ಯೆಹೋವನಿಗೆ ನಾವು ಹೇಗೆ ಹಿಂದೆ ಸಲ್ಲಿಸೋಣ?
ಯಾರಾದರೊಬ್ಬರು ನಮ್ಮಲ್ಲಿ ನಿಷ್ಕಪಟ, ಬೆಚ್ಚಗಿನ ಆಸಕ್ತಿಯನ್ನು ವಹಿಸಿ, ಪ್ರಾಯಶ: ನಮ್ಮ ಪ್ರಯೋಜನಕ್ಕಾಗಿ ಏನಾದರೂ ಮಾಡಿರುವದಾದರೆ, ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ದಯೆ ಮತ್ತು ಉದಾರತೆಯು ಸಾಮಾನ್ಯವಾಗಿ ಪ್ರತಿಕ್ರಿಯೆಯನ್ನು ತರುತ್ತವೆ, ಅಲ್ಲವೇ? ನಮ್ಮೆಡೆಗೆ ಸ್ಥಿರತೆಯಿಂದ ಪ್ರೀತಿ-ದಯೆಯನ್ನು ತೋರಿಸುವ ನಮ್ಮ ದೇವರಾದ ಯೆಹೋವನೆಡೆಗೆ, ಹಾಗಾದರೆ ನಮ್ಮ ಭಾವನೆಗಳೇನು?
ನಮ್ಮ ದೈನಂದಿನದ ಜೀವಿತದ ಒತ್ತಡಗಳಿಂದಾಗಿ, ಯೆಹೋವನ ಉಪಕಾರಗಳನ್ನು ವಿಧಿವಿಹಿತವಾಗಿ ತೆಗೆದುಕೊಳ್ಳುತ್ತಾ, ಸುಲಭವಾಗಿ, ಅವಸರವಾಗಿ, ಕೆಲವೊಮ್ಮೆ ನಾವು ನಿಜವಾಗಿ ಕೃತಜ್ಞರಾಗಿಲವ್ಲೋ ಎಂಬ ರೀತಿಯಲ್ಲಿ ವರ್ತಿಸುತ್ತಾ ಮುಂದುವರಿಯಬಹುದು. ಆದುದರಿಂದ ಕ್ಷಣಕಾಲ ನಿಂತು, ಕೀರ್ತನೆಗಾರನ ಪ್ರಶ್ನೆಯ ಮೇಲೆ ಪ್ರತಿಬಿಂಬಿಸುವದರಿಂದ ಒಳ್ಳೇದನ್ನು ಮಾಡುತ್ತೇವೆ: “ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ?” (ಕೀರ್ತನೆ 116:12) ಯಾವ ರೀತಿಯಲ್ಲಿ ನಾವು ಪ್ರತಿಕ್ರಿಯಿಸುವೆವು?
ಯೆಹೋವನಿಂದ ಪ್ರಯೋಜನಗಳು
ಯೆಹೋವನ ವರದಾನವಾದ ಆತನ ವಾಕ್ಯ, ಬೈಬಲ್ ಇಲ್ಲದಿರುತ್ತಿದ್ದರೆ, ನಾವೆಷ್ಟು ಕಳೆದುಕೊಳ್ಳುತ್ತಿದ್ದೆವು! ಈ ಪುಸ್ತಕವನ್ನು ಓದಲು ಮತ್ತು ಪಡೆಯಲು ಗತಶತಕದ ಧೈರ್ಯಶಾಲೀ ಪುರುಷರು ಮತ್ತು ಸ್ತ್ರೀಯರು ತಮ್ಮ ಜೀವಗಳನ್ನೇ ಅಪಾಯಕ್ಕೊಡ್ಡಿದ್ದರು ಮತ್ತು ನಾವು ಅದು ಯಾಕೆ ಎಂದು ತಿಳಿಯುವಷ್ಟು ಬಲಿತವರಾಗಿದ್ದೇವೆ. ಪ್ರೇರಿತ ಶಾಸ್ತ್ರಗಳಿಗಾಗಿ ದೇವರ ಮನುಷ್ಯರು ಯಾವಾಗಲೂ ಕೃತಜ್ಞರಾಗಿದ್ದರು, ಅದು “ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ” ಪ್ರಯೋಜನಕಾರಿಯಾಗಿರುವ ವಿಷಯವನ್ನು ತಿಳಿದವರಾಗಿದ್ದರು.—2 ತಿಮೊಥಿ 3:16.
ಆದಾಗ್ಯೂ, “ಸಕಲ ಸತ್ಕಾರ್ಯಕ್ಕೆ ಸನ್ನದ್ಧನಾಗಲು” ಬೈಬಲಿನ ತಲೇಜ್ಞಾನಕ್ಕಿಂತ ಹೆಚ್ಚಿನದ್ದು ಬೇಕಾಗಿದೆ ಎಂದು ನಾವು ಬಲ್ಲೆವು. (2 ತಿಮೊಥಿ 3:17) ನಮ್ಮ ಜೀವಿತದಲ್ಲಿ ದೇವರ ಪವಿತ್ರಾತ್ಮದ ಶಕ್ತಿಯ ಮೂಲಕ ಪ್ರಯೋಜನಗಳನ್ನು ತರಲಾಗಿದೆ ಮತ್ತು ಆತನ ಪ್ರವಾದಿಯಾದ ಯೆಶಾಯನ ಮನವೆಯ ಮಾತುಗಳಿಂದ ಈ ವಾಸ್ತವಾಂಶವು ನಮ್ಮ ಗಮನಕ್ಕೆ ತರಲಾಗಿದೆ: “ಈಗ ಸಾರ್ವಭೌಮ ಪ್ರಭುವಾದ ಯೆಹೋವನು ತಾನೇ ತನ್ನ ಆತ್ಮದೊಡನೆ ನನ್ನನ್ನು ಕಳುಹಿಸಿದ್ದಾನೆ. ನಿನ್ನ ವಿಮೋಚಕನೂ ಇಸ್ರಾಯೇಲ್ಯರ ಸ್ವಾಮಿಯೂ ಆದ ಯೆಹೋವನು ಹೀಗನ್ನುತ್ತಾನೆ—ನಾನೇ ನಿನ್ನ ದೇವರಾದ ಯೆಹೋವನು. ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯ ಬೇಕಾದ ದಾರಿಯಲ್ಲಿ ನಿನ್ನನ್ನು ನಡಿಸುವವನಾಗಿದ್ದೇನೆ. ನೀನು ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸಮಾಧಾನ ದೊಡ್ಡ ನದಿಯಂತೆಯೂ ನಿನ್ನ ನೀತಿಯು ಸಮುದ್ರದ ಅಲೆಗಳ ಹಾಗೂ ಇರುತ್ತಿದ್ದವು.” (ಯೆಶಾಯ 48:16-18) ತನ್ನ ಪವಿತ್ರಾತ್ಮ ಮತ್ತು ತನ್ನ ವಾಕ್ಯದ ಸಹಯೋಗದಲ್ಲಿ ನಮಗೆ ಪ್ರಯೋಜನವಾಗುವ ರೀತಿಯಲ್ಲಿ ಯೆಹೋವನು ನಮ್ಮನ್ನು ಮಾರ್ಗದರ್ಶಿಸುತ್ತಾನೆ ಮತ್ತು ಅದರ ಫಲಿತಾಂಶವು ಸಮಾಧಾನ ಮತ್ತು ನೀತಿಯಾಗಿದೆ.
