ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 7/07 ಪು. 3
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 2007 ನಮ್ಮ ರಾಜ್ಯದ ಸೇವೆ
2007 ನಮ್ಮ ರಾಜ್ಯದ ಸೇವೆ
km 7/07 ಪು. 3

ಪ್ರಕಟಣೆಗಳು

◼ ಸಾಹಿತ್ಯ ನೀಡುವಿಕೆ​—⁠ಜುಲೈ ಮತ್ತು ಆಗಸ್ಟ್‌: ಮುಂದೆ ಪಟ್ಟಿಮಾಡಿರುವ 32 ಪುಟಗಳ ಯಾವುದೇ ಬ್ರೋಷರ್‌ಗಳನ್ನು ಉಪಯೋಗಿಸಬಹುದು: ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ಎಚ್ಚರಿಕೆಯಿಂದಿರಿ!, ನೀವು ತ್ರಯೈಕ್ಯವನ್ನು ನಂಬ ಬೇಕೋ?, ಪರದೈಸನ್ನು ತರಲಿರುವ ಸರಕಾರ (ಇಂಗ್ಲಿಷ್‌), ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ? (ಇಂಗ್ಲಿಷ್‌), ಜೀವಿತದ ಉದ್ದೇಶವೇನು​—⁠ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ? ಮತ್ತು ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ. ಸೆಪ್ಟೆಂಬರ್‌: ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪ್ರಥಮ ಭೇಟಿಯಲ್ಲೇ ಬೈಬಲ್‌ ಅಧ್ಯಯನವನ್ನು ಆರಂಭಿಸಲು ಹೆಚ್ಚಿನ ಪ್ರಯತ್ನವನ್ನು ಮಾಡಿರಿ. ಮನೆಯವರ ಬಳಿ ಈ ಪುಸ್ತಕವು ಈಗಾಗಲೇ ಇರುವುದಾದರೆ, ಅದರಿಂದ ಅವರು ಹೇಗೆ ಪ್ರಯೋಜನ ಹೊಂದಬಲ್ಲರೆಂದು ತೋರಿಸಲು ಬೈಬಲ್‌ ಅಧ್ಯಯನವನ್ನು ಸಂಕ್ಷಿಪ್ತವಾಗಿ ಪ್ರತ್ಯಕ್ಷಾಭಿನಯಿಸಿ ತೋರಿಸಿರಿ. ಅಕ್ಟೋಬರ್‌: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಆಸಕ್ತಿಯು ತೋರಿಸಲ್ಪಟ್ಟಲ್ಲಿ, ಒಂದು ಬೈಬಲ್‌ ಅಧ್ಯಯನವನ್ನು ಆರಂಭಿಸುವ ಗುರಿಯೊಂದಿಗೆ ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? ಎಂಬ ಟ್ರ್ಯಾಕ್ಟ್‌ ಕೊಟ್ಟು ಅದನ್ನು ಚರ್ಚಿಸಿರಿ.

◼ ಸೆಪ್ಟೆಂಬರ್‌ ತಿಂಗಳಿನಲ್ಲಿ ಐದು ವಾರಾಂತ್ಯಗಳಿರುವುದರಿಂದ, ಆಕ್ಸಿಲಿಯರಿ ಪಯನೀಯರ್‌ ಸೇವೆಯನ್ನು ಮಾಡಲು ಇದೊಂದು ಅತ್ಯುತ್ತಮ ತಿಂಗಳಾಗಿರುವುದು.

◼ ಸೆಪ್ಟೆಂಬರ್‌ ತಿಂಗಳಿನಿಂದ ಆರಂಭಿಸುತ್ತಾ ಸರ್ಕಿಟ್‌ ಮೇಲ್ವಿಚಾರಕರು “ಬೈಬಲ್‌ ವಿಶ್ವಾಸಾರ್ಹವೆಂದು ಯಾವುದು ಗುರುತಿಸುತ್ತದೆ?” ಎಂಬ ಬಹಿರಂಗ ಭಾಷಣವನ್ನು ನೀಡುವರು.

