ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 3/08 ಪು. 7
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 2008 ನಮ್ಮ ರಾಜ್ಯದ ಸೇವೆ
2008 ನಮ್ಮ ರಾಜ್ಯದ ಸೇವೆ
km 3/08 ಪು. 7

ಪ್ರಕಟಣೆಗಳು

◼ ಸಾಹಿತ್ಯ ನೀಡುವಿಕೆ​—⁠ಮಾರ್ಚ್‌: ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಬೈಬಲ್‌ ಅಧ್ಯಯನಗಳನ್ನು ಆರಂಭಿಸಲು ಶ್ರದ್ಧೆಯಿಂದ ಪ್ರಯತ್ನಿಸಿ. ಏಪ್ರಿಲ್‌ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಜ್ಞಾಪಕಾಚರಣೆಗೆ ಮತ್ತು ವಿಶೇಷ ಬಹಿರಂಗ ಭಾಷಣಕ್ಕೆ ಹಾಜರಾದರೂ ಸಭೆಯೊಂದಿಗೆ ಸಕ್ರಿಯವಾಗಿ ಸಹವಾಸಿಸದ ಹೊಸ ಆಸಕ್ತ ಜನರನ್ನು ಭೇಟಿಮಾಡಲು ವಿಶೇಷ ಪ್ರಯತ್ನಮಾಡಲಾಗುವುದು. ಇಂಥ ಭೇಟಿಯ ಮುಖ್ಯ ಉದ್ದೇಶವು ಇನ್ನೂ ಬೈಬಲ್‌ ಅಧ್ಯಯನವನ್ನು ಸ್ವೀಕರಿಸದವರೊಂದಿಗೆ ಅಧ್ಯಯನವನ್ನು ಆರಂಭಿಸುವುದೇ ಆಗಿರಬೇಕು. ಜೂನ್‌: ದೇವರಿಗಾಗಿ ಮಾನವಕುಲದ ಅನ್ವೇಷಣೆ (ಇಂಗ್ಲಿಷ್‌) ಅಥವಾ ಬೈಬಲ್‌—ದೇವರ ವಾಕ್ಯವೊ ಮನುಷ್ಯನದ್ದೊ? (ಇಂಗ್ಲಿಷ್‌) ಈ ಸಾಹಿತ್ಯಗಳು ಇಲ್ಲದಿರುವ ಸಭೆಗಳು ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ ಪುಸ್ತಕವನ್ನು ನೀಡಬಹುದು.

◼ ಸಭೆಗಳು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಹೊಸ ಸಂಚಿಕೆಗಳನ್ನು ಪಡೆದುಕೊಂಡ ಕೂಡಲೆ ಅವನ್ನು ಪ್ರಚಾರಕರಿಗೆ ವಿತರಿಸಬೇಕು. ಇದರಿಂದ ಪ್ರಚಾರಕರು ಕ್ಷೇತ್ರಸೇವೆಯಲ್ಲಿ ಪತ್ರಿಕೆಗಳನ್ನು ನೀಡುವ ಮೊದಲು ಅವುಗಳಲ್ಲಿರುವ ವಿಷಯಗಳೊಂದಿಗೆ ಪರಿಚಿತರಾಗಿರಲು ಸಾಧ್ಯವಾಗುವುದು.

◼ ಅಧ್ಯಕ್ಷ ಮೇಲ್ವಿಚಾರಕನಿಂದ ನೇಮಿಸಲ್ಪಟ್ಟವರು ಡಿಸೆಂಬರ್‌, ಜನವರಿ ಮತ್ತು ಫೆಬ್ರವರಿ ತಿಂಗಳ ಸಭೆಯ ಅಕೌಂಟ್ಸ್‌ ಅನ್ನು ಆಡಿಟ್‌ ಮಾಡಬೇಕು. ಆಡಿಟ್‌ ಮಾಡಲು ಅದೇ ಸಹೋದರನನ್ನು ಕ್ರಮವಾಗಿ ಬಳಸಬಾರದು. ಆಡಿಟ್‌ ಆದ ಅನಂತರ ಅದನ್ನು ಮುಂದಿನ ಅಕೌಂಟ್ಸ್‌ ವರದಿಯೊಂದಿಗೆ ಸಭೆಗೆ ಪ್ರಕಟಿಸಬೇಕು.​—⁠ಇನ್‌ಸ್ಟ್ರಕ್ಷನ್ಸ್‌ ಫಾರ್‌ ಕಾಂಗ್ರಿಗೇಷನ್‌ ಅಕೌಟಿಂಗ್‌ (S-27) ನೋಡಿರಿ.

◼ ಇಸವಿ 2008ರ ಜಿಲ್ಲಾ ಅಧಿವೇಶನದ ಮುಖ್ಯ ವಿಷಯವು “ಪವಿತ್ರಾತ್ಮದ ಮಾರ್ಗದರ್ಶನ” ಎಂದಾಗಿದೆ. ಮೂರು ದಿನದ ಅಧಿವೇಶನದ ಎಲ್ಲ ಸೆಷನ್‌ಗಳನ್ನು ಹಾಜರಾಗಲು ಬೇಕಾದ ವೈಯಕ್ತಿಕ ಯೋಜನೆಗಳನ್ನು ಮಾಡಲಿಕ್ಕಾಗಿ, ನಮ್ಮ ರಾಜ್ಯದ ಸೇವೆಯ ಜುಲೈ ಸಂಚಿಕೆಯು ಸಹಾಯಕರವಾದ ವಿವರಗಳನ್ನು ನಿಮಗೆ ಒದಗಿಸುವುದು. ಮೂರು ದಿನವೂ ಹಾಜರಾಗಿರಲು ನೀವು ಕೆಲಸಮಾಡುವ ಧಣಿಯ ಬಳಿ ರಜೆ ಕೇಳಬೇಕಾಗಿರುವಲ್ಲಿ ಹಿಂಜರಿಯದೇ ಕೂಡಲೇ ಕೇಳಿಕೊಳ್ಳಿರಿ.

