ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆ—ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಬಿಡಿ ಪ್ರತಿಗಳನ್ನು ನೀಡಿರಿ. ಜ್ಞಾಪಕಾಚರಣೆಗೆ ಮತ್ತು/ಅಥವಾ ಇತರ ದೇವಪ್ರಭುತ್ವಾತ್ಮಕ ಘಟನೆಗಳಿಗೆ ಹಾಜರಾದರೂ, ಸಭೆಯೊಂದಿಗೆ ಸಕ್ರಿಯವಾಗಿ ಸಹವಾಸಿಸದಿರುವವರನ್ನು ಸೇರಿಸಿ ಎಲ್ಲ ಆಸಕ್ತ ಜನರನ್ನು ಪುನರ್ಭೇಟಿ ಮಾಡುವಾಗ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಹೊಸ ಪುಸ್ತಕವನ್ನು ನೀಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ಆ ಪುಸ್ತಕದಿಂದ ಒಂದು ಮನೆ ಬೈಬಲ್ ಅಧ್ಯಯನವನ್ನು ಪ್ರಾರಂಭಿಸುವುದೇ ಅದರ ಉದ್ದೇಶವಾಗಿರಬೇಕು. ಜೂನ್: ಮಹಾ ಬೋಧಕನಿಂದ ಕಲಿಯಿರಿa ಪುಸ್ತಕವನ್ನು ನೀಡಿರಿ. ಮನೆಯವರ ಭಾಷೆಯಲ್ಲಿ ಈ ಪ್ರಕಾಶನವು ಲಭ್ಯವಿರದಿದ್ದಲ್ಲಿ ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಅಥವಾ ಬೈಬಲ್ ಕಥೆಗಳ ನನ್ನ ಪುಸ್ತಕವನ್ನು ನೀಡಿರಿ. ಜುಲೈ ಮತ್ತು ಆಗಸ್ಟ್: 32-ಪುಟಗಳ ಮುಂದಿನ ಯಾವುದೇ ಬ್ರೋಷರ್‌ಗಳನ್ನು ಉಪಯೋಗಿಸಬಹುದು: ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! ಪರದೈಸನ್ನು ತರಲಿರುವ ಸರಕಾರ,b “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ನೀವು ತ್ರಯೈಕ್ಯವನ್ನು ನಂಬ ಬೇಕೋ?, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ಜೀವಿತದ ಉದ್ದೇಶವೇನು?, ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಮತ್ತು ಎಚ್ಚರಿಕೆಯಿಂದಿರಿ! ಕೆಲವು ಸ್ಥಳಗಳಲ್ಲಿ, ಈ ಮುಂದಿನ ಬ್ರೋಷರ್‌ಗಳನ್ನು ನೀಡುವುದು ಸೂಕ್ತವಾಗಿರಬಹುದು: ಸಕಲ ಜನರಿಗಾಗಿರುವ ಒಂದು ಗ್ರಂಥ, ಯುದ್ಧರಹಿತವಾದ ಒಂದು ಲೋಕವು ಎಂದಾದರೂ ಇರುವುದೊ?c ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ಸತ್ತವರ ಆತ್ಮಗಳು—ಅವು ನಿಮಗೆ ಸಹಾಯಮಾಡಬಲ್ಲವೊ ಹಾನಿಮಾಡಬಲ್ಲವೊ?, ಅವು ನಿಜವಾಗಿಯೂ ಅಸ್ತಿತ್ವದಲ್ಲಿವೆಯೊ?,d ಸಂತೃಪ್ತಿಕರವಾದ ಜೀವನ—ಲಭ್ಯವಾಗುವ ವಿಧ.
◼ ಜುಲೈ ತಿಂಗಳಿನಲ್ಲಿ ಐದು ವಾರಾಂತ್ಯಗಳು ಇರುವುದರಿಂದ, ಇದು ಆಕ್ಸಿಲಿಯರಿ ಪಯನೀಯರರಾಗಿ ಸೇವೆಮಾಡಲು ಅತ್ಯುತ್ತಮ ತಿಂಗಳಾಗಿರುವುದು.
