ರ ವರ್ಷಗಳಿಗಾಗಿ ಈಗ ಸಂಘಟಿಸುವುದು
“ಅವರು. . . .ಕ್ರಿಸ್ತನೊಂದಿಗೆ [ಅರಸುಗಳಾಗಿ] ಆ ಸಾವಿರ ವರ್ಷ ಆಳಿವರು.”—ಪ್ರಕಟನೆ 20:6.
1. ಇಂದಿನಿಂದ ಒಂದು ಸಹಸ್ರ ವರ್ಷಗಳಲ್ಲಿ ಭೂಮಿಯ ಮೇಲೆ ಪರಿಸ್ಥಿತಿಗಳು ಹೇಗಿರುವುವು?
ಏನು! ಇಂದಿನಿಂದ ಸಪಸ್ರ ವರ್ಷ ದಾಟಿದ ಬಳಿಕವೂ ಮಾನವ ಸಂತತಿ ಈ ಭೂಮಿಯ ಮೇಲೆ ಇರುವುದೆಂದು ನಾವು ಅರ್ಥೈಸುತ್ತೇವೂ! ಹೌದು ಹಾಗೆಯೇ ಅರ್ಥೈಸುತ್ತೇವೆ? ಅಷ್ಟೇ ಅಲ್ಲ, ಮಾನವಕುಲವು ಆಗ ಶರೀರ, ಹೃದಯ ಮತ್ತು ಮನಸ್ಸಿನಲ್ಲಿ ಪರಿಪೂರ್ಣವಾಗಿರುವುದು. ಈ ಭೂಲೋಕದಲ್ಲಿ ಮಾನವ ಅಸ್ತಿತ್ವ ಆರಂಭವಾದಾಗ ಪ್ರಥಮ ಪುರುಷ ಮತ್ತು ಸ್ತ್ರೀ ಹೇಗಿದ್ದರೋ ಹಾಗೆಯೇ ಅವರಿರುವರು. ಹೌದು, ಇಂದಿಗೆ ಒಂದು ಸಾವಿರ ವರ್ಷಗಳಲ್ಲಿ ಮಾನವರು ಅವರ ದೇವರ ಮತ್ತು ಪುನಃಸ್ಥಾಪಕನ ಸ್ವರೂಪ ಮತ್ತು ಹೋಲಿಕೆಯಲ್ಲಿರುವರು. (ಆದಿಕಾಂಡ 1:26-30) ಅವರು ಒಂದು “ಏದೆನ್ ತೋಟ”ದಲ್ಲಿ, ಸುಖಾನುಭವದ ಪ್ರಮೋದವನದಲ್ಲಿ ಮಾನವ ನಿವಾಸಿಗಳಿಂದ ಕಿಕ್ಕಿರಿದು ತುಂಬಿರದ ಶುಚಿಗೊಳಿಸಲ್ಪಟ್ಟ ಭೂಮಿಯ ಮೇಲೆ ತುಂಬಿದ ಜೀವನವನ್ನು ಅನುಭವಿಸುವರು. (ಆದಿಕಾಂಡ 2:15) ಇದೆಲ್ಲವೂ ಭೂಮಿಯ ಕಡೆಗಿದ್ದ ಮತ್ತು ಅದರ ಮೇಲೆ ಜೀವಿಸಲಿಕ್ಕಿದ್ದ ದೇವರ ಮೂಲ ಉದ್ದೇಶದ ನೆರವೇರಿಕೆಗಾಗಿ ಆಗುವುದು. ಈ ಸುಂದರ ನೆರವೇರಿಕೆ ದೇವರು ವಿರೋಧದ ಎದುರಲ್ಲೂ ಮಾನವ ಸಂತತಿಯನ್ನು ಆಶೀರ್ವದಿಸುವ ತನ್ನ ಪ್ರೀತಿಯ ವಾಗ್ದಾನಕ್ಕೆ ನಂಬಿಗಸ್ತನು ಎಂದು ಅವನನ್ನು ನಿರ್ದೋಷಿಕರಿಸುವುದು.
2. ಸುಮಾರು 19 ಶತಕಗಳಿಗೆ ಹಿಂದಿನ ಜನರು ಪರಿಪೂರ್ಣತೆ ಹೊಂದಿದ ಮಾನವ ಕುಲ ಹೇಗಿರುವದೆಂಬ ವೀಕ್ಷಣೆಯನ್ನು ಹೇಗೆ ಪಡೆದರು?
2 ಈ ಆಶೀರ್ವದಿತ ನೆರವೇರಿಕೆ, ದೇವರು ತನ್ನ ಮಹಿಮೆಗೇರಿಸಲ್ಪಟ್ಟ ಕುಮಾರನ ಮೂಲಕ, ಯಾರು 19 ಶತಕಗಳಿಗೆ ಪೂರ್ವ ಭೂಮಿಯ ಮೇಲೆ ಪರಿಪೂರ್ಣ ಮಾನವನಾಗಿ ಮೂವತ್ತಮೂರುವರೆ ವರ್ಷವಿದ್ದನೋ ಅವನ ಮೂಲಕ ಆಳುವ ಆ ಸಹಸ್ರ ಸಂವತ್ಸರಗಳನ್ನು ಸಫಲಗೊಳಿಸುವುದು. ಆ ಸಮಯದಲ್ಲಿ ಅವನು ತೋರಿಬಂದ ವಿಧವನ್ನು ಕುರಿತು ನಾವು ಓದುವುದು: “ಆ ವಾಕ್ಯವೆಂಬವನು ನರಾವತಾರವೆತ್ತಿ ನಮ್ಮ ಮಧ್ಯದಲ್ಲಿ ವಾಸಮಾಡಿದನು. ನಾವು ಆತನ ಮಹಿಮೆಯನ್ನು ನೋಡಿದೆವು; ಆ ಮಹಿಮೆಯು ತಂದೆಯ ಬಳಿಯಿಂದ ಬಂದ ಒಬ್ಬನೇ ಮಗನಿಗೆ ಇರತಕ್ಕ ಮಹಿಮೆ. ಆತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು.” (ಯೋಹಾನ 1:14) ಹೀಗೆ ಅಂದಿನ ಇಸ್ರಾಯೇಲಿನ ಜನರು ಯೇಸುಕ್ರಿಸ್ತನಲ್ಲಿ ಪರಿಪೂರ್ಣ ಜೀವಿ ಎಂಥವನೆಂದು ಕಂಡರು. (ಲೂಕ 3:23, 38) ಹೌದು, ಬರಲಿರುವ ಭೂಪ್ರಮೋದವನದಲ್ಲಿ ಪೂರ್ಣರಾದ ಮಾನವ ಕುಲ ಹೇಗಿರುವುದೆಂಬುದನ್ನು 19 ಶತಮಾನಗಳ ಹಿಂದೆ ಕೆಲವು ಜನರು ನೋಡಿದರು.
