ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಸೆಪ್ಟೆಂಬರ್‌ ಪು. 13
  • ದೇವರನ್ನ ನಂಬದವ್ರಿಗೆ ಸೃಷ್ಟಿಕರ್ತನ ಬಗ್ಗೆ ತಿಳ್ಕೊಳ್ಳೋಕೆ ಸಹಾಯ ಮಾಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರನ್ನ ನಂಬದವ್ರಿಗೆ ಸೃಷ್ಟಿಕರ್ತನ ಬಗ್ಗೆ ತಿಳ್ಕೊಳ್ಳೋಕೆ ಸಹಾಯ ಮಾಡಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ಧರ್ಮದಲ್ಲಿ ನಂಬಿಕೆ ಇಲ್ಲದವರಿಗೆ ಸತ್ಯ ಕಲಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ನಮ್ಮ ಮುಖ್ಯ ಬೋಧನಾ ಸಲಕರಣೆಗಳನ್ನು ಚೆನ್ನಾಗಿ ಉಪಯೋಗಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಕ್ಷೇತ್ರಸೇವೆಗಾಗಿ ಕೂಟಗಳು
    1991 ನಮ್ಮ ರಾಜ್ಯದ ಸೇವೆ
  • ಸತ್ಯವನ್ನು ಕಲಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಸೆಪ್ಟೆಂಬರ್‌ ಪು. 13
ಒಬ್ಬ ಸಹೋದರಿ ಏಷ್ಯಾದ ಒಬ್ಬ ಮಹಿಳೆಗೆ ಸಿಹಿಸುದ್ದಿ ಸಾರ್ತಿದ್ದಾರೆ.

ನಮ್ಮ ಕ್ರೈಸ್ತ ಜೀವನ

ದೇವರನ್ನ ನಂಬದವ್ರಿಗೆ ಸೃಷ್ಟಿಕರ್ತನ ಬಗ್ಗೆ ತಿಳ್ಕೊಳ್ಳೋಕೆ ಸಹಾಯ ಮಾಡಿ

ಧರ್ಮದ ಮೇಲೆ, ದೇವರ ಮೇಲೆ ನಂಬಿಕೆ ಇಲ್ಲದಿರೋ ಜನ್ರು ನಮ್ಮ ಮಾತನ್ನ ಕೇಳಲ್ಲ ಅಂತ ಅಂದ್ಕೊಂಡು ನಾವು ಸಿಹಿಸುದ್ದಿ ಸಾರದೇ ಎಷ್ಟೋ ಸಲ ಹಾಗೇ ಬಂದುಬಿಡ್ತೀವಿ. ಆದ್ರೆ ಇಂಥ ಎಷ್ಟೋ ಜನ್ರು, ನಾಸ್ತಿಕರು ಯೆಹೋವನ ಸಾಕ್ಷಿಗಳಾಗಿದ್ದಾರೆ. ದೇವರು ಇದ್ದಾನೆ ಅನ್ನೋದಕ್ಕೆ ನಾವು ಆಧಾರಗಳನ್ನ ತೋರಿಸಬೇಕು ಅಷ್ಟೇ.—ರೋಮ 1:20; 10:14.

ನಂಬಿಕೆ ಇಲ್ಲದವರು ನಂಬಿಕೆಯನ್ನ ಗಳಿಸಬಹುದು ಅನ್ನೋದನ್ನ ಮರೀಬೇಡಿ!—ದೇವರ ಮೇಲೆ ನಂಬಿಕೆ ಇಲ್ಲದವರು ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗೆ ಉತ್ರ ಕೊಡಿ:

ಟೊಮ್ಮಾಸೊ ಅವ್ರ ಅನುಭವದಿಂದ ನೀವೇನು ಕಲಿತ್ರಿ?

ಅವ್ರಿಗೆ ಸಹಾಯ ಮಾಡೋದು ಹೇಗೆ?

ದೇವರ ಮೇಲೆ ನಂಬಿಕೆ ಇಲ್ಲ ಅಂತ ಒಬ್ಬ ವ್ಯಕ್ತಿ ಹೇಳಿದ್ರೆ ಅವ್ರ ಹತ್ರ ಪ್ರೀತಿಯಿಂದ, ಯೋಚ್ನೆ ಮಾಡಿ ಮಾತಾಡಿ. ಅವ್ರಿಗೆ ಯಾಕೆ ಹಾಗೆ ಅನಿಸ್ತಿದೆ ಅಂತ ತಿಳ್ಕೊಳ್ಳಿ. (2ತಿಮೊ 2:24) ಅವ್ರಿಗೆ ಇಷ್ಟ ಆಗೋ ವಿಷ್ಯದ ಬಗ್ಗೆನೇ ಮಾತಾಡಿ. ಒಂದುವೇಳೆ ನಮ್ಮನ್ನ ಸೃಷ್ಟಿ ಮಾಡಿರೋ ದೇವರು ಒಬ್ಬ ಇದ್ದಾನೆ ಅನ್ನೋದಕ್ಕೆ ಆಧಾರಗಳನ್ನ ತಿಳ್ಕೊಳ್ಳೋಕೆ ಅವ್ರಿಗೆ ಇಷ್ಟ ಇದ್ರೆ, ಅದಕ್ಕೆ ಸಹಾಯ ಮಾಡಿ. ಅದಕ್ಕಂತಾನೇ ನಮ್ಮ ಸಂಘಟನೆ ಕೆಲವು ವಿಡಿಯೋಗಳನ್ನ, ಪ್ರಕಾಶನಗಳನ್ನ ಬಿಡುಗಡೆ ಮಾಡಿದೆ. ಉದಾಹರಣೆಗೆ, ಜೀವವು ಸೃಷ್ಟಿಸಲ್ಪಟ್ಟಿತೋ? (ಇಂಗ್ಲಿಷ್‌) ಮತ್ತು ಜೀವದ ಆರಂಭ—ಐದು ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ಅನ್ನೋ ಪತ್ರಿಕೆಗಳನ್ನ ನಮಗೆ ಸುಲಭವಾಗಿ ಸಿಗೋ ಹಾಗೆ ಬೋಧನಾ ಸಾಧನಗಳಲ್ಲಿ ಸೇರಿಸಿದೆ.

ನಿಮಗೆ ಅವ್ರ ಹತ್ರ ಮಾತಾಡೋಕೆ ಮೊದಮೊದ್ಲು ಭಯ ಆಗಬಹುದು. ಹಾಗಿದ್ರೆ ಅನುಭವ ಇರೋ ಸಹೋದರ ಅಥವಾ ಸಹೋದರಿ ಹತ್ರ ಸಹಾಯ ಕೇಳಿ. ಆ ವ್ಯಕ್ತಿ ದೇವರಿದ್ದಾನೆ ಅಂತ ನಂಬದೆ ಇರಬಹುದು. ಆದ್ರೂ ಅವ್ರಿಗೆ ಒಳ್ಳೇ ಮನಸ್ಸಿದ್ರೆ ಅವ್ರ ಹತ್ರ ಮಾತಾಡೋಕೆ ಯೆಹೋವ ನಿಮಗೆ ಸಹಾಯ ಮಾಡೇ ಮಾಡ್ತಾನೆ.—ಅಕಾ 13:48.

“ಜೀವವು ಸೃಷ್ಟಿಸಲ್ಪಟ್ಟಿತೋ?” ಬ್ರೋಷರ್‌.
“ಜೀವದ ಆರಂಭ—ಐದು ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ” ಬ್ರೋಷರ್‌.
    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