ವಿಶೇಷ ಔತಣಕ್ಕೆ ಆಮಂತ್ರಿಸಿ
1. 2014ರ ಅಧಿವೇಶನಕ್ಕೆ ಜನರನ್ನು ಆಮಂತ್ರಿಸುವ ಅಭಿಯಾನ ಯಾವಾಗ ಆರಂಭವಾಗುವುದು?
1 ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಿಗಾಗಿ ಸಾಕಷ್ಟು ಶ್ರಮವಹಿಸಿ ಒಂದು ವಿಶೇಷ ಔತಣವನ್ನು ಏರ್ಪಡಿಸಿದ್ದೀರೆಂದು ಭಾವಿಸಿ. ಆಗ ನೀವು ಅವರನ್ನು ಎಷ್ಟೊಂದು ಉತ್ಸಾಹದಿಂದ ಆಮಂತ್ರಿಸುತ್ತೀರಲ್ಲವೇ? 2014ರ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಅಧಿವೇಶನಗಳಲ್ಲಿ ಕೊಡುವ ಆಧ್ಯಾತ್ಮಿಕ ಆಹಾರವನ್ನು ತಯಾರಿಸಲು ಸಹ ಸಾಕಷ್ಟು ಶ್ರಮವಹಿಸಲಾಗಿದೆ. ಆದ್ದರಿಂದ ಅಧಿವೇಶನ ಆರಂಭವಾಗುವ ಮೂರು ವಾರಗಳ ಮುಂಚಿತವಾಗಿ ನಾವು ಜನರನ್ನು ಆಮಂತ್ರಿಸಲಿರುವೆವು. ಜನರನ್ನು ಹುರುಪಿನಿಂದ ಆಮಂತ್ರಿಸಲು ಯಾವುದು ಸಹಾಯ ಮಾಡುತ್ತದೆ?
2. ಅಭಿಯಾನದಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಯಾವುದು ನಮ್ಮನ್ನು ಪ್ರೋತ್ಸಾಹಿಸುತ್ತದೆ?
2 ಅಧಿವೇಶನಗಳಲ್ಲಿ ಯೆಹೋವನು ಕೊಡುವ ಆಧ್ಯಾತ್ಮಿಕ ರಸದೌತಣದಿಂದ ವೈಯಕ್ತಿಕವಾಗಿ ನಮಗಾಗುವ ಪ್ರಯೋಜನವನ್ನು ಮಾತಿನಲ್ಲಿ ಹೇಳಲಾಗದು. ಈ ಏರ್ಪಾಡಿಗೆ ಗಣ್ಯತೆ ಇರುವುದಾದರೆ ನಾವು ಅಭಿಯಾನದಲ್ಲಿ ಸಂಪೂರ್ಣವಾಗಿ ಭಾಗವಹಿಸುವೆವು. (ಯೆಶಾ. 65:13, 14) ನಮ್ಮ ಅಧಿವೇಶನದ ಅಭಿಯಾನ ವ್ಯರ್ಥವಾಗುವುದಿಲ್ಲ ಎನ್ನುವುದನ್ನು ಮರೆಯದಿರಿ. ನಾವು ಆಮಂತ್ರಿಸಿದವರಲ್ಲಿ ಕೆಲವರಾದರೂ ಅಧಿವೇಶನಕ್ಕೆ ಹಾಜರಾಗುತ್ತಾರೆ. ಆಮಂತ್ರಿಸಿದ ಜನರು ಅಧಿವೇಶನಕ್ಕೆ ಬರಲಿ ಬರದಿರಲಿ, ಅಭಿಯಾನದಲ್ಲಿ ಪ್ರಯಾಸಪಟ್ಟು ಕೆಲಸ ಮಾಡುವ ಮೂಲಕ ಯೆಹೋವನಿಗೆ ಮಹಿಮೆ ತರುವೆವು ಮತ್ತು ಆತನ ಉದಾರತೆಯನ್ನು ಅನುಕರಿಸುವೆವು.—ಕೀರ್ತ. 145:3, 7; ಪ್ರಕ. 22:17.
