ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆ—ಏಪ್ರಿಲ್ 1-17: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಬಿಡಿ ಪ್ರತಿಗಳನ್ನು ನೀಡಿರಿ. ಜ್ಞಾಪಕಾಚರಣೆಗೆ ಮತ್ತು/ಅಥವಾ ಇತರ ದೇವಪ್ರಭುತ್ವಾತ್ಮಕ ಕಾರ್ಯಕ್ರಮಗಳಿಗೆ ಹಾಜರಾದ, ಆದರೆ ಸಭೆಯೊಂದಿಗೆ ಸಕ್ರಿಯವಾಗಿ ಸಹವಾಸಿಸದಿರುವವರನ್ನು ಸೇರಿಸಿ ಎಲ್ಲಾ ಆಸಕ್ತ ಜನರನ್ನು ಪುನರ್ಭೇಟಿಮಾಡುವಾಗ ದೇವರನ್ನು ಆರಾಧಿಸಿರಿ ಪುಸ್ತಕವನ್ನು ನೀಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ಒಂದು ಮನೆ ಬೈಬಲ್ ಅಧ್ಯಯನವನ್ನು ಪ್ರಾರಂಭಿಸುವುದೇ ಇದರ ಉದ್ದೇಶವಾಗಿರಬೇಕು, ವಿಶೇಷವಾಗಿ ಈಗಾಗಲೇ ಜ್ಞಾನ ಪುಸ್ತಕ ಮತ್ತು ಅಪೇಕ್ಷಿಸು ಬ್ರೋಷರನ್ನು ಅಧ್ಯಯನ ಮಾಡಿರುವವರಿಗೆ ಇದು ಅನ್ವಯಿಸುತ್ತದೆ. ಏಪ್ರಿಲ್ 18 - ಮೇ 15: ಎಚ್ಚರಿಕೆಯಿಂದಿರಿ! ಬ್ರೋಷರ್ ವಿತರಣೆಯ ವಿಶೇಷ ಕಾರ್ಯಾಚರಣೆ. ಮೇ 16-31: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಬಿಡಿ ಪ್ರತಿಗಳನ್ನು ನೀಡಿರಿ. ಜ್ಞಾಪಕಾಚರಣೆಗೆ ಮತ್ತು/ಅಥವಾ ಇತರ ದೇವಪ್ರಭುತ್ವಾತ್ಮಕ ಕಾರ್ಯಕ್ರಮಗಳಿಗೆ ಹಾಜರಾದ, ಆದರೆ ಸಭೆಯೊಂದಿಗೆ ಸಕ್ರಿಯವಾಗಿ ಸಹವಾಸಿಸದಿರುವವರನ್ನು ಸೇರಿಸಿ ಎಲ್ಲಾ ಆಸಕ್ತ ಜನರನ್ನು ಪುನರ್ಭೇಟಿಮಾಡುವಾಗ ದೇವರನ್ನು ಆರಾಧಿಸಿರಿ ಪುಸ್ತಕವನ್ನು ನೀಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ಒಂದು ಮನೆ ಬೈಬಲ್ ಅಧ್ಯಯನವನ್ನು ಪ್ರಾರಂಭಿಸುವುದೇ ಇದರ ಉದ್ದೇಶವಾಗಿರಬೇಕು, ವಿಶೇಷವಾಗಿ ಈಗಾಗಲೇ ಜ್ಞಾನ ಪುಸ್ತಕ ಮತ್ತು ಅಪೇಕ್ಷಿಸು ಬ್ರೋಷರನ್ನು ಅಧ್ಯಯನ ಮಾಡಿರುವವರಿಗೆ ಇದು ಅನ್ವಯಿಸುತ್ತದೆ. ಜೂನ್: ಮಹಾ ಬೋಧಕನಿಂದ ಕಲಿಯಿರಿa ಪುಸ್ತಕವನ್ನು ನೀಡಿರಿ, ಮತ್ತು ಮನೆಯವರು ತಮಗೆ ಮಕ್ಕಳಿಲ್ಲ ಎಂದು ಹೇಳುವುದಾದರೆ ಅಪೇಕ್ಷಿಸು ಬ್ರೋಷರನ್ನು ನೀಡಿರಿ. ಒಂದು ಮನೆ ಬೈಬಲ್ ಅಧ್ಯಯನವನ್ನು ಆರಂಭಿಸಲು ಪ್ರಯತ್ನಿಸಿರಿ. ಜುಲೈ ಮತ್ತು ಆಗಸ್ಟ್: ಈ ಮುಂದೆ ತಿಳಿಸಲ್ಪಟ್ಟಿರುವ ಯಾವುದೇ 32 ಪುಟಗಳ ಬ್ರೋಷರ್‌ಗಳನ್ನು ಉಪಯೋಗಿಸಬಹುದು: ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ!, “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ನೀವು ತ್ರಯೈಕ್ಯವನ್ನು ನಂಬ ಬೇಕೋ?, ಪರದೈಸನ್ನು ತರಲಿರುವ ಸರಕಾರ,b ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ?,c ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ಮತ್ತು ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ.