ಇಷ್ಟಲ್ಲದೇ, ಯೆಹೋವನ ಕಾರ್ಯಕಾರೀ ಶಕ್ತಿಯು ನಮ್ಮ ಒಳ್ಳಿತ್ತಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ, ಕಾರಣ ಒಂದು ಚೌಕಟ್ಟು ರೂಪಿಸಲಾಗಿದೆ. ಒಂದು ಐಹಿಕ ಸಂಸ್ಥಾಪನೆಯ ಮೂಲಕ ಪವಿತ್ರಾತ್ಮವು ಇಂದು ಕಾರ್ಯ ನಿರ್ವಹಿಸುತ್ತದೆ. 1 ಕೊರಿಂಥ 12ನೇ ಅಧ್ಯಾಯದಲ್ಲಿ ಕ್ರೈಸ್ತ ಸಭೆಯನ್ನು ಪೌಲನು ಒಂದು ದೇಹಕ್ಕೆ ಸೂಚಿಸಿ, 7ನೇ ವಚನದಲ್ಲಿ ಹೇಳುವದು: “ಆದರೆ ಪ್ರತಿಯೊಬ್ಬನಲ್ಲಿ ತೋರಿಬರುವ ದೇವರಾತ್ಮನ ವರಗಳು ಸರ್ವರ ಪ್ರಯೋಜನಾರ್ಥವಾಗಿ ಕೊಡಲ್ಪಟ್ಟವೆ.” ದೇವರ ಐಹಿಕ ಸಂಸ್ಥೆಯ ಒಂದು ಭಾಗವಾಗಿರುವ ಮೂಲಕ ನಾವು ಹೇಗೆ ಪ್ರಯೋಜನ ಪಡೆಯುತ್ತೇವೆಂದು ಅವನು ತೋರಿಸುತ್ತಾ ಹೋಗುತ್ತಾನೆ.
ಇದನ್ನು ಬರೆದು ಐದು ವರ್ಪವೂ ಯಾ ಅದರ ನಂತರವೋ, ಅವನು ಎಫೆಸದಲ್ಲಿರುವ ಸಭೆಗೆ ತನ್ನ ಪತ್ರವನ್ನು ಬರೆಯುತ್ತಾನೆ. ಅದರಲ್ಲಿ ಆ ಐಹಿಕ ಏರ್ಪಾಡಿನೊಂದಿಗೆ ಸಂಬಂಧವಿರುವದರಿಂದ ಬರುವ ಪ್ರಯೋಜನಗಳ ಕುರಿತು ಅವನು ವಿಸ್ತರಿಸಿ ಬರೆಯುತ್ತಾನೆ. ಮೊದಲಾಗಿ, ಅವನೇನು ಬರೆದನೋ ಅದು ಅಭಿಷಿಕ್ತ ಕ್ರೈಸ್ತರಿಗೆ ಅನ್ವಯಿಸುವುದಾದರೂ, ಇಂದಿನ “ಮಹಾ ಸಮೂಹ” ದಲ್ಲಿರುವರು ಕೂಡಾ ‘ಶುಶ್ರೂಷೆಯ ಕೆಲಸಕ್ಕೆ ಯೋಗ್ಯ ಸ್ಥಿತಿಗೆ ತರುವದಕ್ಕೋಸ್ಕರ’ ‘ಆತ್ಮಿಕತೆಯಲ್ಲಿ ಪರಿಪೂರ್ಣ ಪುರುಷರಾಗುವದಕ್ಕೋಸ್ಕರ’ ನಂಬಿಕೆಯಲ್ಲಿ ಸ್ಥಿರತೆಯಿಂದಿರಲು, ‘ಇನ್ನುಮೇಲೆ ಕೂಸುಗಳಾಗಿರದಂತೆ’ ಮತ್ತು ಶಿರಸ್ಸಾದ ಕ್ರಿಸ್ತನಲ್ಲಿ, ಪ್ರೀತಿಯಿಂದ ಎಲ್ಲಾ ವಿಷಯಗಳಲ್ಲಿಯೂ ಐಕ್ಯರಾಗಿರಲು ಸಾಧ್ಯಮಾಡಿದೆಯಲ್ಲವೋ? (ಪ್ರಕಟನೆ 7:9; ಎಫೆಸ 4:12-16) ಕೃತಜ್ಞರಾಗಿರಲು ನಮಗೆಲ್ಲರಿಗೆ ಒಳ್ಳೆಯ ಕಾರಣವಿದೆ.
