ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 3/06 ಪು. 3
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 2006 ನಮ್ಮ ರಾಜ್ಯದ ಸೇವೆ
2006 ನಮ್ಮ ರಾಜ್ಯದ ಸೇವೆ
km 3/06 ಪು. 3

ಪ್ರಕಟನೆಗಳು

◼ ಸಾಹಿತ್ಯ ನೀಡುವಿಕೆ​—⁠ಮಾರ್ಚ್‌: ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕವನ್ನು ನೀಡಿರಿ. ಬೈಬಲ್‌ ಅಧ್ಯಯನಗಳನ್ನು ಆರಂಭಿಸಲು ವಿಶೇಷ ಪ್ರಯತ್ನವನ್ನು ಮಾಡಿರಿ. ಈ ಪುಸ್ತಕದೊಂದಿಗೆ, ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? ಟ್ರ್ಯಾಕ್ಟನ್ನು ನೀಡಿರಿ. ಏಪ್ರಿಲ್‌ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಬಿಡಿ ಪತ್ರಿಕೆಗಳನ್ನು ನೀಡಿರಿ. ಜ್ಞಾಪಕಾಚರಣೆಗೆ ಮತ್ತು/ಅಥವಾ ಇತರ ದೇವಪ್ರಭುತ್ವಾತ್ಮಕ ಘಟನೆಗಳಿಗೆ ಹಾಜರಾದರೂ, ಸಭೆಯೊಂದಿಗೆ ಸಕ್ರಿಯವಾಗಿ ಸಹವಾಸಿಸದಿರುವವರನ್ನು ಸೇರಿಸಿ ಎಲ್ಲ ಆಸಕ್ತ ಜನರನ್ನು ಪುನರ್ಭೇಟಿ ಮಾಡುವಾಗ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಹೊಸ ಪುಸ್ತಕವನ್ನು ನೀಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ಆ ಪುಸ್ತಕದಿಂದ ಒಂದು ಮನೆ ಬೈಬಲ್‌ ಅಧ್ಯಯನವನ್ನು ಪ್ರಾರಂಭಿಸುವುದೇ ಅದರ ಉದ್ದೇಶವಾಗಿರಬೇಕು. ಜೂನ್‌: ಮಹಾ ಬೋಧಕನಿಂದ ಕಲಿಯಿರಿa ಪುಸ್ತಕವನ್ನು ನೀಡಿರಿ. ಮನೆಯವರ ಭಾಷೆಯಲ್ಲಿ ಈ ಪ್ರಕಾಶನವು ಲಭ್ಯವಿರದಿದ್ದಲ್ಲಿ ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ಅಥವಾ ಬೈಬಲ್‌ ಕಥೆಗಳ ನನ್ನ ಪುಸ್ತಕವನ್ನು ನೀಡಿರಿ.

◼ ಏಪ್ರಿಲ್‌ ತಿಂಗಳಿನಲ್ಲಿ ಐದು ವಾರಾಂತ್ಯಗಳಿರುವ ಕಾರಣ ಆಕ್ಸಿಲಿಯರಿ ಪಯನೀಯರ್‌ ಸೇವೆಯನ್ನು ಮಾಡಲು ಇದೊಂದು ಅತ್ಯುತ್ತಮ ತಿಂಗಳಾಗಿರುವುದು.

◼ ಇಸವಿ 2006, ಏಪ್ರಿಲ್‌ 12ರ ಬುಧವಾರದಂದು ಜ್ಞಾಪಕಾಚರಣೆಯು ನಡೆಸಲ್ಪಡುವುದು. ಸಾಮಾನ್ಯವಾಗಿ ನಿಮ್ಮ ಸಭೆಯ ಕೂಟಗಳು ಬುಧವಾರದಂದು ನಡೆಸಲ್ಪಡುವುದಾದರೆ, ಇದನ್ನು ರಾಜ್ಯ ಸಭಾಗೃಹವು ಲಭ್ಯವಿರುವ ವಾರದ ಮತ್ತೊಂದು ದಿನದಲ್ಲಿ ನಡೆಸಲು ಏರ್ಪಾಡು ಮಾಡಬೇಕು. ಒಂದುವೇಳೆ ಇದು ಸಾಧ್ಯವಿಲ್ಲದಿರುವಲ್ಲಿ ಮತ್ತು ನಿಮ್ಮ ಸೇವಾ ಕೂಟವು ಬಾಧಿಸಲ್ಪಡುವಲ್ಲಿ, ನಿಮ್ಮ ಸಭೆಗೆ ನಿರ್ದಿಷ್ಟವಾಗಿ ಅನ್ವಯಿಸುವಂಥ ಭಾಗಗಳನ್ನು ಮತ್ತೊಂದು ಸೇವಾ ಕೂಟದೊಂದಿಗೆ ಸೇರಿಸಬಹುದು.

