ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2005ರ ಅಕ್ಟೋಬರ್ 31ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಮೌಖಿಕವಾಗಿ ಪರಿಗಣಿಸಲಾಗುವುದು. 2005ರ ಸೆಪ್ಟೆಂಬರ್ 5ರಿಂದ ಅಕ್ಟೋಬರ್ 31ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲಾಧಾರಿತವಾದ 30 ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು. [ಸೂಚನೆ: ಪ್ರಶ್ನೆಗಳ ಬಳಿಕ ಉಲ್ಲೇಖಗಳು ಇಲ್ಲದಿರುವಲ್ಲಿ, ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ ನೀವು ನಿಮ್ಮ ಸ್ವಂತ ಸಂಶೋಧನೆಯನ್ನು ಮಾಡುವ ಆವಶ್ಯಕತೆಯಿರುವುದು.—ಶೂಶ್ರೂಷಾ ಶಾಲೆ, ಪುಟ 36-7ನ್ನು ನೋಡಿರಿ.]
ಭಾಷಣ ಗುಣಗಳು
1. ದೇವರ ವಾಕ್ಯದ ಮೇಲಾಧಾರಿತವಾದ ನಮ್ಮ ಬೋಧನೆಯು ಜನರ ಸಾಂಕೇತಿಕ ಹೃದಯವನ್ನು ತಲಪುತ್ತಿದೆ ಎಂಬುದನ್ನು ನಾವು ಹೇಗೆ ಖಚಿತಪಡಿಸಿಕೊಳ್ಳಬಲ್ಲೆವು? (ಮತ್ತಾ. 13:19) [be-KA ಪು. 258 ಪ್ಯಾರ. 1-2, ಚೌಕ]
2. ಒಬ್ಬನ ಹೃದಯದಲ್ಲಿ ಏನಿದೆಯೊ ಅದನ್ನು ಹೊರತರಲು ನಮಗೆ ಯಾವುದು ಸಹಾಯಮಾಡಬಲ್ಲದು, ಆದರೆ ನಾವು ಯಾವುದರ ಕುರಿತು ಜಾಗ್ರತೆ ವಹಿಸಬೇಕು? [be-KA ಪು. 259 ಪ್ಯಾರ. 1-2]
3. ನಾವು ಬೋಧಿಸುವಾಗ, ಯೆಹೋವನ ಅದ್ಭುತಕರ ಗುಣಗಳನ್ನು ಒತ್ತಿಹೇಳುವುದು ಏಕೆ ಪ್ರಾಮುಖ್ಯ? [be-KA ಪು. 260 ಪ್ಯಾರ. 1]
4. ತಮ್ಮ ಜೀವನದಲ್ಲಿ ಪ್ರಗತಿಯನ್ನು ಮಾಡಬೇಕಾದ ಕ್ಷೇತ್ರಗಳನ್ನು ಕಂಡುಕೊಳ್ಳುವಂತೆ ನಾವು ನಮ್ಮ ಬೈಬಲ್ ವಿದ್ಯಾರ್ಥಿಗಳಿಗೆ ಹೇಗೆ ಸಹಾಯಮಾಡಬಲ್ಲೆವು? [be-KA ಪು. 260 ಪ್ಯಾರ. 4–ಪು. 261 ಪ್ಯಾರ. 1]
5. ನಮ್ಮ ಬೈಬಲ್ ವಿದ್ಯಾರ್ಥಿಗಳು ಅಥವಾ ಕೇಳುಗರು, ಯಾವುದೇ ವಿಷಯವನ್ನು ಮಾಡುವಾಗ ತಮ್ಮ ಹೇತುಗಳನ್ನು ವಿಶ್ಲೇಷಿಸುವಂತೆ ಸಹಾಯಮಾಡಲು ನಾವೇನು ಮಾಡಬಲ್ಲೆವು? [be-KA ಪು. 262 ಪ್ಯಾರ. 2-3]