3, 4. (ಎ) ಯೇಸುಕ್ರಿಸ್ತ ಮತ್ತು 144,000 ಮಂದಿಯ ಮೂಲಕ ಯೆಹೋವನಾಳಿಕೆ ನಿಜವಾಗಿ ಎಷ್ಟು ದೀರ್ಘವಾಗಿರುವುದು? (ಬಿ) ಆ ಸಮಯಾವಧಿಗೆ ಯಾವ ವಾಕ್ಸರಣಿಯನ್ನು ಉಪಯೋಗಿಸಲಾಗಿದೆ ಮತ್ತು ಕೆಲವು ವಾಚ್ಟವರ್ ಪ್ರಕಾಶನಗಳ ಶಿರೋನಾಮಗಳಲ್ಲಿ ಇದು ಹೇಗೆ ಪ್ರತಿಬಿಂಬಿತವಾಗಿದೆ?
3 ಯೇಸು ಕ್ರಿಸ್ತನ ಮತ್ತು ಅವನ 144,000 ಶಿಷ್ಯರ ಮೂಲಕ ಆಳಲ್ಪಡುವ ಯೆಹೋವನ ರಾಜ್ಯ ಒಂದು ಸಹಸ್ರ ವರ್ಷ ದೀರ್ಘವೆಂದು ಮುಂತಿಳಿಸಲಾಗಿತ್ತು. ಆ ಸಹಸ್ರ ವರ್ಷದ ಅಧಿಪತ್ಯದ ಕುರಿತು ವೃದ್ಧ ಅಪೋಸ್ತಲ ಯೋಹಾನನು ಬರೆದದ್ದು: “ತರುವಾಯ ಸಿಂಹಾಸನಗಳನ್ನು ಕಂಡೆನು. ಅವುಗಳ ಮೇಲೆ ಜನರು ಕೂತಿದ್ದರು; ನ್ಯಾಯ ತೀರಿಸುವ ಅಧಿಕಾರವು ಅವರಿಗೆ ಕೊಡಲ್ಪಟ್ಟಿತು. ಇದಲ್ಲದೆ ಯೇಸುವಿನ ವಿಷಯವಾದ ಸಾಕ್ಷಿಯ ನಿಮಿತ್ತವಾಗಿಯೂ ದೇವರ ವಾಕ್ಯದ ನಿಮಿತ್ತವಾಗಿಯೂ ತಲೆಹೊಯಿಸಿಕೊಂಡವರ ಆತ್ಮಗಳನ್ನೂ [ವನ್ಯ] ಮೃಗಕ್ಕೂ ಅದರ ವಿಗ್ರಹಕ್ಕೂ ನಮಸ್ಕರಿಸದೆ ತಮ್ಮ ಹಣೆಯ ಮೇಲೆ ಮತ್ತು ಕೈಯ ಮೇಲೆ ಗುರುತುಹಾಕಿಸಿಕೊಳ್ಳದೆ ಇರುವವರನ್ನೂ ಕಂಡೆನು. ಅವರು ಜೀವಿತರಾಗಿ ಎದ್ದು ಸಾವಿರ ವರುಷ ಕ್ರಿಸ್ತನೊಂದಿಗೆ ಆಳಿದರು. ಮಿಕ್ಕ ಸತ್ತವರು ಆ ಸಾವಿರ ವರುಷ ತೀರುವ ತನಕ ಜೀವಿತರಾಗಿ ಏಳಲಿಲ್ಲ. ಇದೇ ಪ್ರಥಮ ಪುನರುತ್ಥಾವು. ಪ್ರಥಮ ಪುನರುತ್ಥಾನದಲ್ಲಿ ಸೇರಿರುವವನು ಧನ್ಯನೂ ಪರಿಶುದ್ಧನೂ ಆಗಿದ್ದಾನೆ. ಇಂಥವರ ಮೇಲೆ ಎರಡನೆಯ ಮರಣಕ್ಕೆ ಅಧಿಕಾರವಿಲ್ಲ; ಆದರೆ ಅವರು ದೇವರಿಗೂ ಕ್ರಿಸ್ತನಿಗೂ ಯಾಜಕರಾಗಿ ಕ್ರಿಸ್ತನೊಂದಿಗೆ [ರಾಜರುಗಳಾಗಿ] ಆ ಸಾವಿರ ವರುಷ ಆಳುವರು.”—ಪ್ರಕಟನೆ 20:4-6.
4 ಈ ಸಹಸ್ರ ವರ್ಷ ಸುಭಿಕ್ಷೆಯ ಕಾಲವಾಗಿರುವುದರಿಂದ ಇದನ್ನು ಕ್ರಿಸ್ತನ ಸಹಸ್ರವರ್ಷದಾಳಿಕೆ ಯೆಂದು ಕರೆಯಲಾಗುತ್ತದೆ. ಈ ಬೈಬಲ್ ತತ್ವವನ್ನು ಅಂಗೀಕರಿಸಿ ಕಲಿಸುವವರನ್ನು ಕೆಲವು ಸಲ ಸಹಸ್ರ ವರ್ಷವಾದಿಗಳು ಅಥವಾ “ಸಾವಿರ”ಕ್ಕಿರುವ ಗ್ರೀಕ್ ಪದಕ್ಕನುಸಾರ ಕಿಲಿಯ್ಯಾಸ್ಟ್ಸ್ ಎಂದು ಕರೆಯಲಾಗುತ್ತದೆ. ಸ್ಟಡೀಸ್ ಇನ್ ದ ಸ್ಕ್ರಿಪ್ಚರ್ಸ್ (ಒಂದು ಕಾಲದಲ್ಲಿ ವಾಚ್ಟವರ್ ಬೈಬಲ್ ಎಂಡ್ ಟ್ರಾಕ್ಟ್ ಸೊಸೈಟಿಯ ಪ್ರಕಾಶನ) ವನ್ನು ಆರಂಭದಲ್ಲಿ ಮಿಲೆನಿಯಲ್ ಡಾನ್ (ಸಹಸ್ರ ವರ್ಷದ ಅರುಣೋದಯ) ಎಂದು ಕರೆಯಲಾಗಿದ್ದದ್ದು ರಸಕರ ಸಂಗತಿ. ಅಂತರಾಷ್ಟ್ರೀಯ ಬೈಬಲ್ ವಿದ್ಯಾರ್ಥಿಗಳು ಒಮ್ಮೆ ಉಪಯೋಗಿಸುತ್ತಿದ್ದ ಸಂಗೀತ ಪುಸ್ತಕದ ಹೆಸರು ಹಿಮ್ಸ್ ಆಫ್ ದಿ ಮಿಲೆನಿಯಲ್ ಡಾನ್ (ಸಹಸ್ರ ವರ್ಷದ ಅರುಣೋದಯದ ಸ್ತುತಿಗೀತಗಳು) ಎಂದಾಗಿತ್ತು.
5. ಕ್ರಿಸ್ತನ ಸಹಸ್ರ ವರ್ಷದಾಳಿಕೆಯಲ್ಲಿ ಸೈತಾನನ ಮತ್ತು ದೆವ್ವಗಳ ಸ್ಥಿತಿ ಹೇಗಿರುವುದು?
