ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 12/06 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 2006 ನಮ್ಮ ರಾಜ್ಯದ ಸೇವೆ
2006 ನಮ್ಮ ರಾಜ್ಯದ ಸೇವೆ
km 12/06 ಪು. 7

ಪ್ರಕಟನೆಗಳು

◼ ಸಾಹಿತ್ಯ ನೀಡುವಿಕೆ​—⁠ಡಿಸೆಂಬರ್‌: ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ಪುಸ್ತಕವನ್ನು ನೀಡಿರಿ. ಅಥವಾ ಬೈಬಲ್‌ ಕಥೆಗಳ ನನ್ನ ಪುಸ್ತಕ ಮತ್ತು ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕಗಳು ಸಭೆಯ ಸ್ಟಾಕ್‌ನಲ್ಲಿರುವುದಾದರೆ ಬದಲಿ ನೀಡುವಿಕೆಯಾಗಿ ಉಪಯೋಗಿಸಿರಿ. ಜನವರಿ: ಹಳದಿ ಬಣ್ಣಕ್ಕೆ ತಿರುಗುವ ಇಲ್ಲವೆ ಬಣ್ಣವನ್ನು ಕಳೆದುಕೊಳ್ಳುವಂಥ ಕಾಗದದ ಮೇಲೆ ಮುದ್ರಿಸಲ್ಪಟ್ಟಿರುವ 192 ಪುಟದ ಯಾವುದೇ ಪುಸ್ತಕವನ್ನು ಅಥವಾ 1991ಕ್ಕೆ ಮುಂಚೆ ಪ್ರಕಟಿಸಲ್ಪಟ್ಟ ಯಾವುದೇ ಪುಸ್ತಕವನ್ನು ನೀಡಬಹುದು. ಇಂಥ ಯಾವುದೇ ಹಳೇ ಪುಸ್ತಕಗಳ ಸ್ಟಾಕ್‌ ಇಲ್ಲದಿರುವ ಸಭೆಗಳು ಜ್ಞಾನ ಪುಸ್ತಕ ಇಲ್ಲವೆ ಎಚ್ಚರಿಕೆಯಿಂದಿರಿ! ಬ್ರೋಷರನ್ನು ಬಳಸಬಹುದು. ಫೆಬ್ರವರಿ: ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕವನ್ನು ನೀಡಲಾಗುವುದು. ಈ ಪುಸ್ತಕವು ಲಭ್ಯವಿರದಿದ್ದಲ್ಲಿ, ಪ್ರಕಟನೆ ಪರಮಾವಧಿ ಪುಸ್ತಕ ಅಥವಾ ಹೆಚ್ಚು ಸ್ಟಾಕ್‌ನಲ್ಲಿರುವ ಇನ್ನಾವುದೇ ಹಳೇ ಪ್ರಕಾಶನವನ್ನು ನೀಡಬಹುದು. ಮಾರ್ಚ್‌: ಬೋಧಿಸು ಪುಸ್ತಕವನ್ನು ನೀಡಿರಿ. ಬೈಬಲ್‌ ಅಧ್ಯಯನವನ್ನು ಆರಂಭಿಸಲು ಶ್ರದ್ಧೆಯಿಂದ ಪ್ರಯತ್ನಿಸಿರಿ. ಬೋಧಿಸು ಪುಸ್ತಕದೊಂದಿಗೆ ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? ಟ್ರಾಕ್ಟನ್ನು ನೀಡಿರಿ.

◼ ಪ್ರತಿ ಸಭೆಯ ಪ್ರಮುಖ ಭಾಷೆಯಲ್ಲಿ ಇಸವಿ 2007ಕ್ಕಾಗಿರುವ ಜ್ಞಾಪಕಾಚರಣೆಯ ಆಮಂತ್ರಣ ಪತ್ರಗಳನ್ನು ಶೀಘ್ರದಲ್ಲೇ ಕಳುಹಿಸಲಾಗುವುದು. ನಿಮ್ಮ ಟೆರಿಟೊರಿಯಲ್ಲಿ ಇತರ ಭಾಷೆಗಳನ್ನಾಡುವವರು ಇರುವಲ್ಲಿ ಮತ್ತು ನಿಮಗೆ ಆ ಭಾಷೆಗಳಲ್ಲಿ ಆಮಂತ್ರಣ ಪತ್ರಗಳು ಬೇಕಾಗಿರುವಲ್ಲಿ ಅವುಗಳಿಗಾಗಿ ಸಾಧ್ಯವಾದಷ್ಟು ಬೇಗನೆ ಲಿಟ್‌ರೇಚರ್‌ ರಿಕ್ವೆಸ್ಟ್‌ ಫಾರ್ಮ್‌ (S-14)ನ ಮೂಲಕ ವಿನಂತಿಸಿಕೊಳ್ಳತಕ್ಕದ್ದು. ದಯವಿಟ್ಟು ನಿಮ್ಮ ಟೆರಿಟೊರಿಯಲ್ಲಿ ಅಗತ್ಯವಿರುವ ಭಾಷೆಗಳನ್ನು ಮಾತ್ರ ವಿನಂತಿಸಿಕೊಳ್ಳಿರಿ. ಅಸ್ಸಾಮಿ, ಇಂಗ್ಲಿಷ್‌, ಕನ್ನಡ, ಗುಜರಾಥಿ, ತಮಿಳು, ತೆಲುಗು, ನೇಪಾಲಿ, ಪಂಜಾಬಿ, ಬಂಗಾಲಿ, ಮರಾಠಿ, ಮಲೆಯಾಳಂ, ಮಿಸೋ ಮತ್ತು ಹಿಂದಿಯಲ್ಲಿ ಆಮಂತ್ರಣ ಪತ್ರಗಳು ಲಭ್ಯ.

