ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2008ರ ಆಗಸ್ಟ್ 25ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಪರಿಗಣಿಸಲಾಗುವುದು. 2008ರ ಜುಲೈ 7ರಿಂದ ಆಗಸ್ಟ್ 25ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲೆ ಆಧಾರಿತವಾದ 30-ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು.
ಭಾಷಣ ಗುಣಗಳು
1. ಸತ್ಯವನ್ನು ಇತರರಿಗೆ ತಿಳಿಸುವಾಗ ನಾವು ತರ್ಕಸಮ್ಮತತೆಯನ್ನು ಹೇಗೆ ತೋರಿಸಬಹುದು? (ಫಿಲಿ. 4:5 NW) [be-KA ಪು. 251 ಪ್ಯಾರ. 3]
2. ಪೌಲನು ಅಥೇನೆಯ ಅರಿಯೋಪಾಗದಲ್ಲಿ ಗ್ರೀಕರೊಂದಿಗೆ ಮಾತನಾಡಿದ ಉದಾಹರಣೆಯು, ಬೈಬಲ್ ಒಂದು ಪ್ರಮಾಣಗ್ರಂಥವಾಗಿದೆ ಎಂದು ಅಂಗೀಕರಿಸದಿರುವಂಥ ಜನರಿಗೆ ಸಾಕ್ಷಿನೀಡಲು ನಮಗೆ ಹೇಗೆ ಸಹಾಯಮಾಡಬಹುದು? (ಅ. ಕೃ. 17:22, 23) [be-KA ಪು. 252 ಪ್ಯಾರ. 1-2]
3. ನಾವು ಮಾತಾಡುತ್ತಿರುವ ವ್ಯಕ್ತಿಯ ಅಭಿಪ್ರಾಯ ತಪ್ಪೆಂದು ನಮಗೆ ಖಂಡಿತವಾಗಿ ಗೊತ್ತಿರುವುದಾದರೂ ನಾವು ಹೇಗೆ ತರ್ಕಸಮ್ಮತತೆಯನ್ನು ತೋರಿಸಬಹುದು? [be-KA ಪು. 252 ಪ್ಯಾರ. 5-ಪು. 253 ಪ್ಯಾರ. 1]
4. ಒಡಂಬಡಿಸುವಂಥ ರೀತಿಯಲ್ಲಿ ಮಾತಾಡಲು ಪ್ರಯತ್ನಿಸುತ್ತಿರುವಾಗ ನಾವೇನನ್ನು ಮನಸ್ಸಿನಲ್ಲಿಡಬೇಕು? [be-KA ಪು. 255 ಪ್ಯಾರ. 3, ಚೌಕ]
5. ಕೇಳುಗನ ಹೃದಯವನ್ನು ತಲಪಲು ಪ್ರಯತ್ನಿಸುತ್ತಿರುವಾಗ ನಾವು ವಿವೇಚನೆಯನ್ನು ಹೇಗೆ ಉಪಯೋಗಿಸಬಲ್ಲೆವು? (ಜ್ಞಾನೋ. 20:5) [be-KA ಪು. 258 ಪ್ಯಾರ. 1-5]
ನೇಮಕ ನಂ. 1
6. ಸನ್ನಿವೇಶವನ್ನು (ಸೆಟಿಂಗ್) ಉಪಯೋಗಿಸುವಾಗ ಸಹೋದರಿಯರು ಏನನ್ನು ಮನಸ್ಸಿನಲ್ಲಿಡಬೇಕು? [be-KA ಪು. 44 ಪ್ಯಾರ. 5-6]