ಆತ್ಮಿಕವಾಗಿ ನಮ್ಮನ್ನು ಉಣಿಸಲು ಕೆಲಸವಿರುವ ನಂಬಿಗಸ್ತನೂ ವಿವೇಕಿಯೂ ಆದ ಆಳು ಕ್ರೈಸ್ತ ಸಭೆಯೊಂದಿಗೆ ಗುರುತಿಸಲ್ಪಟ್ಟು, ಯೆಹೋವನು ನಮಗೆ ಪ್ರಯೋಜನವಾಗುವದನ್ನು ಮಾಡುತ್ತಾನೆಂಬದು ಇನ್ನೊಂದು ರುಜುವಾತಾಗಿದೆ. (ಮತ್ತಾಯ 24:45, 46) ಧಣಿಯ ಹಾಜರಾಗುವಿಕೆಯ ಮುಂತಿಳಿಸಲ್ಪಟ್ಟ ಸಮಯದಲ್ಲಿ ನಾವೀಗ ಜೀವಿಸುತ್ತಾ ಇದ್ದೇವೆ. “ಆಳು” ತನ್ನ ಕೆಲಸವನ್ನು ಮಾಡುತ್ತಾ ಇದ್ದಾನೋ? ಈ “ಕಡೇ ದಿವಸಗಳ” ಉತ್ಸಾಹಶೂನ್ಯತೆಯ ನಡುವೆಯೂ, ನಾವು ನಿರೀಕ್ಷೆಯಿಂದ ತುಂಬಿರುವದಿಲ್ಲವೇ? ಜೀವಿತದಲ್ಲಿ ನಮಗೊಂದು ಬೆಲೆಯುಳ್ಳ ಉದ್ದೇಶವಿದೆಯೋ? (2 ತಿಮೊಥಿ 3:1-5; ರೋಮಾ ಪುರ 5:5; 1 ತಿಮೊಥಿ 4:10) ಹೌದು! ನಮ್ಮ ನಿರೀಕ್ಷೆಯು ಕೇವಲ ಒಂದು ಸಂಭವನೀಯತೆಯಲ್ಲ. ಬದಲು ದೃಢವಾದ ರುಜುವಾತಿನ ಮೇಲೆ ಆಧರಿಸಿದ ನಂಬಿಕೆಯ ಮೇಲೆ ಕಟ್ಟಲ್ಪಟ್ಟ ಖಚಿತ ಮನವರಿಕೆಯಾಗಿದೆ.—ಇಬ್ರಿಯ 11:1.
ಆದುದರಿಂದ, ಸ್ಪಷ್ಟವಾಗಿ ತೋರುವಂತೆ, ನಮ್ಮ ಮಹಾ ಪ್ರಯೋಜಕನಾದ ಯೆಹೋವನು, ಕೃತಜ್ಞರಾಗಿರಲು ನಮಗೆ ಎಷ್ಟೋ ಸಂಗತಿಗಳನ್ನು ಕೊಟ್ಟಿದ್ದಾನೆ. ಆದ್ದರಿಂದ ತಾರ್ಕಿಕವಾಗಿ ಹಿಂಬಾಲಿಸುವ ಪ್ರಶ್ನೆಯು:
ಯೆಹೋವನಿಗೆ ನಾನು ಏನನ್ನು ಹಿಂದೆ ಕೊಡುವೆನು?
ಮೊದಲಾಗಿ, ಯೆಹೋವನಿಗೆ ನಮ್ಮಿಂದ ಏನೂ ಬೇಕಾಗಿಲ್ಲವೆಂಬದನ್ನು ನಾವು ಅಂಗೀಕರಿಸತಕ್ಕದ್ದು. ಅವನನ್ನುವದು: “ಬೆಳ್ಳಿಯೆಲ್ಲಾ ನನ್ನದು, ಬಂಗಾರವೆಲ್ಲಾ ನನ್ನದು,” ತದ್ರೀತಿ “ಸಾವಿರಾರು ಗುಡ್ಡಗಳಲ್ಲಿರುವ ಪಶುಗಳೂ ನನ್ನವೇ.” (ಹಗ್ಗಾಯ 2:8; ಕೀರ್ತನೆ 50:10; ಯೋಬ 41:11) ಅದರ ಅರ್ಥ ನಾವು ಯೆಹೋವ ದೇವರ ಮೆಚ್ಚಿಗೆಯನ್ನು “ಖರೀದಿಸ” ಸಾಧ್ಯವಿಲ್ಲ. ಆದರೂ ಆತನಿಗೆ ಸ್ವಯಿಚ್ಛೆಯ ಕಾಣಿಕೆಗಳನ್ನು ಕೊಡಲು ನಮ್ಮನ್ನು ಪ್ರೋತ್ಸಾಹಿಸಲಾಗಿದೆ. (1 ಪೂರ್ವಕಾಲ 29:14) ಆದಾಗ್ಯೂ, ಯೆಹೋವನಿಗೆ ಕಾಣಿಕೆಗಳನ್ನು ಕೊಡಲು ನಮಗೆ ಒಪ್ಪಿಗೆ ನೀಡಿದಾಗ, ಕೆಲವೊಂದು ಶರ್ತಗಳು ಅಲ್ಲಿರುತ್ತವೆ.