5 ಪ್ರಕಟನೆ 20:4 ರಲ್ಲಿ ಹೇಳಿರುವ “ಸಾವಿರ ವರುಷ” ಎಂಬದು ಸಂಕೇತರೂಪದ್ದಾಗಿರದೆ ಒಂದು ಸಾವಿರ ಸೌರಮಾನ ವರ್ಷಗಳನ್ನು ಸೂಚಿಸುತ್ತದೆ. ಈ ಧರ್ಮಯುಗದಲ್ಲಿ ಪಿಶಾಚನಾದ ಸೈತಾನನೂ ಅವನ ದೆವ್ವ ಸೈನ್ಯವೂ ಅಧೋಲೋಕದಲ್ಲಿರುವುವು. ಏಕೆಂದರೆ ಕ್ರಿಸ್ತನ ಸಹಸ್ರ ವರ್ಷದಾಳಿಕೆಯ ಕುರಿತು ಹೇಳುವುದಕ್ಕೆ ತುಸು ಮೊದಲು ಅಪೋಸ್ತಲ ಯೋಹಾನನು ಹೇಳಿದ್ದು: “ಆಗ ಒಬ್ಬ ದೇವದೂತನು ಅಧೋಲೋಕದ ಬೀಗದ ಕೈಯನ್ನೂ ದೊಡ್ಡ ಸರಪಣಿಯನ್ನೂ ಕೈಯಲ್ಲಿ ಹಿಡಿದುಕೊಂಡು ಪರಲೋಕದಿಂದ ಇಳಿದು ಬರುವದನ್ನು ಕಂಡೆನು. ಅವನು ಪಿಶಾಚನೂ ಸೈತಾನನೂ ಆಗಿರುವ ಪುರಾತನ ಸರ್ಪನೆಂಬ ಘಟಸರ್ಪನನ್ನು ಹಿಡಿದು ಸಾವಿರ ವರುಷ ಬಂಧನದಲ್ಲಿಟ್ಟನು. ಆ ಸಾವಿರ ವರುಷ ತೀರುವ ತನಕ ಸೈತಾನನು ಇನ್ನೂ ಜನಗಳನ್ನು ಮರುಳುಗೊಳಿಸಿದ ಹಾಗೆ ದೇವದೂತನು ಅವನನ್ನು ಅಧೋಲೋಕದಲ್ಲಿ ದೊಬ್ಬಿ ಬಾಗಿಲು ಮುಚ್ಚಿ ಅದಕ್ಕೆ ಮುದ್ರೆಹಾಕಿದನು. ಆ ಸಾವಿರ ವರುಷಗಳಾದ ಮೇಲೆ ಅವನಿಗೆ ಸ್ವಲ್ಪಕಾಲ ಬಿಡುಗಡೆಯಾಗಬೇಕು.”—ಪ್ರಕಟನೆ 20:1-3.
6. (ಎ)ಕೆಲವು ರೋಮನ್ ಕ್ಯಾಥ್ಲಿಕರು ಕ್ರಿಸ್ತನ ಸಹಸ್ರ ವರ್ಷದಾಳಿಕೆಯ ಅಂತ್ಯಕ್ಕೆ ಯಾವ ವರ್ಷವನ್ನು ಕೊಟ್ಟಿದ್ದಾರೆ? (ಬಿ) ಈ ಕ್ಯಾಥ್ಲಿಕ್ ವಾದ ನಿಜವಾಗಿದ್ದರೆ, ತಳವಿಲ್ಲದ ಹೊಂಡದಿಂದ ಸೈತಾನನಿಗಾದ ಕೊಂಚಕಾಲದ ಬಿಡುಗಡೆ ಇಷ್ಟರ ತನಕ ಎಷ್ಟು ದೀರ್ಘಕಾಲದ್ದಾಗಿದೆ?
6 ಕೆಲವು ರೋಮನ್ ಕ್ಯಾಥಲಿಕರು ಯೇಸು ಕ್ರಿಸ್ತನ ಸಹಸ್ರ ವರ್ಷದಾಳಿಕೆ, ಫ್ರೆಂಚ್ ಸೈನಿಕರು ರೋಮ್ ನಗರವನ್ನು ವಶಪಡಿಸಿಕೊಂಡು ಆಳುತ್ತಿದ್ದ ಪೋಪನನ್ನು ಪದಚ್ಯುತ ಮಾಡಿದ ವರ್ಷವಾದ 1799 ರಲ್ಲಿ ಮುಗಿಯಿತೆಂದು ವಾದಿಸಿದ್ದುಂಟು. ಆಗ ಪೋಪನನ್ನು ಕೈದಿಯಾಗಿ ಫ್ರಾನ್ಸಿಗೆ ಒಯ್ಯಲಾಗಿತ್ತು ಮತ್ತು ಅಲ್ಲೀ ಅವನು ಮರಣ ಹೊಂದಿದನು. ಸೈತಾನನೂ ಅವನ ದೆವ್ವಗಳೂ ಆಗ “ತಳವಿಲ್ಲದ ಹೊಂಡ” ಅಥವಾ “ಅಧೋಲೋಕ” ದಿಂದ. “ಸ್ವಲ್ಪ ಕಾಲ” ಅವರ ಮೋಸ ಕೃತ್ಯಗಳನ್ನು ಪುನಃ ಆರಂಭಿಸಲು ಬಿಡಲ್ಪಟ್ಟರೆಂದು ಕ್ಯಾಥ್ಲಿಕ್ ವೈದಿಕರು ಹೇಳಿದ್ದಾರೆ. (ಪ್ರಕಟನೆ 20:1-3) ಅದು ನಿಜವಾಗಿರುವಲ್ಲಿ ಆ “ಸ್ವಲ್ಪಕಾಲ” ಈಗಾಗಲೇ 190 ವರ್ಷ ಮುಂದುವರಿದಿದೆ ಮತ್ತು ಅದರ ಅಂತ್ಯ ಕಾಣುವುದಿಲ್ಲ.
7. ಯೇಸು ಕ್ರಿಸ್ತನ ಸಹಸ್ರ ವರ್ಷದಾಳಿಕೆಯ ಸಮಯ ಮತ್ತು ಲಕ್ಷಣದ ಕುರಿತು ಬೈಬಲೇನು ಸುಚಿಸುತ್ತದೆ?
