ಸುರಕ್ಷತೆಗಾಗಿ ಆಸನ ಪಟ್ಟಿಯನ್ನು ಕಟ್ಟಿಕೊಳ್ಳಿ
◼ ಅಮೆರಿಕದಲ್ಲಿ, 5ರಿಂದ 24 ವರ್ಷ ವಯಸ್ಸಿನ ಯುವ ಜನರಲ್ಲಿ ಮೋಟರ್ ವಾಹನದ ಆಘಾತಗಳು ಮರಣದ ಪ್ರಧಾನ ಕಾರಣವಾಗಿವೆ.
◼ ಜಪಾನಿನಲ್ಲಿ, ಸ್ತನದ ಕ್ಯಾನ್ಸರಿನಿಂದ ಎಷ್ಟು ಮರಣಗಳು ಸಂಭವಿಸುತ್ತವೊ ಅದಕ್ಕಿಂತಲೂ ಎರಡು ಪಟ್ಟು ಹೆಚ್ಚಿನ ಮರಣಗಳಿಗೆ ರಸ್ತೆಯ ಅಪಘಾತಗಳು ಹೊಣೆಯಾಗಿವೆ ಮತ್ತು ಮೂತ್ರಕೋಶದ ಗ್ರಂಥಿಯ ಕ್ಯಾನ್ಸರ್ ಕೊಲ್ಲುವ ಜನರಿಗಿಂತಲೂ ನಾಲ್ಕು ಪಟ್ಟು ಹೆಚ್ಚಿನ ಜನರನ್ನು ಕೊಲ್ಲುತ್ತವೆ.
◼ ಯೂರೋಪಿನಲ್ಲಿ, ನರಹತ್ಯೆಯ ಕಾರಣದಿಂದ ಸಾಯುವ ಜನರಿಗಿಂತಲೂ ನಾಲ್ಕು ಪಟ್ಟು ಹೆಚ್ಚಿನ ಮರಣಗಳಿಗೆ ಕಾರ್ ಅಪಘಾತಗಳು ಕಾರಣವಾಗಿವೆ.
ದಿಗಿಲೆಬ್ಬಿಸುವ ಈ ಸಂಖ್ಯಾಸಂಗ್ರಹಣಗಳು ವಾಹನದಲ್ಲಿ ಪ್ರಯಾಣಮಾಡುವುದರ ಅಂತರ್ಗತ ಅಪಾಯಗಳಲ್ಲಿ ಒಂದನ್ನು ಎತ್ತಿತೋರಿಸುತ್ತವೆ—ವೇಗವು ಮರಣವನ್ನುಂಟುಮಾಡಬಲ್ಲದು. ಮತ್ತು ಮದ್ಯದ ಪ್ರಭಾವದಲ್ಲಿರುವಾಗ ವೇಗವಾಗಿ ವಾಹನ ಚಲಾಯಿಸುವುದು ಕೊಲೆಗೆ ನಡೆಸುತ್ತದೆ. ಸಂತೋಷಕರವಾಗಿ, ಅಪಘಾತ ಮತ್ತು ಹಾನಿಯ ಗಂಡಾಂತರವು ಕಡಿಮೆಗೊಳಿಸಲ್ಪಡಸಾಧ್ಯವಿದೆ. ಅದು ಹೇಗೆ ಸಾಧ್ಯ?
ಸುರಕ್ಷಿತವಾದ ವಾಹನ ಚಲಾಯಿಸುವ ಹವ್ಯಾಸಗಳನ್ನು ವಿಕಸಿಸಿಕೊಳ್ಳುವುದು ಒಳ್ಳೆಯ ಆರಂಭವಾಗಿದೆ. 10 ಅಪಘಾತಗಳಲ್ಲಿ 9 ಅಪಘಾತಗಳನ್ನು ತಡೆಯಸಾಧ್ಯವಿದೆಯೆಂದು ಕೆಲವು ಸುರಕ್ಷಾ ಪರಿಣತರು ಪ್ರತಿಪಾದಿಸುತ್ತಾರೆ. ನಿಗದಿತ ವೇಗದ ಮಿತಿಯನ್ನು ಅತಿಶಯಿಸುವುದು, ಇತರ ವಾಹನಗಳನ್ನು ಓವರ್ಟೇಕ್ ಮಾಡುವುದು ಮತ್ತು ಪದೇ ಪದೇ ಸಾಲು (ಲೇನ್)ಗಳನ್ನು ಬದಲಾಯಿಸುವುದು, ಮತ್ತೊಂದು ವಾಹನವನ್ನು ಒತ್ತಿಕೊಂಡು ವಾಹನ ಚಲಾಯಿಸುವುದು, ಅಮಲೌಷಧಗಳ ಇಲ್ಲವೆ ಮದ್ಯದ ಪ್ರಭಾವದ ಕೆಳಗೆ ವಾಹನ ಚಲಾಯಿಸುವುದು, ಮತ್ತು ಸುಸ್ಥಿತಿಯಲ್ಲಿರದ ಕಾರನ್ನು ಚಲಾಯಿಸುವುದು, ಅಸುರಕ್ಷಿತ ವಾಹನ ಚಲಾಯಿಸುವ ಹವ್ಯಾಸಗಳಲ್ಲಿ ಕೇವಲ ಕೆಲವು ಉದಾಹರಣೆಗಳಾಗಿವೆ. ಜೀವಕ್ಕಾಗಿ ಗೌರವ ಮತ್ತು ನಮ್ಮ ಜೊತೆಮಾನವರಿಗಾಗಿ ಪ್ರೀತಿಯು, ಒಂದು ಮೋಟರ್ ವಾಹನವನ್ನು ಚಲಾಯಿಸುವುದರ ಕಡೆಗೆ ಒಂದು ಜಾಗರೂಕ ಹಾಗೂ ಹೊಣೆಗಾರಿಕೆಯ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ನಮ್ಮನ್ನು ಪ್ರಚೋದಿಸಬೇಕು.—ಮತ್ತಾಯ 7:12.
