ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 2/06 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 2006 ನಮ್ಮ ರಾಜ್ಯದ ಸೇವೆ
2006 ನಮ್ಮ ರಾಜ್ಯದ ಸೇವೆ
km 2/06 ಪು. 7

ಪ್ರಕಟನೆಗಳು

◼ ಸಾಹಿತ್ಯ ನೀಡುವಿಕೆ​—⁠ಫೆಬ್ರವರಿ: ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕವನ್ನು ನೀಡಲಾಗುವುದು. ಈ ಪ್ರಕಾಶನವನ್ನು ಹೊಂದಿರದ ಸಭೆಗಳು ಪ್ರಕಟನೆ ಪರಮಾವಧಿ ಪುಸ್ತಕ ಅಥವಾ ಸ್ಟಾಕ್‌ನಲ್ಲಿ ಹೆಚ್ಚು ಪ್ರಮಾಣದಲ್ಲಿರುವ ಇನ್ನಾವುದೇ ಹಳೇ ಪ್ರಕಾಶನವನ್ನು ನೀಡಬಹುದು. ಮಾರ್ಚ್‌: ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕವನ್ನು ನೀಡಿರಿ. ಬೈಬಲ್‌ ಅಧ್ಯಯನಗಳನ್ನು ಆರಂಭಿಸಲು ವಿಶೇಷ ಪ್ರಯತ್ನವನ್ನು ಮಾಡಿರಿ. ಏಪ್ರಿಲ್‌ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಬಿಡಿ ಪತ್ರಿಕೆಗಳನ್ನು ನೀಡಿರಿ. ಜ್ಞಾಪಕಾಚರಣೆಗೆ ಮತ್ತು/ಅಥವಾ ಇತರ ದೇವಪ್ರಭುತ್ವಾತ್ಮಕ ಘಟನೆಗಳಿಗೆ ಹಾಜರಾದರೂ, ಸಭೆಯೊಂದಿಗೆ ಸಕ್ರಿಯವಾಗಿ ಸಹವಾಸಿಸದಿರುವವರನ್ನು ಸೇರಿಸಿ ಎಲ್ಲ ಆಸಕ್ತ ಜನರನ್ನು ಪುನರ್ಭೇಟಿ ಮಾಡುವಾಗ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಹೊಸ ಪುಸ್ತಕವನ್ನು ನೀಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ಆ ಪುಸ್ತಕದಿಂದ ಒಂದು ಮನೆ ಬೈಬಲ್‌ ಅಧ್ಯಯನವನ್ನು ಪ್ರಾರಂಭಿಸುವುದೇ ಅದರ ಉದ್ದೇಶವಾಗಿರಬೇಕು.

◼ ಏಪ್ರಿಲ್‌ ತಿಂಗಳಿನಲ್ಲಿ ಐದು ವಾರಾಂತ್ಯಗಳಿರುವ ಕಾರಣ, ಆಕ್ಸಿಲಿಯರಿ ಪಯನೀಯರ್‌ ಸೇವೆಯನ್ನು ಮಾಡಲು ಇದೊಂದು ಅತ್ಯುತ್ತಮ ತಿಂಗಳಾಗಿರುವುದು

◼ ಇಸವಿ 2006ರ ಜ್ಞಾಪಕಾಚರಣೆ ಸಮಯದ ವಿಶೇಷ ಬಹಿರಂಗ ಭಾಷಣದ ಶೀರ್ಷಿಕೆಯು “ಭೂಮಿಯ ವ್ಯವಹಾರಗಳ ಮೇಲೆ ಈಗಲೂ ದೇವರ ನಿಯಂತ್ರಣವಿದೆಯೊ?” ಎಂದಾಗಿರುವುದು. ಇದಕ್ಕೆ ಸಂಬಂಧಿಸಿದ ಪ್ರಕಟನೆಯನ್ನು ಸೆಪ್ಟೆಂಬರ್‌ 2005ರ ನಮ್ಮ ರಾಜ್ಯದ ಸೇವೆಯಲ್ಲಿ ನೋಡಿರಿ.

◼ ಪುಟ 6ರಲ್ಲಿರುವ “ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ನಮ್ಮ ಅಧ್ಯಯನವನ್ನು ಆನಂದಿಸಿರಿ” ಎಂಬ ಶೀರ್ಷಿಕೆಯುಳ್ಳ ಲೇಖನವನ್ನು ಏಪ್ರಿಲ್‌ 3ರ ವಾರದ ಸೇವಾ ಕೂಟದಲ್ಲಿ ಪರಿಗಣಿಸಲಾಗುವುದು. ಆದುದರಿಂದ ಆ ಲೇಖನವನ್ನು ಮತ್ತು ಅದರೊಂದಿಗಿರುವ ಅಧ್ಯಯನ ಶೆಡ್ಯೂಲನ್ನು ದಯವಿಟ್ಟು ಜೋಪಾನವಾಗಿಡಿರಿ.

◼ ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವನಿಂದ ನೇಮಿಸಲ್ಪಟ್ಟವರು ಸಭೆಯ ಅಕೌಂಟ್ಸ್‌ ಅನ್ನು ಮಾರ್ಚ್‌ 1ರಂದು ಅಥವಾ ಅದರ ಬಳಿಕ ಆದಷ್ಟು ಬೇಗನೆ ಆಡಿಟ್‌ ಮಾಡಬೇಕು. ಮೈಂಟೇನನ್ಸ್‌ ಅಥವಾ ನಿರ್ಮಾಣಕಾರ್ಯ ಮುಂತಾದ ವಿಷಯಗಳಿಗಾಗಿ ಒಂದು ಭಿನ್ನ ಅಕೌಂಟನ್ನು ಹೊಂದಿರುವುದಾದರೆ, ಆ ಅಕೌಂಟನ್ನು ಸಹ ಆಡಿಟ್‌ ಮಾಡಲು ಏರ್ಪಾಡುಗಳು ಮಾಡಲ್ಪಡಬೇಕು. ಆಡಿಟ್‌(ಗಳು) ಮುಗಿದ ಅನಂತರ, ಮುಂದಿನ ಅಕೌಂಟ್ಸ್‌ ವರದಿಯೊಂದಿಗೆ ಇದರ ಕುರಿತು ಸಭೆಗೆ ಪ್ರಕಟನೆಯೊಂದನ್ನು ಮಾಡಬೇಕು.

◼ ಕಾರ್ಯದರ್ಶಿ ಮತ್ತು ಸೇವಾ ಮೇಲ್ವಿಚಾರಕನು ಎಲ್ಲ ರೆಗ್ಯುಲರ್‌ ಪಯನೀಯರರ ಚಟುವಟಿಕೆಯನ್ನು ಪರಿಶೀಲಿಸಬೇಕು. ಅವರಲ್ಲಿ ಯಾರಿಗಾದರೂ ತಾಸಿನ ಆವಶ್ಯಕತೆಯನ್ನು ಪೂರೈಸುವುದು ಕಷ್ಟಕರವಾಗಿರುವುದಾದರೆ, ನೆರವನ್ನು ನೀಡಲಿಕ್ಕಾಗಿ ಹಿರಿಯರು ಏರ್ಪಾಡನ್ನು ಮಾಡಬೇಕು. ಸಲಹೆಗಳಿಗಾಗಿ, ವಾರ್ಷಿಕ S-201 ಪತ್ರಗಳನ್ನು ಮರುಪರಿಶೀಲಿಸಿರಿ.

◼ ಲಭ್ಯವಿರುವ ಹೊಸ ಪ್ರಕಾಶನಗಳು:

ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ​—⁠ಬಂಗಾಲಿ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