ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/08 ಪು. 7
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 2008 ನಮ್ಮ ರಾಜ್ಯದ ಸೇವೆ
2008 ನಮ್ಮ ರಾಜ್ಯದ ಸೇವೆ
km 1/08 ಪು. 7

ಪ್ರಕಟಣೆಗಳು

◼ ಸಾಹಿತ್ಯ ನೀಡುವಿಕೆ​—⁠ಜನವರಿ: ಬಣ್ಣವನ್ನು ಕಳೆದುಕೊಳ್ಳುವಂಥ ಕಾಗದದ ಮೇಲೆ ಮುದ್ರಿಸಲ್ಪಟ್ಟಿರುವ 192 ಪುಟದ ಯಾವುದೇ ಪುಸ್ತಕ ಅಥವಾ 1991ಕ್ಕೆ ಮುಂಚೆ ಪ್ರಕಟಿಸಲ್ಪಟ್ಟ ಯಾವುದೇ ಪುಸ್ತಕ. ಇಂಥ ಪುಸ್ತಕಗಳು ಇಲ್ಲದಿರುವ ಸಭೆಗಳು, ಜ್ಞಾನ ಪುಸ್ತಕ (ಲಭ್ಯವಿರುವಲ್ಲಿ) ಅಥವಾ ಎಚ್ಚರಿಕೆಯಿಂದಿರಿ! ಬ್ರೋಷರನ್ನು ನೀಡಬಹುದು. ಫೆಬ್ರವರಿ: ನಿಮ್ಮ ಕುರಿತು ಕಾಳಜಿ ವಹಿಸುವ ಒಬ್ಬ ಸೃಷ್ಟಿಕರ್ತನಿದ್ದಾನೊ? (ಇಂಗ್ಲಿಷ್‌) ಅಥವಾ ಕುಟುಂಬ ಸಂತೋಷದ ರಹಸ್ಯ. ಮಾರ್ಚ್‌: ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಬೈಬಲ್‌ ಅಧ್ಯಯನವನ್ನು ಆರಂಭಿಸಲು ಶ್ರದ್ಧೆಯಿಂದ ಪ್ರಯತ್ನಿಸಿ. ಏಪ್ರಿಲ್‌ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಜ್ಞಾಪಕಾಚರಣೆಗೆ ಮತ್ತು ವಿಶೇಷ ಬಹಿರಂಗ ಭಾಷಣಕ್ಕೆ ಹಾಜರಾದರೂ ಸಭೆಯೊಂದಿಗೆ ಸಕ್ರಿಯವಾಗಿ ಸಹವಾಸಿಸದ ಹೊಸ ಆಸಕ್ತ ಜನರನ್ನು ಭೇಟಿಮಾಡಲು ವಿಶೇಷ ಪ್ರಯತ್ನಮಾಡಲಾಗುವುದು. ಇಂಥ ಭೇಟಿಯ ಮುಖ್ಯ ಉದ್ದೇಶವು, ಇನ್ನೂ ಬೈಬಲ್‌ ಅಧ್ಯಯನವನ್ನು ಸ್ವೀಕರಿಸದವರೊಂದಿಗೆ ಅಧ್ಯಯನವನ್ನು ಆರಂಭಿಸುವುದೇ ಆಗಿರಬೇಕು.

◼ ಮಾರ್ಚ್‌ ತಿಂಗಳಿನಲ್ಲಿ ಐದು ವಾರಾಂತ್ಯಗಳಿರುವುದರಿಂದ ಆಕ್ಸಿಲಿಯರಿ ಪಯನೀಯರ್‌ ಸೇವೆಮಾಡಲು ಇದೊಂದು ಅತ್ಯುತ್ತಮ ತಿಂಗಳಾಗಿರುವುದು.

◼ ಫೆಬ್ರವರಿ ತಿಂಗಳಿನಿಂದ ಮಾರ್ಚ್‌ 2ನೇ ತಾರೀಖಿನೊಳಗೆ ಆರಂಭವಾಗುವ ಸರ್ಕಿಟ್‌ ಮೇಲ್ವಿಚಾರಕರ ಸಂದರ್ಶನಗಳಲ್ಲಿ ನೀಡಲಿರುವ ಹೊಸ ಬಹಿರಂಗ ಭಾಷಣದ ಶೀರ್ಷಿಕೆಯು “ಸಂಕಷ್ಟದ ಸಮಯದಲ್ಲಿ ನೀವು ಎಲ್ಲಿಂದ ಸಹಾಯ ಪಡಕೊಳ್ಳಬಲ್ಲಿರಿ?” ಎಂದಾಗಿದೆ.