“ನಾನು ಯೆಹೋವನ ಸನ್ನಿಧಿಯಲ್ಲಿ ಯಾವ ಕಾಣಿಕೆಯೊಡನೆ ಕಾಣಿಸಿಕೊಳ್ಳಲಿ, ಯಾವದನ್ನರ್ಪಿಸಿ ಮಹೋನ್ನತ ದೇವರ ಸಮ್ಮುಖದಲ್ಲಿ ಅಡ್ಡಬೀಳಲಿ? ಹೋಮದ ಪಶುಗಳನ್ನು ಒಂದು ವರ್ಷದ ಕರುಗಳನ್ನು ತೆಗೆದುಕೊಂಡು ಬಂದು ಆತನ ಮುಂದೆ ಕಾಣಿಸಿಕೊಳ್ಳಲೋ? ಸಾವಿರಾರು ಟಗರುಗಳನ್ನೂ ಲಕ್ಷೋಪಲಕ್ಷ ತೈಲಪ್ರವಾಹಗಳನ್ನೂ ನೋಡಿ ಯೆಹೋವನು ಮೆಚ್ಚಾನೇ? ನನ್ನ ದ್ರೋಹದ ನಿಮಿತ್ತ ನನ್ನ ಚೊಚ್ಚಲ ಮಗನನ್ನು ಅರ್ಪಿಸಲೋ, ನನ್ನ ಆತ್ಮದ ಪಾಪಕ್ಕಾಗಿ ನನ್ನ ಗರ್ಭದ ಫಲವನ್ನು ಸಲ್ಲಿಸಲೋ? ಮನುಷ್ಯನೇ, ಒಳ್ಳೆಯದು ಇಂಥಹದ್ದೇ ಎಂದು ಯೆಹೋವನು ನಿನಗೆ ತೋರಿಸಿದ್ದಾನಷ್ಟೇ; ನ್ಯಾಯವನ್ನು ಆಚರಿಸುವದು, ಕರುಣೆಯಲ್ಲಿ ಆಸಕ್ತನಾಗಿರುವದು ನಿನ್ನ ದೇವರಿಗೆ ನಮ್ರನಾಗಿ ನಡೆದುಕೊಳ್ಳುವದು, ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?”—ಮೀಕ 6:6-8.
ಯೆಹೋವನ ಅವಶ್ಯಕತೆಗಳು ಯಾವಾಗಲೂ ಸಮಂಜಸವಾದವುಗಳೂ, ಯಾವಾಗಲೂ ಮುಟ್ಟ ಸಾಧ್ಯವಾದವುಗಳೂ ಎಂದು ನಾವಿದರಿಂದ ಕಲಿಯುತ್ತೇವೆ. ಇದಕ್ಕೆ ಕೂಡಿಸಿ, ನಮ್ಮ ಕಾಣಿಕೆಗಳು ಸ್ವೀಕರಣೀಯವಾಗಬೇಕಾದರೆ ಯೆಹೋವ ಮತ್ತು ನಮ್ಮ ಒಡನಾಡಿ ಮನುಷ್ಯರೊಂದಿಗೆ ನಮ್ಮ ಸಂಬಂಧವು ಯೋಗ್ಯವಾಗಿರತಕ್ಕದ್ದೆಂಬದು ಪೂರ್ವಾಪೇಕ್ಷಿತವೆಂದು ಯೇಸು ತೋರಿಸುತ್ತಾನೆ. (ಮತ್ತಾಯ 5:23, 24) ಯೋಗ್ಯವಾದ ಬುನಾದಿಯನ್ನು ಹಾಕಿದ ನಂತರ, ಅವನು ನಮ್ಮೆಡೆಗೆ ತೋರಿಸುವ ಅವನ ಒಳ್ಳೇತನದ ಗಣ್ಯತೆಯಲ್ಲಿ ಯೆಹೋವನಿಗೆ ಏನಾದರೊಂದು ಕೊಡಲು ನಮ್ಮೆಲ್ಲರಿಗೆ ಇರುತ್ತದೆಂದು ನಾವೀಗ ನೋಡಬಲ್ಲೆವು.
ನಮಗಿರುವದನ್ನು ನಾವು ಹೇಗೆ ಉಪಯೋಗಿಸಬಲ್ಲೆವು?
ಸಮಯ, ಪ್ರಯತ್ನ ಮತ್ತು ಸ್ವಲ್ಪ ಮಟ್ಟಿಗೆ ಹಣ ಅದಕ್ಕಾಗಿ ಬೇಕಾಗಿರುವದಾದರೂ, ಸಾರುವ ಕೆಲಸದಲ್ಲಿ ಯೆಹೋವನನ್ನು ಪ್ರತಿನಿಧಿಸುವುದು ಎಂತಹ ಒಂದು ಸುಯೋಗ! ಸ್ತುತಿಯಜ್ಞಗಳನ್ನು ನಮ್ಮಲ್ಲಿ ಪ್ರತಿಯೊಬ್ಬನು ಯೆಹೋವನಿಗೆ ನೀಡಸಾಧ್ಯವಿದೆ. ಇಲ್ಲಿ, ಮೂವರು ಚಿಕ್ಕ ಮಕ್ಕಳಿರುವ ಒಬ್ಬ ಪಯನೀಯರನಾದ ಹಿರಿಯನು ಅದರ ಕುರಿತು ಹೀಗೆ ವ್ಯಕ್ತಪಡಿಸುತ್ತಾನೆ:
“ಯಾವುದೇ ವೈಯಕ್ತಿಕ ತ್ಯಾಗಗಳಿಗಿಂತ ಪೂರ್ಣ ಸಮಯದ ಸೇವೆಯ ಸುಯೋಗದಲ್ಲಿ ಪಾಲಿಗರಾಗುವದು ಎಷ್ಟೋ ಬೆಲೆಯುಳ್ಳದ್ದು—ಯಾಕಂದರೆ ನಮ್ಮ ಸ್ವರ್ಗೀಯ ತಂದೆಗೆ ಅತೀ ಪರಿಣಾಮಕಾರಿ ವಿಧದಲ್ಲಿ ಸಾಕ್ಷಿನೀಡುವದು ಅದಾಗಿದೆ. ಅಲ್ಲದೇ, ನನಗೆ ವೈಯಕ್ತಿಕವಾಗಿ ಆತನು ತೋರಿಸಿದ ಅತಿಶಯ ಕೃಪೆಗಾಗಿ, ಕೆಲವು ಮಟ್ಟಿಗಾದರೂ ಅವನಿಗೆ ಉಪಕಾರ ಹೇಳಲು ನನಗೆ ಸಾಧ್ಯಮಾಡುತ್ತದೆ.”