3. ಆಮಂತ್ರಣ ಪತ್ರಗಳನ್ನು ಹೇಗೆ ವಿತರಿಸಲಾಗುವುದು?
3 ಹೆಚ್ಚು ಆಮಂತ್ರಣ ಪತ್ರಗಳನ್ನು ವಿತರಿಸಲು ಸಭೆಯಾಗಿ ಯಾವೆಲ್ಲಾ ಹೆಜ್ಜೆ ತೆಗೆದುಕೊಳ್ಳಬೇಕೆಂದು ಹಿರಿಯ ಮಂಡಲಿಯು ತೀರ್ಮಾನಿಸುತ್ತದೆ. ಮನೆಯಲ್ಲಿ ಯಾರೂ ಇಲ್ಲದಿದ್ದರೆ ಅದನ್ನು ಅಲ್ಲೇ ಇಟ್ಟು ಬರಬೇಕಾ, ಸಭೆಯ ಸೇವಾಕ್ಷೇತ್ರದಲ್ಲಿ ನಡೆಯುವ ಸಾರ್ವಜನಿಕ ಸಾಕ್ಷಿಕಾರ್ಯದ ಮೂಲಕ ವಿತರಿಸಬೇಕಾ ಎಂದು ಸಹ ತೀರ್ಮಾನಿಸುತ್ತದೆ. ವಾರಾಂತ್ಯಗಳಲ್ಲಿ ಆಮಂತ್ರಣ ಪತ್ರಗಳನ್ನು ಕೊಡುವಾಗ ಸೂಕ್ತವಾದಲ್ಲಿ ಪತ್ರಿಕೆಗಳನ್ನೂ ಕೊಡಿ. ಅಭಿಯಾನದ ಸಮಯದಲ್ಲಿ ತಿಂಗಳ ಮೊದಲ ಶನಿವಾರ ಇರುವುದಾದರೆ ಬೈಬಲ್ ಅಧ್ಯಯನ ಪ್ರಾರಂಭಿಸುವುದಕ್ಕಿಂತ ಆಮಂತ್ರಣ ಪತ್ರಗಳನ್ನು ವಿತರಿಸುವುದಕ್ಕೆ ಹೆಚ್ಚು ಆದ್ಯತೆ ಕೊಡಬೇಕು. ಅಭಿಯಾನದಲ್ಲಿ ಸಂಪೂರ್ಣವಾಗಿ ಭಾಗವಹಿಸಿ, ಯೆಹೋವನು ಏರ್ಪಡಿಸಿರುವ ಈ ಆಧ್ಯಾತ್ಮಿಕ ಔತಣವನ್ನು ಸವಿಯಲು ನಮ್ಮಿಂದಾದಷ್ಟು ಹೆಚ್ಚು ಜನರನ್ನು ಆಮಂತ್ರಿಸಿದರೆ ನಮ್ಮ ಸಂತೋಷಕ್ಕೆ ಪಾರವೇ ಇರುವುದಿಲ್ಲ.
[ಪುಟ 3ರಲ್ಲಿರುವ ಚೌಕ]
ಏನು ಹೇಳಬೇಕು?
ವ್ಯಕ್ತಿಯನ್ನು ವಂದಿಸಿದ ನಂತರ “ಒಂದು ಪ್ರಾಮುಖ್ಯವಾದ ಕಾರ್ಯಕ್ರಮಕ್ಕೆ ನಾವು ಎಲ್ಲರನ್ನೂ ಆಮಂತ್ರಿಸುತ್ತಿದ್ದೇವೆ. ಸಮಯ, ದಿನಾಂಕ ಮತ್ತು ವಿಳಾಸ ಈ ಆಮಂತ್ರಣ ಪತ್ರದಲ್ಲಿದೆ” ಎಂದು ಹೇಳಬಹುದು.