ನೇಮಕ ನಂ. 1
6. ಯೆಹೋವನನ್ನು ‘ಶ್ರದ್ಧಾಪೂರ್ವಕವಾಗಿ ಹುಡುಕುವುದು’ ಎಂದರೇನು, ಮತ್ತು ನಾವಿದನ್ನು ಮಾಡುತ್ತಿದ್ದೇವೆಂದು ಹೇಗೆ ತೋರಿಸಬಲ್ಲೆವು? (ಇಬ್ರಿ. 11:6, NW) [w03-KA 8/15 ಪು. 25 ಪ್ಯಾರ. 2; ಪು. 26 ಪ್ಯಾರ. 1-2; ಪು. 27 ಪ್ಯಾರ. 2]
7. ‘ಸ್ವಸ್ಥಬೋಧನಾವಾಕ್ಯಗಳ ಮಾದರಿ’ ಏನಾಗಿದೆ, ಮತ್ತು ತಾವು ಅದಕ್ಕೆ ಅಂಟಿಕೊಂಡಿದ್ದೇವೆಂದು ಹಿರಿಯರು ಹೇಗೆ ತೋರಿಸಿಕೊಡಬಲ್ಲರು? (2 ತಿಮೊ. 1:13, 14) [w03-KA 1/1 ಪು. 29 ಪ್ಯಾರ. 3; ಪು. 30 ಪ್ಯಾರ. 1]
8. ಸತ್ಯಾರಾಧಕರು ಯಾವ ವಿಧಗಳಲ್ಲಿ ಐಕ್ಯರಾಗಿದ್ದಾರೆ? [wt-KA ಪು. 8 ಪ್ಯಾರ. 9]
9. ದೇವರ ಕುರಿತು ನಾವು ಕಲಿತಂತೆ, ನಮ್ಮ ಜೀವಿತಗಳು ಹೇಗೆ ಪ್ರಭಾವಿಸಲ್ಪಡಬೇಕು? [wt-KA ಪು. 15 ಪ್ಯಾರ. 2]
10. ಬೈಬಲ್ ಸತ್ಯಗಳ ಯಾವ ವಿವರಣೆಗಳು ಬೈಬಲಿನ ಕಡೆಗೆ ಕೆಲವರಿಗಿದ್ದ ಮನೋಭಾವವನ್ನು ಬದಲಾಯಿಸಿವೆ, ಮತ್ತು ಏಕೆ? [wt-KA ಪು. 24 ಪ್ಯಾರ. 4]
ಸಾಪ್ತಾಹಿಕ ಬೈಬಲ್ ವಾಚನ
11. ಧಾರ್ಮಿಕ ಅವಶೇಷಗಳನ್ನು ಪೂಜಿಸುವ ನಂಬಿಕೆಯನ್ನು 2 ಅರಸುಗಳು 13:21 ಬೆಂಬಲಿಸುತ್ತದೊ?
12. ಹಿಜ್ಕೀಯನು ಐಗುಪ್ತದೊಂದಿಗೆ ಮೈತ್ರಿಸಂಬಂಧವನ್ನು ಮಾಡಿದ್ದನೊ? (2 ಅರ. 18:19-21, 25)
13. ಯೆಹೋವನು ಆಶ್ಚರ್ಯಕರ ರೀತಿಯಲ್ಲಿ ಸನ್ಹೇರೀಬನನ್ನು ಸೋಲಿಸಿದ ವಿಷಯವು ಅಶ್ಶೂರ್ಯದವರ ದಾಖಲೆಗಳಲ್ಲಿ ಉಲ್ಲೇಖಿಸಲ್ಪಟ್ಟಿಲ್ಲವಾದರೂ, ಆ ದಾಖಲೆಗಳಲ್ಲಿ ತಿಳಿಸಿರುವ ಯಾವ ವಿಚಾರವು ನಿಮಗೆ ಆಸಕ್ತಿದಾಯಕವಾಗಿದೆ? (2 ಅರ. 19:35, 36)
14. ಶೆಯಲ್ತೀಯೇಲನ ತಂದೆ ಯಾರು? (1 ಪೂರ್ವ. 3:16-18)
15. ರಾಜ ಸೌಲನ ಸಮಯದಲ್ಲಿ ರೂಬೇನ್ಯರು, ಗಾದ್ಯರು ಮತ್ತು ಮನಸ್ಸೆಕುಲದ ಅರ್ಧ ಜನರು, ಇಂದಿರುವ ದೇವರ ಎಲ್ಲ ಸೇವಕರಿಗೆ ಹೇಗೆ ಒಂದು ಉತ್ತಮ ಮಾದರಿಯನ್ನಿಟ್ಟರು? (1 ಪೂರ್ವ. 5:18-22)