ದೌರ್ಜನ್ಯಕ್ಕೆ ಒಳಗಾಗಿರೋ ಮಹಿಳೆಯರಿಗೆ ಸಹಾಯ
“ಇವತ್ತು ಕೋಟ್ಯಾಂತರ ಹೆಂಗಸರ ಮತ್ತು ಪುಟ್ಟ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಆಗ್ತಿದೆ. ನಿಮಗೂ ಹೀಗಾಗಿದೆಯಾ? ಹಾಗಾದ್ರೆ ನಿಮಗೆ ನೆಮ್ಮದಿ ಕೊಡೋ ವಿಷ್ಯ ಇಲ್ಲಿದೆ. ನೀವು ಸುರಕ್ಷಿತವಾಗಿರಬೇಕು ಅನ್ನೋದೇ ದೇವರ ಇಷ್ಟ. ಈಗ ನಡೀತಿರೋ ಎಲ್ಲಾ ದೌರ್ಜನ್ಯನ ದೇವರು ತುಂಬಾ ಬೇಗ ತೆಗೆದುಹಾಕ್ತಾನೆ. ಅದು ಹೇಗೆ ಅಂತ ತಿಳ್ಕೊಳ್ಳೋಣ.”
“ಮಹಿಳೆಯರ ಸುರಕ್ಷತೆ—ಇದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ?” ಅನ್ನೋ ಲೇಖನ ಮೇಲೆ ತಿಳಿಸಲಾಗಿರೋ ಈ ಮಾತುಗಳಿಂದ ಆರಂಭವಾಗುತ್ತೆ. ಇದು jw.org ವೆಬ್‌ಸೈಟಲ್ಲಿದೆ. ಈ ಲೇಖನದ ಕೊನೆಯಲ್ಲಿರೋ ಲಿಂಕ್ ಮೂಲಕ ನೀವು ಈ ಕರಪತ್ರದ ಪ್ರತಿನ ಡೌನ್‌ಲೋಡ್ ಮಾಡ್ಕೋಬಹುದು ಮತ್ತು ಪ್ರಿಂಟ್ ತಗೊಬಹುದು. ಅಮೆರಿಕದಲ್ಲಿರೋ ಸ್ಟೇಸಿ ಅನ್ನೋ ಸಹೋದರಿ ಹೀಗೆ ಹೇಳ್ತಾರೆ, “ನಾನು ಮತ್ತು ಇನ್ನೊಬ್ಬ ಸಿಸ್ಟರ್ ಈ ಲೇಖನದ ಮುದ್ರಿತ ಪ್ರತಿಗಳನ್ನ ದೌರ್ಜನ್ಯಕ್ಕೆ ಒಳಗಾಗಿರೋ ಮಹಿಳೆಯರನ್ನ ನೋಡ್ಕೊಳ್ಳೋ ಜಾಗಕ್ಕೆ ತಗೊಂಡು ಹೋದ್ವಿ.”
‘ಆ ಸ್ಥಳದಲ್ಲಿ ಕೆಲಸ ಮಾಡ್ತಿದ್ದ ಒಬ್ಬ ವ್ಯಕ್ತಿ ಇನ್ನೂ ಜಾಸ್ತಿ ಪ್ರತಿಗಳನ್ನ ಕೊಡಿ’ ಅಂತ ಕೇಳ್ಕೊಂಡ್ರು. ಹಾಗಾಗಿ ಇಬ್ರೂ ಸಿಸ್ಟರ್ಸ್ 40 ಕರಪತ್ರಗಳನ್ನ ಅದ್ರ ಜೊತೆಗೆ 30 jw.org ಕಾಂಟ್ಯಾಕ್ಟ್ ಕಾರ್ಡ್‌ಗಳನ್ನ ಕೊಟ್ರು. ಸ್ವಲ್ಪ ಸಮಯ ಆದ್ಮೇಲೆ ಆ ಸ್ಥಳದ ಮ್ಯಾನೇಜರ್, ‘ಬೈಬಲನ್ನ ಸ್ಟಡಿ ಮಾಡೋದು ಹೇಗೆ ಅಂತ ಇಲ್ಲಿರೋ ಮಹಿಳೆಯರಿಗೆ ತೋರಿಸ್ಕೊಡಿ’ ಅಂತ ಕೇಳ್ಕೊಂಡ್ರು.