7 ಆದರೆ ಶಾಸ್ತ್ರವಚನಗಳಿಗನುಸಾರ ಯೇಸು ಕ್ರಿಸ್ತನ ಸಹಸ್ರ ವರ್ಷದಾಳಿಕೆಯು ಇನ್ನೂ ಮುಂದಕ್ಕಿದೆ. ಬೈಬಲ್ ಪ್ರವಾದನೆಗಳ ಈಗಿನ ನೆರವೇರಿಕೆ ಅದು ಅತಿ ಸನ್ನಿಹದಲ್ಲಿದೆ ಎಂದು ತೋರಿಸುತ್ತದೆ. ಆ ನಿಜ ಸಹಸ್ರ ವರ್ಷದಾಳಿಕೆಯಲ್ಲಿ ಸೈತಾನನೂ ಅವನ ದೆವ್ವಗಳು ನಿಜವಾಗಿಯೂ ಅಧೋಲೋಕಕ್ಕೆ ತಳ್ಳಲ್ಪಡುವರು. ಆಗ ಯೇಸು ಕ್ರಿಸ್ತನೂ ಅವನ 144,000 ಜೊತೆ ಬಾಧ್ಯರೂ ಸೈತಾನನ ಸಂಸ್ಥೆಯಿಂದ ಯಾವ ಅಡ್ಡಿಯೂ ಇಲ್ಲದೆ ಸರ್ವ ಮಾನವ ಕುಲದ ಮೇಲೆ ಆಳುವರು. “ಸ್ನೇಹಿತ” ಅಬ್ರಹಾಮನೊಂದಿಗೆ ಮಾಡಿದ ಯೆಹೋವನ ಒಡಂಬಡಿಕೆಯ ನೆರವೇರಿಕೆಯಾಗಿ ಸರ್ವ ವಿಮೋಚಿತ ಮಾನವ ಕುಲದ ನಿತ್ಯಾಶೀರ್ವಾದಗಳು ಈ ದುಷ್ಟ ವ್ಯವಸ್ಥೆಯ ಯಾವುದರಲ್ಲಿ ಅಂತ್ಯಗೊಳ್ಳುತ್ತದೋ ಆ ಅಸಮಾನವಾದ “ಸಂಕಟ” ದಲ್ಲಿ ಪಾರಾಗುವ “ಮಹಾ ಸಮೂಹ” ದೊಂದಿಗೆ ಪ್ರಾರಂಭಗೊಳ್ಳುವದು. ಇದು “ಕುರಿಯಾದ” ಯೇಸು ಕ್ರಿಸ್ತನ ರಕ್ತದ ಮುಖೇನ ಪ್ರಾಯಶ್ಚಿತ್ತ ಪಡೆದ ಕೋಟ್ಯಾಂತರ ಮಾನವ ಮೃತರನ್ನೂ ಆವರಿಸುವುದು. (ಯಾಕೋಬ 2:21-23; ಪ್ರಕಟನೆ 7:1-17; ಆದಿಕಾಂಡ 12;3; 22:15-18) ಈ ಉದ್ದೇಶದಿಂದ ಇವರೆಲ್ಲರೂ ಸ್ಮರಣೆಯ ಸಮಾಧಿಯಲ್ಲಿ ಮರಣ ನಿದ್ರೆಯಿಂದ ಭೂಜೀವಿತಕ್ಕೆ ಎಬ್ಬಿಸಲ್ಪಡುವರು.—ಯೋಹಾನ 5:28, 29.
ಒಂದು ಕ್ರೈಸ್ತ ಸಂಘಟನೆ
8. “ಹೊಸ ಸೃಷ್ಟಿ” ಎಂಬ ಇಂಗ್ಲಿಷ್ ಪುಸ್ತಕ ಯಾವ ಸಂಘಟನೆಯನ್ನು ವರ್ಣಿಸಿತು, ಆದರೆ ಯಾವ ಸಂಘಟನಾ ಕೆಲಸವನ್ನು ಅದು ಮುನ್ನೋಡಲಿಲ್ಲ?
8 ದೇವರ ಉದ್ದೇಶದ ಕಾರ್ಯನಡಿಸುವಿಕೆಯಲ್ಲಿ ಆ ಆಶೀರ್ವಾದಗಳು ಬರುವುದಕ್ಕೆ ಶತಮಾನಗಳ ಮೊದಲಾಗಿ ಒಂದು ಸಂಘಟನೆ ಎದ್ದು ಬಂದಿದೆ. ಈ ಸಂಸ್ಥೆಯ ಕುರಿತು ನಾವು ಓದುವುದು: “ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನ ಸೃಷ್ಟಿಯಾದನು.” “ಸುನ್ನತಿಯಾಗುವುದರಲ್ಲಿ ಏನೂ ಇಲ್ಲ, ಸುನ್ನತಿಯಾಗದೆ ಇರುವುದರಲ್ಲಿಯೂ ಏನೂ ಇಲ್ಲ ಹೊಸ ಸೃಷ್ಟಿ [ಹೊಸ ಸೃಷ್ಟಿ ಜೀವಿ, ಕಿಂಗ್ ಜೇಮ್ಸ್] ಯೇ ಬೇಕು.” (2 ಕೊರಿಂಥ 5:17; ಗಲಾತ್ಯ 6:15) 1904ರಲ್ಲಿ “ಹೊಸ ಸೃಷ್ಟಿ” ಎಂಬ ಇಂಗ್ಲಿಷ್ ಪುಸ್ತಕ ಸಾ.ಶ. ಒಂದನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ಈ ಹೊಸ ಸಂಘಟನೆಗೆ ಗಮನ ಸೆಳೆಯಿತು. (ಸ್ಟಡೀಸ್ ಇನ್ ದ ಸ್ಕ್ರಿಪ್ಯರ್ಸ್ ಪುಸ್ತಕ 6ನೇ ಮಾಲೆ, ಅಧ್ಯಯನ 5 ರಲ್ಲಿ ‘ದಿ ಆರ್ಗನೈಸೇಶನ್ ಆಫ್ ದ ನ್ಯೂ ಕ್ರಿಯೇಶನ್’ ಎಂಬ ಶಿರೋನಾಮ) ಆದರೆ 1914 ರಲ್ಲಿ ಅನ್ಯ ಜನಾಂಗಗಳ ಕಾಲದ ಮುಕ್ತಾಯದ ಅರ್ಥವೇನೆಂದರೆ ಅದರ ವೀಕ್ಷಣದ ಕಾರಣ, ಮಾನವ ಇತಿಹಾಸದ ಒಂದನೆಯ ಲೋಕಯುದ್ಧದ ಅಂಗವಿಕಲ ಪರಿಣಾಮದ ಬಳಿಕ ನಡಿಯಬೇಕಾದ ಗಮನಾರ್ಹ ಸಂಘಟನಾ ಕೆಲಸವನ್ನು ಅದು ಮುನ್ನೋಡಲಿಲ್ಲ.—ಲೂಕ 21:24.
9. ನೂತನ ಸೃಷ್ಟಿಯ ಉಳಿಕೆಯವರು ಯಾವ ಸಂದರ್ಭಕ್ಕೆ ಸಿದ್ಧರಾದರು?
9 ಒಂದನೆಯ ಲೋಕ ಯುದ್ಧ ಅಂತ್ಯವಾಗುವ ತನಕ ಆ ಆತ್ಮಿಕ ನೂತನ ಸೃಷ್ಟಿಯಲ್ಲಿ ಉಳಿಕೆಯವರ ಸಂರಕ್ಷಣೆ ಮತ್ತು ಯುದ್ಧಾ ನಂತರದ ವರ್ಷವಾದ 1919 ರ ತನಕ ಅವರನ್ನು ಶರೀರದಲ್ಲಿ ಜೀವದಿಂದುಳಿಸಿದ ವಿಷಯ ಅತ್ಯಾಶ್ಚರ್ಯವಾಗಿ ಕಂಡುಬಂತು. ಆದರೆ ಧರ್ಮಯುಗದ ಪರಿಸ್ಥಿತಿ ಸ್ಥಾಪನೆಯಾಗಿರಲಿಲ್ಲ. ಆದ್ದರಿಂದ ಈ ಹೊಸ ಸೃಷ್ಟಿಯಲ್ಲಿ ಉಳಿಕೆಯವರು ಯೇಸು ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಸಹಸ್ರ ವರ್ಷದ ಕೆಲಸದಲ್ಲಿ ಪಾಲಿಗರಾಗುವ ಮೊದಲು ಅವರಿಗೆ ಭೂಮಿಯಲ್ಲಿ ಮಾಡಲು ಇನ್ನೂ ಹೆಚ್ಚು ಕೆಲಸವಿತ್ತೆಂಬದು ವ್ಯಕ್ತವಾಯಿತು. ಈ ಕಾರಣದಿಂದ ಉಳಿಕೆಯವರನ್ನು ಪುನಃ ಚೇತರಿಸಿ, ಸ್ವಲ್ಪ ಸಂಘಟಿಸುವ ಮಹಾ ಅಗತ್ಯತೆ ಇತ್ತು. ಹೀಗೆ, ಮುಂದಿರುವ ರೋಮಾಂಚಗೊಳಿಸುವ ಕೆಲಸಕ್ಕಾಗಿ ಅವರು ಶಿಥಿಲವಾಗದ ನಂಬಿಕೆ ಮತ್ತು ಕುತೂಹಲದಿಂದ ಸಿದ್ಧರಾದರು.
