ಪ್ರಕಟಣೆಗಳು
▪ ಸಾಹಿತ್ಯ ನೀಡುವಿಕೆ—ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಜ್ಞಾಪಕಾಚರಣೆಗೆ ಮತ್ತು ವಿಶೇಷ ಬಹಿರಂಗ ಭಾಷಣಕ್ಕೆ ಹಾಜರಾದರೂ ಸಭೆಯೊಂದಿಗೆ ಸಕ್ರಿಯವಾಗಿ ಸಹವಸಿಸದ ಹೊಸ ಆಸಕ್ತ ಜನರನ್ನು ಭೇಟಿಮಾಡಲು ವಿಶೇಷ ಪ್ರಯತ್ನಮಾಡಲಾಗುವುದು. ಇಂಥ ಭೇಟಿಯ ಮುಖ್ಯ ಉದ್ದೇಶವು ಇನ್ನೂ ಬೈಬಲ್ ಅಧ್ಯಯನವನ್ನು ಸ್ವೀಕರಿಸದವರಿಗೆ ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? ಟ್ರ್ಯಾಕ್ಟನ್ನು ನೀಡಿ ಅಧ್ಯಯನವನ್ನು ಆರಂಭಿಸುವುದೇ ಆಗಿರಬೇಕು. ಜೂನ್: ದೇವರಿಗಾಗಿ ಮಾನವಕುಲದ ಅನ್ವೇಷಣೆ (ಇಂಗ್ಲಿಷ್) ಅಥವಾ ಬೈಬಲ್—ದೇವರ ವಾಕ್ಯವೊ ಮನುಷ್ಯನದ್ದೊ? (ಇಂಗ್ಲಿಷ್) ಈ ಸಾಹಿತ್ಯಗಳು ಇಲ್ಲದಿರುವ ಸಭೆಗಳು ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ ಪುಸ್ತಕವನ್ನು ನೀಡಬಹುದು.
▪ ಪುನಃ ಲಭ್ಯವಿರುವ ಪ್ರಕಾಶನಗಳು:
ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ—ಚಿಕ್ಕ ಸೈಜ್ —ಇಂಗ್ಲಿಷ್