ಪ್ರಕಟಣೆಗಳು
◼ ಸಾಹಿತ್ಯ ನೀಡುವಿಕೆ ಏಪ್ರಿಲ್ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಆಸಕ್ತಿ ತೋರಿಸಿದವರಿಗೆ, ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ? ಎಂಬ ಟ್ರ್ಯಾಕ್ಟ್ ನೀಡಿ ಬೈಬಲ್ ಅಧ್ಯಯನ ಆರಂಭಿಸಲು ಪ್ರಯತ್ನಿಸಿ. ಸಭೆಯೊಂದಿಗೆ ಸಕ್ರಿಯವಾಗಿ ಸಹವಾಸಿಸದಿದ್ದರೂ ಯೇಸುವಿನ ಮರಣದ ಸ್ಮರಣೆ ಮತ್ತು ಸಮ್ಮೇಳನ, ಅಧಿವೇಶನಗಳಂಥ ವಿಶೇಷ ಕೂಟಗಳಿಗೆ ಹಾಜರಾಗುವವರನ್ನು ಮತ್ತು ಇತರ ಆಸಕ್ತ ಜನರನ್ನು ಪುನರ್ಭೇಟಿ ಮಾಡುವಾಗ ಬೈಬಲ್ ಬೋಧಿಸುತ್ತದೆ ಪುಸ್ತಕದಿಂದ ಅಧ್ಯಯನ ಆರಂಭಿಸಲು ಪ್ರಯತ್ನಿಸಿ. ಜೂನ್: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಮೊದಲ ಭೇಟಿಯಲ್ಲೇ ಬೈಬಲ್ ಅಧ್ಯಯನ ಆರಂಭಿಸಲು ಪ್ರಯತ್ನಿಸಿ. ಮನೆಯವನ ಬಳಿ ಈಗಾಗಲೇ ಈ ಪುಸ್ತಕವಿದ್ದಲ್ಲಿ ಮತ್ತು ಬೈಬಲ್ ಅಧ್ಯಯನ ಬೇಡವೆಂದಲ್ಲಿ, ಆ ವ್ಯಕ್ತಿಯ ಆಸಕ್ತಿಗೆ ತಕ್ಕಂಥ ಯಾವುದೇ ಹಿಂದಿನ ಸಂಚಿಕೆ ಅಥವಾ ಬ್ರೋಷರನ್ನು ಪ್ರಚಾರಕರು ನೀಡಬಹುದು. ಜುಲೈ ಮತ್ತು ಆಗಸ್ಟ್: ಸಭೆಯ ಸ್ಟಾಕ್‌ನಲ್ಲಿರುವ 32-ಪುಟಗಳ ಯಾವುದೇ ಬ್ರೋಷರ್ ಬಳಸಿ. ಪುನರ್ಭೇಟಿಗಳನ್ನು ಮಾಡುವಾಗ ಬೈಬಲ್ ಬೋಧಿಸುತ್ತದೆ ಪುಸ್ತಕ ಪರಿಚಯಿಸಿ. ಅಥವಾ ದೇವರ ಮಾತನ್ನು ಆಲಿಸಿ/ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಬ್ರೋಷರುಗಳಲ್ಲಿ ಒಂದನ್ನು ಆ ವ್ಯಕ್ತಿಗೆ ಕೊಟ್ಟರೆ ಹೆಚ್ಚು ಒಳಿತೆಂದು ಅನಿಸಿದರೆ ಅದನ್ನೇ ಕೊಡಿ. ಬೈಬಲ್ ಅಧ್ಯಯನ ಆರಂಭಿಸಲು ಪ್ರಯತ್ನಿಸಿ.
◼ ಬೇರೆ ದೇಶದಲ್ಲಿ ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲು ನೀವು ಯೋಜನೆಗಳನ್ನು ಮಾಡುತ್ತಿರುವಲ್ಲಿ, jw.org ವೆಬ್ ಸೈಟ್‌ನಲ್ಲಿ “Lookup” ಟ್ಯಾಬ್ ಕೆಳಗೆ “Conventions” ಲಿಂಕ್ ನೋಡಿದರೆ ನಿಮಗೆ ಸಹಾಯಕಾರಿ ಮಾಹಿತಿ ಸಿಗುವುದು.
◼ ಹಿಂದೆಲ್ಲ ನಮ್ಮ ಪ್ರಕಾಶನಗಳಲ್ಲಿ “ಕ್ರಿಸ್ತನ ಮರಣದ ಜ್ಞಾಪಕಾಚರಣೆ” ಎಂಬ ಅಭಿವ್ಯಕ್ತಿ ಬಳಸಿದ್ದೇವೆ. ಈ ಅಭಿವ್ಯಕ್ತಿಯನ್ನು ಇನ್ನಷ್ಟು ನಿಖರವಾಗಿ ಭಾಷಾಂತರಿಸಲು “ಕ್ರಿಸ್ತನ ಮರಣದ ಸ್ಮರಣೆ” ಎಂದು ಬದಲಿಸಿದ್ದೇವೆ.