ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 11/05 ಪು. 3
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 2005 ನಮ್ಮ ರಾಜ್ಯದ ಸೇವೆ
2005 ನಮ್ಮ ರಾಜ್ಯದ ಸೇವೆ
km 11/05 ಪು. 3

ಪ್ರಕಟನೆಗಳು

◼ ಸಾಹಿತ್ಯ ನೀಡುವಿಕೆ​—⁠ನವೆಂಬರ್‌: ಮಹಾ ಬೋಧಕನಿಂದ ಕಲಿಯಿರಿa ಪುಸ್ತಕವನ್ನು ನೀಡಿರಿ. ಮನೆಯವರಿಗೆ ಮಕ್ಕಳಿಲ್ಲ ಎಂದು ತಿಳಿದುಬರುವಲ್ಲಿ, ಜ್ಞಾನ ಪುಸ್ತಕ ಇಲ್ಲವೆ ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? ಎಂಬ ಟ್ರ್ಯಾಕ್ಟ್‌ ಅನ್ನು ನೀಡಿರಿ. ಡಿಸೆಂಬರ್‌: ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ಪುಸ್ತಕವನ್ನು ನೀಡಿರಿ. ಅಥವಾ ಬೇರೊಂದು ಪುಸ್ತಕವನ್ನು, ಅಂದರೆ ಸಭೆಯ ಸ್ಟಾಕ್‌ನಲ್ಲಿರುವುದಾದರೆ, ಬೈಬಲ್‌​—⁠ದೇವರ ವಾಕ್ಯವೊ ಮನುಷ್ಯನದ್ದೊ?,b ಬೈಬಲ್‌ ಕಥೆಗಳ ನನ್ನ ಪುಸ್ತಕ, ಅಥವಾ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕಗಳನ್ನು ನೀಡಬಹುದು. ಜನವರಿ: ಹಳದಿ ಬಣ್ಣಕ್ಕೆ ತಿರುಗುವ ಇಲ್ಲವೆ ಬಣ್ಣವನ್ನು ಕಳೆದುಕೊಳ್ಳುವಂಥ ಕಾಗದದ ಮೇಲೆ ಮುದ್ರಿಸಲ್ಪಟ್ಟಿರುವ 192 ಪುಟದ ಯಾವುದೇ ಪುಸ್ತಕವನ್ನು ಅಥವಾ 1991ಕ್ಕೆ ಮುಂಚೆ ಪ್ರಕಟಿಸಲ್ಪಟ್ಟ ಯಾವುದೇ ಪುಸ್ತಕವನ್ನು ನೀಡಬಹುದು. ಈ ನೀಡುವಿಕೆಯನ್ನು ಸ್ವೀಕರಿಸದ ಮನೆಯವರಿಗೆ ಎಚ್ಚರಿಕೆಯಿಂದಿರಿ! ಬ್ರೋಷರನ್ನು ನೀಡಿರಿ. ಫೆಬ್ರವರಿ: ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕವನ್ನು ನೀಡಲಾಗುವುದು. ಈ ಪ್ರಕಾಶನವನ್ನು ಹೊಂದಿರದ ಸಭೆಗಳು ಪ್ರಕಟನೆ ಪರಮಾವಧಿ ಪುಸ್ತಕ ಅಥವಾ ಸ್ಟಾಕ್‌ನಲ್ಲಿ ಹೆಚ್ಚು ಪ್ರಮಾಣದಲ್ಲಿರುವ ಇನ್ನಾವುದೇ ಹಳೇ ಪ್ರಕಾಶನವನ್ನು ನೀಡಬಹುದು.

◼ ಇಸವಿ 2006, ಏಪ್ರಿಲ್‌ 17ರಿಂದ ಆರಂಭಿಸುತ್ತಾ ನಾವು ಸಭಾ ಪುಸ್ತಕ ಅಧ್ಯಯನದಲ್ಲಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಪುಸ್ತಕವನ್ನು ಅಧ್ಯಯನಮಾಡುವೆವು. ಆ ಸಮಯದಲ್ಲಿ, ಸಾಕಷ್ಟು ಸರಬರಾಯಿ ಇರುವಂತೆ ಸಭೆಗಳು ನೋಡಿಕೊಳ್ಳಬೇಕು.