ಆಸನ ಪಟ್ಟಿಗಳು (ಸೀಟ್ ಬೆಲ್ಟ್ಸ್) ಅನೇಕ ವೇಳೆ ಕಡೆಗಣಿಸಲ್ಪಡುವ, ಆದರೆ ಸರಳವಾದ ಮತ್ತೊಂದು ಸುರಕ್ಷಾ ಸಾಧನವಾಗಿವೆ. ಅಮೆರಿಕದ ಸಾರಿಗೆ ಇಲಾಖೆಯ ವದನಕರಾದ ಟಿಮ್ ಹರ್ಡ್ಗನುಸಾರ, “ಅಪಘಾತವೊಂದರಲ್ಲಿ ನಿಮ್ಮ ಜೀವವನ್ನು ರಕ್ಷಿಸುವ ಅತ್ಯಂತ ಪರಿಣಾಮಕಾರಿಯಾದ ವಿಧವು ಸುರಕ್ಷಾ ಪಟ್ಟಿಯಾಗಿದೆ. ಅದು ಬದುಕಿ ಉಳಿಯುವಿಕೆಯ ಸಂಭವನೀಯತೆಯನ್ನು ಇಮ್ಮಡಿಗೊಳಿಸುತ್ತದೆ.” ಎಳೆಯ ಮಕ್ಕಳಿಗಾಗಿ, ಬದುಕಿ ಉಳಿಯುವ ಪ್ರಮಾಣವು—ಅವರು ಮಗು ಸುರಕ್ಷಾ ಆಸನಗಳಲ್ಲಿ ಕುಳಿತುಕೊಂಡಿರುವಲ್ಲಿ—ಬಹುಮಟ್ಟಿಗೆ ಮೂರು ಪಟ್ಟು ಹೆಚ್ಚಾಗಿರುತ್ತದೆ.a
ಇದರ ಎದುರಿನಲ್ಲೂ, ಅಮೆರಿಕದಲ್ಲಿರುವ ಪ್ರಯಾಣಿಕ ವಾಹನಗಳ ಸಂಚಾರಿಗಳಲ್ಲಿ ಬಹುಮಟ್ಟಿಗೆ ಮೂರನೆಯ ಒಂದಂಶವು ಆಸನ ಪಟ್ಟಿಗಳನ್ನು ಉಪಯೋಗಿಸುವುದಿಲ್ಲವೆಂಬುದನ್ನು ಸಮೀಕ್ಷೆಗಳು ತೋರಿಸುತ್ತವೆ. ಹೆತ್ತವರೋಪಾದಿ, ನೀವು ನಿಮ್ಮ ವಾಹನದಲ್ಲಿ ಹೊರಗೆ ಹೋಗುವ ಮೊದಲು ನಿಮ್ಮ ಮಕ್ಕಳು ತಮ್ಮ ಆಸನ ಪಟ್ಟಿಗಳನ್ನು ಕಟ್ಟಿಕೊಂಡಿದ್ದಾರೊ ಎಂಬುದನ್ನು ಖಚಿತಪಡಿಸಿಕೊಳ್ಳುತ್ತೀರೊ? ಆಸನ ಪಟ್ಟಿಯನ್ನು ಕಟ್ಟಲು ತಗಲುವ ಸಮಯವು ಸಾರ್ಥಕವಾದದ್ದಾಗಿದೆ.
[ಪಾದಟಿಪ್ಪಣಿ]
a ರಾಷ್ಟ್ರೀಯ ಹೆದ್ದಾರಿ ಸಂಚಾರದ ಸುರಕ್ಷತಾ ಆಡಳಿತವು ಶಿಫಾರಸ್ಸುಮಾಡುವುದು: “ವಾಹನದ ಹಿಂಬದಿಯ ಕಡೆಗೆ ಮುಖಮಾಡಿರುವ ಮಗು ಆಸನಗಳಲ್ಲಿರುವ ಮಕ್ಕಳು, ಪ್ರಯಾಣಿಕರ ಪಕ್ಕಕ್ಕೆ ಗಾಳಿಚೀಲಗಳುಳ್ಳ ಕಾರುಗಳ ಮುಂದಿನ ಆಸನಗಳಲ್ಲಿ ಕುಳ್ಳಿರಿಸಲ್ಪಡಬಾರದು. ಹಿಂಬದಿ ಮುಖಮಾಡಿರುವ ಮಗು ಆಸನವನ್ನು ಅಪ್ಪಳಿಸುವ, ಅಗಲವಾಗುತ್ತಿರುವ ಒಂದು ಗಾಳಿಚೀಲದ ಬಡಿತವು ಮಗುವಿಗೆ ಹಾನಿಯನ್ನುಂಟುಮಾಡಬಲ್ಲದು.”