ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಅಕ್ಟೋಬರ್‌ ಪು. 7
  • ಯೆಹೋವನನ್ನು ಸ್ತುತಿಸಲಿಕ್ಕಾಗಿಯೇ ಜೀವಿಸಿರಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನನ್ನು ಸ್ತುತಿಸಲಿಕ್ಕಾಗಿಯೇ ಜೀವಿಸಿರಿ!
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಅನುರೂಪ ಮಾಹಿತಿ
  • ತಲಾಂತುಗಳ ದೃಷ್ಟಾಂತದಿಂದ ಕಲಿಯಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಇರೋ ನೇಮಕವನ್ನ ಖುಷಿಯಿಂದ ಮಾಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ದೇವರನ್ನು ಸೇವಿಸಲು ನಿಮ್ಮನ್ನು ಯಾವುದು ಪ್ರೇರಿಸುತ್ತದೆ?
    ಕಾವಲಿನಬುರುಜು—1995
  • ಸಂತೋಷಿಸಲು ನಿಮಗೆ ಯಾವ ಕಾರಣವಿದೆ?
    2012 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಅಕ್ಟೋಬರ್‌ ಪು. 7

ಅಕ್ಟೋಬರ್‌ 23-29

ಯೆಹೋವನನ್ನು ಸ್ತುತಿಸಲಿಕ್ಕಾಗಿಯೇ ಜೀವಿಸಿರಿ!

ಜೀವ ಒಂದು ಅಮೂಲ್ಯ ಉಡುಗೊರೆ. ನಾವು ಆ ಉಡುಗೊರೆಯನ್ನು ಎಷ್ಟು ಗಣ್ಯ ಮಾಡುತ್ತೇವೆಂದು ಪ್ರತಿದಿನ ನಾವದನ್ನು ಉಪಯೋಗಿಸುವ ರೀತಿ ತೋರಿಸುತ್ತದೆ. ಯೆಹೋವನೇ ನಮಗೆ ಜೀವ ಕೊಟ್ಟಿರುವುದರಿಂದ ಆತನ ಸಾಕ್ಷಿಗಳಾದ ನಾವು ನಮ್ಮ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಆತನಿಗೆ ಮಹಿಮೆ, ಘನತೆ ತರಲಿಕ್ಕಾಗಿ ಉಪಯೋಗಿಸುತ್ತೇವೆ. (ಕೀರ್ತ 36:9; ಪ್ರಕ 4:11) ಆದರೂ ಈ ದುಷ್ಟ ಲೋಕದಲ್ಲಿ ಎದುರಾಗುವ ದಿನನಿತ್ಯದ ಚಿಂತೆಗಳು ನಾವು ಆಧ್ಯಾತ್ಮಿಕ ವಿಷಯಗಳಿಗೆ ಎರಡನೇ ಸ್ಥಾನ ಕೊಡುವಂತೆ ಮಾಡಬಲ್ಲವು. (ಮಾರ್ಕ 4:18, 19) ನಮ್ಮಲ್ಲಿ ಪ್ರತಿಯೊಬ್ಬರು ಹೀಗೆ ಕೇಳಿಕೊಳ್ಳಬೇಕು: ‘ನಾನು ನಿಜವಾಗಿಯೂ ನನ್ನಲ್ಲಿರುವ ಅತ್ಯುತ್ತಮವಾದದ್ದನ್ನು ಯೆಹೋವನಿಗೆ ಕೊಡುತ್ತಿದ್ದೇನಾ? (ಹೋಶೇ 14:2) ನನ್ನ ಕೆಲಸ ಯೆಹೋವನ ಸೇವೆಯ ಮೇಲೆ ಎಂಥ ಪ್ರಭಾವ ಬೀರುತ್ತಿದೆ? ನನ್ನ ಆಧ್ಯಾತ್ಮಿಕ ಗುರಿಗಳು ಯಾವುವು? ನಾವು ದೇವರ ಸೇವೆಯನ್ನು ಇನ್ನೂ ಹೇಗೆ ಹೆಚ್ಚಿಸಬಹುದು?’ ಯಾವುದಾದರೊಂದು ವಿಷಯದಲ್ಲಿ ಪ್ರಗತಿ ಮಾಡಬೇಕೆಂದು ನಿಮಗೆ ಗೊತ್ತಾದರೆ ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿ, ಬೇಕಾದ ಹೊಂದಾಣಿಕೆ ಮಾಡಿಕೊಳ್ಳಿ. ಪ್ರತಿ ದಿನ ಯೆಹೋವನನ್ನು ಸ್ತುತಿಸುವುದಾದರೆ ನಮ್ಮ ಜೀವನ ಖಂಡಿತ ಸಂತೃಪ್ತಿ ಮತ್ತು ಸಂತೋಷದಿಂದ ಕೂಡಿರುತ್ತದೆ.—ಕೀರ್ತ 61:8.

