ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w24 ಜೂನ್‌ ಪು. 32
  • ನಂಬಿಕೆ ನಿಮ್ಮ ಸ್ವತ್ತಾಗಿದೆಯಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಂಬಿಕೆ ನಿಮ್ಮ ಸ್ವತ್ತಾಗಿದೆಯಾ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಅನುರೂಪ ಮಾಹಿತಿ
  • ಯೆಹೋವನ ವಾಗ್ದಾನಗಳಲ್ಲಿ ನಂಬಿಕೆ ಇಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • “ನಮಗೆ ಇನ್ನೂ ಹೆಚ್ಚು ನಂಬಿಕೆಯನ್ನು ದಯಪಾಲಿಸು”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ನಂಬಿಕೆ—ನಮ್ಮನ್ನು ಬಲಪಡಿಸುವ ಗುಣ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ನಿಮಗೆ ಸುವಾರ್ತೆಯಲ್ಲಿ ನಿಜವಾಗಿಯೂ ನಂಬಿಕೆ ಇದೆಯೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
w24 ಜೂನ್‌ ಪು. 32

ಬೈಬಲಲ್ಲಿ ಹೀಗ್ಯಾಕಿದೆ?

ನಂಬಿಕೆ ನಿಮ್ಮ ಸ್ವತ್ತಾಗಿದೆಯಾ?

ಯೆಹೋವನನ್ನ ಮೆಚ್ಚಿಸಬೇಕಂದ್ರೆ ನಮ್ಮಲ್ಲಿ ನಂಬಿಕೆ ಇರಲೇಬೇಕು. ಆದ್ರೆ “ನಂಬಿಕೆ ಎಲ್ರ ಸೊತ್ತಲ್ಲ” ಅಂತ ಬೈಬಲ್‌ ಹೇಳುತ್ತೆ. (2 ಥೆಸ. 3:2, ಪಾದಟಿಪ್ಪಣಿ) ಅಪೊಸ್ತಲ ಪೌಲ ಈ ಮಾತುಗಳನ್ನ ‘ಕೆಟ್ಟವ್ರು, ಅಪಾಯಕಾರಿ ಜನ್ರಾಗಿದ್ದ’ ತನ್ನ ವಿರೋಧಿಗಳನ್ನ ಮನಸ್ಸಲ್ಲಿಟ್ಟು ಬರೆದ. ಆದ್ರೆ ಇಲ್ಲಿ ಅವನು ನಂಬಿಕೆ ಬಗ್ಗೆ ಹೇಳಿದ್ದು ಬೇರೆಯವ್ರಿಗೂ ಅನ್ವಯಿಸುತ್ತೆ. ಯಾಕಂದ್ರೆ ಸೃಷ್ಟಿಕರ್ತ ದೇವರಿದ್ದಾನೆ ಅಂತ ಪುರಾವೆಗಳಿದ್ರೂ ತುಂಬ ಜನ ಆತನ ಮೇಲೆ ನಂಬಿಕೆ ಇಡ್ತಿಲ್ಲ. (ರೋಮ. 1:20) ಏನೋ ಒಂದು ಶಕ್ತಿ ಇದೆ ಅಂತ ಕೆಲವರು ನಂಬ್ತಾರೆ. ಆದ್ರೆ ಇದು ನಿಜವಾದ ನಂಬಿಕೆ ಅಲ್ಲ.

ಯೆಹೋವ ದೇವರಿದ್ದಾನೆ ಅಂತ ಮತ್ತು ಆತನ ಮೇಲೆ ನಂಬಿಕೆ ಇಡೋರನ್ನ “ಆತನು ಆಶೀರ್ವದಿಸ್ತಾನೆ” ಅನ್ನೋ ದೃಢಭರವಸೆ ನಮಗೆ ಇರಬೇಕು. (ಇಬ್ರಿ. 11:6) ನಂಬಿಕೆ ಪವಿತ್ರಶಕ್ತಿಯಿಂದ ಸಿಗೋ ಗುಣ ಆಗಿದೆ. ಯೆಹೋವನಿಗೆ ಪ್ರಾರ್ಥನೆ ಮಾಡಿದಾಗ ನಮಗೆ ಪವಿತ್ರಶಕ್ತಿ ಸಿಗುತ್ತೆ. (ಲೂಕ 11:9, 10, 13) ಆತನ ಪವಿತ್ರಶಕ್ತಿಯನ್ನ ಪಡ್ಕೊಳ್ಳೋ ಇನ್ನೊಂದು ಪ್ರಾಮುಖ್ಯ ವಿಧ ದೇವರ ವಾಕ್ಯವಾದ ಬೈಬಲನ್ನ ಓದೋದೇ. ಓದಿದ ಮೇಲೆ ನಾವು ಅದರ ಬಗ್ಗೆ ಚೆನ್ನಾಗಿ ಯೋಚಿಸಬೇಕು ಮತ್ತು ಅದನ್ನ ನಮ್ಮ ಜೀವನದಲ್ಲಿ ಅನ್ವಯಿಸಬೇಕು. ಆಗ ಯೆಹೋವನ ಪವಿತ್ರಶಕ್ತಿ ನಮ್ಮ ಜೀವನದಲ್ಲಿ ಕೆಲಸ ಮಾಡುತ್ತೆ ಮತ್ತು ಆತನನ್ನ ಮೆಚ್ಚಿಸೋ ನಂಬಿಕೆಯನ್ನ ಬೆಳೆಸ್ಕೊಳ್ಳೋಕೆ ಸಹಾಯ ಮಾಡುತ್ತೆ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