ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/06 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 2006 ನಮ್ಮ ರಾಜ್ಯದ ಸೇವೆ
2006 ನಮ್ಮ ರಾಜ್ಯದ ಸೇವೆ
km 1/06 ಪು. 7

ಪ್ರಕಟನೆಗಳು

◼ ಸಾಹಿತ್ಯ ನೀಡುವಿಕೆ​—⁠ಜನವರಿ: ಹಳದಿ ಬಣ್ಣಕ್ಕೆ ತಿರುಗುವ ಇಲ್ಲವೆ ಬಣ್ಣವನ್ನು ಕಳೆದುಕೊಳ್ಳುವಂಥ ಕಾಗದದ ಮೇಲೆ ಮುದ್ರಿಸಲ್ಪಟ್ಟಿರುವ 192 ಪುಟದ ಯಾವುದೇ ಪುಸ್ತಕವನ್ನು ಅಥವಾ 1991ಕ್ಕೆ ಮುಂಚೆ ಪ್ರಕಟಿಸಲ್ಪಟ್ಟ ಯಾವುದೇ ಪುಸ್ತಕವನ್ನು ನೀಡಬಹುದು. ಈ ನೀಡುವಿಕೆಯನ್ನು ಸ್ವೀಕರಿಸದ ಮನೆಯವರಿಗೆ ಎಚ್ಚರಿಕೆಯಿಂದಿರಿ! ಬ್ರೋಷರನ್ನು ನೀಡಿರಿ. ಫೆಬ್ರವರಿ: ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕವನ್ನು ನೀಡಲಾಗುವುದು. ಈ ಪ್ರಕಾಶನವನ್ನು ಹೊಂದಿರದ ಸಭೆಗಳು ಪ್ರಕಟನೆ ಪರಮಾವಧಿ ಪುಸ್ತಕ ಅಥವಾ ಸ್ಟಾಕ್‌ನಲ್ಲಿ ಹೆಚ್ಚು ಪ್ರಮಾಣದಲ್ಲಿರುವ ಇನ್ನಾವುದೇ ಹಳೇ ಪ್ರಕಾಶನವನ್ನು ನೀಡಬಹುದು. ಮಾರ್ಚ್‌: ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕವನ್ನು ನೀಡಿರಿ. ಬೈಬಲ್‌ ಅಧ್ಯಯನಗಳನ್ನು ಆರಂಭಿಸಲು ವಿಶೇಷ ಪ್ರಯತ್ನವನ್ನು ಮಾಡಿರಿ. ಏಪ್ರಿಲ್‌ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಬಿಡಿ ಪತ್ರಿಕೆಗಳನ್ನು ನೀಡಿರಿ. ಜ್ಞಾಪಕಾಚರಣೆಗೆ ಮತ್ತು/ಅಥವಾ ಇತರ ದೇವಪ್ರಭುತ್ವಾತ್ಮಕ ಘಟನೆಗಳಿಗೆ ಹಾಜರಾದರೂ, ಸಭೆಯೊಂದಿಗೆ ಸಕ್ರಿಯವಾಗಿ ಸಹವಾಸಿಸದಿರುವವರನ್ನು ಸೇರಿಸಿ ಎಲ್ಲ ಆಸಕ್ತ ಜನರನ್ನು ಪುನರ್ಭೇಟಿ ಮಾಡುವಾಗ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕವನ್ನು ನೀಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ಒಂದು ಮನೆ ಬೈಬಲ್‌ ಅಧ್ಯಯನವನ್ನು ಪ್ರಾರಂಭಿಸುವುದೇ ಇದರ ಉದ್ದೇಶವಾಗಿರಬೇಕು.

◼ ಏಪ್ರಿಲ್‌ ತಿಂಗಳಿನಲ್ಲಿ ಐದು ವಾರಾಂತ್ಯಗಳಿರುವುದರಿಂದ, ಆಕ್ಸಿಲಿಯರಿ ಪಯನೀಯರ್‌ ಸೇವೆಯನ್ನು ಮಾಡಲು ಇದೊಂದು ಅತ್ಯುತ್ತಮ ತಿಂಗಳಾಗಿರುವುದು.

◼ ಸರ್ಕಿಟ್‌ ಮೇಲ್ವಿಚಾರಕರು ಫೆಬ್ರವರಿ ತಿಂಗಳಿನಿಂದ ಅಥವಾ ಹೆಚ್ಚೆಂದರೆ ಮಾರ್ಚ್‌ 5ರಿಂದ ಹೊಸ ಬಹಿರಂಗ ಭಾಷಣವನ್ನು ಕೊಡಲು ಆರಂಭಿಸಬೇಕಾಗಿದ್ದು, ಅದರ ಶೀರ್ಷಿಕೆಯು “ಇಂದು ಮತ್ತು ಎಂದೆಂದಿಗೂ ನೀವು ಶಾಂತಿಭರಿತ ಜೀವನವನ್ನು ಆನಂದಿಸಬಲ್ಲಿರಿ!” ಎಂದಾಗಿದೆ.

