ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಆಗಸ್ಟ್‌ ಪು. 7
  • ನಿನ್ನ ಸಹೋದರನಿಗೋಸ್ಕರವೂ ಯೇಸು ಸತ್ತನು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿನ್ನ ಸಹೋದರನಿಗೋಸ್ಕರವೂ ಯೇಸು ಸತ್ತನು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಅನುರೂಪ ಮಾಹಿತಿ
  • ಸಭೆಯಲ್ಲಿರುವ ಎಲ್ಲರ ಜೊತೆ ಒಗ್ಗಟ್ಟಿನಿಂದ ಇರಿ
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಕ್ರಿಸ್ತನ ಮನೋಭಾವ ನಿಮ್ಮಲ್ಲಿರಲಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ‘ಚಿಕ್ಕ ಮಕ್ಕಳ ತರ ಇರೋ ಜನ್ರನ್ನ ನೋಯಿಸಬೇಡಿ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ನಿಮ್ಮ ಹೃದಯಾಂತರಾಳದಿಂದ ಕ್ಷಮಿಸಿರಿ
    ಕಾವಲಿನಬುರುಜು—1999
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಆಗಸ್ಟ್‌ ಪು. 7
ಯೇಸು ತನ್ನ ಹಿಂಬಾಲಕರ ಹತ್ತಿರ ಮಾತಾಡುತ್ತಿದ್ದಾನೆ

ನಮ್ಮ ಕ್ರೈಸ್ತ ಜೀವನ

ನಿನ್ನ ಸಹೋದರನಿಗೋಸ್ಕರವೂ ಯೇಸು ಸತ್ತನು

ಯೇಸು ಅಪರಿಪೂರ್ಣ ಮನುಷ್ಯರಿಗೋಸ್ಕರ ತನ್ನ ಜೀವ ಕೊಟ್ಟನು. (ರೋಮ 5:8) ಆತನು ನಮ್ಮನ್ನು ಪ್ರೀತಿಸುವುದರಿಂದ ತನ್ನ ಜೀವ ಕೊಟ್ಟನು. ಇದನ್ನು ನಾವು ಮಾನ್ಯಮಾಡುತ್ತೇವೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಯೇಸು ನಮ್ಮ ಸಹೋದರನಿಗೋಸ್ಕರವೂ ಜೀವ ಕೊಟ್ಟನು ಎಂದು ನಾವು ಮರೆಯಬಾರದು. ನಮ್ಮಂತೆ ಅಪರಿಪೂರ್ಣರಾಗಿರುವ ನಮ್ಮ ಸಹೋದರ ಸಹೋದರಿಯರಿಗೆ ನಾವು ಹೇಗೆ ಕ್ರಿಸ್ತನಂತೆ ಪ್ರೀತಿ ತೋರಿಸಬಹುದು? ಮೂರು ವಿಧಗಳಲ್ಲಿ: [1] ಬೇರೆ ಹಿನ್ನೆಲೆಯಿಂದ ಬಂದಿರುವವರನ್ನೂ ಸ್ನೇಹಿತರಾಗಿ ಮಾಡಿಕೊಳ್ಳಬಹುದು. (ರೋಮ 15:7; 2ಕೊರಿಂ 6:12,13) [2] ಬೇರೆಯವರಿಗೆ ನೋವಾಗುವಂತೆ ಮಾತಾಡಬಾರದು, ಬೇಜಾರಾಗುವಂತೆ ನಡಕೊಳ್ಳಬಾರದು. (ರೋಮ 14:13-15) [3] ಯಾರಾದರೂ ನಮ್ಮ ವಿರುದ್ಧ ಪಾಪಮಾಡಿದರೆ ನಾವು ತಕ್ಷಣ ಕ್ಷಮಿಸಬೇಕು. (ಲೂಕ 17:3, 4; 23:34) ಈ ವಿಧಗಳಲ್ಲಿ ನಾವು ಯೇಸುವನ್ನು ಅನುಕರಿಸಲು ಪ್ರಯತ್ನಿಸಿದರೆ ಯೆಹೋವನು ಸಭೆಯಲ್ಲಿ ಶಾಂತಿ ಮತ್ತು ಐಕ್ಯತೆ ಇರುವಂತೆ ನೋಡಿಕೊಳ್ಳುತ್ತಾನೆ.

ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳನ್ನು ಉತ್ತರಿಸಿ:

  • ಮಿಕೀಯನ್ನು ಹೊಸ ಸಭೆಯಲ್ಲಿ ಸ್ವಾಗತಿಸುತ್ತಿರುವುದು

    ಮಿಕೀಗೆ ತನ್ನ ಸಭೆಯವರ ಬಗ್ಗೆ ಮೊದಮೊದಲು ಹೇಗನಿಸುತ್ತಿತ್ತು?

  • ಮಿಕೀಗೆ ಸಭೆಯಲ್ಲಿ ಇರುವವರಿಂದ ಕಿರಿಕಿರಿಯಾಗುತ್ತಿದೆ

    ಅವಳ ಅನಿಸಿಕೆ ಬದಲಾಗಲು ಕಾರಣವೇನು?

  • ತನ್ನ ಶಿಷ್ಯರು ನಿದ್ದೆ ಮಾಡಿದ್ದರೂ ಯೇಸು ಅವರೊಟ್ಟಿಗೆ ದಯೆಯಿಂದ ನಡಕೊಳ್ಳುತ್ತಿದ್ದಾನೆ

    ತನ್ನ ದೃಷ್ಟಿಕೋನವನ್ನು ಸರಿಪಡಿಸಿಕೊಳ್ಳಲು ಮಿಕೀಗೆ ಯೇಸುವಿನ ಉದಾಹರಣೆ ಹೇಗೆ ಸಹಾಯ ಮಾಡಿತು? (ಮಾರ್ಕ 14:38)

  • ಒಬ್ಬ ಹುಡುಗ ಮಿಕೀಗೆ ಡಿಕ್ಕಿ ಹೊಡೆದಾಗ ಅವಳ ಕೈಯಲ್ಲಿದ್ದ ಜ್ಯೂಸ್‌ ಬಟ್ಟೆ ಮೇಲೆ ಚೆಲ್ಲಿದರೂ ಅವಳು ನಗುತ್ತಿದ್ದಾಳೆ

    ನಮ್ಮ ಜೊತೆ ಕ್ರೈಸ್ತರ ಬಗ್ಗೆ ಒಳ್ಳೇದಾಗಿ ಯೋಚಿಸಲು ಜ್ಞಾನೋಕ್ತಿ 19:11 ಹೇಗೆ ಸಹಾಯ ಮಾಡುತ್ತದೆ?

ಧ್ಯಾನಕ್ಕಾಗಿ:

ನನಗಾದ ಯಾವ ನೋವನ್ನಾದರೂ ನಾನು ಮರೆಯುವ ಬದಲು ಇನ್ನೂ ಮನಸ್ಸಲ್ಲಿಟ್ಟುಕೊಂಡಿದ್ದೀನಾ?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