ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆ—ನವೆಂಬರ್: ಮಹಾ ಬೋಧಕನಿಂದ ಕಲಿಯಿರಿ ಪುಸ್ತಕವನ್ನು ನೀಡಲಾಗುವುದು. ಮನೆಯವನ ಭಾಷೆಯಲ್ಲಿ ಈ ಪುಸ್ತಕವು ಲಭ್ಯವಿರದಿದ್ದಲ್ಲಿ, ಮಹಾನ್ ಪುರುಷ ಪುಸ್ತಕ ಅಥವಾ ಬೈಬಲ್ ಕಥೆಗಳ ನನ್ನ ಪುಸ್ತಕವನ್ನು ನೀಡಿರಿ. ಇದರೊಂದಿಗೆ ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? ಟ್ರ್ಯಾಕ್ಟ್ ಅನ್ನು ಸಹ ನೀಡಿರಿ. ಡಿಸೆಂಬರ್: ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕವನ್ನು ನೀಡಿರಿ. ಅಥವಾ ಬೈಬಲ್ ಕಥೆಗಳ ನನ್ನ ಪುಸ್ತಕ ಮತ್ತು ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕಗಳು ಸಭೆಯಲ್ಲಿ ಸ್ಟಾಕ್‌ನಲ್ಲಿರುವುದಾದರೆ ಅವುಗಳಲ್ಲಿ ಯಾವುದಾದರೊಂದನ್ನು ಬದಲಿ ನೀಡುವಿಕೆಯಾಗಿ ಉಪಯೋಗಿಸಬಹುದು. ಜನವರಿ: ಹಳದಿ ಬಣ್ಣಕ್ಕೆ ತಿರುಗುವ ಇಲ್ಲವೆ ಬಣ್ಣವನ್ನು ಕಳೆದುಕೊಳ್ಳುವಂಥ ಕಾಗದದ ಮೇಲೆ ಮುದ್ರಿಸಲ್ಪಟ್ಟಿರುವ 192 ಪುಟದ ಯಾವುದೇ ಪುಸ್ತಕವನ್ನು ಅಥವಾ 1991ಕ್ಕೆ ಮುಂಚೆ ಪ್ರಕಟಿಸಲ್ಪಟ್ಟ ಯಾವುದೇ ಪುಸ್ತಕವನ್ನು ನೀಡಬಹುದು. ಇಂಥ ಯಾವುದೇ ಹಳೇ ಪುಸ್ತಕಗಳ ಸ್ಟಾಕ್ ಇಲ್ಲದಿರುವ ಸಭೆಗಳು ಜ್ಞಾನ ಪುಸ್ತಕ ಇಲ್ಲವೆ ಎಚ್ಚರಿಕೆಯಿಂದಿರಿ! ಬ್ರೋಷರನ್ನು ಬಳಸಬಹುದು. ಫೆಬ್ರವರಿ: ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕವನ್ನು ನೀಡಲಾಗುವುದು. ಈ ಪುಸ್ತಕವು ಲಭ್ಯವಿರದಿದ್ದಲ್ಲಿ, ಪ್ರಕಟನೆ ಪರಮಾವಧಿ ಪುಸ್ತಕ ಅಥವಾ ಸ್ಟಾಕ್‌ನಲ್ಲಿ ಹೆಚ್ಚು ಪ್ರಮಾಣದಲ್ಲಿರುವ ಇನ್ನಾವುದೇ ಹಳೇ ಪ್ರಕಾಶನವನ್ನು ನೀಡಬಹುದು.
◼ ಲಭ್ಯವಿರುವ ಹೊಸ ಬ್ರೇಲ್ ಪ್ರಕಾಶನಗಳು:
ಯೆಹೋವನ ದಿನವನ್ನು ಮನಸ್ಸಿನಲ್ಲಿಟ್ಟವರಾಗಿ ಜೀವಿಸಿರಿ —ಇಂಗ್ಲಿಷ್
ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ (29 ಗೀತೆಗಳು) —ಪಂಜಾಬಿ
◼ ಅಮೆರಿಕನ್ ಸಂಕೇತ ಭಾಷೆಯಲ್ಲಿ ಲಭ್ಯವಿರುವ ಹೊಸ ಡಿವಿಡಿ:
ಕುಟುಂಬ ಸಂತೋಷದ ರಹಸ್ಯ