◼ ಈ ವರ್ಷ ಏಪ್ರಿಲ್‌ 12ರ ಬುಧವಾರದಂದು, ಸೂರ್ಯಾಸ್ತಮಾನದ ಅನಂತರ ಜ್ಞಾಪಕಾಚರಣೆಯನ್ನು ಆಚರಿಸಲಿಕ್ಕಾಗಿ ಸಭೆಗಳು ಸೂಕ್ತವಾದ ಏರ್ಪಾಡುಗಳನ್ನು ಮಾಡಿಕೊಳ್ಳತಕ್ಕದ್ದು. ಭಾಷಣವು ತುಸು ಮುಂಚಿತವಾಗಿ ಆರಂಭವಾಗಬಹುದಾದರೂ, ಕುರುಹುಗಳನ್ನು ದಾಟಿಸುವುದನ್ನು ಸೂರ್ಯಾಸ್ತಮಾನಕ್ಕೆ ಮುಂಚೆ ಆರಂಭಿಸಬಾರದು. ನಿಮ್ಮ ಪ್ರದೇಶದಲ್ಲಿ ಸೂರ್ಯಾಸ್ತಮಾನವು ಯಾವಾಗ ಆಗುತ್ತದೆ ಎಂಬುದರ ಬಗ್ಗೆ ಸ್ಥಳಿಕ ಮೂಲಗಳನ್ನು ಸಂಪರ್ಕಿಸಿ ತಿಳಿದುಕೊಳ್ಳಿರಿ. ಪ್ರತಿಯೊಂದು ಸಭೆಯು ಅದರ ಪ್ರತ್ಯೇಕ ಜ್ಞಾಪಕಾಚರಣೆಯನ್ನು ನಡೆಸಲು ಪ್ರಯತ್ನಿಸಬೇಕು. ಆದರೂ, ಇದು ಯಾವಾಗಲೂ ಸಾಧ್ಯವಾಗದೆ ಇರಬಹುದು. ಸಾಮಾನ್ಯವಾಗಿ ಹಲವಾರು ಸಭೆಗಳು ಒಂದೇ ರಾಜ್ಯ ಸಭಾಗೃಹವನ್ನು ಉಪಯೋಗಿಸುತ್ತಿರುವ ಸ್ಥಳಗಳಲ್ಲಿ, ಒಂದು ಅಥವಾ ಹೆಚ್ಚಿನ ಸಭೆಗಳು ಆ ಸಂಜೆಗಾಗಿ ಬೇರೊಂದು ಸೌಕರ್ಯವನ್ನು ಉಪಯೋಗಿಸಲಿಕ್ಕಾಗಿ ಏರ್ಪಾಡುಮಾಡಸಾಧ್ಯವಿದೆ. ಸಾಧ್ಯವಿರುವಲ್ಲಿ, ಆ ಸಂದರ್ಭದಿಂದ ಎಲ್ಲರೂ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ, ಕಾರ್ಯಕ್ರಮಗಳ ನಡುವೆ ಕಡಿಮೆಪಕ್ಷ 40 ನಿಮಿಷಗಳಷ್ಟು ಸಮಯವನ್ನು ಅನುಮತಿಸುವುದು ಉತ್ತಮವಾಗಿರುವುದು ಎಂದು ನಾವು ಸಲಹೆ ನೀಡುತ್ತೇವೆ. ಪ್ರಯಾಣಿಕರನ್ನು ಇಳಿಸುವುದು ಹಾಗೂ ಹತ್ತಿಸುವುದನ್ನು ಸೇರಿಸಿ, ವಾಹನ ಸಂಚರಣೆ ಮತ್ತು ನಿಲುಗಡೆಯ ವಿಷಯದಲ್ಲೂ ಗಮನಹರಿಸಬೇಕು. ಸ್ಥಳಿಕವಾಗಿ ಯಾವ ಏರ್ಪಾಡುಗಳು ಉತ್ತಮವಾಗಿರುವವು ಎಂಬುದನ್ನು ಹಿರಿಯರ ಮಂಡಲಿಯು ನಿರ್ಧರಿಸಬೇಕು.

◼ ನೀವು ವೈಯಕ್ತಿಕ ಪ್ರಯಾಣದ ಯೋಜನೆಗಳನ್ನು ಮಾಡುವಾಗ, ಅದರಲ್ಲಿ ಮತ್ತೊಂದು ದೇಶದಲ್ಲಿನ ಸಭಾ ಕೂಟಗಳಿಗೆ, ಒಂದು ಸಮ್ಮೇಳನಕ್ಕೆ, ಅಥವಾ ಒಂದು ಜಿಲ್ಲಾ ಅಧಿವೇಶನಕ್ಕೆ ಹಾಜರಾಗುವುದು ಸೇರಿರುವುದಾದರೆ, ಅದರ ತಾರೀಖುಗಳು, ಸಮಯಗಳು, ಮತ್ತು ನಿವೇಶನಗಳ ಕುರಿತಾದ ಮಾಹಿತಿಗಾಗಿರುವ ನಿಮ್ಮ ವಿನಂತಿಯನ್ನು ಆ ದೇಶದಲ್ಲಿನ ಕೆಲಸವನ್ನು ಮೇಲ್ವಿಚಾರಣೆ ಮಾಡುತ್ತಿರುವ ಬ್ರಾಂಚ್‌ ಆಫೀಸಿಗೆ ಕಳುಹಿಸತಕ್ಕದ್ದು. ಬ್ರಾಂಚ್‌ ಆಫೀಸುಗಳ ವಿಳಾಸಗಳು ಸದ್ಯದ ವರ್ಷಪುಸ್ತಕ (ಇಂಗ್ಲಿಷ್‌)ದ ಕೊನೆಯ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿವೆ.

