ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಕಾವಲಿನಬುರುಜು ಮೇ15
“ಈ ಪ್ರೇರಿತ ವಚನದಲ್ಲಿ ವಿವರಿಸಲ್ಪಟ್ಟಿರುವ ಪರಿಸ್ಥಿತಿಗಳಲ್ಲಿ ಜೀವಿಸುವುದು ಆನಂದಕರವಾಗಿರಬಲ್ಲದು ಎಂದು ನೀವೆಣಿಸುತ್ತೀರೋ? [2 ಪೇತ್ರ 3:13ನ್ನು ಓದಿರಿ. ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಇಲ್ಲಿ ತಿಳಿಸಲ್ಪಟ್ಟಿರುವ ನೂತನಾಕಾಶಮಂಡಲ ಮತ್ತು ನೂತನಭೂಮಂಡಲಗಳು ಏನಾಗಿವೆ ಎಂದು ಈ ಪತ್ರಿಕೆಯು ವಿವರಿಸುತ್ತದೆ. ಭೂಮಿಯ ಕಡೆಗಿನ ತನ್ನ ಉದ್ದೇಶವನ್ನು ದೇವರು ಪೂರೈಸುವಾಗ ಜೀವನವು ಎಷ್ಟು ಭಿನ್ನವಾಗಿರುತ್ತದೆ ಎಂಬುದನ್ನು ಸಹ ಈ ಪತ್ರಿಕೆಯು ವರ್ಣಿಸುತ್ತದೆ.”
ಎಚ್ಚರ! ಏಪ್ರಿ. - ಜೂನ್
“ಮುಂದಿನ 20 ಅಥವಾ 30 ವರುಷಗಳಲ್ಲಿ ಈ ಲೋಕವು ಹೇಗಿರುವುದೆಂದು ನೀವೆಂದಾದರೂ ವಿಸ್ಮಯಗೊಂಡಿದ್ದೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಕೀರ್ತನೆ 119:105ನ್ನು ಓದಿರಿ.] ಮಾನವಕುಲಕ್ಕೆ ಭವಿಷ್ಯತ್ತಿನಲ್ಲಿ ಏನು ಕಾದಿದೆ ಎಂಬುದನ್ನು ನಾವು ಗ್ರಹಿಸಸಾಧ್ಯವಾಗುವಂತೆ ಬೈಬಲ್ ನಮ್ಮ ಹಾದಿಯ ಮೇಲೆ ಬೆಳಕು ಚೆಲ್ಲುತ್ತದೆ. ಕಾಲಪ್ರವಾಹದಲ್ಲಿ ನಾವು ಎಲ್ಲಿದ್ದೇವೆ ಮತ್ತು ಉಜ್ವಲ ಭವಿಷ್ಯತ್ತನ್ನು ನಾವೇಕೆ ಎದುರುನೋಡಬಲ್ಲೆವು ಎಂಬುದನ್ನು ತೋರಿಸುವ ಪ್ರವಾದನೆಗಳನ್ನು ಈ ಪತ್ರಿಕೆಯು ಪರಿಶೀಲಿಸುತ್ತದೆ.”
ಕಾವಲಿನಬುರುಜು ಜೂನ್1
“ಈ ಪುರಾತನ ನಿಯಮದಲ್ಲಿ ನೋಡುವಂತೆ, ಹೆಚ್ಚಿನ ಸಂಸ್ಕೃತಿಗಳಲ್ಲಿ ಹಿರಿಯರು ಗೌರವದಿಂದ ಉಪಚರಿಸಲ್ಪಡುವ ಒಂದು ಸಮಯವಿತ್ತು. [ಯಾಜಕಕಾಂಡ 19:32ನ್ನು ಓದಿರಿ.] ಇಂತಹ ಗೌರವವು ಇಂದು ಸಹ ಸಾಮಾನ್ಯವಾಗಿ ಕಾಣಸಿಗುತ್ತದೆಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ದೇವರು ಹಿರಿಯರ ಕುರಿತು ಹೇಗೆ ಕಾಳಜಿವಹಿಸುತ್ತಾನೆ ಮತ್ತು ನಾವು ಕೂಡ ಅವರ ಕುರಿತು ಹೇಗೆ ಕಾಳಜಿವಹಿಸಬಲ್ಲೆವು ಎಂಬ ವಿಷಯವನ್ನು ಈ ಪತ್ರಿಕೆಯು ಪರಿಗಣಿಸುತ್ತದೆ.”
ಎಚ್ಚರ! ಏಪ್ರಿ. - ಜೂನ್
“ಲೋಕದ ಹದಗೆಡುತ್ತಿರುವ ಪರಿಸ್ಥಿತಿಗಳು ಮಾನವಕುಲಕ್ಕೆ ಯಾವ ಅರ್ಥದಲ್ಲಿವೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ 2 ತಿಮೊಥೆಯ 3:1-5ನ್ನು ಓದಿರಿ.] ಮಾನವಕುಲಕ್ಕೆ ಭವಿಷ್ಯತ್ತಿನಲ್ಲಿ ಏನು ಕಾದಿದೆ ಎಂಬುದನ್ನು ಈ ಪತ್ರಿಕೆಯು ಪರಿಶೀಲಿಸುತ್ತದೆ.” ಪುಟ 9ನ್ನು ತೆರೆದು, “ಮುಂದಿರುವ ಹಾದಿ” ಎಂಬ ಉಪಶೀರ್ಷಿಕೆಯ ಕೆಳಗಿರುವ ಮಾಹಿತಿಯನ್ನು ತೋರಿಸಿರಿ.