◼ ಈ ವರ್ಷ, ಮಾರ್ಚ್‌ 22ರ ಶನಿವಾರದಂದು ಸೂರ್ಯಾಸ್ತಮಾನದ ಅನಂತರ ಜ್ಞಾಪಕಾಚರಣೆಯನ್ನು ಆಚರಿಸಲಿಕ್ಕಾಗಿ ಸಭೆಗಳು ಸೂಕ್ತ ಏರ್ಪಾಡುಗಳನ್ನು ಮಾಡಿಕೊಳ್ಳತಕ್ಕದ್ದು. ಭಾಷಣವು ತುಸು ಮುಂಚಿತವಾಗಿ ಆರಂಭವಾಗಬಹುದಾದರೂ, ಕುರುಹುಗಳನ್ನು ದಾಟಿಸುವುದನ್ನು ಸೂರ್ಯಾಸ್ತಮಾನಕ್ಕೆ ಮುಂಚೆ ಆರಂಭಿಸಬಾರದು. ನಿಮ್ಮ ಪ್ರದೇಶದಲ್ಲಿ ಸೂರ್ಯಾಸ್ತಮಾನವಾಗುವ ಸಮಯದ ಕುರಿತು ತಿಳಿಯಲು ಸ್ಥಳಿಕ ಮೂಲಗಳನ್ನು ಪರೀಕ್ಷಿಸಿ. ಪ್ರತಿಯೊಂದು ಸಭೆಯು ತನ್ನದೇ ಆದ ಜ್ಞಾಪಕಾಚರಣೆಯನ್ನು ನಡೆಸಲು ಪ್ರಯತ್ನಿಸಬೇಕು. ಆದರೂ, ಇದು ಯಾವಾಗಲೂ ಸಾಧ್ಯವಾಗಲಿಕ್ಕಿಲ್ಲ. ಸಾಮಾನ್ಯವಾಗಿ ಹಲವಾರು ಸಭೆಗಳು ಒಂದೇ ರಾಜ್ಯ ಸಭಾಗೃಹವನ್ನು ಉಪಯೋಗಿಸುತ್ತಿರುವ ಸ್ಥಳಗಳಲ್ಲಿ, ಒಂದು ಅಥವಾ ಹೆಚ್ಚಿನ ಸಭೆಗಳು ಆ ಸಂಜೆಗಾಗಿ ಬೇರೊಂದು ಸೌಕರ್ಯವನ್ನು ಉಪಯೋಗಿಸಲಿಕ್ಕಾಗಿ ಏರ್ಪಾಡುಮಾಡಬಹುದು. ಜ್ಞಾಪಕಾಚರಣೆಯ ಬಳಿಕ ಸಹವಾಸದಿಂದ ಎಲ್ಲರೂ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ, ಸಾಧ್ಯವಿರುವಲ್ಲಿ ಕಾರ್ಯಕ್ರಮಗಳ ನಡುವೆ ಕಡಿಮೆಪಕ್ಷ 40 ನಿಮಿಷಗಳಷ್ಟು ಅಂತರವಿರುವುದು ಉತ್ತಮವಾಗಿರುವುದೆಂದು ನಮ್ಮ ಸಲಹೆ. ಪ್ರಯಾಣಿಕರನ್ನು ಕರತರುವುದು ಹಾಗೂ ಕರೆದೊಯ್ಯುವುದನ್ನು ಸೇರಿಸಿ, ವಾಹನ ಸಂಚಾರ ಮತ್ತು ನಿಲುಗಡೆಯ ವಿಷಯದಲ್ಲೂ ಗಮನಹರಿಸಬೇಕು. ಸ್ಥಳಿಕವಾಗಿ ಯಾವ ಏರ್ಪಾಡುಗಳು ಅತ್ಯುತ್ತಮವಾಗಿವೆ ಎಂಬುದನ್ನು ಹಿರಿಯರ ಮಂಡಲಿಯು ನಿರ್ಧರಿಸಬೇಕು.

◼ ಸಭೆಯಲ್ಲಿರುವ ಪ್ರತಿ ರೆಗ್ಯುಲರ್‌ ಪಯನೀಯರರ ನೇಮಕಾತಿ ಪತ್ರಗಳು (S-202) ಸಭೆಯಲ್ಲಿವೆಯೆಂಬುದನ್ನು ಕಾರ್ಯದರ್ಶಿಗಳು ಖಚಿತಪಡಿಸಿಕೊಳ್ಳಬೇಕು. ಅವು ಇಲ್ಲದಿರುವಲ್ಲಿ ಬ್ರಾಂಚ್‌ ಆಫೀಸಿಗೆ ಬರೆದು ತಿಳಿಸಬೇಕು.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