ಇದನ್ನ ಮಾಡಿ ನೋಡಿ!
ಬೈಬಲ್ ಘಟನೆಗಳನ್ನ ಚಿತ್ರಿಸ್ಕೊಳ್ಳಿ
ಬೈಬಲಿನಲ್ಲಿ ನಮಗೆ ಒಳ್ಳೊಳ್ಳೆ ಪಾಠಗಳನ್ನ ಕಲಿಸೋ ಅನೇಕ ಘಟನೆಗಳಿವೆ. ಈ ಘಟನೆಗಳನ್ನ ಮನಸ್ಸಲ್ಲಿ ಚಿತ್ರಿಸ್ಕೊಂಡ್ರೆ ನಾವು ಓದೋದನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಆಗುತ್ತೆ. ಆಗ ಅದ್ರಿಂದ ನಮಗೆ ಹೆಚ್ಚು ಪ್ರಯೋಜನನೂ ಸಿಗುತ್ತೆ. ಬೈಬಲ್ ಘಟನೆಗಳನ್ನ ಚಿತ್ರಿಸ್ಕೊಳ್ಳೋಕೆ ಕೆಲವು ಟಿಪ್ಸ್‌ಗಳನ್ನ ನೋಡೋಣ.
ಜೋರಾಗಿ ಓದಿ. ಬೈಬಲನ್ನ ಜೋರಾಗಿ ಓದೋದ್ರಿಂದ ಆ ಘಟನೆಗಳನ್ನ ಸುಲಭವಾಗಿ ಚಿತ್ರಿಸ್ಕೊಳ್ಳೋಕೆ ಆಗುತ್ತೆ. ನೀವು ಕುಟುಂಬವಾಗಿ ಬೈಬಲನ್ನ ಓದೋದಾದ್ರೆ ಒಂದೊಂದು ಪಾತ್ರನ ಒಬ್ಬೊಬ್ಬರು ಓದಬಹುದು. ಆಗ ಘಟನೆಗಳು ನಮ್ಮ ಕಣ್ಮುಂದೆನೇ ನಡಿತಿದೆ ಅಂತ ಚಿತ್ರಿಸ್ಕೊಳ್ಳೋಕೆ ಆಗುತ್ತೆ.
ಊಹಿಸ್ಕೊಳ್ಳಿ. ಒಂದು ಘಟನೆಯಲ್ಲಿರೋ ಪಾತ್ರಗಳ ಭಾವನೆಗಳ ಬಗ್ಗೆ ಮತ್ತು ಅವರ ಯೋಚ್ನೆಗಳ ಬಗ್ಗೆ ಊಹಿಸಿ ಅರ್ಥ ಮಾಡ್ಕೊಳ್ಳಿ. ಉದಾಹರಣೆಗೆ, ‘ಈ ವ್ಯಕ್ತಿ ಯಾಕೆ ಹೀಗೆ ಮಾತಾಡಿದ ಅಥವಾ ನಡ್ಕೊಂಡ? ಒಂದುವೇಳೆ ನಾನು ಆ ಜಾಗದಲ್ಲಿ ಇದ್ದಿದ್ರೆ ನನಗೆ ಹೇಗೆ ಅನಿಸ್ತಿತ್ತು ಅಥವಾ ನಾನು ಹೇಗೆ ಯೋಚಿಸ್ತಿದ್ದೆ?’ ಅಂತ ಕೇಳ್ಕೊಳ್ಳಿ.
ಚಿತ್ರ ಬಿಡಿಸಿ. ನಿಮಗೆ ಚೆನ್ನಾಗಿ ಚಿತ್ರ ಬಿಡಿಸೋಕೆ ಬರ್ಲಿಲ್ಲ ಅಂದ್ರೂ ಪರವಾಗಿಲ್ಲ. ಬೈಬಲ್ ಘಟನೆಗಳನ್ನ ಬಿಡಿಸೋಕೆ ಪ್ರಯತ್ನಿಸಿ. ಯಾಕಂದ್ರೆ ಇದ್ರಿಂದ ಘಟನೆಗಳನ್ನ ಚೆನ್ನಾಗಿ ನೆನಪಿಡೋಕೆ ಮತ್ತು ಮನಸ್ಸಲ್ಲಿ ಚಿತ್ರಿಸ್ಕೊಳ್ಳೋಕೆ ಸಹಾಯ ಆಗುತ್ತೆ.