7. ಬೈಬಲ್ ಮುಖ್ಯಾಂಶಗಳನ್ನು ನಿರ್ವಹಿಸುವಾಗ ಸಹೋದರರು ಏನನ್ನು ಪೂರೈಸಲು ಪ್ರಯತ್ನಿಸಬೇಕು? (ನೆಹೆ. 8:8) [be-KA ಪು. 47 ಪ್ಯಾರ. 2-3]
8. ಪ್ರತ್ಯಕ್ಷಾಭಿನಯ ಅಥವಾ ಇಂಟರ್ವ್ಯೂ ಇರುವಂಥ ಸೇವಾಕೂಟದ ನೇಮಕವನ್ನು ಒಬ್ಬ ಸಹೋದರನು ಹೇಗೆ ನಿರ್ವಹಿಸಬೇಕು? [be-KA ಪು. 50 ಪ್ಯಾರ. 1]
9. ಯಾವ ವಿಧದಲ್ಲಿ ಮತ್ತು ಎಷ್ಟರ ಮಟ್ಟಿಗೆ ಸಾಕ್ಷಿಯು ನೀಡಲ್ಪಡಬೇಕೆಂಬುದನ್ನು ಅಪೊಸ್ತಲರ ಕೃತ್ಯಗಳು ಪುಸ್ತಕವು ಹೇಗೆ ಎತ್ತಿ ಹೇಳುತ್ತದೆ? (ಅ. ಕೃ. 20:20, 21; 28:23) [bsi08-1-KA ಪು. 17 ಪ್ಯಾರ. 35]
10. ತನ್ನ ಭಾಷಣಕ್ಕೆ ಬೈಬಲ್ ಆಧಾರವಾಗಿದೆ ಎಂಬುದನ್ನು ಖಚಿತಪಡಿಸಲು ಒಬ್ಬ ಸಾರ್ವಜನಿಕ ಭಾಷಣಕರ್ತನು ಏನು ಮಾಡಬಹುದು? (ಅ. ಕೃ. 17:2, 3) [be-KA ಪು. 52 ಪ್ಯಾರ. 6-ಪು. 53 ಪ್ಯಾರ. 2]
ವಾರದ ಬೈಬಲ್ ವಾಚನ
11. ಫಿಲಿಪ್ಪಿಯದ ಸೆರೆಯ ಯಜಮಾನನು ಏಕೆ “ಆತ್ಮಹತ್ಯ ಮಾಡಿಕೊಳ್ಳಬೇಕೆಂದಿದ್ದನು”? (ಅ. ಕೃ. 16:25-27) [w90-KA 5/1 ಪು. 30, ಚೌಕ]
12. ಅರಿಸ್ತಾರ್ಕ ಮತ್ತು ಗಾಯರು ಹಿಂಸೆಗೆ ಹೇಗೆ ಪ್ರತಿಕ್ರಿಯಿಸಿದರು? (ಅ. ಕೃ. 19:29; 20:4, 5) [w08-KA 2/15 ಪು. 10 ಪ್ಯಾರ. 16-17]
13. ಯಾವ ಅರ್ಥದಲ್ಲಿ ಪೌಲನು ‘ಮುಳ್ಳುಗೋಲನ್ನು ಒದೆಯುತ್ತಿದ್ದನು’? (ಅ. ಕೃ. 26:14) [w03-KA 10/1 ಪು. 32]
14. ಇಸ್ರಾಯೇಲ್ಯರಿಗೆ ದೇವರು ಕೊಟ್ಟಂಥ ಆಜ್ಞೆಯಿಂದ ‘ಪಾಪವು ಅನುಕೂಲಹೊಂದಿದ್ದು’ ಹೇಗೆ? (ರೋಮಾ. 7:8, 11) [w08-KA 6/15 “ಯೆಹೋವನ ವಾಕ್ಯವು ಸಜೀವವಾದದ್ದು—ರೋಮಾಪುರದವರಿಗೆ ಬರೆದ ಪತ್ರದ ಮುಖ್ಯಾಂಶಗಳು”]
15. ನಾವು ವೈರಿಯ ತಲೆಯ ಮೇಲೆ ‘ಕೆಂಡಗಳನ್ನು ಕೂಡಿಸಿಡುವುದು’ ಹೇಗೆ? (ರೋಮಾ. 12:20) [w08-KA 6/15 “ಯೆಹೋವನ ವಾಕ್ಯವು ಸಜೀವವಾದದ್ದು—ರೋಮಾಪುರದವರಿಗೆ ಬರೆದ ಪತ್ರದ ಮುಖ್ಯಾಂಶಗಳು”]