ಅವನ ಹೆಂಡತಿಯು ಕೂಡಿಸುವುದು: “ನನ್ನ ಗಂಡನು ಪಯನೀಯರನಾಗಿ ಸೇವೆ ಮಾಡಲು ಸಹಾಯ ನೀಡುವದು ನಿಜವಾಗಿ ಒಂದು ಸುಯೋಗ. ಇದು ಇಡೀ ಕುಟುಂಬ ಸೇವೆಯಲ್ಲಿ ಹೆಚ್ಚು ಪಾಲನ್ನು ತೆಗೆದುಕೊಳ್ಳಲು ಸಾಧ್ಯ ಮಾಡುತ್ತದೆ, ಮತ್ತು ಆತ್ಮಿಕ ಹಾಗೂ ಲೌಕಿಕ ರೀತಿಗಳಲ್ಲಿ ಯೆಹೋವನ ಪ್ರೀತಿಯ ಹಸ್ತವು ಒದಗಿಸುವದನ್ನು ಕಾಣುವಾಗ, ಅವನನ್ನು ಇನ್ನಷ್ಟು ಹೆಚ್ಚು ಸ್ತುತಿಸುವಂತೆ ನಮ್ಮಲ್ಲಿ ಆಶೆಯನ್ನುಂಟು ಮಾಡುತ್ತದೆ.”
ನೂರಕ್ಕಿಂತಲೂ ಹೆಚ್ಚು ವರ್ಷಗಳಿಂದ ವಾಚ್ಟವರ್ ಸೊಸೈಟಿಯು ಬೈಬಲ್ಗಳನ್ನೂ ಬೈಬಲ್ ಸಾಹಿತ್ಯಗಳನ್ನೂ ಸ್ವಂತ ಇಷ್ಟದ ದಾನರೂಪದಲ್ಲಿ ಹಂಚಿದೆ ಮತ್ತು ಇವುಗಳನ್ನು 1920ರಿಂದ ಅದರ ಸ್ವಂತ ಮುದ್ರಣಾಲಯಗಳಲ್ಲಿ ಮುದ್ರಿಸುತ್ತಿದೆ. ಇಂದು ನಮಗೆ ಇರುವ ಎಲ್ಲಾ ಸಾಹಿತ್ಯಗಳು ಬೆತೆಲ್ನಲ್ಲಿ ಸ್ವಯಂಸೇವಕರಾಗಿರುವವರ ಸಮಯ ಮತ್ತು ಪ್ರಯತ್ನದಿಂದ ಉತ್ಪಾದಿಸಲ್ಪಟ್ಟಿವೆ ಮತ್ತು ಅವುಗಳನ್ನು ಹಂಚಲು ಸಭೆಯ ಪ್ರಚಾರಕರೂ ಪಯನೀಯರರೂ ಜತೆಗೂಡುತ್ತಾರೆ. ಹೀಗೆ, ಪ್ರಮುಖ ಸಾರುವ ಕೆಲಸದಲ್ಲಿ ಇನ್ನಷ್ಟು ಅಧಿಕ ಕಾಣಿಕೆಗಳಿಂದಾಗಿ ಇದಾಗುತ್ತದೆ.—ಮತ್ತಾಯ 24:14.
ಇನ್ನೂ ಏನಂದರೆ, ಆರ್ಥಿಕವಾಗಿ ಹೆಚ್ಚು ಸ್ಥಿರತೆಯಿರುವ ದೇಶಗಳಲ್ಲಿ ಕ್ರೈಸ್ತರು ಕೊಟ್ಟ ಹಣ ಸಹಾಯವು ವಾಚ್ಟವರ್ ಸೊಸೈಟಿಯ ತಮ್ಮ ದೇಶದಲ್ಲಿರುವ ಬ್ರಾಂಚ್ ಆಫೀಸಿನಿಂದ ಕಳುಹಿಸಲ್ಪಟ್ಟು, ಲೋಕದ ಇತರ ಭಾಗದಲ್ಲಿರುವ ಸಹೋದರರು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ವಿನಿಯೋಗಿಸಲು ಸಾಧ್ಯಮಾಡುತ್ತದೆಂದು ತಿಳಿಯಲು ಸಂತೋಷಿಸುತ್ತಾರೆ. ಈ ವಾಲಂಟಿಯರ್ ಕಾಣಿಕೆಗಳಿಂದಾಗಿ ತಮ್ಮ ಪೂರ್ಣ ಸಮಯದ ಸೇವೆಯಲ್ಲಿ ಮುಂದುವರಿಯಲು ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾದ್ ಮಿಶನೆರಿಗಳಿಗೆ, ಸರ್ಕಿಟ್ ಮತ್ತು ಜಿಲ್ಲಾ ಮೇಲ್ವಿಚಾರಕರಿಗೆ ಮತ್ತು ವಿಶೇಷ ಪಯನೀಯರರಿಗೆ ಸಹಾಯ ಮಾಡಿದೆ.