◼ ಎಲ್ಲ ಅಧ್ಯಕ್ಷ ಮೇಲ್ವಿಚಾರಕರು ಮತ್ತು ಸೆಕ್ರಿಟರಿಗಳ ಸದ್ಯದ ಟೆಲಿಫೋನ್ ನಂಬರುಗಳು ಮತ್ತು ವಿಳಾಸಗಳ ದಾಖಲೆಯನ್ನು ಬ್ರಾಂಚ್ ಆಫೀಸು ಇಟ್ಟುಕೊಳ್ಳುವುದು ಬಹಳ ಅಗತ್ಯವಾಗಿದೆ. ಯಾವುದೇ ಸಮಯದಲ್ಲಿ ಇದರಲ್ಲಿ ಬದಲಾವಣೆಗಳಿರುವುದಾದರೆ, ಸಭೆಯ ಸರ್ವಿಸ್ ಕಮಿಟಿಯು ಅಧ್ಯಕ್ಷ ಮೇಲ್ವಿಚಾರಕ/ಸೆಕ್ರಿಟರಿಯ ವಿಳಾಸದ ಬದಲಾವಣೆ (S-29) ಫಾರ್ಮ್ ಅನ್ನು ಭರ್ತಿಮಾಡಿ, ತಡಮಾಡದೆ ಬ್ರಾಂಚ್ ಆಫೀಸಿಗೆ ಕಳುಹಿಸತಕ್ಕದ್ದು. ಇದರಲ್ಲಿ ಎಸ್‌ಟಿಡಿ ಕೋಡ್‌ಗಳಲ್ಲಾಗುವ ಯಾವುದೇ ಬದಲಾವಣೆಗಳೂ ಒಳಗೂಡುತ್ತದೆ.
◼ ರೆಗ್ಯುಲರ್ ಪಯನೀಯರ್ ಸೇವೆಗಾಗಿರುವ ಅರ್ಜಿ (S-205) ಹಾಗೂ ಆಕ್ಸಿಲಿಯರಿ ಪಯನೀಯರ್ ಸೇವೆಗಾಗಿರುವ ಅರ್ಜಿ (S-205b) ಫಾರ್ಮ್‌ಗಳ ಸಾಕಷ್ಟು ಸರಬರಾಯಿಯನ್ನು ಹೊಂದಿರುವುದನ್ನು ಸಭೆಯ ಸೆಕ್ರಿಟರಿಗಳು ನೋಡಿಕೊಳ್ಳಬೇಕು. ಸಾಹಿತ್ಯ ವಿನಂತಿ ಫಾರ್ಮ್‌ನಲ್ಲಿ (S-14) ಇವುಗಳಿಗಾಗಿ ಆರ್ಡರ್ ಮಾಡಸಾಧ್ಯವಿದೆ. ಕಡಿಮೆಪಕ್ಷ ಒಂದು ವರ್ಷಕ್ಕೆ ಬೇಕಾಗಿರುವಷ್ಟು ಅರ್ಜಿಗಳನ್ನು ಇಟ್ಟುಕೊಳ್ಳಿರಿ. ಎಲ್ಲ ರೆಗ್ಯುಲರ್ ಪಯನೀಯರ್ ಅರ್ಜಿಗಳು, ಸಂಪೂರ್ಣವಾಗಿ ಭರ್ತಿಮಾಡಲ್ಪಟ್ಟಿವೆಯೋ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಅವುಗಳನ್ನು ಪರಿಶೀಲಿಸಿರಿ.
◼ ಇಸವಿ 2005, ಆಗಸ್ಟ್ 26-28ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ (ಇಂಗ್ಲಿಷ್) ಜಿಲ್ಲಾ ಅಧಿವೇಶನದಲ್ಲಿ ಕಿವುಡರಿಗಾಗಿ ಸಂಜ್ಞಾ ಭಾಷಾ ಸೆಷನನ್ನು ಏರ್ಪಡಿಸಲಾಗಿದೆ.
