ನಮ್ಮ ಕ್ರೈಸ್ತ ಜೀವನ
“ದೇವರು ಒಟ್ಟುಗೂಡಿಸಿದ್ದನ್ನು. . . ”
ಒಬ್ಬ ವ್ಯಕ್ತಿ ವಿಚ್ಛೇದನ ಕೊಡಲು ಯೋಚಿಸುತ್ತಿರುವುದಾದರೆ ಕಾನೂನುಬದ್ಧ ತ್ಯಾಗಪತ್ರವನ್ನು ತಯಾರಿಸಬೇಕೆಂದು ಧರ್ಮಶಾಸ್ತ್ರ ಅವಶ್ಯಪಡಿಸಿತ್ತು. ಜನರು ಅವಸರದಲ್ಲಿ ವಿಚ್ಛೇದನ ಪಡೆಯುವುದನ್ನು ಇದು ತಡೆಯಿತು. ಆದರೆ ಯೇಸುವಿನ ದಿನದಲ್ಲಿ ವಿಚ್ಛೇದನ ಪಡೆಯುವುದನ್ನು ಧಾರ್ಮಿಕ ಮುಖಂಡರು ಸುಲಭ ಮಾಡಿಬಿಟ್ಟಿದ್ದರು. ಗಂಡಂದಿರು ಯಾವ ಕಾರಣಕ್ಕೆ ಬೇಕಾದರೂ ವಿಚ್ಛೇದನ ಕೊಡಬಹುದಿತ್ತು. (“ತ್ಯಾಗಪತ್ರ” ಮಾರ್ಕ 10:4ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ; “ತನ್ನ ಹೆಂಡತಿಗೆ ವಿಚ್ಛೇದನ ನೀಡಿ,” “ಅವಳ ವಿರುದ್ಧ ವ್ಯಭಿಚಾರ ಮಾಡುವವನು” ಮಾರ್ಕ 10:11ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ) ವಿವಾಹ ಅನ್ನುವುದು ಯೆಹೋವನು ಮಾಡಿದ ಏರ್ಪಾಡು ಅನ್ನುವುದಕ್ಕೆ ಯೇಸು ಗಮನ ಸೆಳೆದನು. (ಮಾರ್ಕ 10:2-12) ಗಂಡ ಮತ್ತು ಹೆಂಡತಿ ಶಾಶ್ವತ ಬಂಧದಲ್ಲಿ “ಒಂದೇ ಶರೀರ” ಆಗಿರಬೇಕಿತ್ತು. ಇದರ ಬಗ್ಗೆ ಮತ್ತಾಯನು ಬರೆಯುತ್ತಾ, ವಿಚ್ಛೇದನ ಕೊಡಲು ಒಂದೇ ಕಾರಣ ಲೈಂಗಿಕ ಅನೈತಿಕತೆ ಆಗಿರಬೇಕು ಅಂದನು.—ಮತ್ತಾ 19:9.
ಇಂದು ಹೆಚ್ಚಿನ ಜನರು ವಿವಾಹವನ್ನು ಯೇಸು ನೋಡಿದಂತೆ ಅಲ್ಲ ಫರಿಸಾಯರು ನೋಡಿದಂತೆ ನೋಡುತ್ತಾರೆ. ಸಮಸ್ಯೆಗಳು ಬಂದರೆ, ತಕ್ಷಣ ವಿಚ್ಛೇದನ ಕೊಡಲು ತುದಿಗಾಲಲ್ಲಿ ನಿಲ್ಲುತ್ತಾರೆ. ಆದರೆ ಕ್ರೈಸ್ತ ದಂಪತಿಗಳು ತಮ್ಮ ವಿವಾಹ ಪ್ರತಿಜ್ಞೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಸಮಸ್ಯೆಗಳು ಬಂದಾಗ ಬೈಬಲ್ ತತ್ವಗಳನ್ನು ಅನ್ವಯಿಸಿಕೊಂಡು ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಪ್ರೀತಿ ಮತ್ತು ಗೌರವ ಕುಟುಂಬಗಳನ್ನು ಐಕ್ಯಗೊಳಿಸುತ್ತದೆ ಎಂಬ ವಿಡಿಯೋವನ್ನು ನೋಡಿದ ಬಳಿಕ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
ನೀವು ನಿಮ್ಮ ವಿವಾಹ ಜೀವನದಲ್ಲಿ ಜ್ಞಾನೋಕ್ತಿ 15:1ನ್ನು ಹೇಗೆ ಅನ್ವಯಿಸುವಿರಿ ಮತ್ತು ಇದು ಪ್ರಾಮುಖ್ಯ ಯಾಕೆ?
ಜ್ಞಾನೋಕ್ತಿ 19:11 ಹೇಳುವುದನ್ನು ಅನ್ವಯಿಸಿಕೊಳ್ಳುವ ಮೂಲಕ ನೀವು ಹೇಗೆ ಸಮಸ್ಯೆಗಳಿಂದ ದೂರ ಇರಬಹುದು?
ನಿಮ್ಮ ವಿವಾಹ ಬಂಧ ಮುರಿಯುವ ಹಂತದಲ್ಲಿದ್ದರೆ, ‘ನಾನು ವಿಚ್ಛೇದನ ಕೊಟ್ಟುಬಿಡಲಾ?’ ಎಂದು ಯೋಚಿಸುವ ಬದಲು ನೀವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?
ಮತ್ತಾಯ 7:12ನ್ನು ಅನ್ವಯಿಸುವ ಮೂಲಕ ನೀವು ಹೇಗೆ ಒಳ್ಳೇ ಗಂಡ ಅಥವಾ ಹೆಂಡತಿ ಆಗಬಹುದು?