10. ಹೊಸ ವ್ಯವಸ್ಥೆಯೊಳಗೆ ಪಾರಾಗುವ ಮಿಲ್ಯಾಂತರ ಮಂದಿಯ ಕುರಿತು ಯಾವ ಪ್ರಶ್ನೆಗಳಿದ್ದವು?
10 ಈ ದುಷ್ಟ ಲೋಕದ ವಿನಾಶಾಂತ್ಯದಿಂದ ಯೇಸು ಕ್ರಿಸ್ತನ ಸಹಸ್ರ ವರ್ಷದ ಆಳಿಕೆಯೊಳಗೆ ಈ ಭೂಮಿಯ ಮೇಲೆ ಮಾನವರಲ್ಲಿ ಕೆಲವರು ಪಾರಾಗಿ ಉಳಿಯುವರು ಎಂದು ಅಭಿಷಿಕ್ತ ಉಳಿಕೆಯವರು ನಿರೀಕ್ಷಿಸಿದ್ದರು. ಯುದ್ಧವರ್ಷವಾದ 1918 ರಲ್ಲಿ ಕ್ಯಾಲಿಫೋರ್ನಿಯಾದ ಲಾಸೇಂಜಲಿಸ್ನಲ್ಲಿ, “ಈಗ ಜೀವಿಸುವ ಮಿಲ್ಯಾಂತರ ಜನರು ಎಂದಿಗೂ ಸಾಯದೆ ಇರಬಹುದು” ಎಂಬ ಸಾರ್ವಜನಿಕ ಭಾಷಣವಾದ ಬಳಿಕ ಇದು ವಿಶೇಷವಾಗಿ ನಿಜವಾಗಿತ್ತು. ಹಾಗಾದರೆ ಈ ಮಿಲ್ಯಾಂತರ ಭಾವೀ ಅರ್ಮಗೆದ್ದೋನ್ ಪಾರಾಗುವವರು ಸಂಘಟಿಸಲ್ಪಡಲಿದ್ದರೋ? (ಪ್ರಕಟನೆ 16:14-16) “ನೂತನ ಭೂಮಂಡಲದ” ಭಾಗವಾಗಲು ಸೇರಿಸಲ್ಪಡುವ ಮುನ್ನ ಇವರು ಅಭಿಶಿಕ್ತರೊಂದಿಗೆ ರಾಜ್ಯ ಸಾರುವಿಕೆಯಲ್ಲಿ ಭಾಗವಹಿಸುವರೋ? (2 ಪೇತ್ರ 3:13) ಈ ಪ್ರಶ್ನೆಗಳಿಗೆ ಉತ್ತರವನ್ನು ಯುದ್ಧಾನಂತರದ ವಿಕಸನಗಳು ಕೊಡಲಿಕ್ಕಿದ್ದವು.
11. (ಎ) ಉಳಿಕೆಯವರೊಂದಿಗೆ ಒಂದೇ ಹಿಂಡಾಗಲಿದ್ದ ಬೇರೆ ಕುರಿಗಳ ವಿಷಯದಲ್ಲಿ ಏನು ಮಾಡುವ ಅವಶ್ಯಕತೆ ಇತ್ತು? (ಬಿ) ಉಳಿಕೆಯವರು ಮತ್ತು ಬೇರೆ ಕುರಿಗಳ ಮಧ್ಯೆ ಇದ್ದ ನಿರೀಕ್ಷಾ ವ್ಯತ್ಯಾಸಗಳು ಅವರ ಪ್ರತ್ಯೇಕತೆಗೆ ಏಕೆ ಕಾರಣವಲ್ಲ?
11 ಉತ್ತಮ ಕುರುಬನಾದ ಯೇಸು ಕ್ರಿಸ್ತನ ಈ ಕೆಳಗಿನ ಮಾತುಗಳು ಮುಂದೆ ಬಂದು ನಿಂತವು: “ಇದಲ್ಲದೆ ಈ ಹಟ್ಟಿಗೆ ಸೇರದಿರುವ ಇನ್ನು ಬೇರೆ ಕುರಿಗಳು ನನಗೆ ಅವೆ, ಅವುಗಳನ್ನೂ ನಾನು ತರಬೇಕು; ಅವು ನನ್ನ ಸ್ವರಕ್ಕೆ ಕಿವಿಗೊಡುವವು. ಆಗ ಒಂದೇ ಹಿಂಡು ಆಗುವದು, ಒಬ್ಬನೇ ಕುರುಬನಿರುವನು.” (ಯೋಹಾನ 10:16) 1919ರ ಬಳಿಕ ಅಭಿಶಿಕ್ತ ಉಳಿಕೆಯವರನ್ನು ಸಂಘಟಿಸುವ ಅವಶ್ಯಕತೆ ಇದ್ದುದಾದರೆ ಮತ್ತು ಈ ಬಳಿಕ ಬೇರೆ ಕುರಿಗಳೂ ಒಂದೇ ಹಟ್ಟಿಯಲ್ಲಿ ಒಂದೇ ಹಿಂಡು ಆಗಬೇಕಿದ್ದರೆ, ಇದರ ಅರ್ಥವೇನು? ಬೇರೆ ಕುರಿಗಳೂ ಉಳಿಕೆಯವರೊಂದಿಗೆ ಸಂಘಟಿಸಲ್ಪಡಬೇಕು! ಬೇರೆ ಕುರಿಗಳಿಗೆ ಇನ್ನೊಂದು ನಿರೀಕ್ಷೆ—ಸುಖಾನುಭವದ ಭೂಪ್ರಮೋದವನದಲ್ಲಿ ಜೀವನ—ಇದೆಯೆಂಬ ಕಾರಣ ಉಳಿಕೆಯವರ ಮತ್ತು ಇವರ ಮಧ್ಯೆ ವಿಭಾಗವಾಗುವ ಕಾರಣವಿರಲಿಲ್ಲ. ಅವರೆಲ್ಲರೂ ಒಬ್ಬನೇ ಕುರುಬನನ್ನು ಹಿಂಬಾಲಿಸುವವರು ಮತ್ತು ರಾಜ್ಯದಲ್ಲಿ ಅಭಿಷಿಕ್ತ ಉಳಿಕೆಯವರು ಮಹಿಮೆಗೇರಿಸಲ್ಪಡುವ ತನಕ ಈ ಎರಡು ಗುಂಪುಗಳ ನಡುವೆ ಪ್ರತ್ಯೇಕತೆ ಇರುವುದಿಲ್ಲ.
