ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2006ರ ಜೂನ್ 26ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಮೌಖಿಕವಾಗಿ ಪರಿಗಣಿಸಲಾಗುವುದು. 2006ರ ಮೇ 1ರಿಂದ ಜೂನ್ 26ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲಾಧಾರಿತವಾದ 30 ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು. [ಸೂಚನೆ: ಪ್ರಶ್ನೆಗಳ ಬಳಿಕ ರೆಫರೆನ್ಸ್ಗಳು ಇಲ್ಲದಿರುವಲ್ಲಿ, ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ ನೀವು ನಿಮ್ಮ ಸ್ವಂತ ಸಂಶೋಧನೆಯನ್ನು ಮಾಡುವ ಆವಶ್ಯಕತೆಯಿರುವುದು.—ಶೂಶ್ರೂಷಾ ಶಾಲೆ, ಪುಟ 36-7ನ್ನು ನೋಡಿರಿ.]
ಭಾಷಣ ಗುಣಗಳು
1. ಧ್ವನಿಯ ಏರಿಳಿತ ಅಂದರೇನು, ಮತ್ತು ಇದು ಪ್ರಾಮುಖ್ಯವೇಕೆ? [be-KA ಪು. 111, ಚೌಕಗಳು]
2. ಒಂದು ಭಾಷಣವನ್ನು ನೀಡುವಾಗ ನಾವು ನಮ್ಮ ಮಾತಿನ ವೇಗವನ್ನು ಹೇಗೆ ಬದಲಾಯಿಸಸಾಧ್ಯವಿದೆ? [be-KA ಪು. 112 ಪ್ಯಾರ. 3-ಪು. 113 ಪ್ಯಾರ. 1, ಚೌಕ]
3. ನಮ್ಮ ಭಾಷಣ ವಿಷಯದ ಬಗ್ಗೆ ಉತ್ಸಾಹವನ್ನು ನಾವು ಹೇಗೆ ಬೆಳೆಸಸಾಧ್ಯವಿದೆ, ಮತ್ತು ಇದು ಪ್ರಾಮುಖ್ಯವೇಕೆ? [be-KA ಪು. 115 ಪ್ಯಾರ. 1-ಪು. 116 ಪ್ಯಾರ. 2, ಚೌಕಗಳು]
4. ನಾವು ಇತರರಿಗೆ ಬೋಧಿಸುವಾಗ ಹಾರ್ದಿಕತೆ ಎಂಬ ಗುಣವು ಏಕೆ ಅವಶ್ಯ, ಮತ್ತು ಇದನ್ನು ವ್ಯಕ್ತಪಡಿಸಲು ಯಾವುದು ನಮಗೆ ಸಹಾಯಮಾಡಸಾಧ್ಯವಿದೆ? [be-KA ಪು. 118 ಪ್ಯಾರ. 2-ಪು. 119 ಪ್ಯಾರ. 5]
5. ಸಂವಾದದಲ್ಲಿ ಭಾವಾಭಿನಯಗಳ ಮತ್ತು ಮುಖಭಾವಗಳ ಪ್ರಾಮುಖ್ಯವನ್ನು ವಿವರಿಸಿರಿ. (ಮತ್ತಾ. 12:48, 49) [be-KA ಪು. 121, ಚೌಕಗಳು]
ನೇಮಕ ನಂ. 1