◼ ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವರಿಂದ ನೇಮಿಸಲ್ಪಟ್ಟವರು ಸಭೆಯ ಅಕೌಂಟ್ಸ್‌ ಅನ್ನು ಡಿಸೆಂಬರ್‌ 1ರಂದು ಅಥವಾ ಆದಷ್ಟು ಬೇಗನೆ ಆಡಿಟ್‌ ಮಾಡಬೇಕು. ದುರಸ್ತು ಅಥವಾ ನಿರ್ಮಾಣ ಕೆಲಸಕ್ಕಾಗಿ ಪ್ರತ್ಯೇಕವಾದ ಒಂದು ಅಕೌಂಟನ್ನು ಇಟ್ಟಿರುವುದಾದರೆ, ಅದನ್ನು ಸಹ ಆಡಿಟ್‌ ಮಾಡಲು ಏರ್ಪಾಡು ಮಾಡಿರಿ. ಆಡಿಟ್‌(ಗಳು) ಮುಗಿದ ನಂತರ, ಮುಂದಿನ ಅಕೌಂಟ್ಸ್‌ ವರದಿಯೊಂದಿಗೆ ಇದರ ಕುರಿತು ಸಭೆಗೆ ಒಂದು ಪ್ರಕಟನೆಯನ್ನು ಮಾಡಬೇಕು.

◼ ಲೋಕವ್ಯಾಪಕ ಕೆಲಸಕ್ಕಾಗಿ ಮತ್ತು ರಾಜ್ಯ ಸಭಾಗೃಹ ನಿಧಿಗಾಗಿ ಬ್ರಾಂಚ್‌ ಆಫೀಸ್‌ಗೆ ನೇರವಾಗಿ ಕಳುಹಿಸಲ್ಪಡುವ ಚೆಕ್‌ ಮತ್ತು ಬ್ಯಾಂಕ್‌ ಡ್ರಾಫ್ಟ್‌ಗಳು “The Watch Tower Society”ಗೆ ಸಂದಾಯವಾಗಬೇಕೆಂದು ಗುರುತಿಸಬೇಕಾಗಿದೆ.

◼ ಜನವರಿ ತಿಂಗಳಿನ ಒಂದು ಸೇವಾ ಕೂಟದಲ್ಲಿ ರಕ್ತಪೂರಣಕ್ಕೆ ಬದಲಿಯಾದ ಆರೋಗ್ಯಾರೈಕೆ​—⁠ರೋಗಿಯ ಅಗತ್ಯಗಳು ಮತ್ತು ಹಕ್ಕುಗಳನ್ನು ಪೂರೈಸುವುದು (ಇಂಗ್ಲಿಷ್‌) ಎಂಬ ವಿಡಿಯೋ ಕಾರ್ಯಕ್ರಮವು ಪರಿಗಣಿಸಲ್ಪಡುವುದು. ಈ ವಿಡಿಯೋ ಪ್ರತಿಗಳ ಅವಶ್ಯವಿದ್ದಲ್ಲಿ, ಸಭೆಯ ಮೂಲಕ ಆದಷ್ಟು ಬೇಗನೆ ವಿನಂತಿಸಬೇಕು.

◼ ಲಭ್ಯವಿರುವ ಹೊಸ ಪ್ರಕಾಶನಗಳು:

ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ​—⁠ಇಂಗ್ಲಿಷ್‌, ಕನ್ನಡ, ತಮಿಳು, ತೆಲುಗು, ನೇಪಾಲಿ, ಮರಾಠಿ, ಮಲೆಯಾಳಂ, ಹಿಂದಿ

ಎಲ್ಲ ಕಷ್ಟಸಂಕಟಗಳು ಬೇಗನೆ ಕೊನೆಗೊಳ್ಳಲಿವೆ! (ಟ್ರ್ಯಾಕ್ಟ್‌ ನಂ. 27) ​—⁠ಇಂಗ್ಲಿಷ್‌, ಉರ್ದು, ಕನ್ನಡ, ಕಾಸಿ, ಕೊಂಕಣಿ (ರೋಮನ್‌ ಲಿಪಿ), ಗುಜರಾಥಿ, ತಮಿಳು, ತೆಲುಗು, ನೇಪಾಲಿ, ಪಂಜಾಬಿ, ಬಂಗಾಲಿ, ಮಣಿಪುರಿ, ಮರಾಠಿ, ಮಲೆಯಾಳಂ, ಮೀಸೊ, ಹಿಂದಿ

[ಪಾದಟಿಪ್ಪಣಿಗಳು]

a ಕನ್ನಡದಲ್ಲಿ ಲಭ್ಯವಿಲ್ಲ.

b ಕನ್ನಡದಲ್ಲಿ ಲಭ್ಯವಿಲ್ಲ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