ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ
2012 ಏಪ್ರಿಲ್ 30ರ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗುವುದು. ಪ್ರತಿಯೊಂದು ಪ್ರಶ್ನೆಯೊಂದಿಗೆ ಅದನ್ನು ಚರ್ಚಿಸಲಾಗುವ ವಾರವನ್ನು ಕೊಡಲಾಗಿದೆ. ಹೀಗೆ ಆಯಾ ವಾರದಂದು ಶಾಲೆಗಾಗಿ ತಯಾರಿ ಮಾಡುವಾಗ ಸಂಶೋಧನೆ ಮಾಡಲು ಸಾಧ್ಯವಾಗುವುದು.
1. ಬೈಬಲಿನ ಯೆರೆಮೀಯ ಪುಸ್ತಕ ನಮಗೆ ಹೇಗೆ ಪ್ರಯೋಜನದಾಯಕ? [ಮಾರ್ಚ್ 5, “ಶಾಸ್ತ್ರವೆಲ್ಲವೂ” ವಿಶ್ವಾಸಾರ್ಹ ಪು. 3 ಪ್ಯಾ. 36]
2. ಯೆಹೋವನು ಇಂದು ನಮ್ಮನ್ನು ಹಿಂಸೆಯಿಂದ ಹೇಗೆ ವಿಮೋಚಿಸಬಹುದು? (ಯೆರೆ. 1:8) [ಮಾರ್ಚ್ 5, ಕಾವಲಿನಬುರುಜು 05 12/15 ಪು. 23 ಪ್ಯಾ. 18]
3. ಅಭಿಷಿಕ್ತರು ‘ಪುರಾತನ ಮಾರ್ಗಗಳಿಗೆ’ ಯಾವಾಗ ಮತ್ತು ಹೇಗೆ ಹಿಂದಿರುಗಿದರು? (ಯೆರೆ. 6:16) [ಮಾರ್ಚ್ 12, ಕಾವಲಿನಬುರುಜು 05 11/1 ಪು. 24 ಪ್ಯಾ. 12]
4. ಇಂದಿಗೂ ‘ಗಿಲ್ಯಾದಿನಲ್ಲಿ ಸುಗಂಧತೈಲ’ ಇದೆಯೆಂದು ಏಕೆ ಹೇಳಬಹುದು? (ಯೆರೆ. 8:22) [ಮಾರ್ಚ್ 19, ಕಾವಲಿನಬುರುಜು 10 10/1 ಪು. 26 ಪ್ಯಾ. 1-6]
5. ಯೆಹೋವನು “ಬಹು ಮಂದಿ ಬೆಸ್ತರನ್ನು” ಮತ್ತು “ಬಹುಜನ ಬೇಡರನ್ನು” ಕಳುಹಿಸುವನೆಂಬ ಮಾತು ಏನನ್ನು ಸೂಚಿಸುತ್ತಿರಬಹುದು? (ಯೆರೆ. 16:16) [ಮಾರ್ಚ್ 26, ಕಾವಲಿನಬುರುಜು 07 4/1 ಪು. 9 ಪ್ಯಾ. 5]
6. ಯೆಹೋವನು ಯೆರೆಮೀಯನಿಗಿಂತ ‘ಬಲಿಷ್ಠನಾಗಿ ಗೆದ್ದದ್ದು’ ಮತ್ತು ಅವನನ್ನು ಮರುಳುಗೊಳಿಸಿದ್ದು ಯಾವ ವಿಧದಲ್ಲಿ? (ಯೆರೆ. 20:7) [ಏಪ್ರಿ. 2, ಕಾವಲಿನಬುರುಜು 07 4/1 ಪು. 9 ಪ್ಯಾ. 6]
7. “ಯೆಹೋವನು ದಯಪಾಲಿಸಿರುವ ವಾಕ್ಯಭಾರವೇನು?” (ಯೆರೆ. 23:33) [ಏಪ್ರಿ. 9, ಕಾವಲಿನಬುರುಜು 07 4/1 ಪು. 11 ಪ್ಯಾ. 1]
8. ದೇವರ ಧರ್ಮಶಾಸ್ತ್ರವು ಹೃದಯದೊಳಗೆ ಬರೆಯಲ್ಪಟ್ಟಿದೆ ಎಂದು ಹೇಗೆ ಹೇಳಸಾಧ್ಯವಿದೆ? (ಯೆರೆ. 31:33) [ಏಪ್ರಿ. 23, ಕಾವಲಿನಬುರುಜು 07 4/1 ಪು. 11 ಪ್ಯಾ. 2]
9. ಒಂದೇ ಒಪ್ಪಂದವಿರುವ ಎರಡು ಕ್ರಯಪತ್ರಗಳನ್ನು ಮಾಡುವ ಉದ್ದೇಶವೇನಾಗಿತ್ತು? (ಯೆರೆ. 32:10-15) [ಏಪ್ರಿ. 30, ಕಾವಲಿನಬುರುಜು 07 4/1 ಪು. 11 ಪ್ಯಾ. 3]
10. ಇಲ್ಲಿ ಯಾವ “ಎರಡು ವಂಶಗಳ” ಕುರಿತು ಮಾತಾಡಲಾಗಿದೆ? (ಯೆರೆ. 33:23, 24) [ಏಪ್ರಿ. 30, ಕಾವಲಿನಬುರುಜು 07 4/1 ಪು. 11 ಪ್ಯಾ. 4]