6. ಯೋಬನ ಪುಸ್ತಕವು ಹೇಗೆ ಯೆಹೋವನನ್ನು ಘನತೆಗೇರಿಸಿ, ಆತನ ನೀತಿಯ ಜೀವನಮಟ್ಟಗಳನ್ನು ಎತ್ತಿಹಿಡಿಯುತ್ತದೆ? [bsi06-KA ಪು. 13 ಪ್ಯಾರ. 39, 41]
7. ಕೀರ್ತನೆಗಳ ವಿಶ್ವಾಸಾರ್ಹತೆಗೆ ಯಾವುದು ರುಜುವಾತನ್ನು ನೀಡುತ್ತದೆ? [bsi06-KA ಪು. 16 ಪ್ಯಾರ. 10-ಪು. 17 ಪ್ಯಾರ. 11]
8. ಜ್ಞಾನೋಕ್ತಿ 13:16ರಲ್ಲಿ ಜಾಣನು ಎಂದು ಸೂಚಿಸುವಾಗ, ಅದು ಒಬ್ಬ ಕುತಂತ್ರಿಯನ್ನು ವರ್ಣಿಸುತ್ತಿದೆಯೊ? ವಿವರಿಸಿ. [w04-KA 7/15 ಪು. 28 ಪ್ಯಾರ. 3-4]
9. ಪ್ರವಿತ್ರಾತ್ಮವು ಹೇಗೆ ಸಹಾಯಕವಾಗಿ ಕಾರ್ಯನಡಿಸುತ್ತದೆ, ಮತ್ತು ಇದನ್ನು ತಿಳಿಯುವುದು ನಮಗೆ ಏನು ಮಾಡುವಂತೆ ಉತ್ತೇಜಿಸುತ್ತದೆ? (ಯೋಹಾನ 14:25, 26) [be-KA ಪು. 19 ಪ್ಯಾರ. 3-4]
10. ಯಾವ ಸಾಮಾನ್ಯ ಅರ್ಥದಲ್ಲಿ ಯೇಸು ಬರುತ್ತಾನೆ, ಮತ್ತು ಮತ್ತಾಯ 16:28ರಲ್ಲಿ ದಾಖಲಿಸಲ್ಪಟ್ಟಿರುವ ಪ್ರಕಾರ ಯಾವ ರೀತಿಯ ‘ಬರುವಿಕೆಗೆ’ ಯೇಸು ಸೂಚಿಸುತ್ತಿದ್ದನು? [w04-KA 3/1 ಪು. 16 ಚೌಕ]
ವಾರದ ಬೈಬಲ್ ವಾಚನ
11. ಯೋಬ 42:1-6ರಲ್ಲಿ ತಿಳಿಸಲ್ಪಟ್ಟ ಪ್ರಕಾರ, ಯೋಬನು ಯೆಹೋವನಿಗೆ ನೀಡಿದ ಪ್ರತ್ಯುತ್ತರದಿಂದ ನಾವು ಏನನ್ನು ಕಲಿಯಸಾಧ್ಯವಿದೆ?
12. ಜನಾಂಗಗಳವರು ಯಾವ ‘ವ್ಯರ್ಥಕಾರ್ಯದ’ ಕುರಿತು ಯೋಚಿಸುತ್ತಾರೆ? (ಕೀರ್ತ. 2:1, 2)
13. ಯಾವ ಅಸ್ತಿವಾರಗಳು ಕೆಡವಲ್ಪಡುತ್ತವೆ? (ಕೀರ್ತ. 11:3)
14. ಒಬ್ಬ ಅಹಂಕಾರಿಗೆ ಚೆನ್ನಾಗಿ ಮುಯ್ಯಿತೀರಿಸಲ್ಪಡುವುದು ಹೇಗೆ? (ಕೀರ್ತ. 31:23)
15. ಕೀರ್ತನೆ 40ನೇ ಅಧ್ಯಾಯದಲ್ಲಿ, ನಮ್ಮ ಪಾಪಪೂರ್ಣ ಶರೀರದ ಅಪರಿಪೂರ್ಣತೆಯನ್ನು ಮತ್ತು ಈ ವಿಷಯಗಳ ವ್ಯವಸ್ಥೆಯ ಅನೇಕ ವಿಪತ್ತುಗಳನ್ನು ನಿಭಾಯಿಸಲು ಸಹಾಯಮಾಡುವ ಯಾವ ಸಾಂತ್ವನವನ್ನು ನಾವು ಪಡೆದುಕೊಳ್ಳಸಾಧ್ಯವಿದೆ? (ಕೀರ್ತ. 40:1, 2, 5, 12)