ಬೈಬಲಿನಲ್ಲಿರುವ ರತ್ನಗಳು | ಲೂಕ 6-7
ಉದಾರವಾಗಿ ಅಳೆದು ಕೊಡಿ
ಉದಾರಿಯು ತನ್ನ ಸಮಯ, ಶಕ್ತಿ ಮತ್ತು ಸಂಪನ್ಮೂಲಗಳನ್ನು ಬೇರೆಯವರಿಗೆ ಸಹಾಯ ಮಾಡಲು, ಉತ್ತೇಜಿಸಲು ಬಳಸುತ್ತಾನೆ.
“ಕೊಡುವುದನ್ನು ರೂಢಿಮಾಡಿಕೊಳ್ಳಿರಿ” ಎಂದು ಭಾಷಾಂತರವಾಗಿರುವ ಗ್ರೀಕ್ ಪದವು ಒಂದು ವಿಷಯವನ್ನು ಮಾಡುತ್ತಾ ಇರುವುದಕ್ಕೆ ಸೂಚಿಸುತ್ತದೆ
ನಾವು ಕೊಡುವುದನ್ನು ರೂಢಿಮಾಡಿಕೊಂಡರೆ, ಜನರು ‘ಒಳ್ಳೆಯ ಅಳತೆಯಲ್ಲಿ ಅಳೆದು, ಒತ್ತಿ, ಅಲ್ಲಾಡಿಸಿ, ತುಂಬಿತುಳುಕುತ್ತಿರುವಷ್ಟು’ ನಮ್ಮ ಮಡಿಲಿಗೆ ಹಾಕುವರು. ಮಡಿಲಿಗೆ ಹಾಕುವರು ಎನ್ನುವ ಪದ, ಕೆಲವು ವ್ಯಾಪಾರಿಗಳು ತಮ್ಮ ಗ್ರಾಹಕರು ಖರೀದಿಸಿದ ವಸ್ತುಗಳನ್ನು ಅವರ ಮೇಲಂಗಿಗಳಲ್ಲಿ ಮಡಿಕೆ ಮಾಡಿ ಅದರಲ್ಲಿ ತುಂಬಿಸುತ್ತಿದ್ದ ಪದ್ಧತಿಗೆ ಸೂಚಿಸುತ್ತಿರಬಹುದು