ಪ್ರಕಟಣೆಗಳು
◼ ಸಾಹಿತ್ಯ ನೀಡುವಿಕೆ—ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಬಿಡಿ ಪ್ರತಿಗಳನ್ನು ನೀಡಿರಿ. ಜ್ಞಾಪಕಾಚರಣೆಗೆ ಅಥವಾ ಇತರ ದೇವಪ್ರಭುತ್ವಾತ್ಮಕ ಘಟನೆಗಳಿಗೆ ಹಾಜರಾದರೂ, ಸಭೆಯೊಂದಿಗೆ ಸಕ್ರಿಯವಾಗಿ ಸಹವಸಿಸದೆ ಇರುವವರನ್ನು ಸೇರಿಸಿ ಎಲ್ಲ ಆಸಕ್ತ ಜನರನ್ನು ಪುನರ್ಭೇಟಿ ಮಾಡುವಾಗ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ನೀಡಲು ಪ್ರಯತ್ನಿಸಿರಿ. ಆ ಮೂಲಕ ಒಂದು ಮನೆ ಬೈಬಲ್ ಅಧ್ಯಯನವನ್ನು ಪ್ರಾರಂಭಿಸುವ ಗುರಿಯನ್ನಿಡಿರಿ. ಜೂನ್: ಕುಟುಂಬ ಸಂತೋಷ ಪುಸ್ತಕವನ್ನು ನೀಡಿರಿ. ಜುಲೈ ಮತ್ತು ಆಗಸ್ಟ್: ಮುಂದೆ ಪಟ್ಟಿಮಾಡಿರುವ 32 ಪುಟಗಳ ಯಾವುದೇ ಬ್ರೋಷರ್‌ಗಳನ್ನು ಉಪಯೋಗಿಸಬಹುದು: ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ಎಚ್ಚರಿಕೆಯಿಂದಿರಿ!, ನೀವು ತ್ರಯೈಕ್ಯವನ್ನು ನಂಬ ಬೇಕೋ?, ಪರದೈಸನ್ನು ತರಲಿರುವ ಸರಕಾರ (ಇಂಗ್ಲಿಷ್), ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ? (ಇಂಗ್ಲಿಷ್), ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ? ಮತ್ತು ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ.
◼ ಲೋಕವ್ಯಾಪಕ ಕೆಲಸಕ್ಕಾಗಿ ಜಿಲ್ಲಾ ಅಧಿವೇಶನಗಳಲ್ಲಿ ಮತ್ತು ಬ್ರಾಂಚ್ ಆಫೀಸಿಗೆ ಕಾಣಿಕೆಯಾಗಿ ಕೊಡಲ್ಪಡುವ ಚೆಕ್ ಅಥವಾ ಡಿಮಾಂಡ್ ಡ್ರಾಫ್ಟ್‌ಗಳಲ್ಲಿ “Watch Tower Bible and Tract Society of India” ಮತ್ತು ಬೆಂಗಳೂರಿನಲ್ಲಿ ಸಂದಾಯವಾಗಬೇಕೆಂದು ಗುರುತಿಸಬೇಕು.
◼ ಹಿರಿಯರ ಮಂಡಲಿಗಳು ನೈಸರ್ಗಿಕ ವಿಪತ್ತಿಗಾಗಿ ಪೂರ್ವಸಿದ್ಧರಾಗಿರುವುದರ ಕುರಿತಾದ ಜುಲೈ 6, 2006ರ ಪತ್ರವನ್ನು ಪರಿಶೀಲಿಸತಕ್ಕದ್ದು ಮತ್ತು ಪ್ರತಿಯೊಬ್ಬ ಪ್ರಚಾರಕನ ಸಂಪರ್ಕ ಮಾಹಿತಿಯು ಸದ್ಯೋಚಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು. ವಿಪತ್ತು ಸಂಭವನೀಯ ಪ್ರದೇಶಗಳಲ್ಲಿ, ತುರ್ತು ಸಮಯದಲ್ಲಿ ಸಂಪರ್ಕಿಸಬಹುದಾದ ಇತರ ವಿಳಾಸಗಳನ್ನು ಪಡೆದುಕೊಳ್ಳತಕ್ಕದ್ದು. ಪ್ರಚಾರಕರು ತುರ್ತು ಪರಿಸ್ಥಿತಿಯಲ್ಲಿ ಮಾತ್ರವಲ್ಲ ರಜೆಯಲ್ಲಿ ಅಥವಾ ಉದ್ಯೋಗ ಸಂಬಂಧವಾಗಿ ಬೇರೆಡೆ ಪ್ರಯಾಣಿಸುವಾಗ, ಆಸ್ಪತ್ರೆಯಲ್ಲಿ ಹೆಚ್ಚು ಸಮಯ ಉಳಿಯುವಾಗ ಮತ್ತಿತರ ಸಂದರ್ಭಗಳಲ್ಲಿ ಸಹ ಸಭಾ ಪುಸ್ತಕ ಅಧ್ಯಯನ ಮೇಲ್ವಿಚಾರಕನಿಗೆ ಅಥವಾ ಒಬ್ಬ ಹಿರಿಯನಿಗೆ ತಿಳಿಸುವುದು ಸಹಾಯಕರ.
◼ ಲಭ್ಯವಿರುವ ಹೊಸ ಪ್ರಕಾಶನಗಳು:
“ಪವಿತ್ರ ಗ್ರಂಥವೆಲ್ಲವೂ” ವಿಶ್ವಾಸಾರ್ಹ ಮತ್ತು ಪ್ರಯೋಜನಕರ, ಬ್ರೋಷರ್ 2 (2007ರ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಉಪಯೋಗಿಸುವ ಬ್ರೋಷರ್) —ಕನ್ನಡ, ತೆಲುಗು, ಹಿಂದಿ