ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಏಪ್ರಿ. - ಜೂನ್
“ಪ್ರತಿಯೊಂದು ಕುಟುಂಬದಲ್ಲೂ ಆಗಿಂದಾಗ್ಗೆ ಸಮಸ್ಯೆಗಳು ಏಳುತ್ತವೆ. ಈ ವಿಷಯದಲ್ಲಿ ಸಹಾಯ ಮಾಡುವ ಶಾಸ್ತ್ರಾಧಾರಿತ ಸಲಹೆಯನ್ನು ನೋಡಲು ನೀವು ಬಯಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿ. ಸಕಾರಾತ್ಮಕ ಪ್ರತಿಕ್ರಿಯೆ ಸಿಗುವಲ್ಲಿ ಎಫೆಸ 4:31 ಓದಿ.] ಘರ್ಷಣೆಗಳನ್ನು ಬಗೆಹರಿಸಿ ವಿವಾಹ ಜೀವನದಲ್ಲಿ ಸಂತೋಷವನ್ನು ಕಾಪಾಡಿಕೊಳ್ಳಲು ಈ ವಚನದ ಮೇಲೆ ಆಧರಿತವಾದ ಕೆಲವೊಂದು ಪ್ರಾಯೋಗಿಕ ಸಲಹೆಗಳನ್ನು ತೋರಿಸಲೋ?” ಆ ವ್ಯಕ್ತಿ ಒಪ್ಪುವಲ್ಲಿ ಪುಟ 18ರಲ್ಲಿರುವ ಲೇಖನವನ್ನು ತೋರಿಸಿ.
ಎಚ್ಚರ! ಏಪ್ರಿ. - ಜೂನ್
“ಪಾಪ ಮತ್ತು ಕ್ಷಮಾಪಣೆಯ ಬಗ್ಗೆ ಹತ್ತುಹಲವು ಅಭಿಪ್ರಾಯಗಳಿವೆ. ಈ ಬಗ್ಗೆ ನೀವೇನು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿ.] ಪಾಪ ಮತ್ತು ಕ್ಷಮಾಪಣೆಯ ಬಗ್ಗೆ ದೇವರ ನೋಟವೇನೆಂದು ನಿಮಗೆ ತೋರಿಸಲೋ? [ಸಕಾರಾತ್ಮಕ ಪ್ರತಿಕ್ರಿಯೆ ಸಿಗುವಲ್ಲಿ ಅ. ಕೃ. 3:19 ಓದಿ.] ದೇವರ ಕರುಣೆಯನ್ನು ಪಡೆಯಲು ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕೆಂದು ನೀವು ತಿಳಿಯಲಿಚ್ಛಿಸುವಲ್ಲಿ ವಿವರಿಸುವೆ.” ಮನೆಯವರು ಸಮ್ಮತಿಸುವಲ್ಲಿ ಪುಟ 10ರಲ್ಲಿರುವ ಲೇಖನವನ್ನು ತೋರಿಸಿ.