ನಮ್ಮ ಕ್ರೈಸ್ತ ಜೀವನ
ವಯಸ್ಸಾಗಿರೋ ಸ್ತ್ರೀಯರನ್ನ ಅಮ್ಮನ ತರ, ಯುವತಿಯರನ್ನ ಅಕ್ಕತಂಗಿ ತರ ನೋಡಿ
ವಯಸ್ಸಾದ ಸಹೋದರ ಸಹೋದರಿಯರನ್ನ ಅಪ್ಪ ಅಮ್ಮನ ತರ, ಯುವಕರನ್ನ ಅಣ್ಣತಮ್ಮಂದಿರ ತರ, ಯುವತಿಯರನ್ನ ಅಕ್ಕತಂಗಿ ತರ ನೋಡ್ಬೇಕು ಅಂತ ಬೈಬಲ್ ಹೇಳುತ್ತೆ. (1 ತಿಮೊತಿ 5:1, 2 ಓದಿ.) ಸಹೋದರರು ಸಹೋದರಿಯರ ಜೊತೆ ಗೌರವದಿಂದ ನಡ್ಕೊಳ್ಳಬೇಕು.
ಸಹೋದರ ಒಬ್ಬ ಸಹೋದರಿ ಜೊತೆ ಚೆಲ್ಲಾಟವಾಡ್ತಾ ಅವಳಿಗೆ ಮುಜುಗರ ಆಗೋ ತರ ನಡ್ಕೋಬಾರದು. (ಯೋಬ 31:1) ಒಬ್ಬ ಸಹೋದರ ಸಹೋದರಿಯ ಭಾವನೆಗಳ ಜೊತೆ ಯಾವತ್ತೂ ಆಟ ಆಡಬಾರದು. ಮದುವೆ ಆಗ್ತೀನಿ ಅಂತ ಆಸೆ ಹುಟ್ಟಿಸಿ ಮೋಸ ಮಾಡಬಾರದು.
ಒಬ್ಬ ಸಹೋದರಿ ತನಗೆ ಬೇಕಾದ ಅಗತ್ಯಗಳ ಬಗ್ಗೆ, ಸಹಾಯದ ಬಗ್ಗೆ ಗೌರವದಿಂದ ಹಿರಿಯರತ್ರ ಕೇಳಿಕೊಂಡಾಗ ಅವರು ಅರ್ಥಮಾಡ್ಕೋಬೇಕು. ಮುಖ್ಯವಾಗಿ ಗಂಡನಿಲ್ಲದೇ ಬದುಕುತ್ತಿರೋ ಸಹೋದರಿಗೆ ಪರಿಗಣನೆ ತೋರಿಸಬೇಕು.—ರೂತ್ 2:8, 9.
ಸಭೆಯಲ್ಲಿ ಶಾಶ್ವತ ಪ್ರೀತಿ ತೋರಿಸಿ—ವಿಧವೆಯರು ಮತ್ತು ಅನಾಥರು ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:
ಸಭೆಯವರು ಸಹೋದರಿ ಮೈಯಿಂಟ್ನ್ನು ಪ್ರೀತಿಸ್ತಿದ್ದಾರೆ ಅಂತ ಹೇಗೆ ತೋರಿಸಿಕೊಟ್ಟರು?
ಸಹೋದರ ಸಹೋದರಿಯರ ಪ್ರೀತಿ ಆ ಹಳ್ಳಿಯಲ್ಲಿ ಇರೋರಿಗೆ ಸಿಹಿಸುದ್ದಿ ಕೇಳಿಸಿಕೊಳ್ಳೋಕೆ ಹೇಗೆ ಸಹಾಯ ಮಾಡಿತು?
ಸಹೋದರ ಸಹೋದರಿಯರ ಪ್ರೀತಿ ಮೈಯಿಂಟ್ರ ಮಕ್ಕಳ ಮೇಲೆ ಯಾವ ಪ್ರಭಾವ ಬೀರಿತು?
ನಿಮ್ಮ ಸಭೆಯಲ್ಲಿರೋ ಸಹೋದರಿಯರಿಗೆ ಹೇಗೆ ಪ್ರೀತಿ ಮತ್ತು ಪರಿಗಣನೆ ತೋರಿಸ್ತೀರಾ?