12. (ಎ) ಮಾನವ ಸಂತತಿಯ ರಕ್ಷಣೆಗಿಂತಲೂ ಯಾವುದು ಎಷ್ಟೋ ಹೆಚ್ಚು ಪ್ರಾಮುಖ್ಯ? (ಬಿ) ಯಾವಾಗ ಮತ್ತು ಏಕೆ ರಾಜ್ಯದ ಜಾಹೀರಾತು ಮಹಾ ಪ್ರಾಮುಖ್ಯತೆಯದ್ದಾಗಿ ಪರಿಣಮಿಸಿತು?
12 ಪಾಪ ಮರಣಗಳಿಂದ ಮಾನವರ ರಕ್ಷಣೆ, ಸೈತಾನನ ಲೋಕಾಧಿಪತ್ಯದ ಅಂತ್ಯ, ಭೂಮ್ಯಾದ್ಯಂತ ಪುನಃಸ್ಥಾಪಿಸಲ್ಪಟ್ಟ ಪ್ರಮೋದವನಕ್ಕೆ ವಿಧೇಯ ಮಾನವರ ಹಿಂದಿರುಗುವಿಕೆ—ಇವು ದೇವರ ಪ್ರೀತಿಯ ಉದ್ದೇಶದ ಪ್ರಧಾನ ಭಾಗಗಳು. ಆದರೂ ಇಡೀ ವಿಶ್ವಕ್ಕೆ ಇದಕ್ಕಿಂತ ಪ್ರಧಾನವಾದ ಇನ್ನೊಂದು ವಿಷಯವಿದೆ. ಅದೇನು? ಯೆಹೋವ ದೇವರ ವಿಶ್ವ ಸಾರ್ವಭೌಮತೆಯ ನಿರ್ದೋಷೀಕರಣ ಮತ್ತು ಆತನ ಪರಿಶುದ್ಧ ನಾಮದ ಪವಿತ್ರೀಕರಣವೇ ಇದು. ಆಳುತ್ತಿರುವ ರಾಜನಾದ ಯೇಸು ಕ್ರಿಸ್ತನ ಮೂಲಕವಾಗಿರುವ ಯೆಹೋವನ ರಾಜ್ಯದ ಪ್ರಸಿದ್ಧೀಕರಣದ ಸಮಯೌಚಿತ್ಯವನ್ನು ಒಹೈಯೋದ ಸೀಡರ್ ಪಾಯಿಂಟ್ನಲ್ಲಿ 1922 ರಲ್ಲಿ ನಡೆದ ಅಂತರಾಷ್ಟ್ರೀಯ ಬೈಬಲ್ ವಿದ್ಯಾರ್ಥಿಗಳ ಎರಡನೆಯ ಸಮ್ಮೇಲನ ಒತ್ತಿಹೇಳಿತು. 1914 ರಲ್ಲಿ ಅನ್ಯ ಜನಾಂಗಗಳ ಕಾಲ ಅಂತ್ಯವಾಗಿದ್ದುದರಿಂದ, “ಪರಲೋಕ ರಾಜ್ಯದ ಈ ಸುವಾರ್ತೆಯು ಸವ್ರಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವುದು. ಆಗ ಅಂತ್ಯವು ಬರುವುದು” ಎಂಬ ಯೇಸುವಿನ ಪ್ರವಾದನಾ ನೆರವೇರಿಕೆಯ ಸಮಯ ಬಂತು. (ಮತ್ತಾಯ 24:14) ಯೆಹೋವನ ವಿಶ್ವ ಸಾರ್ವಭೌಮತೆಯನ್ನು ನಿರ್ದೋಷಿಕರಿಸಿ ಅತನ ಪರಿಶುದ್ಧ ನಾಮವನ್ನು ಪವಿತ್ರೀಕರಿಸುವ ರಾಜ್ಯ ಪರಲೋಕದಲ್ಲಿ 1914 ರಲ್ಲಿ ಸ್ಥಾಪನೆಗೊಂಡಿತ್ತು ಮತ್ತು ಯೇಸು ಕ್ರಿಸ್ತನು ತನ್ನ ವೈರಿಗಳ ಮಧ್ಯೆ ಆಳುತ್ತಿದ್ದನು. ದೊರೆಯುವ ಸಕಲ ಸಾಧನಗಳ ಮೂಲಕ ರಾಜನನ್ನೂ ಅವನ ರಾಜ್ಯವನ್ನೂ ಜಾಹೀರಾತುಗೊಳಿಸಿ ಸಾರಬೇಕಾದ ಮಹಾ ಸುವಾರ್ತೆ ಇದೇ ಆಗಿತ್ತು!
13. ರಾಜ್ಯ ಘೋಷಣೆಯ ಕೆಲಸಕ್ಕಾಗಿ ದೇವರು ಏನನ್ನು ಒದಗಿಸಿದನು, ಮತ್ತು ಏಕೆ?
13 ಯೆಹೋವನು ವಿಶ್ವ ವಿಸ್ತೃತ ಮಟ್ಟದ ವ್ಯವಸ್ಥಾಪಕನು. ಏಕೆಂದರೆ ಅವನು ಸರ್ವೂನ್ನತನು, ಪರಮ ಪ್ರಧಾನನು. ಈಗ ಆತನು ಈ ವ್ಯವಸ್ಥೆಯು ಅಂತ್ಯಗೊಳ್ಳುವ ಮುಂಚೆ, ಈ ಭೂಮಿಯಲ್ಲಿ ರಾಜ್ಯವನ್ನು ಅಂತರಾಷ್ಟ್ರೀಯವಾಗಿ ಸಾರುವ ಕೆಲಸಕ್ಕಾಗಿ ಪಕ್ಕಾ ಸಂಸ್ಥಾಪನೆಯೊಂದನ್ನು ಏರ್ಪಡಿಸಿದನು. ಆತನ ಉದ್ದೇಶವನ್ನು ನೆರವೇರಿಸುವರೇ ಜೀವದಿಂದಿರುವ ಶೇಷವರ್ಗದ ಸದಸ್ಯರು ಒಂದು ಅಂತರಾಷ್ಟ್ರೀಯ ಸಂಘಟನೆಯಾಗಿ ಸಂಯೋಜಿಸಲ್ಪಟ್ಟರು. ಇವರು ಲೋಕಕ್ಕೆ, ಯೆಹೋವನ ವಿಶ್ವ ಪರಮಾಧಿಕಾರವನ್ನು ಸೈತಾನನು ಪಂಥಾಹ್ವಾನಿಸಿದ ಕಾರಣ, ಆ ಪರಮಾಧಿಕಾರದ ವಾಸ್ತವತೆ ಮತ್ತು ನ್ಯಾಯಶೀಲತೆಯು ಸದಾಕಾಲಕ್ಕೂ ನಿರ್ದೋಷಿಸಲ್ಪಡಬೇಕು, ಸಮರ್ಥಿಸಲ್ಪಡಬೇಕು ಎಂದು ಸಾರತಕ್ಕದ್ದು.
ಸಹಸ್ರ ವರ್ಷಗಳಿಗೆ ಪೂರ್ವದ ಸಂಘಟನೆ
14. (ಎ)ನಮ್ಮ ಸಮಾನ್ಯ ಶಕಕ್ಕೆ ಮೊದಲು ಯಾವ ಸಂಘಟನೆ ಯೆಹೋವನ ವಿಶ್ವ ಸಂಘಟನೆಯ ಐಹಿಕ ಭಾಗವಾಯಿತು? (ಬಿ) ದಾವೀದನು ಗಮನಾರ್ಹವಾದ ವ್ಯವಸ್ಥಾಪಕನೆಂದು ಹೇಗೆ ಸಿದ್ಧವಾಯಿತು?