◼ 2008, ಆಗಸ್ಟ್‌ 4ನೇ ವಾರದಿಂದ ಇಂಗ್ಲಿಷ್‌ ಭಾಷೆಯ ಸಭೆಗಳು ಸಭಾ ಪುಸ್ತಕ ಅಧ್ಯಯನದಲ್ಲಿ ಯೆಹೋವನ ದಿನವನ್ನು ಮನಸ್ಸಿನಲ್ಲಿಟ್ಟವರಾಗಿ ಜೀವಿಸಿರಿ (ಇಂಗ್ಲಿಷ್‌) ಪುಸ್ತಕವನ್ನು ಅಧ್ಯಯನ ಮಾಡುವರು. ಕನ್ನಡ, ಗುಜರಾಥಿ, ಪಂಜಾಬಿ, ಬಂಗಾಲಿ, ಮರಾಠಿ, ಮಲೆಯಾಳಂ, ನೇಪಾಲಿ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯ ಸಭೆಗಳು ಬೈಬಲ್‌ ಕಥೆಗಳ ನನ್ನ ಪುಸ್ತಕವನ್ನು ಅಧ್ಯಯನ ಮಾಡುವರು. ಮೀಸೊ ಭಾಷೆಯ ಸಭೆಗಳು ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವನ್ನು ಅಧ್ಯಯನ ಮಾಡುವರು.

◼ S-205 ಅಪ್ಲಿಕೇಷನ್‌ ಫಾರ್‌ ರೆಗ್ಯುಲರ್‌ ಪಯನೀಯರ್‌ ಸರ್ವಿಸ್‌ ಫಾರ್ಮ್‌ ಅನ್ನು ಹಿರಿಯರಿಗೆ ಕೊಡುವ ಮುನ್ನ ಅದು ಪೂರ್ತಿಯಾಗಿ ಭರ್ತಿಯಾಗಿದೆ ಮತ್ತು ಎಲ್ಲ ಪ್ರಶ್ನೆಗಳನ್ನು ಉತ್ತರಿಸಲಾಗಿದೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಸೇವಾ ಕಮಿಟಿ, ಅದರಲ್ಲೂ ಸಭೆಯ ಸೆಕ್ರಿಟರಿಯು ಅದಕ್ಕೆ ಸಹಿಹಾಕುವ ಮುನ್ನ ನಿಷ್ಕೃಷ್ಟತೆ ಮತ್ತು ಅದು ಪೂರ್ಣವಾಗಿ ಭರ್ತಿಮಾಡಲಾಗಿದೆ ಎಂಬದನ್ನು ಖಚಿತಪಡಿಸಲಿಕ್ಕಾಗಿ ಪ್ರತಿಯೊಂದು ಪ್ರಶ್ನೆಯ ಉತ್ತರವನ್ನು ಓದಬೇಕು. ಇದು ಇನ್ನಷ್ಟು ಪತ್ರವ್ಯವಹಾರವನ್ನೂ ನೇಮಕ ಹೊಂದುವುದರಲ್ಲಿ ಆಗಬಹುದಾದ ವಿಳಂಬವನ್ನೂ ತಪ್ಪಿಸುವುದು.

◼ ವಿದೇಶಿ ಸಂದರ್ಶಕರನ್ನು ಕ್ಷೇತ್ರಸೇವೆಗೆ ಕರೆದುಕೊಂಡು ಹೋಗುವುದಾದರೆ ಜಾಗ್ರತೆ ಆವಶ್ಯಕ. ಪ್ರವಾಸಿ ಮತ್ತು ವ್ಯಾಪಾರಿ ವೀಸಾಗಳು ಅಂಥ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಅನುಮತಿಸುವುದಿಲ್ಲ. (ರೋಮಾ. 13:1, 5; ತೀತ 3:1) ಅಲ್ಲದೆ, ಸ್ಥಳಿಕ ಪ್ರಚಾರಕರು ಕೆಲವೊಮ್ಮೆ ಎದುರಿಸುವಂಥ ಹಿಂಸಾತ್ಮಕ ವಿರೋಧಗಳ ಅಪಾಯವನ್ನು ಮನಸ್ಸಿನಲ್ಲಿಡಬೇಕು. ಸಂದರ್ಶಕರನ್ನು ಪುನರ್ಭೇಟಿಗಳಿಗೆ ಕರೆದುಕೊಂಡು ಹೋಗುವುದು ಯೋಗ್ಯವೆಂದೆಣಿಸಿದರೂ ವಿವೇಚನೆ ತೋರಿಸಬೇಕು. ಪುನರ್ಭೇಟಿ ಮಾಡುವಾಗ ಆ ವ್ಯಕ್ತಿ, ಅವನು ವಾಸಿಸುತ್ತಿರುವ ಸ್ಥಳ ಮತ್ತು ಇನ್ನಿತರ ಸನ್ನಿವೇಶಗಳ ಕುರಿತು ಆಲೋಚಿಸಿ ಅಂಥ ಒಂದು ಭೇಟಿ ಸೂಕ್ತವೋ ವಿವೇಕವುಳ್ಳದೋ ಎಂದು ಪರಿಗಣಿಸಿರಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