ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 12/06 ಪು. 5
  • ಪ್ರಶ್ನಾ ಚೌಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ಚೌಕ
  • 2006 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಸಂತೋಷವಾಗಿ ಕೊಡುವವರನ್ನುಯೆಹೋವನು ಪ್ರೀತಿಸುತ್ತಾನೆ
    ಕಾವಲಿನಬುರುಜು—1992
  • ನಮ್ಮ ಲೋಕವ್ಯಾಪಕ ಕೆಲಸಕ್ಕೆ ಹಣಕಾಸು ಎಲ್ಲಿಂದ?
    ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
  • ಯೆಹೋವನು ತನ್ನ ಕೆಲಸವನ್ನು ಜಯಪ್ರದ ಮಾಡುವ ವಿಧ
    ಕಾವಲಿನಬುರುಜು—1991
  • ಎಲ್ಲ ಇರುವ ದೇವರಿಗೆ ನಾವು ಕಾಣಿಕೆ ಕೊಡಬೇಕು ಯಾಕೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
ಇನ್ನಷ್ಟು
2006 ನಮ್ಮ ರಾಜ್ಯದ ಸೇವೆ
km 12/06 ಪು. 5

ಪ್ರಶ್ನಾ ಚೌಕ

◼ ಸಭೆಗೆ ಸಹಾಯ ಮಾಡುವ ಉದ್ದೇಶದಿಂದ ಹಳೆಯ ಸಾಮಾನುಗಳ ಮಾರಾಟದಂಥ ಹಣಸಂಗ್ರಹ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಯೋಗ್ಯವೊ?

ಧಾರ್ಮಿಕ ಸಂಸ್ಥೆಗಳು ಹಣಸಂಗ್ರಹಕ್ಕಾಗಿ ಔತಣಗಳು, ಮಾರಾಟಗಳು ಅಥವಾ ಉತ್ಸವಗಳಂಥ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸಾಮಾನ್ಯವಾಗಿವೆ. ಇವು ಹಣಕ್ಕಾಗಿ ಮನವಿಮಾಡುವ ವಿಧಗಳಾಗಿವೆ ಮತ್ತು ಒಂದು ಒಳ್ಳೆಯ ಉದ್ದೇಶವನ್ನು ಪೂರೈಸುತ್ತದೆಂದು ಅನೇಕರು ನೆನಸಬಹುದು. ಆದರೆ ಯೆಹೋವನ ಸಾಕ್ಷಿಗಳು ಹಣಕಾಸಿನ ಬೆಂಬಲಕ್ಕಾಗಿ ಈ ರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸುವುದಿಲ್ಲ.

ಚರ್ಚುಗಳನ್ನಾಗಲಿ ಅಥವಾ ಅಲ್ಲಿನ ನಿಧಿ ಸಂಗ್ರಹಿಸುವ ವಿಧಗಳನ್ನಾಗಲಿ ನಾವು ಅನುಸರಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಾ ಇಸವಿ 1879ರ ಆಗಸ್ಟ್‌ ವಾಚ್‌ ಟವರ್‌ ಪತ್ರಿಕೆಯ ಎರಡನೆಯ ಸಂಚಿಕೆಯು ತಿಳಿಸಿದ್ದು: “ಯೆಹೋವನೇ ‘ಝಯನ್ಸ್‌ ವಾಚ್‌ ಟವರ್‌’ನ ಬೆಂಬಲಿಗನು ಎಂದು ನಾವು ನಂಬುತ್ತೇವೆ. ಆದುದರಿಂದ ಅದು ಬೆಂಬಲಕ್ಕಾಗಿ ಮನುಷ್ಯರನ್ನು ಬೇಡುವುದೂ ಇಲ್ಲ ಭಿನ್ನಹಿಸುವುದೂ ಇಲ್ಲ. ‘ಬೆಟ್ಟಗಳಲ್ಲಿರುವ ಬೆಳ್ಳಿಬಂಗಾರಗಳೆಲ್ಲವೂ ನನ್ನದೆ’ ಎಂದು ಆತನು ಹೇಳುವಾಗ, ಅವಶ್ಯವಿರುವ ನಿಧಿಯನ್ನು ಆತನು ಕೊಡದಿದ್ದಲ್ಲಿ ಈ ಪ್ರಕಾಶನವನ್ನು ರದ್ದುಪಡಿಸುವ ಸಮಯ ಬಂದಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ.”

“ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು.” (2 ಕೊರಿಂ. 9:⁠7) ಈ ಶಾಸ್ತ್ರವಚನದಲ್ಲಿರುವ ಮೂಲತತ್ತ್ವವನ್ನು ಅನುಸರಿಸುವುದನ್ನು ನಾವು ಮುಂದುವರಿಸುತ್ತೇವೆ. ರಾಜ್ಯ ಸಭಾಗೃಹದಲ್ಲಿ ಕಾಣಿಕೆ ಪೆಟ್ಟಿಗೆಗಳು ಇಡಲ್ಪಟ್ಟಿವೆ. ಸ್ವಯಂಪ್ರೇರಿತ ದಾನಗಳನ್ನು ಕೊಡಲಿಚ್ಛಿಸುವ ವ್ಯಕ್ತಿಗಳು ಆ ಪೆಟ್ಟಿಗೆಯಲ್ಲಿ ಹಾಕಬಹುದು. (2 ಅರ. 12:⁠9) ಕಾಣಿಕೆಗಳನ್ನು ಮನವಿಮಾಡಲಾಗುವುದಿಲ್ಲ. ಮಾತ್ರವಲ್ಲದೆ ದಾನಮಾಡುವವರು ಸಹ ಪ್ರತಿಯಾಗಿ ಯಾವುದೋ ಲಾಭಪಡೆದುಕೊಳ್ಳವ ಉದ್ದೇಶದಿಂದ ಅದನ್ನು ಕೊಡುವುದಿಲ್ಲ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