ನಿಮಗೆ ಬೆತೆಲ್ನಲ್ಲಿ ಯಾ ಅಂತರಾಷ್ಟ್ರೀಯ ಸ್ವಯಂಸೇವಕ ಕಟ್ಟಡ ಕಾರ್ಮಿಕರ ಯೋಜನೆಯಲ್ಲಿ ಸೇವೆ ಸಲ್ಲಿಸಲು ಪ್ರಾಯಶ: ಅಸಾಧ್ಯವಿರಬಹುದು. ತಮ್ಮನ್ನು ಪೋಷಿಸಿಕೊಳ್ಳುವದಕ್ಕಿಂತ ಹೆಚ್ಚು ಹಣ “ಸಮೃದ್ಧಿಯುಳ್ಳವರು” ಕೊರತೆಯಿರುವ ಆದರೆ ಈ ಕೆಲಸದಲ್ಲಿ ತೊಡಗಿಸಿಕೊಂಡಿರುವವರಿಗೆ ಬೆಂಬಲಿಸುವಷ್ಟು ಹಣವು ನಿಮ್ಮಲ್ಲಿರಬಹುದು. 2 ಕೊರಿಂಥ 8:14ರಲ್ಲಿ ವಿವರಿಸಲ್ಪಟ್ಟಂತಹ ಒಂದು ಸಮಾನತ್ವ ಆಗ ಜರಗಬಹುದು. ಅಂತಹ ಕಾಣಿಕೆಗಳನ್ನು ಕೊಟ್ಟವರು ಕಳುಹಿಸಿದ ಕಾಗದಗಳಲ್ಲಿ, ಒಬ್ಬ ವಯಸ್ಸಾದ ಸಹೋದರಿ ಹೀಗೆ ಬರೆದಳು:
“ಯೆಹೋವನು ನನಗೆ ನೀಡಿದ ಎಲ್ಲಾ ಆಶೀರ್ವಾದಗಳಿಗಾಗಿ ನಾನು ತುಂಬಾ ಕೃತಜ್ಞಳಾಗಿದ್ದೇನೆ ಮತ್ತು ಕಟ್ಟೋಣ ಯೋಜನೆಗಳಿಗಾಗಿ ಮತ್ತು ಸಂಸ್ಥೆಗಾಗಿ ನಿತ್ಯವೂ ಪ್ರಾರ್ಥಿಸುತ್ತೇನೆ.”
ಇನ್ನೊಬ್ಬ ಸಹೋದರಿ ಅಂದದ್ದು: “ಬಲುಬೇಗನೇ ಪತನಗೊಳ್ಳುವ ಬ್ಯಾಂಕ್ ಒಂದರಲ್ಲಿ ಈ ಸ್ವಲ್ಪ ಮೊತ್ತವನ್ನು ಇಡುವ ಬದಲು, ಯಾವುದಾದರೂ ದೇವಪ್ರಭುತ್ವ ರೀತಿಯ ಒಳಿತಿಗಾಗಿ ಬಳಸುವಂತೆ ಬಯಸುತ್ತೇನೆ!”
ಒಬ್ಬ ಸಹೋದರನು ತನ್ನನ್ನು ಹೀಗೆ ವ್ಯಕ್ತಪಡಿಸಿಕೊಂಡನು: “ಸೈತಾನನ ಕೆಟ್ಟ ವಿಷಯಗಳ ವ್ಯವಸ್ಥೆಯ ‘ಮೂರನೆಯ ರೆಕ್ಕೆ’ ಯಾದ ಸ್ವಾರ್ಥ ವಾಣಿಜ್ಯದಿಂದ ನಿಜ ಭದ್ರತೆ ಪಡೆಯುವ ಒಂದು ವಿಧ ನಮ್ಮ ಸ್ವತ್ತುಗಳನ್ನು ಅವನನ್ನು ಮಹಿಮೆಪಡಿಸಲು ಬಳಸುವದೇ ಎಂದು ನಮಗೆ ಯೆಹೋವನ ಬುದ್ಧಿವಾದವಾಗಿದೆ. ಯೆಹೋವನು ನಮಗೆ ನೀಡುವ ಅಭಿವೃದ್ಥಿಯಲ್ಲಿ ತೀವ್ರತೆ ಹೊಂದಲು ಏನಾದರೊಂದು ಸಹಾಯ ಮಾಡುವದರಲ್ಲಿ ನಾನೆಷ್ಟು ಸಂತೋಷಿಸುತ್ತೇನೆಂದು ತಿಳಿಸಲು ಈ ಸಂದರ್ಭ ತಕ್ಕೊಳ್ಳುತ್ತೇನೆ. ಈ ರೀತಿ ಬಳಸಲ್ಪಡಲು ಶಕ್ಯಮಾಡಿದ್ದಕ್ಕಾಗಿ ನಾನು ಆತನಿಗೆ ಉಪಕಾರ ಹೇಳುತ್ತೇನೆ.”
ವಯಸ್ಕರಿಂದ ಮತ್ತು ಎಳೆಯರಿಂದ ದಾನಗಳು
ಈ ವ್ಯವಸ್ಥೆಯ ಅಂತ್ಯವನ್ನು ಪಾರಾಗಲು ನಿರೀಕ್ಷೆಯುಳ್ಳವರಾದರೂ, ಪ್ರಾಯ ಸಂದವರು ಒಂದುವೇಳೆ ತಮಗೆ ಮರಣ ಸಂಭವಿಸಿದರೆ, ರಾಜ್ಯದ ಕೆಲಸಕ್ಕೆ ಪ್ರಯೋಜನವಾಗುವಂತಹ ರೀತಿಯಲ್ಲಿ ಉಯಿಲನ್ನು ಮಾಡುವ ವಯಸ್ಕರ ಈ ನಂಬಿಗಸ್ತ ನಿರ್ಧಾರವನ್ನು ಓದುವದು ಉತ್ತೇಜನೀಯವು. ಅಂತಹ ಅಂತಿಮ ಇಷ್ಟಪತ್ರ ಬರೆದಿಟ್ಟವರ ಉತ್ತಮ ಮನೋಭಾವ ಇಷ್ಟ ನಿರ್ವಾಹಕರಿಂದ ವ್ಯಕ್ತಪಡಿಸಲ್ಪಟ್ಟದ್ದರಲ್ಲಿ ಕೆಲವು ಹೀಗಿವೆ:
“ಅವಳ ಇಡೀ ಜೀವಿತದಲ್ಲಿ ಎಲ್ಲರಿಗೂ ಬಹಳ ದಯಾಮಯಿ ವ್ಯಕ್ತಿ . . . ಅವಳು ಯೆಹೋವನನ್ನು ಮತ್ತು ಆತನ ಸೃಷ್ಟಿಯನ್ನು ಪ್ರೀತಿಸಿದಳ್ದು.”
“ರಾಜ್ಯದ ಆಸಕ್ತಿಗಳು ಯಾವಾಗಲೂ ಅವಳ ಪ್ರಥಮ ಅಭಿರುಚಿಯಾಗಿತ್ತು.”