◼ ಇಸವಿ 2008ಕ್ಕಾಗಿರುವ ಜ್ಞಾಪಕಾಚರಣೆಯು ಶನಿವಾರ, ಮಾರ್ಚ್‌ 22ರಂದು ಸೂರ್ಯಾಸ್ತಮಾನದ ನಂತರ ನಡೆಯಲಿರುವುದೆಂಬುದನ್ನು ದಯವಿಟ್ಟು ಗಮನಿಸಿರಿ. ಈ ಮುಂಗಡ ಸೂಚನೆಯು ಕೊಡಲ್ಪಟ್ಟಿರುವುದಕ್ಕೆ ಕಾರಣವೇನೆಂದರೆ, ಒಂದೇ ರಾಜ್ಯ ಸಭಾಗೃಹವನ್ನು ಅನೇಕ ಸಭೆಗಳು ಉಪಯೋಗಿಸುತ್ತಿದ್ದು, ಬೇರೆ ಸಭಾಂಗಣದ ವ್ಯವಸ್ಥೆ ಮಾಡಬೇಕಾಗಿರುವಲ್ಲಿ ಸಹೋದರರು ಲಭ್ಯವಿರುವ ಹಾಲ್‌ಗಳಿಗಾಗಿ ಮಾಡಬೇಕಾದ ಕಾಯ್ದಿರಿಸುವಿಕೆ ಇಲ್ಲವೆ ಕಾಂಟ್ರ್ಯಾಕ್ಟ್‌ ಅನ್ನು ಮುಂಚಿತವಾಗಿ ಮಾಡಲಿಕ್ಕಾಗಿದೆ. ಇಂಥ ಸಂದರ್ಭದಲ್ಲಿ, ಕಟ್ಟಡದಲ್ಲಿ ಬೇರೆ ಯಾವುದೇ ರೀತಿಯ ಚಟುವಟಿಕೆಗಳ ಗೊಂದಲವು ಇರದಂತೆ ನೋಡಿಕೊಳ್ಳಲು ಸಭಾಂಗಣದ ನಿರ್ವಾಹಕ ಮಂಡಲಿಯಿಂದ ಹಿರಿಯರು ಒಪ್ಪಿಗೆಯನ್ನು ಪಡೆದುಕೊಳ್ಳಬೇಕು. ಜ್ಞಾಪಕಾಚರಣೆಯು ಪ್ರಾಮುಖ್ಯವಾದ ಸಂದರ್ಭವಾಗಿರುವುದರಿಂದ, ಜ್ಞಾಪಕಾಚರಣೆಯ ಭಾಷಣಕರ್ತನನ್ನು ಆರಿಸಿಕೊಳ್ಳುವಾಗ ಹಿರಿಯರ ಮಂಡಲಿಯು ತಮ್ಮೊಳಗೆ ಸರದಿಗನುಸಾರ ಭಾಷಣವನ್ನು ಕೊಡುವ ಅಥವಾ ಕೇವಲ ಒಬ್ಬ ಸಹೋದರನನ್ನೇ ಪ್ರತಿ ವರ್ಷ ಆಯ್ಕೆಮಾಡುವ ಬದಲು, ಹೆಚ್ಚು ಅರ್ಹನಾದ ಒಬ್ಬ ಹಿರಿಯನನ್ನು ಆಯ್ಕೆಮಾಡಬೇಕು. ಹಿರಿಯರಲ್ಲಿ ಭಾಷಣ ನೀಡಲು ಸಾಧ್ಯವಾಗುವಂಥ ಅರ್ಹ ಅಭಿಷಿಕ್ತ ಸಹೋದರನೊಬ್ಬನು ಇರುವುದಾದರೆ ಅವನನ್ನು ಆಯ್ಕೆಮಾಡತಕ್ಕದ್ದು.

◼ ಲಭ್ಯವಿರುವ ಹೊಸ ಪ್ರಕಾಶನಗಳು:

ಯೆಹೋವನ ದಿನವನ್ನು ಮನಸ್ಸಿನಲ್ಲಿಟ್ಟವರಾಗಿ ಜೀವಿಸಿರಿ ​—⁠ಇಂಗ್ಲಿಷ್‌

ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಷನ್‌ ಆಫ್‌ ದ ಹೋಲಿ ಸ್ಕ್ರಿಪ್ಚರ್ಸ್‌ನ ಕಪ್ಪು ಮತ್ತು ಕಡುಗೆಂಪು ಬಣ್ಣದ ಸಾಫ್ಟ್‌ ಕವರ್‌ ಪಾಕೆಟ್‌ ಸೈಜ್‌ ಮುದ್ರಣಗಳು ಲಭ್ಯವಿವೆ. ಇದು ಸಾರ್ವಜನಿಕರು ಹಾಗೂ ಪ್ರಚಾರಕರ ಉಪಯೋಗಕ್ಕಾಗಿದೆ. ಹೆಚ್ಚಿನ ಮಾಹಿತಿಗಾಗಿ 2005, ಆಗಸ್ಟ್‌ 1ನೇ ದಿನಾಂಕದ ಪತ್ರವನ್ನು ನೋಡಿರಿ.

ವಾಚ್‌ ಟವರ್‌ ಪಬ್ಲಿಕೇಷನ್ಸ್‌ ಇಂಡೆಕ್ಸ್‌ 2001-2005 ​—⁠ಇಂಗ್ಲಿಷ್‌

ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ ​—⁠ಫ್ರೆಂಚ್‌

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