ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2007ರ ಜೂನ್ 25ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಕೆಳಗಿನ ಪ್ರಶ್ನೆಗಳನ್ನು ಪರಿಗಣಿಸಲಾಗುವುದು. 2007ರ ಮೇ 7ರಿಂದ ಜೂನ್ 25ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲೆ ಆಧರಿತವಾದ 30 ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು. [ಸೂಚನೆ: ಪ್ರಶ್ನೆಗಳ ಬಳಿಕ ರೆಫರೆನ್ಸ್ಗಳು ಇಲ್ಲದಿರುವಲ್ಲಿ, ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ ನೀವು ನಿಮ್ಮ ಸ್ವಂತ ಸಂಶೋಧನೆಯನ್ನು ಮಾಡುವ ಆವಶ್ಯಕತೆಯಿರುವುದು.—ಶೂಶ್ರೂಷಾ ಶಾಲೆ, ಪುಟ 36-7ನ್ನು ನೋಡಿರಿ.]
ಭಾಷಣ ಗುಣಗಳು
1. ಮಾತಾಡುವಾಗ ನಮ್ಮ ಸ್ವರದ ಗುಣಮಟ್ಟವನ್ನು ಉತ್ತಮಗೊಳಿಸಲಿಕ್ಕಾಗಿ ಬಿಗುಪನ್ನು ಸಡಿಲಿಸಲು ನಾವೇನು ಮಾಡಸಾಧ್ಯವಿದೆ? [be-KA ಪು. 185 ಪ್ಯಾರ. 1-3]
2. ನಮ್ಮ ಶುಶ್ರೂಷೆಯಲ್ಲಿ ನಾವು ‘ಯಾರಾರಿಗೆ ಎಂಥೆಂಥವರಾಗಬೇಕೋ ಅಂಥಂಥವರಾಗುವುದು’ ಹೇಗೆ? (1 ಕೊರಿಂ. 9:20-23) [be-KA ಪು. 186 ಪ್ಯಾರ. 2-4]
3. ಇತರರಿಗೆ ಕಿವಿಗೊಡುವುದರಲ್ಲಿ ನಾವು ಯೆಹೋವನ ಮಾದರಿಯನ್ನು ಹೇಗೆ ಅನುಸರಿಸಸಾಧ್ಯವಿದೆ? (ಆದಿ. 18:23-33; 1 ಅರ. 22:19-22) [be-KA ಪು. 186 ಪ್ಯಾರ. 5, ಪು. 187 ಪ್ಯಾರ. 1, 4]
4. ಇತರರು ಆಧ್ಯಾತ್ಮಿಕ ಪ್ರಗತಿಯನ್ನು ಮಾಡುವಂತೆ ನಾವು ಯಾವ ಪ್ರಾಯೋಗಿಕ ವಿಧಗಳಲ್ಲಿ ಸಹಾಯ ಮಾಡಬಲ್ಲೆವು? [be-KA ಪು. 187 ಪ್ಯಾರ. 5-ಪು. 188 ಪ್ಯಾರ. 3]
5. ಇತರರಿಗೆ ಗೌರವ ತೋರಿಸುವ ಕುರಿತು ನಾವೇಕೆ ಚಿಂತಿತರಾಗಿರಬೇಕು? [be-KA ಪು. 190 ಪ್ಯಾರ. 3, ಚೌಕ]