“ನಂಬಿಗಸ್ತತೆಯ 70 ವರ್ಷಗಳ ಸೇವೆಯ ನಂತರ ಅವನ ಸ್ವರ್ಗೀಯ ಬಹುಮಾನ ಅವನು ಪಡೆದನು. . . ತನ್ನ ಸಂಪತ್ಮೂಲಗಳಿಂದ ಸತ್ಯವನ್ನು ವಿಸ್ತರಿಸಲು ಅವನು ಬಯಸಿದ್ದನು.”
ಯೆಹೋವನ ಸೇವೆಯಲ್ಲಿ ತಮ್ಮ ಐಹಿಕ ವಸ್ತುಗಳನ್ನು ಬಳಸುವ ಇಚ್ಛೆಯುಳ್ಳ ಎಳೆಯವರಿಂದಲೂ ಕೇಳಲು ನಾವು ಸಂತೋಷಿಸುತ್ತೇವೆ. ಶಾಲೆಗೆ ಹೋಗುವ ಪ್ರಚಾರಕಳಿಂದ ಬ್ರಿಟನಿನ ಸೊಸೈಟಿಯ ಆಫೀಸಿಗೆ ಒಂದು ಪತ್ರ ಬಂತು. ಪ್ರಬಂಧ ಬರೆಯುವ ಸ್ಪರ್ಧೆಯಲ್ಲಿ ಅವಳು ಮೊದಲ ಬಹುಮಾನ ಪಡೆದದ್ದನ್ನು ವರ್ಣಿಸುತ್ತಾಳೆ. ಅವಳ ಬಹುಮಾನದ ಪೂರ್ಣ ಹಣವನ್ನು ಜತೆಯಲ್ಲಿ ಕಳುಹಿಸುತ್ತಾಳೆ. “ಕ್ರೈಸ್ತ ಕಟ್ಟುಪಾಡು” ಎಂಬ ಅವಳ ಪ್ರಬಂಧಕ್ಕೆ ವಿಷಯದ ಮೂಲ ಸೊಸೈಟಿಯ ಸಾಹಿತ್ಯಗಳು, ಆದದರಿಂದ ಆ ಹಣವು ಯೋಗ್ಯವಾಗಿ ಯೆಹೋವನಿಗೆ ಸಲ್ಲತಕ್ಕದ್ದು ಎಂದವಳ ಭಾವನೆ.
ಕೀರ್ತನೆ 116ರ ಲೇಖಕನು 13 ಮತ್ತು 14ನೇ ವಚನದಲ್ಲಿ ಮುಂದುವರಿಸಿ ಹೇಳುವದು: “ರಕ್ಷಣಾ ಪಾತ್ರೆಯನ್ನು ತೆಗೆದುಕೊಂಡು ಯೆಹೋವ ನಾಮವನ್ನು ಪ್ರಖ್ಯಾತಿ ಪಡಿಸುವೆನು. ಯೆಹೋವನಿಗೆ ಹೊತ್ತ ಹರಕೆಗಳನ್ನು ಆತನ ಎಲ್ಲಾ ಜನರ ಮುಂದೆಯೇ ಸಲ್ಲಿಸುವೆನು.” ಯೆಹೋವನಿಂದ ತನ್ನ ಮಗನ ಮೂಲಕ ರಕ್ಷಣೆಯ ಅಮೂಲ್ಯ ದಾನವನ್ನು ಗಣ್ಯಮಾಡುತ್ತಾ, ಕೀರ್ತನೆಗಾರನು ಮಾಡಿದಂತೆ, ಅವನ ಹೆಸರನ್ನು ಪ್ರಖ್ಯಾತಿ ಪಡಿಸಲು ಮತ್ತು ಅವನಿಗೆ ಮಾಡಿದ ನಮ್ಮ ಹರಕೆಗಳನ್ನು ಪಾಲಿಸಲು ಇದು ನಮ್ಮನ್ನು ನಡಿಸುತ್ತದೆ.
ಯೆಹೋವನು ನಮಗೆಷ್ಟು ಪ್ರಯೋಜನ ತಂದಿದ್ದಾನೆಂದರೆ, ನಾವೇನನ್ನೇ ಹಿಂದೆಕೊಡಲಿ, ತುಲನೆ ಮಾಡುವಾಗ ಅದು ಅತೀ ಕೊಂಚವೆಂದು ಭಾಸವಾಗುತ್ತದೆ. ಆದುದರಿಂದ, ಕೃತಜ್ಞತೆಯ ಹೇಳಿಕೆಯಾಗಿ, ಪ್ರತಿಯೊಂದು ವಿಧದಲ್ಲಿ ನಮ್ಮಿಂದಾದೆಲ್ಲವನ್ನು ನಾವು ಮಾಡುವುದು ಎಷ್ಟೊಂದು ತಕ್ಕದ್ದಾಗಿರುತ್ತದೆ! “ನಾನು ನಿನಗೆ ಕೃತಜ್ಞತಾ ಯಜ್ಞಗಳನ್ನು ಸಮರ್ಪಿಸುವೆನು; ಯೆಹೋವನ ನಾಮವನ್ನು ಪ್ರಖ್ಯಾತಪಡಿಸುವೆನು.”—ಕೀರ್ತನೆ 116:17. (w88 12/1)
[ಪುಟ 31 ರಲ್ಲಿರುವ ಚೌಕ]
ರಾಜ್ಯದ ಕೆಲಸಕ್ಕೆ ಕೆಲವರು ಸಹಾಯ ಮಾಡುವ ವಿಧ
◻ ದಾನಗಳು: ಸ್ವಯಿಚ್ಛೆಯ ಹಣದ ಸಹಾಯಗಳನ್ನು ವಾಚ್ಟವರ್ ಬೈಬಲ್ ಆ್ಯಂಡ್ ಟ್ರೇಕ್ಟ್ ಸೊಸೈಟಿ ಆಫ್ ಪೆನ್ಸಿಲ್ವೇನಿಯ, 25 ಕೊಲಂಬಿಯ ಹೈಟ್ಸ್, ಬ್ರೂಕ್ಲಿನ್, ನ್ಯೂಯೋರ್ಕ್ 11201ಕ್ಕೆ ನೇರವಾಗಿ ಯಾ ಸೊಸೈಟಿಯ ಸ್ಥಳೀಯ ಬ್ರಾಂಚ್ ಆಫೀಸಿಗೆ ಕಳುಹಿಸಬಹುದು. ಸ್ಥಿರಾಸ್ತಿ, ಆಭರಣಗಳು ಯಾ ಇತರ ಬೆಲೆಯುಳ್ಳ ವಸ್ತುಗಳನ್ನು ಸಹಾ ದಾನಮಾಡಬಹುದು. ಇಂತಹ ಕಾಣಿಕೆಗಳೊಂದಿಗೆ ಇದೊಂದು ನೇರವಾದ ಉಚಿತ ದಾನವೆಂದು ನಮೂದಿಸಿರುವ ಒಂದು ಚಿಕ್ಕ ಪತ್ರವು ಜತೆಗೂಡಿರಬೇಕು.