ಇನ್ನೊಂದು ಸಲ ಸಹೋದರಿ ಸ್ಟೇಸಿ ಮತ್ತು ಇನ್ನೂ ಇಬ್ರು ಸಹೋದರಿಯರು ಬೇರೆ ಜಾಗಕ್ಕೆ ಹೋದಾಗ ಅವ್ರಿಗೆ ಒಳ್ಳೆ ಅನುಭವ ಸಿಕ್ತು. ಅಲ್ಲಿದ್ದವರು ಐದು ಕರಪತ್ರಗಳನ್ನ ತಗೊಂಡ್ರು ಮತ್ತು ಇನ್ನೂ ಜಾಸ್ತಿ ಪ್ರತಿಗಳಿಗಾಗಿ ಕೇಳ್ಕೊಂಡ್ರು. ಇಲ್ಲಿ ಕೆಲಸ ಮಾಡೋ ಒಬ್ರು, “ಈ ಕರಪತ್ರ ಇಲ್ಲಿನ ಮಹಿಳೆಯರಿಗೆ ತುಂಬ ಸಹಾಯ ಮಾಡುತ್ತೆ. ಇದು ನಮಗೆ ಬೇಕು” ಅಂತ ಹೇಳಿದ್ರು. ಅಷ್ಟೇ ಅಲ್ಲ, ಸಿಸ್ಟರ್ಸ್ ಮತ್ತೆ ಬಂದಾಗ ಕೆಲವು ಮಹಿಳೆಯರು ಬೈಬಲ್ ಸ್ಟಡಿ ಅಂದ್ರೆ ಏನು ಅಂತ ತಿಳ್ಕೊಳ್ಳೋಕೆ ಇಷ್ಟಪಟ್ರು. ಅದ್ರಲ್ಲಿ ಇಬ್ರು ಮಹಿಳೆಯರು ವಾರಾಂತ್ಯದ ಕೂಟಕ್ಕೆ ಬರೋಕೆ ‘ನಮಗೆ ಮನಸ್ಸಿದೆ’ ಅಂತ ಹೇಳಿದ್ರು.
ಇದ್ರ ಬಗ್ಗೆ ಸ್ಟೇಸಿ ಹೀಗೆ ಹೇಳ್ತಾರೆ, “ಈ ಕರಪತ್ರನ ಜನ ಓದಿ ಇಷ್ಟ ಪಡೋದನ್ನ ನೋಡ್ವಾಗ ನಮಗೆ ತುಂಬ ಖುಷಿ ಆಗುತ್ತೆ. ದೌರ್ಜನ್ಯಕ್ಕೆ ಒಳಗಾಗಿರೋ ಮಹಿಳೆಯರಿಗೆ ದೇವರ ಆಳ್ವಿಕೆ ಬಗ್ಗೆ ಸಾರೋಕೆ ಇದೊಂದು ಅತ್ಯುತ್ತಮ ವಿಧ ಆಗಿದೆ. ಈ ಮಹಿಳೆಯರು ಓದಿ ಖುಷಿ ಪಡೋದನ್ನ ನೋಡಿದಾಗ ನಮಗೂ ತುಂಬ ಖುಷಿ ಆಗುತ್ತೆ. ನಮ್ಮ ಮನಸ್ಸು ಮುಟ್ಟುತ್ತೆ. ಇಂಥವ್ರಿಗೆ ನಾವು ಸಿಹಿಸುದ್ದಿ ಸಾರೋದನ್ನ ಮುಂದುವರಿಸ್ತಾ ಇರುವಾಗ ಯೆಹೋವ ನಮಗೆ ಇನ್ನೂ ಹೇಗೆಲ್ಲ ಸಹಾಯ ಮಾಡ್ತಾನೆ ಅಂತ ನೋಡೋಕೆ ಕಾಯ್ತಾ ಇದ್ದೀವಿ.”