◼ ರೆಗ್ಯುಲರ್‌ ಪಯನೀಯರ್‌ ಸೇವೆಯನ್ನು ಆರಂಭಿಸಲು ವಿನಂತಿಸಿಕೊಂಡಿರುವ ತಾರೀಖಿಗಿಂತ ಕಡಿಮೆಪಕ್ಷ 30 ದಿವಸಗಳ ಮುಂಚೆ ಅರ್ಜಿಗಳನ್ನು ಬ್ರಾಂಚ್‌ ಆಫೀಸಿಗೆ ಕಳುಹಿಸಬೇಕಾಗಿದೆ. ಅರ್ಜಿಗಳು ಪೂರ್ಣವಾಗಿ ಭರ್ತಿಮಾಡಲಾಗಿದೆಯೊ ಎಂದು ಸಭಾ ಸೆಕ್ರಿಟರಿಯು ಪರಿಶೀಲಿಸಬೇಕು. ಅರ್ಜಿದಾರರಿಗೆ ತಮ್ಮ ದೀಕ್ಷಾಸ್ನಾನದ ಸರಿಯಾದ ತಾರೀಖು ಜ್ಞಾಪಕವಿಲ್ಲದಿರುವಲ್ಲಿ, ಅವರು ಅಂದಾಜಿಗನುಸಾರ ಹಾಕಿ, ಅದರ ಒಂದು ದಾಖಲೆಯನ್ನು ಇಡಬೇಕು. ಸೆಕ್ರಿಟರಿಯು ಈ ತಾರೀಖನ್ನು ಕಾಂಗ್ರಿಗೇಷನ್‌ ಪಬ್ಲಿಷರ್‌ ರೆಕಾರ್ಡ್‌ (S-21) ಕಾರ್ಡ್‌ನಲ್ಲಿ ದಾಖಲಿಸಬೇಕು.

◼ ತಮ್ಮ ಪಟ್ಟಣಕ್ಕೆ ಹತ್ತಿರವಿರುವ ಮತ್ತು ಬೇರೆಕಡೆಗಳಲ್ಲಿರುವ ವಿರಳವಾಗಿ ಕೆಲಸಮಾಡಲ್ಪಟ್ಟ ಟೆರಿಟೊರಿಗಳಿಗೆ ಸ್ಥಳಾಂತರಿಸಿ ಸಾರಲು ಇಚ್ಛಿಸುವ ಮತ್ತು ಶಕ್ತರಾಗಿರುವ ಅರ್ಹ ಪ್ರಚಾರಕರು ಹಾಗೂ ಪಯನೀಯರರು ತಮ್ಮ ಸರ್ಕಿಟ್‌ ಮೇಲ್ವಿಚಾರಕರೊಂದಿಗೆ ಮತ್ತು ತಮ್ಮ ಸಭೆಯ ಸೇವಾ ಕಮಿಟಿಯೊಂದಿಗೆ ಆ ಕುರಿತು ಚರ್ಚಿಸಬಹುದು. ಅಂಥವರು ಆಧ್ಯಾತ್ಮಿಕವಾಗಿ ಅರ್ಹರಾಗಿರುವುದಾದರೆ ಸೇವಾ ಕಮಿಟಿಯು ಬ್ರಾಂಚ್‌ ಆಫೀಸಿಗೆ ಬರೆಯುವುದು. (od-KA ಪುಟ 111 ಪ್ಯಾರ. 1 ರಿಂದ 112 ಪ್ಯಾರ. 1ನ್ನು ನೋಡಿ.)

