ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಕಾವಲಿನಬುರುಜು ಮೇ. 1
“ಕ್ರೂರ ಕೃತ್ಯಗಳು ಸರ್ವ ಸಾಮಾನ್ಯವಾಗುತ್ತಿರುವಂತೆ ತೋರುತ್ತಿವೆ. [ಸ್ಥಳಿಕವಾದ ಅಥವಾ ಪತ್ರಿಕೆಯಲ್ಲಿರುವ ಒಂದು ಉದಾಹರಣೆಯನ್ನು ಕೊಡಿ.] ಜನರು ಅಷ್ಟೊಂದು ಕ್ರೂರರಾಗಿರಲು ಕಾರಣ ಏನಿರಬಹುದೆಂದು ನೀವು ಯೋಚಿಸಿದ್ದೀರಾ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ಕ್ರೂರತನವು ಹೆಚ್ಚಾಗುವುದರ ಕುರಿತು ಬೈಬಲ್ ಮುಂತಿಳಿಸಿದೆ. [2 ತಿಮೊಥೆಯ 3:1-5ನ್ನು ಓದಿ.] ಈ ಪತ್ರಿಕೆಯು, ‘ಕ್ರೂರತನಕ್ಕೆ ಕೊನೆ ಇದೆಯೋ?’ ಎಂಬ ಪ್ರಶ್ನೆಯನ್ನು ಉತ್ತರಿಸುತ್ತದೆ.”
ಎಚ್ಚರ! ಏಪ್ರಿ. - ಜೂನ್
“ಇದು ನಿಜವಾಗುವುದನ್ನು ನಾವು ಎಂದಾದರೂ ನೋಡುವೆವೆಂದು ನೀವು ನೆನಸುತ್ತಿರೊ? [ಯೆಶಾಯ 33:24ನ್ನು ಓದಿ. ಅನಂತರ ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ವೈದ್ಯಕೀಯಶಾಸ್ತ್ರವು ಏನನ್ನು ಸಾಧಿಸುತ್ತಿದೆ ಮತ್ತು ಬೈಬಲ್ನ ವಾಗ್ದಾನವು ಹೇಗೆ ನೆರವೇರಲಿದೆ ಎಂಬುದನ್ನು ಈ ಪತ್ರಿಕೆಯು ವಿವರಿಸುತ್ತದೆ.”
ಕಾವಲಿನಬುರುಜು ಜೂನ್ 1
“ದುಷ್ಕೃತ್ಯಗಳನ್ನು ನಡೆಸುವವರ ಕುರಿತು ಬಹುತೇಕ ಪ್ರತಿದಿನ ನಾವು ಕೇಳುತ್ತಿರುತ್ತೇವೆ. [ಸ್ಥಳಿಕವಾಗಿ ತಿಳಿದಿರುವ ಇತ್ತೀಚಿನ ಒಂದು ಉದಾಹರಣೆ ತಿಳಿಸಿರಿ.] ಅಗೋಚರವಾದ ಒಂದು ಕುಟಿಲ ಮೂಲವು ಜನರನ್ನು ಪ್ರಭಾವಿಸುತ್ತಿದೆ ಎಂದು ನೀವು ನೆನಸುತ್ತೀರೊ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ. ಅನಂತರ ಪ್ರಕಟನೆ 12:12ನ್ನು ಓದಿ.] ಈ ಪತ್ರಿಕೆಯು, ನಾವು ನಮ್ಮನ್ನು ಹೇಗೆ ಸಂರಕ್ಷಿಸಬಲ್ಲೆವು ಎಂಬುದನ್ನು ವಿವರಿಸುತ್ತದೆ.”
ಎಚ್ಚರ! ಏಪ್ರಿ. - ಜೂನ್
“ಈ ಪ್ರಾಚೀನ ಗಾದೆಯನ್ನು ನೀವು ಸಹ ಒಪ್ಪಿಕೊಳ್ಳುವಿರೆಂದು ನಾನು ನೆನಸುತ್ತೇನೆ. [ಜ್ಞಾನೋಕ್ತಿ 22:3ನ್ನು ಓದಿ.] ನಮ್ಮ ಸುತ್ತಲೂ ನೈತಿಕ ಮಟ್ಟಗಳು ಎಡೆಬಿಡದೆ ಇಳಿಮುಖವಾಗುತ್ತಿರುವಾಗ ಈ ವಿವೇಕಯುತ ಸಲಹೆಯನ್ನು ನಾವು ಹೇಗೆ ಪಾಲಿಸಬಹುದು ಮತ್ತು ನಮ್ಮ ಎಳೆಯರು ನಕಾರಾತ್ಮಕ ಒತ್ತಡವನ್ನು ಎದುರಿಸುವಂತೆ ಅವರನ್ನು ಹೇಗೆ ಸಿದ್ಧಗೊಳಿಸಬಹುದು? [ಪ್ರತಿಕ್ರಿಯೆಗೆ ಅವಕಾಶಕೊಡಿ. ಅನಂತರ ಪುಟ 26ರಲ್ಲಿರುವ ಲೇಖನಕ್ಕೆ ತಿರುಗಿಸಿ.] ಈ ನಿಟ್ಟಿನಲ್ಲಿ ಈ ಪತ್ರಿಕೆಯು ಹೆಚ್ಚು ಸಹಾಯಕರ ಮಾಹಿತಿಯನ್ನು ನಮಗೆ ಕೊಡುತ್ತದೆ.”