◻ ಶರ್ತಬದ್ಧ-ಕಾಣಿಕೆಯ ಒಂದು ಏರ್ಪಾಡು: ವಾಚ್ಟವರ್ ಸೊಸೈಟಿಯ ವಿಶ್ವಸ್ತ (ಟ್ರಸ್ಟ್)ದಲ್ಲಿ ಹಣಕೊಡಬಹುದು, ದಾನಕೊಟ್ಟಾತನಿಗೆ, ವೈಯಕ್ತಿಕ ಅವಶ್ಯಕತೆ ಬಿದ್ದಲ್ಲಿ ಹಿಂದಿರುಗಿಸುವ ಒಂದು ಅವಕಾಶವಿರಬೇಕು.
◻ ಇನ್ಶೂರೆನ್ಸ್: ಲೈಫ್ ಇನ್ಶೂರೆನ್ಸ್ ಪಾಲಿಸಿಯ ಯಾ ನಿವೃತ್ತಿ/ಮಾಸಾಶನ (ಪೆನ್ಶ್ನ್) ಯೋಜನೆಯ ಪ್ರಾಯೋಜಕರನ್ನಾಗಿ ವಾಚ್ಟವರ್ ಸೊಸೈಟಿಯನ್ನು ಹೆಸರಿಸಬಹುದು. ಅಂತಹ ಯಾವುದೇ ಏರ್ಪಾಡನ್ನು ಸೊಸೈಟಿಗೆ ತಿಳಿಸತಕ್ಕದ್ದು
◻ ಟ್ರಸ್ಟ್: ಬೇಂಕಿನ ಸೇವಿಂಗ್ಸ್ ಖಾತೆಗಳನ್ನು ಸೊಸೈಟಿಗಾಗಿ ಟ್ರಸ್ಟ್ನಲ್ಲಿ ಇಡಬಹುದು. ಇದನ್ನು ಮಾಡಿದರೆ, ದಯಮಾಡಿ ಸೊಸೈಟಿಗೆ ತಿಳಿಸಿರಿ. ಶೇರುಗಳು, ಬಾಂಡುಗಳು ಮತ್ತು ಆಸ್ತಿಯನ್ನು ದಾನಿಯ ಜೀವನಾವಧಿಯಲ್ಲಿ ಅವನಿಗೆ ಪ್ರಯೋಜನವಾಗುವ ವಿಧದಲ್ಲಿ ದಾನಮಾಡಬಹುದು. ಇದು ಇಷ್ಟಪತ್ರದ ಪ್ರಾಮಾಣ್ಯ ಸ್ಥಾಪನೆಯ ಖರ್ಚು ಮತ್ತು ಅನಿಶ್ಚಿತತೆಗಳನ್ನು ಇಲ್ಲವಾಗಿರಿಸುವದು, ಅದೇ ಸಮಯದಲ್ಲಿ ಮರಣ ಸಂಭವಿಸಿದಲ್ಲಿ ಆಸ್ತಿಯು ಸೊಸೈಟಿಗೆ ಸಿಕ್ಕುವಂತೆ ನೋಡಿಕೊಳ್ಳುವುದು.
◻ ಉಯಿಲುಗಳು: ಕಾನೂನು ಬದ್ಧವಾಗಿ ನಿಯೋಜಿಸಿದ ಉಯಿಲುಗಳ ಮೂಲಕ ವಾಚ್ಟವರ್ ಸೊಸೈಟಿಯ ಹೆಸರಿಗೆ ಹಣ ಮತ್ತು ಆಸ್ತಿಯನ್ನು ಬರೆಯಬಹುದು. ಒಂದು ನಕಲನ್ನು ಸೊಸೈಟಿಗೆ ಕಳುಹಿಸಬೇಕು.
ಅಂತಹ ವಿಷಯಗಳಲ್ಲಿ ಇನ್ನು ಹೆಚ್ಚಿನ ವಿವರಣೆಗಳಿಗೆ ಮತ್ತು ಸಲಹೆಗಳಿಗಾಗಿ, ಟ್ರಶರರ್ಸ್ ಆಫೀಸ್, ವಾಚ್ಟವರ್ ಬೈಬಲ್ ಆ್ಯಂಡ್ ಟ್ರೇಕ್ಟ್ ಸೊಸೈಟಿ ಆಫ್ ಪೆನ್ಸಿಲ್ವೇನಿಯ, 25 ಕೊಲಂಬಿಯ ಹೈಟ್ಸ್, ಬ್ರೂಕ್ಲೆನ್, ನ್ಯೂಯೋರ್ಕ್ 11201, ಯಾ ಸೊಸೈಟಿಯ ಸ್ಥಳೀಯ ಬ್ರಾಂಚ್ ಆಫೀಸಿಗೆ ಬರೆಯಿರಿ.