◼ ಏಪ್ರಿಲ್ ತಿಂಗಳಿನ ನಿಮ್ಮ ಮಾಸಿಕ ಸಾಹಿತ್ಯ ವಿನಂತಿಯೊಂದಿಗೆ ಸಾಹಿತ್ಯ ವಿನಂತಿ ಫಾರ್ಮ್‌ನಲ್ಲಿ (S-14) ಪಟ್ಟಿಮಾಡಲಾಗಿರುವ ಎಲ್ಲ ಫಾರ್ಮ್‌ಗಳ ವಾರ್ಷಿಕ ಸರಬರಾಯಿಗಾಗಿಯೂ ವಿನಂತಿಯನ್ನು ಮಾಡಿರಿ. ಫಾರ್ಮ್‌ಗಳ ವಿನಂತಿಗಾಗಿ ಪ್ರತ್ಯೇಕ ಪತ್ರವನ್ನು ಅಥವಾ ಲಿಟ್‌ರೇಚರ್ ರಿಕ್ವೆಸ್ಟ್ ಫಾರ್ಮ್ ಅನ್ನು ದಯಮಾಡಿ ಕಳುಹಿಸಬೇಡಿರಿ; ಬದಲಾಗಿ ಇದನ್ನು ನಿಮ್ಮ ಏಪ್ರಿಲ್ ತಿಂಗಳಿನ ಸಾಹಿತ್ಯ ವಿನಂತಿಯೊಂದಿಗೆ ಸೇರಿಸಿ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ, ದಯಮಾಡಿ ವಾಚ್‌ಟವರ್ ಲಿಟ್‌ರೇಚರ್ ರಿಕ್ವೆಸ್ಟ್ ಗೈಡ್‌ನ 4ನೇ ಸೆಕ್ಷನ್‌ನ ಪುಟ 1ನ್ನು ನೋಡಿ.
◼ 2005ರ ಜಿಲ್ಲಾ ಅಧಿವೇಶನದ ಬ್ಯಾಡ್ಜ್ ಕಾರ್ಡ್‌ಗಳನ್ನು ಲಿಟ್‌ರೇಚರ್ ಸರಬರಾಯಿಯೊಂದಿಗೆ ಕಳುಹಿಸಲಾಗುವುದು. ಇವುಗಳನ್ನು ವಿನಂತಿಸಬೇಕಾದ ಅಗತ್ಯವಿಲ್ಲ; ಆದರೆ ಒಂದುವೇಳೆ ನಿಮ್ಮ ಸಭೆಯ ಮುಖ್ಯ ಭಾಷೆಯಲ್ಲದೆ ಬೇರೆ ಭಾಷೆಯಲ್ಲಿ ಬ್ಯಾಡ್ಜ್ ಕಾರ್ಡ್‌ಗಳು ಅಗತ್ಯವಿದ್ದರೆ ಆಗ ವಿನಂತಿಸಬಹುದು. ಪ್ರತಿಯೊಂದು ಸಭೆಯ ಸದಸ್ಯರ ಸಂಖ್ಯೆಗೆ ಹೊಂದಿಕೆಯಲ್ಲಿ, ಕಾರ್ಡ್‌ಗಳನ್ನು 25ರ ಸೆಟ್‌ನಲ್ಲಿ ಕಳುಹಿಸಲಾಗುವುದು. ಒಂದುವೇಳೆ ಸಭೆಗೆ ಹೆಚ್ಚಿನ ಕಾರ್ಡ್‌ಗಳು ಅಗತ್ಯವಾಗಿದ್ದಲ್ಲಿ, ಲಿಟ್‌ರೇಚರ್ ರಿಕ್ವೆಸ್ಟ್ ಫಾರ್ಮ್‌ನಲ್ಲಿ (S-14) ಬರೆದು ಕಳುಹಿಸಬೇಕು.
◼ ಪುನಃ ಲಭ್ಯವಿರುವ ಪ್ರಕಾಶನಗಳು:
ಚರ್ಚೆಗಾಗಿ ಬೈಬಲ್ ವಿಷಯಗಳು (ಪರಿಷ್ಕೃತ) —ಕನ್ನಡ
ಕುರುಕ್ಷೇತ್ರದಿಂದ ಅರ್ಮಗೆದೋನಿಗೆ—ಮತ್ತು ನಿಮ್ಮ ಪಾರಾಗುವಿಕೆ —ಕನ್ನಡ, ಗುಜರಾಥಿ, ತಮಿಳು, ತೆಲುಗು, ಬಂಗಾಲಿ, ಮರಾಠಿ, ಮಲೆಯಾಳಂ, ಹಿಂದಿ
[ಪಾದಟಿಪ್ಪಣಿಗಳು]
a ಕನ್ನಡದಲ್ಲಿ ಲಭ್ಯವಿಲ್ಲ.
b ಕನ್ನಡದಲ್ಲಿ ಲಭ್ಯವಿಲ್ಲ.
c ಕನ್ನಡದಲ್ಲಿ ಲಭ್ಯವಿಲ್ಲ.