◼ ಜ್ಞಾಪಕಾಚರಣೆಯ ಆಮಂತ್ರಣಪತ್ರಗಳಲ್ಲಿ ಜ್ಞಾಪಕಾಚರಣೆಯ ತಾರೀಖು, ಸಮಯ ಮತ್ತು ವಿಳಾಸವು ಮುದ್ರಿಸಲ್ಪಟ್ಟಿದೆ ಅಥವಾ ನೀಟಾಗಿ ಒಳಗೂಡಿಸಲ್ಪಟ್ಟಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಮುದ್ರಿಸಲ್ಪಡುವ ಮಾಹಿತಿಯು ಆ ಪತ್ರದ ಇನ್ನೊಂದು ಕಡೆಯಲ್ಲಿ ಕಾಣುವಂಥದ್ದಾಗಿರಬಾರದು, ಆದರೆ ಚಿತ್ತು ಆಗದೆ ಸ್ಪಷ್ಟವಾಗಿರಬೇಕು.

◼ ಸಭೆಗಳು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಸಂಚಿಕೆಗಳನ್ನು ಪಡೆದುಕೊಂಡ ಕೂಡಲೆ ಅವನ್ನು ಪ್ರಚಾರಕರಿಗೆ ಲಭ್ಯಗೊಳಿಸಬೇಕು. ಹೀಗೆ ಮಾಡುವುದರಿಂದ ಪ್ರಚಾರಕರು ಅವನ್ನು ಕ್ಷೇತ್ರ ಸೇವೆಯಲ್ಲಿ ನೀಡುವ ಮೊದಲು ಅವುಗಳಲ್ಲಿರುವ ವಿಷಯಗಳೊಂದಿಗೆ ಪರಿಚಿತರಾಗಿರಲು ಸಾಧ್ಯವಾಗುವುದು. ನಮ್ಮ ರಾಜ್ಯದ ಸೇವೆಯನ್ನು ಸಹ ದೊರೆತೊಡನೇ ಪ್ರಚಾರಕರಿಗೆ ಲಭ್ಯಗೊಳಿಸಬೇಕು. ಇದನ್ನು ಸಭಾ ಪುಸ್ತಕ ಅಧ್ಯಯನದ ಏರ್ಪಾಡಿನ ಮೂಲಕವೂ ವಿತರಿಸಬಹುದು.

◼ ಮೇ ತಿಂಗಳಿನ ಒಂದು ಸೇವಾ ಕೂಟದಲ್ಲಿ ನೋಹನು ದೇವರೊಂದಿಗೆ ನಡೆದನು (ಇಂಗ್ಲಿಷ್‌) ಎಂಬ ವಿಡಿಯೋ ಕಾರ್ಯಕ್ರಮವು ಪರಿಗಣಿಸಲ್ಪಡುವುದು. ಈ ವಿಡಿಯೋ ಪ್ರತಿಗಳ ಅವಶ್ಯವಿದ್ದಲ್ಲಿ, ಸಭೆಯ ಮೂಲಕ ಆದಷ್ಟು ಬೇಗನೆ ವಿನಂತಿಸಬೇಕು.

◼ ಸಾಹಿತ್ಯಕ್ಕಾಗಿರುವ ಪ್ರಚಾರಕರ ವೈಯಕ್ತಿಕ ವಿನಂತಿಗಳನ್ನು ಬ್ರಾಂಚ್‌ ಆಫೀಸು ಸ್ವೀಕರಿಸುವುದಿಲ್ಲ. ಸಾಹಿತ್ಯಕ್ಕಾಗಿ ಸಭೆಯ ಮಾಸಿಕ ವಿನಂತಿಯನ್ನು ಬ್ರಾಂಚ್‌ ಆಫೀಸ್‌ಗೆ ಕಳುಹಿಸುವ ಮುಂಚೆ, ಪ್ರತಿ ತಿಂಗಳು ಒಂದು ಪ್ರಕಟನೆಯನ್ನು ಮಾಡುವಂತೆ ಅಧ್ಯಕ್ಷ ಮೇಲ್ವಿಚಾರಕನು ಏರ್ಪಡಿಸಬೇಕು. ಇದು, ವೈಯಕ್ತಿಕ ಸಾಹಿತ್ಯ ಐಟಮ್‌ಗಳನ್ನು ಪಡೆದುಕೊಳ್ಳಲು ಆಸಕ್ತರಿರುವವರೆಲ್ಲರೂ ಸಾಹಿತ್ಯವನ್ನು ನಿರ್ವಹಿಸುವ ಸಹೋದರನಿಗೆ ತಮ್ಮ ವಿನಂತಿಯನ್ನು ತಿಳಿಸುವಂತೆ ಸಹಾಯಮಾಡುವುದು. ಯಾವ ಪ್ರಕಾಶನಗಳು ವಿಶೇಷ ವಿನಂತಿಯ ಐಟಮ್‌ಗಳಾಗಿವೆ ಎಂಬುದನ್ನು ದಯವಿಟ್ಟು ಮನಸ್ಸಿನಲ್ಲಿಡಿರಿ.