ನೇಮಕ ನಂ. 1
6. ನಾವು ಬೋಧಿಸುತ್ತಿರುವ ಜನರ ಹೃದಯವನ್ನು ತಲಪಲು ಏಕೆ ಪ್ರಯತ್ನಿಸಬೇಕು? [be-KA ಪು. 59 ಪ್ಯಾರ. 1]
7. ನಾವು ಯಾರಿಗೆ ಕಲಿಸುತ್ತೇವೋ ಅವರ ಮೇಲೆ ನಮ್ಮ ಮಾದರಿಯು ಯಾವ ಪ್ರಭಾವವನ್ನು ಬೀರುತ್ತದೆ? [be-KA ಪು. 60 ಪ್ಯಾರ. 4]
8. ಮನೆಯಲ್ಲಿ ನಾವು ನಮ್ಮ ಸಂಭಾಷಣಾ ಕೌಶಲವನ್ನು ಹೇಗೆ ಉತ್ತಮಗೊಳಿಸಬಲ್ಲೆವು? [be-KA ಪು. 62 ಪ್ಯಾರ. 3]
9. ಪ್ರವಾದಿ ಯೆರೆಮೀಯನಲ್ಲಿ ನಾವು ಹುರುಪಿನ ಯಾವ ಧೀರ ಮಾದರಿಯನ್ನು ಕಂಡುಕೊಳ್ಳುತ್ತೇವೆ? [bsi07-KA ಪು. 3 ಪ್ಯಾರ. 36]
10. ಪ್ರಲಾಪಗಳು ಪುಸ್ತಕವು ಯಾವ ಭರವಸೆಯನ್ನು ವ್ಯಕ್ತಪಡಿಸುತ್ತದೆ, ಆದರೂ ದುಷ್ಟರ ಮೇಲೆ ಬರಲಿರುವ ದೇವರ ನ್ಯಾಯತೀರ್ಪುಗಳ ತೀಕ್ಷ್ಣತೆಯನ್ನು ತೋರಿಸುವುದರಲ್ಲಿ ಅದು ಏಕೆ ಪ್ರಯೋಜನಕಾರಿಯಾಗಿದೆ? [bsi07-KA ಪು. 5 ಪ್ಯಾರ. 13]
ವಾರದ ಬೈಬಲ್ ವಾಚನ
11. ಯೆರೆಮೀಯ 37:21ರಲ್ಲಿ ವರ್ಣಿಸಲ್ಪಟ್ಟಿರುವ ಯೆರೆಮೀಯನ ಅನುಭವಕ್ಕೆ ಹೊಂದಿಕೆಯಲ್ಲಿ ನಮಗೆ ಯಾವ ಆಶ್ವಾಸನೆ ಇರಬಲ್ಲದು?
12. ‘ವ್ಯಥೆಪಡುತ್ತಿದ್ದ ತನ್ನನ್ನು ಯೆಹೋವನು ಹೆಚ್ಚೆಚ್ಚಾಗಿ ದುಃಖಪಡಿಸಿದ್ದಾನೆಂದೂ’ ‘ನರಳಿ ನರಳಿ ದಣಿಯುವಂತೆ’ ಮಾಡಿದ್ದಾನೆಂದೂ ಬಾರೂಕನು ಏಕೆ ಹೇಳಿದ್ದಿರಬಹುದು ಮತ್ತು ಈ ಸಮಸ್ಯೆಗೆ ಬಾರೂಕನು ಆರಂಭದಲ್ಲಿ ಹೇಗೆ ಪ್ರತಿಕ್ರಿಯಿಸಿದನು? (ಯೆರೆ. 45:1-5)
13. ಬಾಬೆಲ್ ‘[ಪೂರ್ಣವಾಗಿ] ಹಾಳುಬಿದ್ದು’ ನಿರ್ಜನವಾಗಿ ಹೋದದ್ದು ಯಾವಾಗ? (ಯೆರೆ. 50:13)
14. ಪ್ರಲಾಪಗಳು 3:8, 9, 42-45ರಲ್ಲಿ ಪ್ರಾರ್ಥನೆಯ ಕುರಿತು ಯಾವ ಮೂಲತತ್ತ್ವವನ್ನು ಸ್ಪಷ್ಟಪಡಿಸಲಾಗಿದೆ?
15. ಯೆಹೆಜ್ಕೇಲ 1ನೇ ಅಧ್ಯಾಯದಲ್ಲಿ ವರ್ಣಿಸಲ್ಪಟ್ಟಿರುವ ರಥ ಯಾವುದನ್ನು ಚಿತ್ರಿಸುತ್ತದೆ?