ನಮ್ಮ ಕ್ರೈಸ್ತ ಜೀವನ
ಜನರನ್ನು ಶಿಷ್ಯರನ್ನಾಗಿ ಮಾಡಲು ನಾವು ಸಾರಬೇಕು ಮತ್ತು ಕಲಿಸಬೇಕು
ಯೇಸು ತನ್ನ ಹಿಂಬಾಲಕರಿಗೆ ‘ಹೊರಟುಹೋಗಿ ಜನರನ್ನು ಶಿಷ್ಯರನ್ನಾಗಿ ಮಾಡಿ’ ಎಂದು ಆಜ್ಞಾಪಿಸಿದನು. (ಮತ್ತಾ 28:19) ಈ ಆಜ್ಞೆಯಲ್ಲಿ ಜನರಿಗೆ ಸಾರುವ ಮತ್ತು ಕಲಿಸುವ ಕೆಲಸಗಳು ಸೇರಿವೆ. ಆದ್ದರಿಂದ ನಾವೆಲ್ಲರೂ ಆಗಾಗ ಹೀಗೆ ಕೇಳಿಕೊಳ್ಳಬೇಕು: ‘ಸಾರುವ ಮತ್ತು ಕಲಿಸುವ ಕೆಲಸದಲ್ಲಿ ನಾನು ಇನ್ನೂ ಹೇಗೆಲ್ಲ ಪ್ರಗತಿ ಮಾಡಬಹುದು?’
ಸುವಾರ್ತೆ ಸಾರಬೇಕು
ಜನರು ನಮ್ಮ ಹತ್ತಿರ ಬರಬೇಕೆಂದು ನಾವು ಯೋಚಿಸಬಾರದು. ಬದಲಿಗೆ ನಾವೇ ಹುರುಪಿನಿಂದ ‘ಯೋಗ್ಯರನ್ನು’ ಹುಡುಕುತ್ತಾ ಇರಬೇಕು. (ಮತ್ತಾ 10:11) ನಮಗೆ ‘ಸಿಗುವಂಥ ಎಲ್ಲ ಜನರಿಗೆ’ ಸುವಾರ್ತೆ ಸಾರಲು ಅವಕಾಶಗಳಿಗಾಗಿ ಹುಡುಕುತ್ತೇವಾ? (ಅಕಾ 17:17) ಪೌಲನು ಸುವಾರ್ತೆ ಸಾರುವ ಕೆಲಸವನ್ನು ಪಟ್ಟುಬಿಡದೆ ಮಾಡಿದ್ದರ ಫಲವಾಗಿ ಲುದ್ಯಳು ಶಿಷ್ಯೆ ಆದಳು.—ಅಕಾ 16:13-15.
“ಮುಂಜಾನೆ ಬೀಜಬಿತ್ತು, ಸಂಜೆಯ ತನಕ ಕೈದೆಗೆಯಬೇಡ” (ಪ್ರಸಂ 11:6)
“ಎಡೆಬಿಡದೆ” ಸುವಾರ್ತೆ ಸಾರಿ—ಅನೌಪಚಾರಿಕವಾಗಿ ಮತ್ತು ಮನೆಯಿಂದ ಮನೆಗೆ ಎಂಬ ವಿಡಿಯೋ ನೋಡಿ, ನಂತರ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ:
ಸ್ಯಾಮುವೆಲ್ ತನ್ನ ದಿನನಿತ್ಯದ ಕೆಲಸಕಾರ್ಯಗಳನ್ನು ಮಾಡುವಾಗ ಸತ್ಯದ ಬೀಜ ಬಿತ್ತುವ ಕೆಲಸವನ್ನು ಹೇಗೆ ಮಾಡುತ್ತಾ ಇದ್ದನು?
ಎಲ್ಲ ವಿಧಾನಗಳಲ್ಲಿ ಸುವಾರ್ತೆ ಸಾರಲು ನಾವು ಯಾಕೆ ಪಟ್ಟುಬಿಡದೆ ಪ್ರಯತ್ನಿಸಬೇಕು?
ನಿಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ನೀವು ಯಾರಿಗೆಲ್ಲ ದೇವರ ರಾಜ್ಯದ ಸಂದೇಶವನ್ನು ಸಾರಬಹುದು?
ಕಲಿಸಬೇಕು
ಶಿಷ್ಯರನ್ನಾಗಿ ಮಾಡುವುದರಲ್ಲಿ ಸಾಹಿತ್ಯ ಕೊಡುವುದಕ್ಕಿಂತ ಹೆಚ್ಚಿನ ವಿಷಯ ಒಳಗೂಡಿದೆ. ಜನರು ಪ್ರಗತಿ ಮಾಡುತ್ತಾ ಇರಲು ನಾವು ಪುನರ್ಭೇಟಿಗಳನ್ನು ಮತ್ತು ಬೈಬಲ್ ಅಧ್ಯಯನಗಳನ್ನು ಮಾಡಬೇಕು. (1ಕೊರಿಂ 3:6-9) ಜನರಿಗೆ ಸತ್ಯ ಕಲಿಸಲು ಸಾಕಷ್ಟು ಪ್ರಯತ್ನ ಮಾಡಿದ ಮೇಲೂ ತಕ್ಕ ಪ್ರತಿಫಲ ಸಿಗದಿದ್ದರೆ ಏನು ಮಾಡಬೇಕು? (ಮತ್ತಾ 13:19-22) ಯಾರ ಹೃದಯ ‘ಒಳ್ಳೆಯ ನೆಲದಂತಿದೆಯೋ’ ಅಂಥವರನ್ನು ನಾವು ಹುಡುಕುವುದನ್ನು ಬಿಡದೆ ಮುಂದುವರಿಸಬೇಕು.—ಮತ್ತಾ 13:23; ಅಕಾ 13:48.
“ನಾನು ನೆಟ್ಟೆನು, ಅಪೊಲ್ಲೋಸನು ನೀರುಹೊಯ್ದನು, ಆದರೆ ದೇವರು ಅದನ್ನು ಬೆಳೆಸುತ್ತಾ ಬಂದನು” (1ಕೊರಿಂ 3:6)
“ಎಡೆಬಿಡದೆ” ಸುವಾರ್ತೆ ಸಾರಿ—ಸಾರ್ವಜನಿಕವಾಗಿ ಮತ್ತು ಶಿಷ್ಯರನ್ನಾಗಿ ಮಾಡಿ ಎಂಬ ವಿಡಿಯೋ ನೋಡಿ, ನಂತರ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ:
ಎಜೆಕಿಯೇಲ್, ಅಬೀಗೈಲ್‌ರ ಹೃದಯಗಳಲ್ಲಿದ್ದ ಸತ್ಯದ ಬೀಜಕ್ಕೆ ಸೊಲೊಮೋನ್ ಮತ್ತು ಮೇರಿ ಹೇಗೆ ನೀರೆರೆದರು?
ಸಾರ್ವಜನಿಕ ಸಾಕ್ಷಿಕಾರ್ಯವನ್ನೂ ಸೇರಿಸಿ ಬೇರೆಲ್ಲ ವಿಧಾನಗಳನ್ನು ಅನುಸರಿಸುವಾಗ ನಮ್ಮ ಗುರಿ ಏನಾಗಿರಬೇಕು?
ಇತರರಿಗೆ ಸತ್ಯವನ್ನು ಕಲಿಸುವ ಕೆಲಸಕ್ಕೆ ನಾವು ಹೇಗೆ ಹೆಚ್ಚು ಪ್ರಾಮುಖ್ಯತೆ ಕೊಡಬಹುದು?