ಎಡ್ಗಾರ್‌ಡೋ ಫ್ರಾಂಕೊ ವೇದಿಕೆಯ ಮೇಲೆ ಹಾಡುತ್ತಿದ್ದಾನೆ; ಎಡ್ಗಾರ್‌ಡೋ ಫ್ರಾಂಕೊ ಸೇವೆ ಮಾಡುತ್ತಿದ್ದಾನೆ

ನಾನು ನನ್ನ ಪ್ರತಿಭೆಯನ್ನು ಯಾರಿಗಾಗಿ ಉಪಯೋಗಿಸುತ್ತಿದ್ದೇನೆ?

ನಿಮ್ಮ ಪ್ರತಿಭೆಯನ್ನು ಯೆಹೋವನಿಗಾಗಿ ಉಪಯೋಗಿಸಿ ಎಂಬ ವಿಡಿಯೋ ನೋಡಿ. ನಂತರ, ಈ ಪ್ರಶ್ನೆಗಳನ್ನು ಉತ್ತರಿಸಿ:

  • ನಮ್ಮ ಪ್ರತಿಭೆಯನ್ನು ಸೈತಾನನ ಲೋಕಕ್ಕಾಗಿ ಉಪಯೋಗಿಸುವುದು ಮೂರ್ಖತನವಾಗಿದೆ ಯಾಕೆ? (1ಯೋಹಾ 2:17)

  • ತಮ್ಮಲ್ಲಿರುವ ಅತ್ಯುತ್ತಮವಾದದ್ದನ್ನು ಯೆಹೋವನಿಗೆ ಕೊಡುವವರಿಗೆ ಯಾವ ಆಶೀರ್ವಾದಗಳು ಸಿಗುತ್ತವೆ?

  • ನಮ್ಮ ಪ್ರತಿಭೆ ಮತ್ತು ಕೌಶಲಗಳನ್ನು ಯಾವೆಲ್ಲಾ ವಿಧದ ದೇವಸೇವೆಯಲ್ಲಿ ಉಪಯೋಗಿಸಬಹುದು?

ಕುಟುಂಬ ಆರಾಧನೆಗಾಗಿ ಸಲಹೆಗಳು:

  • ಅನೇಕ ವರ್ಷಗಳಿಂದ ಪೂರ್ಣ ಸಮಯದ ಸೇವೆ ಮಾಡುತ್ತಿರುವ ಒಬ್ಬ ಪ್ರಚಾರಕನ ಸಂದರ್ಶನ ಮಾಡಿ. ತನ್ನಲ್ಲಿರುವ ಅತ್ಯುತ್ತಮವಾದದ್ದನ್ನು ಯೆಹೋವನಿಗೆ ಕೊಡಲು ಅವನು ಯಾವ ತ್ಯಾಗಗಳನ್ನು ಮಾಡಿದ್ದಾನೆ? ಯೆಹೋವನು ಅವನಿಗೆ ಯಾವೆಲ್ಲಾ ಆಶೀರ್ವಾದಗಳನ್ನು ಕೊಟ್ಟಿದ್ದಾನೆ? ಎಂದು ಕೇಳಿ

  • JW ಪ್ರಸಾರದ ಸೈಟಿಗೆ ಹೋಗಿ, INTERVIEWS AND EXPERIENCES ನೋಡಿ. ತಮ್ಮ ಇಡೀ ಜೀವನವನ್ನೇ ಬೇರೆ ಬೇರೆ ರೀತಿಯ ದೇವರ ಸೇವೆಯಲ್ಲಿ ಕಳೆದ ಅನೇಕರು ಸಂತೋಷದಿಂದ ಹೇಳಿಕೊಂಡ ಭಾವನೆಗಳನ್ನು ನೀವಲ್ಲಿ ಕೇಳಿಸಿಕೊಳ್ಳಬಹುದು ಮತ್ತು ನೋಡಬಹುದು

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