14 ನಮ್ಮ ಸಾಮಾನ್ಯ ಶಕಕ್ಕೆ 15 ಶತಕಗಳಿಗೆ ಮೊದಲು ಯೆಹೋವ ದೇವರಿಗೆ ಭೂಮಿಯ ಮೇಲೆ ಒಂದು ದೃಶ್ಯ ಸಂಸ್ಥೆಯಿತ್ತು. ಇಸ್ರಾಯೇಲ್ ಜನಾಂಗ ಬೈಬಲ್ ಇತಿಹಾಸದ ಪ್ರಥಮ ಲೋಕ ಸಾಮ್ರಾಜ್ಯವಾದ ಐಗುಪ್ತದಿಂದ ಬಿಡುಗಡೆ ಹೊಂದಿದ ತರುವಾಯ ಅದನ್ನು ಸಂಘಟಿಸಲು ದೇವರು ಪ್ರವಾದಿ ಮೋಶೆಯನ್ನು ತನ್ನ ಮಧ್ಯವರ್ತಿಯಾಗಿ ಉಪಯೋಗಿಸಿದನು. ಮೋಶೆಯ ಧರ್ಮಶಾಸ್ತ್ರದೊಳಗೆ, ಇಸ್ರಾಯೇಲ್ ಯೆಹೋವನ ವಿಶ್ವ ಸಂಘಟನೆಯ ದೃಶ್ಯ ಭಾಗವಾಯಿತು. ದೇವರ ಈ ಆಯಲ್ಪಟ್ಟ ಜನರಲ್ಲಿ ಒಬ್ಬ ಪ್ರಮುಖ ಸಂಸ್ಥಾಪಕನು ಕುರುಬ-ರಾಜ ದಾವೀದನು. ಅವನ ಕುರಿತು ನಾವು ಓದುವುದು, “ಇದಲ್ಲದೆ ಅವನು [ದಾವೀದನು] [ಯೆಹೋವನ ಆಲಯದಲ್ಲಿ ಸೇವೆಮಾಡಲು] ಲೇವಿಯ ಸಂತಾನದವರಾದ ಗೆರ್ಷೋನ್ಯರು ಕೆಹಾತ್ಯರು ಮೆರಾರಿಯರು ಇವರನ್ನು ವರ್ಗವರ್ಗವಾಗಿ ವಿಭಾಗಿಸಿದನು.” “[ಯಾಜಕರ] ಈ ವರ್ಗಗಳ ವಿಷಯವಾಗಿ ಚೀಟು ಹಾಕಿದರು. ಎಲ್ಲಾ ಜಾರನ ಸಂತಾನದವರಲ್ಲಿ ಹೇಗೋ ಹಾಗೆಯೇ ಈತಾಮಾರನ ಸಂತಾನದವರಲ್ಲಿಯೂ ಪವಿತ್ರಾಲಯಾಧಿಪತಿಗಳೂ ದೈವಿಕ ಕಾರ್ಯದ ಅಧ್ಯಕ್ಷರೂ ಇದ್ದರು.—1 ಪೂರ್ವಕಾಲ ವೃತ್ತಾಂತ 23:3, 6; 24:1,5.
15. (ಎ) ಇಸ್ರಾಯೇಲ್ಯರು ಐಗುಪ್ತದಿಂದ ಹೊರಟಾಗ ಯಾವ ವಿಧದಲ್ಲಿ ಹೊರಟರು? (ಬಿ) ಯಾರು ಸಹ ಐಗುಪ್ತವನ್ನು ಬಿಟ್ಟುಹೋಗಲು ಆಯ್ದುಕೊಂಡರು ಮತ್ತು ಅವರು ಇಸ್ರಾಯೇಲ್ಯರೊಂದಿಗೆ ವಾಸಿಸಿದರೋ?
15 ದಾವೀದನ ಸಮಯಗಳಿಗೆ ನೂರಾರು ವರ್ಷಗಳಿಗೆ ಪೂರ್ವ, ಇಸ್ರಾಯೇಲ್ಯರು ಐಗುಪ್ತವನ್ನು ಬಿಟ್ಟುಹೋದಾಗ ಅವರು ಹುಚ್ಚುಹುಚ್ಚಾಗಿ ಧಾವಿಸದೆ ಕ್ರಮಬದ್ಧವಾಗಿ ಹೋದರು. ಇದು, ಅವರ ಮಧ್ಯಸ್ಥನಾದ ಮೋಶೆಯ ಉತ್ತಮ ವ್ಯವಸ್ಥಾಪನೆಯನ್ನು ಸೂಚಿಸಿತು. ಇಸ್ರಾಯೇಲ್ಯರೇತರ ಮಹಾ ಸಮೂಹವೊಂದು ಅವರೊಂದಿಗೆ ಹೊರಟುಹೋಯಿತು. ಅವರು ಆ ಅದ್ಭುತಗೈದ ದೇವರಾದ ಯೆಹೋವನ ಜನರೊಂದಿಗೆ, ಯಾರು ಐಗುಪ್ತದ ಸಕಲ ದೇವತೆಗಳಿಗಿಂತ ಬಲಾಡ್ಯನೋ ಆ ದೇವರ ಜನರೊಂದಿಗೆ ಸಹಭಾಗಿಗಳಾಗಲು ಆಯ್ದುಕೊಂಡರು. ಅನೇಕ ಕಷ್ಟಗಳು ಬಂದರೂ ಸ್ವಲ್ಪ ಸಮಯಾನಂತರ, ಯೆಹೋವನು ಆಯ್ದುಕೊಂಡ ಜನರ ಕಡೆಗೆ ಸದುದ್ದೇಶವನ್ನು ತೋರಿಸಿದ ಈ “ಬಹುಮಂದಿ ಅನ್ಯರು” ಆ ಭಯಂಕರ ಸೀನಾಯ ಅರಣ್ಯ ಪ್ರದೇಶದಲ್ಲಿ ಅವರೊಂದಿಗೆ ಇನ್ನೂ ಇದ್ದರು. (ವಿಮೋಚನಾಕಾಂಡ 12:37-51; ಅರಣ್ಯಕಾಂಡ 11:4) ಇಸ್ರಾಯೇಲ್ಯರೊಂದಿಗೆ ಈ ಮಿಶ್ರ ಜನಸಮೂಹ, ಮೋಶೆಯ ಉತ್ತರಾಧಿಕಾರಿಯಾಗಿದ್ದ ಯೆಹೋಶುವನ ನಾಯಕತ್ವದ ಕೆಳಗೆ ವಾಗ್ದಾನ ದೇಶವನ್ನು ಪ್ರವೇಶಿಸಿದರೆಂಬದು ವ್ಯಕ್ತ ದೇವರು ಇಂತಹ ಅನ್ಯ ನಿವಾಸಿಗಳಿಗೆ ಒದಗಿಸುವಿಕೆಗಳು ಮಾಡಲ್ಪಡುವಂತೆ ಏರ್ಪಡಿಸಿದನು.