◼ ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವರಿಂದ ನೇಮಿಸಲ್ಪಟ್ಟವರು ಸಭೆಯ ಅಕೌಂಟ್ಸ್ ಅನ್ನು ಜೂನ್ 1ರಂದು ಅಥವಾ ಆದಷ್ಟು ಬೇಗನೆ ಆಡಿಟ್ ಮಾಡಬೇಕು. ದುರಸ್ತು ಅಥವಾ ನಿರ್ಮಾಣ ಕೆಲಸಕ್ಕಾಗಿ ಪ್ರತ್ಯೇಕವಾದ ಒಂದು ಅಕೌಂಟನ್ನು ಇಟ್ಟಿರುವುದಾದರೆ, ಅದನ್ನು ಸಹ ಆಡಿಟ್ ಮಾಡಲು ಏರ್ಪಾಡು ಮಾಡಿರಿ. ಆಡಿಟ್ ಮುಗಿದ ನಂತರ, ಮುಂದಿನ ಅಕೌಂಟ್ಸ್ ವರದಿಯೊಂದಿಗೆ ಇದರ ಕುರಿತು ಸಭೆಗೆ ಒಂದು ಪ್ರಕಟನೆಯನ್ನು ಮಾಡಬೇಕು.
◼ ರೆಗ್ಯುಲರ್ ಪಯನೀಯರ್ ಸೇವೆಯನ್ನು ಆರಂಭಿಸಲು ವಿನಂತಿಸಿಕೊಂಡಿರುವ ತಾರೀಖಿಗಿಂತ ಕಡಿಮೆಪಕ್ಷ 30 ದಿವಸಗಳ ಮುಂಚೆ ಅದರ ಅರ್ಜಿಗಳನ್ನು ಬ್ರಾಂಚ್ ಆಫೀಸಿಗೆ ಕಳುಹಿಸಬೇಕಾಗಿದೆ. ಈ ಅರ್ಜಿಗಳನ್ನು ಬ್ರಾಂಚ್ ಆಫೀಸಿಗೆ ಕಳುಹಿಸುವ ಮುನ್ನ, ಅವನ್ನು ಪೂರ್ಣವಾಗಿ ಭರ್ತಿಮಾಡಲಾಗಿದೆಯೊ ಎಂಬುದನ್ನು ಸಭಾ ಸೆಕ್ರಿಟರಿಯು ಪರಿಶೀಲಿಸಬೇಕು. ಅರ್ಜಿದಾರರಿಗೆ ತಮ್ಮ ದೀಕ್ಷಾಸ್ನಾನದ ಸರಿಯಾದ ತಾರೀಖು ಜ್ಞಾಪಕವಿಲ್ಲದಿರುವಲ್ಲಿ, ಅವರು ಅಂದಾಜಿಗನುಸಾರ ಹಾಕಿ, ಅದರ ಒಂದು ದಾಖಲೆಯನ್ನು ಇಡಬೇಕು. ಸೆಕ್ರಿಟರಿಯು ಈ ತಾರೀಖನ್ನು ಕಾಂಗ್ರಿಗೇಷನ್ ಪಬ್ಲಿಷರ್ ರೆಕಾರ್ಡ್ (S-21) ಕಾರ್ಡ್‌ನಲ್ಲಿ ದಾಖಲಿಸಬೇಕು.
[ಪಾದಟಿಪ್ಪಣಿಗಳು]
a ಕನ್ನಡದಲ್ಲಿ ಲಭ್ಯವಿಲ್ಲ.
b ಕನ್ನಡದಲ್ಲಿ ಲಭ್ಯವಿಲ್ಲ.
c ಕನ್ನಡದಲ್ಲಿ ಲಭ್ಯವಿಲ್ಲ.
d ಕನ್ನಡದಲ್ಲಿ ಲಭ್ಯವಿಲ್ಲ.