ಜ್ಞಾಪಕಾಚರಣೆಯ ಮರುಜ್ಞಾಪನಗಳು
ಜ್ಞಾಪಕಾಚರಣೆಗೆ ತಯಾರಿ ನಡೆಸುವಾಗ ಹಿರಿಯರು ಈ ಕೆಳಗಿನ ವಿಷಯಗಳಿಗೆ ಗಮನಕೊಡಬೇಕು:
◼ ಸೂರ್ಯಾಸ್ತಮಾನದ ನಂತರವೇ ಕುರುಹುಗಳು ದಾಟಿಸಲ್ಪಡುವಂತೆ ನೋಡಿಕೊಳ್ಳಿರಿ.
◼ ಸೂಕ್ತವಾದ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ಸಿದ್ಧವಾಗಿಡಿ.—2003, ಫೆಬ್ರವರಿ 15ರ ಕಾವಲಿನಬುರುಜು ಪುಟ 14-15ನ್ನು ನೋಡಿರಿ.
◼ ತಟ್ಟೆಗಳು, ಗ್ಲಾಸ್ಗಳು, ತಕ್ಕದಾದ ಮೇಜು ಹಾಗೂ ಮೇಜುಬಟ್ಟೆಯನ್ನು ಸಭಾಗೃಹಕ್ಕೆ ತಂದು, ಅವನ್ನು ಮುಂಚಿತವಾಗಿಯೇ ಜೋಡಿಸಿ ಸಿದ್ಧವಾಗಿಡಿ.
◼ ರಾಜ್ಯ ಸಭಾಗೃಹವನ್ನು ಅಥವಾ ಕೂಟ ನಡೆಯಲಿರುವ ಬೇರಾವುದೇ ಸ್ಥಳವನ್ನು ಮುಂಚಿತವಾಗಿಯೇ ಪೂರ್ತಿಯಾಗಿ ಶುಚಿಮಾಡಿ.
◼ ಅಟೆಂಡೆಂಟರನ್ನು ಮತ್ತು ಕುರುಹುಗಳನ್ನು ದಾಟಿಸುವವರನ್ನು ಆಯ್ಕೆಮಾಡಿ, ಅವರ ಕೆಲಸಗಳ ಬಗ್ಗೆ, ಅನುಸರಿಸಬೇಕಾದ ಸೂಕ್ತ ಕಾರ್ಯವಿಧಾನಗಳ ಬಗ್ಗೆ ಮತ್ತು ಉಡುಪು ಹಾಗೂ ಕೇಶಶೈಲಿಯು ಘನತೆಯುಳ್ಳದ್ದಾಗಿರುವ ಅಗತ್ಯದ ಬಗ್ಗೆ ಮುಂಚಿತವಾಗಿಯೇ ಅವರಿಗೆ ತಿಳಿಸಿ.
◼ ಅಶಕ್ತರು ಹಾಗೂ ಉಪಸ್ಥಿತರಿರಲು ಅಸಮರ್ಥರು ಆಗಿರುವ ಅಭಿಷಿಕ್ತರಿರುವುದಾದರೆ, ಅವರಿಗೆ ಕುರುಹುಗಳನ್ನು ಕೊಡಲು ಏರ್ಪಾಡುಗಳನ್ನು ಮಾಡಿ.
◼ ಒಂದಕ್ಕಿಂತ ಹೆಚ್ಚು ಸಭೆಗಳು ಒಂದೇ ರಾಜ್ಯ ಸಭಾಗೃಹವನ್ನು ಉಪಯೋಗಿಸಲಿರುವಲ್ಲಿ, ಸಭೆಗಳ ಮಧ್ಯೆ ಒಳ್ಳೆಯ ಸಹಕಾರವಿರಬೇಕು. ಇದು ಲಾಬಿಯಲ್ಲಿ ಅಥವಾ ಪ್ರವೇಶಾಂಗಣದಲ್ಲಿ, ಸಾರ್ವಜನಿಕ ಫುಟ್ಪಾತ್ಗಳಲ್ಲಿ ಮತ್ತು ವಾಹನ ನಿಲುಗಡೆಯ ಸ್ಥಳಗಳಲ್ಲಿ ಅನಾವಶ್ಯಕ ಜನಸಂದಣಿಯನ್ನು ತಪ್ಪಿಸುವುದು.
◼ ಕೂಟವನ್ನು ಬೇರೆ ಸ್ಥಳದಲ್ಲಿ ಏರ್ಪಡಿಸಿರುವುದಾದರೆ, ಸಭಿಕರು ಸರಿಯಾಗಿ ಕೇಳಿಸಿಕೊಳ್ಳಲು ಶಕ್ತರಾಗುವಂತೆ ಉತ್ತಮ ಧ್ವನಿ ವ್ಯವಸ್ಥೆ ಇರುವುದನ್ನು ಖಚಿತಪಡಿಸಿಕೊಳ್ಳಿರಿ.