◼ ಪುನಃ ಲಭ್ಯವಿರುವ ಪ್ರಕಾಶನಗಳು:

ಸತ್ತವರ ಆತ್ಮಗಳು​—⁠ಅವು ನಿಮಗೆ ಸಹಾಯಮಾಡಬಲ್ಲವೊ ಹಾನಿಮಾಡಬಲ್ಲವೊ? ಅವು ನಿಜವಾಗಿಯೂ ಅಸ್ತಿತ್ವದಲ್ಲಿವೆಯೊ? ​—⁠ಇಂಗ್ಲಿಷ್‌

◼ ಇಂಗ್ಲಿಷ್‌ನಲ್ಲಿ ಪುನಃ ಲಭ್ಯವಿರುವ ಸಂಶೋಧನಾ ಪ್ರಕಾಶನಗಳು:

“ಎಲ್ಲಾ ಶಾಸ್ತ್ರವಚನವು ದೇವರಿಂದ ಪ್ರೇರಿತವಾಗಿದೆ ಮತ್ತು ಪ್ರಯೋಜನದಾಯಕವಾಗಿದೆ”

ಶಾಸ್ತ್ರಗಳ ಒಳನೋಟ

ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ​—⁠ರೆಫರೆನ್ಸ್‌ಗಳೊಂದಿಗೆ (Rbi8)

ಶಾಸ್ತ್ರಗಳಿಂದ ತರ್ಕಿಸುವುದು

ವಾಚ್‌ ಟವರ್‌ ಪಬ್ಲಿಕೇಷನ್ಸ್‌ ಇಂಡೆಕ್ಸ್‌ 1986-2000

ಈ ಮೇಲಿನವು ವಿಶೇಷ ವಿನಂತಿಯ ಐಟಮ್‌ಗಳಾಗಿವೆ ಮತ್ತು ಪ್ರಚಾರಕರು ನಿರ್ದಿಷ್ಟ ವಿನಂತಿಗಳನ್ನು ಮಾಡುವಾಗ ಮಾತ್ರ ಅವುಗಳನ್ನು ಆರ್ಡರ್‌ ಮಾಡಬೇಕು ಎಂಬುದನ್ನು ದಯವಿಟ್ಟು ಗಮನದಲ್ಲಿಡಿ. ಇವುಗಳಲ್ಲಿ ಯಾವುದನ್ನೇ ವಿನಂತಿಮಾಡುವವರಿಗೆ ನಿಜವಾಗಿ ಅದರ ಅಗತ್ಯವಿದೆ ಎಂಬುದನ್ನು ಖಚಿತಪಡಿಸಲಿಕ್ಕಾಗಿ ಸರ್ವಿಸ್‌ ಕಮಿಟಿಯು ಅವರೊಂದಿಗೆ ವಿಚಾರಿಸಿ ನೋಡಬೇಕು ಮತ್ತು ಲಿಟರೇಚರ್‌ ರಿಕ್ವೆಸ್ಟ್‌ ಫಾರ್ಮ್‌ ಅನ್ನು ಸೊಸೈಟಿಗೆ ಕಳುಹಿಸುವ ಮುನ್ನ ಅದರೊಂದಿಗೆ ಸಂಕ್ಷಿಪ್ತ ವಿವರವನ್ನು ಲಗತ್ತಿಸಬೇಕು. ಇಂಥ ವಿವರಗಳಿರದ ವಿನಂತಿಗಳು ಬರುವಲ್ಲಿ ಅವುಗಳು ಪೂರೈಸಲ್ಪಡದಿರಬಹುದು

◼ ಲಭ್ಯವಿರುವ ಹೊಸ ಕಾಂಪ್ಯಾಕ್ಟ್‌ ಡಿಸ್ಕ್‌ಗಳು:

ನಮ್ಮ ಆತ್ಮಿಕ ಪರಂಪರೆಯನ್ನು ಗಣ್ಯಮಾಡುವುದು (cdoh) ​—⁠ತಮಿಳು

ನಮ್ಮ ದಿನಕ್ಕಾಗಿ ಎಚ್ಚರಿಕೆಯ ಉದಾಹರಣೆಗಳು (cdwx) ​—⁠ತಮಿಳು, ಮಲಯಾಳಂ, ಹಿಂದಿ

ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?(cdrq) ​—⁠ತಮಿಳು

◼ ಅಮೆರಿಕನ್‌ ಸಂಜ್ಞಾ ಭಾಷೆಯಲ್ಲಿ ಲಭ್ಯವಿರುವ ಹೊಸ ಡಿವಿಡಿಗಳು:

ನಿತ್ಯಜೀವಕ್ಕೆ ನಡೆಸುವ ಜ್ಞಾನ (dvkl-ASL)

ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? (dvbh-ASL)

[ಪಾದಟಿಪ್ಪಣಿ]

a ಕನ್ನಡದಲ್ಲಿ ಲಭ್ಯವಿಲ್ಲ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