16. (ಎ) ಆ ಬಹುಮಂದಿ ಅನ್ಯರು ಯಾರನ್ನು ಮುನ್ಸೂಚಿಸಿದರು? (ಬಿ) ಈ ವ್ಯವಸ್ಥೆಯ ಅಂತ್ಯವನ್ನು ಪಾರಾಗಲು ಇವರೇನು ಮಾಡತಕ್ಕದು?
16 ಫರೋಹನ ಐಗುಪ್ತದಿಂದ ಬಂದ ಈ “ಬಹು ಮಂದಿ” ಅನ್ಯರು 20ನೇ ಶತಮಾನದ ಮಹಾ ಸಮೂಹವನ್ನು ಮುನ್ಸೂಚಿಸುತ್ತಾರೆ. ಇವರು ಆತ್ಮಿಕ ಇಸ್ರಾಯೇಲ್ಯರಲ್ಲ. ಅವರು ಉತ್ತಮ ಕುರುಬನಾದ ಯೇಸು ಕ್ರಿಸ್ತನ ಬೇರೆ ಕುರಿಗಳು. ಇವರು ಅಭಿಷಿಕ್ತ ಉಳಿಕೆಯವರೊಂದಿಗೆ, ಮಹಾ ಫರೋಹನಾದ ಪಿಶಾಚನಾದ ಸೈತಾನನು ಯಾವುದರ ದೇವರೋ ಆ ಐಗುಪ್ತದ ಮೂಲಬಿಂಬವಾದ ಈ ಲೋಕ ವ್ಯವಸ್ಥೆಯಿಂದ ಪೂರ್ಣ ಬಿಡುಗಡೆಯನ್ನು ಮುನ್ನೋಡುತ್ತಾರೆ. (ಯೋಹಾನ 10:16; 2 ಕೊರಿಂಥ 4:4; ಪ್ರಕಟನೆ 7:9) ಆದರೆ ಸೈತಾನನ ಹಳೆಯ ಲೋಕದ ಹಿಂಸಾತ್ಮಕ ನಾಶನವನ್ನು ಪಾರಾಗಿ ಮಹಾ ಯೆಹೋಶುವನಾದ ಯೇಸು ಕ್ರಿಸ್ತನ ಅಧಿಕಾರದಲ್ಲಿರುವ ವಾಗ್ದಾನಿತ ನೂತನ ಲೋಕವನ್ನು ಪ್ರವೇಶಿಸ ಬೇಕಾದರೆ ಅವರೇನು ಮಾಡತಕ್ಕದ್ದು? (2 ಪೇತ್ರ 3:13) ಅವರು ಯೆಹೋವನ ದೃಶ್ಯ ಸಂಸ್ಥೆಯ ನಾಭಿಯಾಗಿರುವ ಅಭಿಷಿಕ್ತ ಉಳಿಕೆಯವರು ಮಾಡಿರುವ ವ್ಯವಸ್ಥಾಪನಾ ಏರ್ಪಾಡಿಗೆ ಅನುಸಾರವಾಗಿ ನಡೆಯತಕ್ಕದ್ದು.
17. ಈ ಅಸ್ತವ್ಯಸ್ತವಾದ ಲೋಕದಲ್ಲಿ ಮಹಾ ಸಮೂಹದವರು ಹೇಗೆ ವರ್ತಿಸುತ್ತಾರೆ, ಮತ್ತು ಅವರು ಏನನ್ನು ಮುನ್ನೋಡುತ್ತಾರೆ?
17 ವಿಶೇಷವಾಗಿ, 20ನೆಯ ಶತಮಾನದ ನಾಲ್ಕನೆಯ ದಶಕಗಳ ಮಧ್ಯಭಾಗದಿಂದ ಹಿಡಿದು, ಬೇರೆ ಕುರಿಗಳ ಮಹಾ ಸಮೂಹ, ಮಹಿಮೆಗೇರಿಸಲ್ಪಟ್ಟ ಒಬ್ಬನೇ ಕುರುಬನೂ ಆಳುವ ರಾಜನೂ ಆದ ಕ್ರೈಸ್ತ ಕೆಳಗೆ ಸಂಸ್ಥಾಪಿಸಲ್ಪಟ್ಟಿರುವ ಒಂದೇ ಮಂದೆಯೊಳಗೆ ತರಲ್ಪಟ್ಟಿದ್ದಾರೆ. ಸಂಯುಕ್ತ ರಾಷ್ಟ್ರಗಳ ಸಂಘಟನೆಯ ಅಸ್ತಿತ್ವದ ಎದುರಿನಲ್ಲಿಯೂ ಹೆಚ್ಚೆಚ್ಚಾಗಿ ಅಸ್ತವ್ಯಸ್ತವಾಗಿರುವ ಲೋಕದಲ್ಲಿ ಈ ಮಹಾ ಸಮೂಹದವರು ಅಭಿಷಿಕ್ತ ಉಳಿಕೆಯವರನ್ನು ಹೃತ್ಪೂರ್ವಕವಾಗಿ ಬೆಂಬಲಿಸುತ್ತಾ ಹೀಗೆ ಪವಿತ್ರಾತ್ಮದ ಐಕ್ಯತೆಯ ಶಕ್ತಿಯ ರುಜುವಾತನ್ನು ಒದಗಿಸುತ್ತಾರೆ. ಅವರು ದೃಢತೆಯಿಂದ ಉಳಿಕೆಯವರೊಂದಿಗೆ ಸಂಘಟಿತರಾಗಿದ್ದು, ಅದೇ ಸಮಯ ಯೇಸು ಕ್ರಿಸ್ತನ ಸಹಸ್ರ ವರ್ಷಗಳ ಆಳಿಕೆಯ ಸಮಯದಲ್ಲಿ ಭೂಮಿಯ ವಿಶೇಷ ಸೇವೆಯನ್ನು ಮಾಡಲು ಮುನ್ನೋಡುತ್ತಿದ್ದಾರೆ. (w89 9/1)
ನಿಮ್ಮ ಯೋಚನೆ ಏನು?
◻ ಯೇಸು ಕ್ರಿಸ್ತ ಸಹಸ್ರ ವರ್ಷದಾಳಿಕೆಯ ಸಮಯ ಮತ್ತು ಲಕ್ಷಣದ ಕುರಿತು ಶಾಸ್ತ್ರವಚನಗಳೇನು ಹೇಳುತ್ತವೆ?
◻ ಮಾನವ ಕುಲದ ರಕ್ಷಣೆಗಿಂತ ಇನ್ನಾವುದು ಎಷ್ಟೋ ಹೆಚ್ಚು ಪ್ರಾಮುಖ್ಯ?
◻ ನಮ್ಮ ಸಾಮಾನ್ಯ ಶಕಕ್ಕೆ ಪೂರ್ವ ಯಾವ ಸಂಘಟನೆ ಯೆಹೋವನ ವಿಶ್ವ ಸಂಘಟನೆಯ ಐಹಿಕ ಭಾಗವಾಯಿತು?
◻ ಬಹು ಮಂದಿ ಅನ್ಯರಿಂದ ಮುನ್ಸೂಚಿತರಾದವರು ಸಹಸ್ರ ವರ್ಷದೊಳಗೆ ಹೇಗೆ ಪಾರಾಗುವರು?