ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಏಪ್ರಿ. - ಜೂನ್
“ಇಂದು ಎಲ್ಲೆಲ್ಲೂ ಶಾಲೆಗಳಲ್ಲಿ ನೈತಿಕತೆಯ ಕೊರತೆ ಇರುವುದರಿಂದ, ನಮ್ಮ ಯುವ ಜನರಿಗೆ ಶುದ್ಧ ನಡತೆಯನ್ನು ಕಾಪಾಡಿಕೊಳ್ಳಲು ಯಾವುದು ಸಹಾಯಮಾಡುವುದು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ, ನಂತರ ಜ್ಞಾನೋಕ್ತಿ 22:3ನ್ನು ಓದಿ. ಪುಟ 16ರಲ್ಲಿರುವ ಲೇಖನವನ್ನು ತೋರಿಸಿರಿ.] ಈ ಲೇಖನವು, ಶಾಲೆಯಲ್ಲಿರುವ ನಮ್ಮ ಮಕ್ಕಳಿಗೆ ಸಹಾಯಮಾಡುವಂಥ ಪ್ರಾಯೋಗಿಕ ಸಲಹೆಗಳನ್ನು ಕೊಡುತ್ತದೆ.”
ಕಾವಲಿನಬುರುಜು ಜೂನ್1
“ನಾವು ಜೀವನದಲ್ಲಿ ಯಾವ ಮಾರ್ಗವನ್ನು ಅನುಸರಿಸಬೇಕು ಎಂಬುದನ್ನು ಆಯ್ಕೆಮಾಡುವ ಸಾಮರ್ಥ್ಯವನ್ನು ದೇವರು ಕೊಟ್ಟಿದ್ದಾನೆ. ಆದರೆ ನಾವು ಸರಿಯಾದ ಆಯ್ಕೆಯನ್ನು ಹೇಗೆ ಮಾಡಬಲ್ಲೆವು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಧರ್ಮೋಪದೇಶಕಾಂಡ 30:20ನ್ನು ಓದಿ, ಪುಟ 26ರಲ್ಲಿರುವ ಲೇಖನವನ್ನು ತೋರಿಸಿರಿ.] ಈ ಲೇಖನವು, ನಾವು ಸರಿಯಾದ ನಿರ್ಣಯವನ್ನು ಮಾಡಿದ್ದೇವೆಂದು ತೋರಿಸಲಿಕ್ಕಾಗಿ ತೆಗೆದುಕೊಳ್ಳಬೇಕಾದ ಮೂರು ಹೆಜ್ಜೆಗಳನ್ನು ವಿವರಿಸುತ್ತದೆ.”
ಎಚ್ಚರ! ಜುಲೈ - ಸೆಪ್ಟೆಂ.
“ಭಯೋತ್ಪಾದನೆಯು ಒಂದು ಹೊಸ ಸಂಗತಿಯೇನಲ್ಲ. ಆದರೆ ಇಂದು ಅದು ಲೋಕವ್ಯಾಪಕವಾಗಿ ಹಬ್ಬಿಕೊಂಡು, ಬಹುಮಟ್ಟಿಗೆ ಪ್ರತಿಯೊಬ್ಬ ವ್ಯಕ್ತಿಯ ಬದುಕನ್ನು ಬಾಧಿಸುತ್ತಿದೆ. ಇದಕ್ಕೆ ಕಾರಣವೇನೆಂದು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಎಚ್ಚರ! ಪತ್ರಿಕೆಯ ಈ ಸಂಚಿಕೆಯು, ಭಯೋತ್ಪಾದನೆಯು ಯಾವಾಗ ಅಂತ್ಯಗೊಳ್ಳುವುದು ಮತ್ತು ದೇವರು ಭೂಮಿಯ ಮೇಲೆ ಹೇಗೆ ನಿಜವಾದ ಶಾಂತಿಯನ್ನು ತರುವನೆಂಬುದನ್ನು ಬೈಬಲಿನಿಂದ ತೋರಿಸುತ್ತದೆ.” ಮೀಕ 4:4ನ್ನು ಓದಿ.
ಕಾವಲಿನಬುರುಜು ಜುಲೈ1
“ನಮಗಿರುವ ಸಮಸ್ಯೆಗಳ ಮಧ್ಯೆಯೂ ಸಂತೋಷವಾಗಿರಲು ಸಾಧ್ಯವೇ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಪತ್ರಿಕೆ, ಜೀವನದಲ್ಲಿ ಬರುವ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ಸಹಾಯಮಾಡುವ ಮಾರ್ಗದರ್ಶನದ ಮೂಲದ ಕಡೆಗೆ ಗಮನಸೆಳೆಯುತ್ತದೆ. ನಿಜವಾದ ನಿರೀಕ್ಷೆಯು ನಮಗೆ ಬೇಕಾದ ಬಲವನ್ನು ಹೇಗೆ ಕೊಡಬಲ್ಲದು ಎಂಬುದರ ಬಗ್ಗೆಯೂ ಇದು ಚರ್ಚಿಸುತ್ತದೆ.” ಪ್ರಕಟನೆ 21:3, 4ನ್ನು ಓದಿ.