◼ ಸಭೆಯ ಸ್ಟಾಕ್‌ನಲ್ಲಿರುವ ಎಲ್ಲ ಸಾಹಿತ್ಯ ಹಾಗೂ ಪತ್ರಿಕೆಗಳ ವಾರ್ಷಿಕ ಇನ್ವೆಂಟರಿಯನ್ನು, 2007ರ ಆಗಸ್ಟ್‌ 31ರಂದು ಅಥವಾ ಅದಕ್ಕೆ ಸಾಧ್ಯವಿರುವಷ್ಟು ಹತ್ತಿರದ ತಾರೀಖಿನಂದು ತಯಾರಿಸತಕ್ಕದ್ದು. ಈ ಇನ್ವೆಂಟರಿಯು ಸಾಹಿತ್ಯ ಸಂಯೋಜಕನಿಂದ ಮಾಸಿಕವಾಗಿ ಮಾಡಲ್ಪಡುವ ಲೆಕ್ಕದಂತೆಯೇ ಇರುವುದು. ಒಟ್ಟು ಮೊತ್ತಗಳನ್ನು ಲಿಟ್‌ರೇಚರ್‌ ಇನ್ವೆಂಟರಿ (S-18) ಫಾರ್ಮ್‌ನಲ್ಲಿ ದಾಖಲಿಸಬೇಕು. ಸದ್ಯಕ್ಕೆ ಸ್ಟಾಕ್‌ನಲ್ಲಿ ಎಷ್ಟು ಪತ್ರಿಕೆಗಳಿವೆ ಎಂಬುದನ್ನು ಪತ್ರಿಕಾ ಸೇವಕನಿಂದ(ರಿಂದ) ಕೇಳಿ ತಿಳಿದುಕೊಳ್ಳಬೇಕು. ಸಹಯೋಜಕ ಸಭೆಯ ಸೆಕ್ರಿಟರಿಯು ಇನ್ವೆಂಟರಿ ಕೆಲಸದ ಮೇಲ್ವಿಚಾರಣೆಯನ್ನು ಮಾಡಬೇಕು. ಅವನು ಮತ್ತು ಸಹಯೋಜಕ ಸಭೆಯ ಅಧ್ಯಕ್ಷ ಮೇಲ್ವಿಚಾರಕನು ಫಾರ್ಮ್‌ಗೆ ಸಹಿಹಾಕುವರು. ಪ್ರತಿಯೊಂದು ಸಹಯೋಜಕ ಸಭೆಯು ಮೂರು ಲಿಟ್‌ರೇಚರ್‌ ಇನ್ವೆಂಟರಿ ಫಾರ್ಮ್‌ಗಳನ್ನು ಪಡೆದುಕೊಳ್ಳುವುದು. ದಯವಿಟ್ಟು ಮೂಲಪ್ರತಿಯನ್ನು ಸೆಪ್ಟೆಂಬರ್‌ 6ನೇ ತಾರೀಖಿನೊಳಗಾಗಿ ಬ್ರಾಂಚ್‌ ಆಫೀಸಿಗೆ ಅಂಚೆಯ ಮೂಲಕ ಕಳುಹಿಸಿಕೊಡಿ. ಒಂದು ಪ್ರತಿಯನ್ನು ನಿಮ್ಮ ಫೈಲ್‌ಗಳಿಗಾಗಿ ಇಟ್ಟುಕೊಳ್ಳಿ. ಮೂರನೆಯ ಪ್ರತಿಯನ್ನು ಒಂದು ವರ್ಕ್‌ ಷೀಟ್‌ ಆಗಿ ಉಪಯೋಗಿಸಬಹುದು.

◼ ಪುನಃ ಲಭ್ಯವಿರುವ ಪ್ರಕಾಶನ:

ಜೀವಿತದ ಉದ್ದೇಶವೇನು?​—⁠ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ? ​—⁠ಇಂಗ್ಲಿಷ್‌, ಕನ್ನಡ, ಗುಜರಾಥಿ, ತಮಿಳು, ತೆಲುಗು, ನೆಪಾಲಿ, ಬಂಗಾಲಿ, ಮರಾಠಿ, ಮಲೆಯಾಳಂ, ಹಿಂದಿ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