◼ ತಮ್ಮ ಮುಂದಿನ ಸಾಹಿತ್ಯ ವಿನಂತಿಯೊಂದಿಗೆ ಸಿಡಿ-ರಾಮ್‌ನಲ್ಲಿ ವಾಚ್‌ಟವರ್‌ ಲೈಬ್ರರಿ​—⁠2005 ಎಡಿಷನ್‌ಗಾಗಿ ಸಭೆಗಳು ಈಗಲೇ ಆರ್ಡರ್‌ ಮಾಡಲು ಆರಂಭಿಸತಕ್ಕದ್ದು. ವಾಚ್‌ಟವರ್‌ ಲೈಬ್ರರಿ​—⁠2005 ಎಡಿಷನ್‌ ಸಭೆಯಲ್ಲಿರುವ ಸ್ನಾತ ಸದಸ್ಯರಿಗೆ ಮಾತ್ರ ಸೀಮಿತವಾಗಿದೆ ಮತ್ತು ಇದು, ಸಭೆಯ ಮೂಲಕ ಮಾತ್ರವೇ ಲಭ್ಯಗೊಳಿಸಲ್ಪಡುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿರಿ.

◼ ಲಭ್ಯವಿರುವ ಹೊಸ ಪ್ರಕಾಶನಗಳು:

ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ​—⁠ಇಂಗ್ಲಿಷ್‌ ಭಾಷೆಯಲ್ಲಿ ದೊಡ್ಡ ಮುದ್ರಣ.

ದಯಮಾಡಿ ಗಮನಿಸಿರಿ. ಇದು ಒಂದು ವಿಶೇಷ ವಿನಂತಿ ಐಟಮ್‌ ಆಗಿದೆ. ಕೇವಲ ಯಾರಿಗೆ ಸರಿಯಾಗಿ ಕಣ್ಣು ಕಾಣುವುದಿಲ್ಲವೊ ಮತ್ತು ಸಣ್ಣ ಮುದ್ರಣವನ್ನು ಓದಲು ಅಶಕ್ತರಾಗಿದ್ದಾರೊ ಅವರಿಗೆ ಮಾತ್ರ ಇದು ದೊರಕುತ್ತದೆ. ಆದುದರಿಂದ, ಅಂಥ ಪ್ರಚಾರಕರು ಇದನ್ನು ನಿರ್ದಿಷ್ಟವಾಗಿ ವಿನಂತಿಸಿದಾಗ ಮಾತ್ರ ಆರ್ಡರ್‌ ಮಾಡಬೇಕು. ಇದು ನಿಜವಾಗಿಯೂ ಅಗತ್ಯವಿದೆಯೊ ಎಂಬುದನ್ನು ಸರ್ವಿಸ್‌ ಕಮಿಟಿ ಪರೀಕ್ಷಿಸಬೇಕು. ಮತ್ತು ಸೊಸೈಟಿಗೆ ಈ ಆರ್ಡರನ್ನು ಕಳುಹಿಸುವ ಮುನ್ನ ಇದರ ಅಗತ್ಯವನ್ನು ಲಿಟ್‌ರೇಚರ್‌ ರಿಕ್ವೆಸ್ಟ್‌ ಫಾರ್ಮ್‌ನ ಮೇಲೆ ಬರೆದು ಕಳುಹಿಸಬೇಕು.

ವಾಚ್‌ಟವರ್‌ ಪಬ್ಲಿಕೇಶನ್ಸ್‌ ಇಂಡೆಕ್ಸ್‌ 2004 ​—⁠ಇಂಗ್ಲಿಷ್‌

ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ​—⁠ನಿಕೊಬರೀಸ್‌

ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ (26 ಗೀತೆಗಳು) ​—⁠ಉರ್ದು

◼ ಪುನಃ ಲಭ್ಯವಿರುವ ಪ್ರಕಾಶನಗಳು:

“ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ” ​—⁠ಹಿಂದಿ, ಗುಜರಾಥಿ

◼ ಲಭ್ಯವಿರುವ ಹೊಸ ಡಿವಿಡಿಗಳು:

ಯುವ ಜನರು ಪ್ರಶ್ನಿಸುವುದು​—⁠ನಾನು ನನ್ನ ಜೀವಿತವನ್ನು ಹೇಗೆ ಉಪಯೋಗಿಸಬಲ್ಲೆ? ​—⁠ಇಂಗ್ಲಿಷ್‌

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